Published : Feb 21, 2020, 04:51 PM ISTUpdated : Feb 21, 2020, 05:02 PM IST
ಜ್ಞಾನಿ, ಧ್ಯಾನಿ, ಕಾಮನ ಸುಟ್ಟ ಶಿವ ಮುಂಗೋಪಿ. ಪಾರ್ವತಿಯಿಂದ ಸೃಷ್ಟಿಯಾದ ಗಣೇಶನ ತಲೆ ಕಡಿದಿದ್ದಕ್ಕೆ ಮಹಿಳಾ ವಿರೋಧಿ ಎನ್ನುವವರಿದ್ದಾರೆ. ದುರಹಂಕಾರಿ ಎಂದೂ ಕರೆಯುತ್ತಾರೆ. ಆದರೆ, ಆವನೆಂದರೆ ತುಸು ಹೆಚ್ಚು ಪ್ರೀತಿ ಎಲ್ಲರಿಗೂ. ಭಕ್ತಿ-ಭಯ ಮತ್ತಷ್ಟು. ಆತ್ಮವಿಶ್ವಾಸದ ಸಂಕೇತ ಶಿವ. ಹೆಣ್ಣು-ಗಂಡಿನ ಸಮಾನತೆಯ ತತ್ವ ಸಾರಿದ ಅರ್ಧನಾರೀಶ್ವರನೂ ಹೌದು. ಇಂಥ ಶಿವನನ್ನು ಆರಾಧಿಸುವ ಶಿವ ರಾತ್ರಿಯಂದು ದೇಶದ ಕೆಲವು ಶಿವ ದೇವಸ್ಥಾನಗಳ ದರ್ಶನ ಮಾಡೋಣ ಬನ್ನಿ...