ಮೆಟ್ರೋ ರೈಲಿನಲ್ಲೂ 'ಯಶ್' ಹವಾ: ಅಪಾಯಕಾರಿ ಕಟೌಟ್ ಬಿಟ್ಟು ಮೆಟ್ರೋ ರೈಲನ್ನೇ 'ಬರ್ತ್‌ಡೇ ಬ್ಯಾನರ್' ಮಾಡಿದ ಫ್ಯಾನ್ಸ್!

Published : Jan 06, 2026, 02:57 PM IST

ನಟ ಯಶ್ ಜನ್ಮದಿನದ ಅಂಗವಾಗಿ, ಬೆಂಗಳೂರಿನ 'ನಮ್ಮ ಮೆಟ್ರೋ' ರೈಲಿನ ಮೇಲೆ ಅವರ ಬೃಹತ್ ಚಿತ್ರವಿರುವ ಜಾಹೀರಾತನ್ನು ಅಳವಡಿಸಿ ವಿನೂತನವಾಗಿ ಶುಭ ಕೋರಲಾಗಿದೆ. ಅಭಿಮಾನಿಗಳು ಈ ಪ್ರಚಾರ ಕೈಗೊಂಡಿರಬಹುದೆಂದು ಚರ್ಚೆಯಾಗುತ್ತಿದೆ. ಯಶ್ ಚಿತ್ರ ಹೊತ್ತ ಮೆಟ್ರೋ ಸಂಚರಿಸುವ ವಿಡಿಯೋಗಳು ವೈರಲ್ ಆಗಿದೆ.

PREV
18

ರಾಕಿಂಗ್ ಸ್ಟಾರ್ ಯಶ್ ಅವರ ಜನ್ಮದಿನದ ಪ್ರಯುಕ್ತ, ಬೆಂಗಳೂರಿನ 'ನಮ್ಮ ಮೆಟ್ರೋ' ರೈಲಿನ ಮೇಲೆ ಅವರ ಬೃಹತ್ ಚಿತ್ರವಿರುವ ಜಾಹೀರಾತನ್ನು ಅಳವಡಿಸಿ ವಿನೂತನವಾಗಿ ಶುಭ ಕೋರಲಾಗಿದೆ. ಇದು ಅಭಿಮಾನಿಗಳ ಕಾರ್ಯವೋ ಅಥವಾ 'ಟಾಕ್ಸಿಕ್' ಚಿತ್ರತಂಡದ ಪ್ರಚಾರ ತಂತ್ರವೋ ಎಂಬ ಚರ್ಚೆ ಶುರುವಾಗಿದೆ.

28

ಸ್ಯಾಂಡಲ್‌ವುಡ್‌ನ 'ರಾಕಿಂಗ್ ಸ್ಟಾರ್' ಯಶ್ (Rocking Star Yash) ಅವರಿಗೆ ಜನವರಿ 8 ರಂದು ಹುಟ್ಟುಹಬ್ಬದ ಸಂಭ್ರಮ. 2026ಕ್ಕೆ 39 ವರ್ಷಗಳನ್ನು ಪೂರೈಸಿ 40ನೇ ವರ್ಷಕ್ಕೆ ಕಾಲಿಡುತ್ತಿರುವ ತಮ್ಮ ನೆಚ್ಚಿನ ನಟನ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಲು ಅಭಿಮಾನಿಗಳು ಸಜ್ಜಾಗಿದ್ದಾರೆ. ಈ ಬಾರಿ ಯಶ್ ಹುಟ್ಟುಹಬ್ಬದ ಸಂಭ್ರಮವು ಸಿಲಿಕಾನ್ ಸಿಟಿಯ ಲೈಫ್ ಲೈನ್ 'ನಮ್ಮ ಮೆಟ್ರೋ' (Namma Metro) ಹಳಿಗಳ ಮೇಲೂ ಸದ್ದು ಮಾಡುತ್ತಿದೆ.

38

ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಇತ್ತೀಚೆಗೆ ಮೆಟ್ರೋ ರೈಲುಗಳ ಮೇಲೆ ಜಾಹೀರಾತು ಅಳವಡಿಕೆಗೆ ಅವಕಾಶ ನೀಡಿತ್ತು. ಇದನ್ನು ಬಳಸಿಕೊಂಡಿರುವ ಅಭಿಮಾನಿಗಳು ಅಥವಾ ಸಿನಿಮಾ ತಂಡ, ಇಡೀ ಮೆಟ್ರೋ ರೈಲಿನ ಮೇಲ್ಭಾಗದಲ್ಲಿ ಯಶ್ ಅವರ ಬೃಹತ್ ಚಿತ್ರವಿರುವ ಜಾಹೀರಾತನ್ನು ಅಳವಡಿಸಿದ್ದಾರೆ.

48

ಈ ಮೂಲಕ ಯಶ್ ಅವರಿಗೆ ಅದ್ಧೂರಿಯಾಗಿ ಜನ್ಮದಿನದ ಶುಭ ಕೋರಲಾಗಿದ್ದು, ಯಶ್ ಚಿತ್ರವಿರುವ ಮೆಟ್ರೋ ರೈಲು ಸಂಚರಿಸುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ (Social Media) ಭಾರಿ ವೈರಲ್ ಆಗುತ್ತಿವೆ.

58

ಈ ಅಭೂತಪೂರ್ವ ಜಾಹೀರಾತನ್ನು ಯಾರು ನೀಡಿದ್ದಾರೆ ಎಂಬುದು ಇನ್ನೂ ಅಧಿಕೃತವಾಗಿ ತಿಳಿದುಬಂದಿಲ್ಲ. ಯಶ್ ಅವರ ಅಪ್ಪಟ ಅಭಿಮಾನಿಗಳು ಈ ಸಾಹಸ ಮಾಡಿದ್ದಾರೋ ಅಥವಾ ಯಶ್ ಅಭಿನಯದ ಬಹುನಿರೀಕ್ಷಿತ 'ಟಾಕ್ಸಿಕ್' (Toxic Movie) ಸಿನಿಮಾದ ಪ್ರಚಾರಕ್ಕಾಗಿ ನಿರ್ಮಾಪಕರು ಈ ತಂತ್ರ ಅನುಸರಿಸಿದ್ದಾರೋ ಎಂಬ ಚರ್ಚೆಗಳು ಶುರುವಾಗಿವೆ.

68

ಆದರೆ, ಇದನ್ನು ಯಶ್ ಅವರ ಸ್ನೇಹಿತರು ಈ ಜಾಹೀರಾತು ಕೊಟ್ಟಿದ್ದು, ಜೊತೆಗೆ ಅವರು ಕೂಡ ತಮ್ಮ ಶುಭ ಕೋರುವ ಫೋಟೋವನ್ನು ಅಳವಡಿಕೆ ಮಾಡಿಸಿದ್ದಾರೆ. 

ಕಾರಣ ಏನೇ ಇರಲಿ, ಮೆಟ್ರೋ ರೈಲಿನಲ್ಲಿ ವ್ಯಕ್ತಿಯೊಬ್ಬರ ಫೋಟೋ ಈ ಮಟ್ಟಕ್ಕೆ ಪ್ರದರ್ಶನವಾಗುತ್ತಿರುವುದು ಇದೇ ಮೊದಲು ಎನ್ನಲಾಗಿದೆ.

78

ಕಳೆದ ಬಾರಿ ಗದಗದಲ್ಲಿ (Gadag) ಯಶ್ ಹುಟ್ಟುಹಬ್ಬದ ಸಂದರ್ಭದಲ್ಲಿ ಕಟೌಟ್ ನಿಲ್ಲಿಸುವಾಗ ವಿದ್ಯುತ್ ಶಾಕ್‌ನಿಂದ ಮೂವರು ಅಭಿಮಾನಿಗಳು ಮೃತಪಟ್ಟಿದ್ದರು. ಈ ಘಟನೆಗೆ ಮಮ್ಮಲ ಮರುಗಿದ್ದ ಯಶ್, ತಕ್ಷಣವೇ ಅಭಿಮಾನಿಗಳ ಮನೆಗೆ ಭೇಟಿ ನೀಡಿ ಪೋಷಕರಿಗೆ ಧೈರ್ಯ ತುಂಬಿದ್ದರು ಹಾಗೂ ಆರ್ಥಿಕ ಸಹಾಯವನ್ನೂ ನೀಡಿದ್ದರು.

88

ಈ ಬಾರಿ ಅಂತಹ ಯಾವುದೇ ಅಪಾಯಕಾರಿ ಕಟೌಟ್ ಸಂಸ್ಕೃತಿಗೆ ಮೊರೆ ಹೋಗದೆ, ಮೆಟ್ರೋದಂತಹ ಸುರಕ್ಷಿತ ಮತ್ತು ವಿನೂತನ ಹಾದಿಯಲ್ಲಿ ಶುಭ ಕೋರುತ್ತಿರುವುದು ಮೆಚ್ಚುಗೆಗೆ ಪಾತ್ರವಾಗಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories