ಕಿಚ್ಚನ ಜೊತೆ Rachita Ram ಮಾತನಾಡಲ್ವಾ? ದರ್ಶನ್ ಗ್ಯಾಂಗಿನಲ್ಲೇ ಕಾಣಿಸಿಕೊಳ್ಳೋದೇಕೆ?

Published : Jan 05, 2026, 02:39 PM ISTUpdated : Jan 05, 2026, 04:33 PM IST

Rachita Ram Sudeep : ಡಿಂಪಲ್ ಕ್ವೀನ್ ರಚಿತಾ ರಾಮ್, ನಟ ದರ್ಶನ್ ದೊಡ್ಡ ಅಭಿಮಾನಿ. ಸುದೀಪ್ ವಿಷ್ಯಕ್ಕೆ ಕೆಲ ದಿನಗಳ ಹಿಂದೆ ಸುದ್ದಿಯಾಗಿದ್ದ ರಚಿತಾ ಈಗ ಮನದಾಳದ ಮಾತನ್ನು ಬಿಚ್ಚಿಟ್ಟಿದ್ದಾರೆ.

PREV
18
ಡಿಂಪಲ್ ಕ್ವೀನ್ ರಚಿತಾ ರಾಮ್

ಸ್ಯಾಂಡಲ್ವುಡ್ ನ ಪ್ರಸಿದ್ಧ ನಟಿ ರಚಿತಾ ರಾಮ್, ಡಿಂಪಲ್ ಕ್ವೀನ್ ಅಂತಾನೇ ಹೆಸರು ಪಡೆದಿದ್ದಾರೆ. ನಟ ದರ್ಶನ್ ಆಪ್ತ ಭಕ್ತೆ ಅಂತ ರಚಿತಾ ರಾಮ್ ಗುರುತಿಸಿಕೊಂಡಿದ್ದಾರೆ. ದರ್ಶನ್ ಜೊತೆ ಮೊದಲ ಸಿನಿಮಾ ಮಾಡಿದ್ದ ರಚಿತಾ ರಾಮ್, ಬುಲ್ ಬುಲ್ ಆಗಿ ಸದ್ಯ ಸ್ಯಾಂಡಲ್ವುಡ್ ಆಳ್ತಿದ್ದಾರೆ. ವಯಸ್ಸಾದ ಪಾತ್ರ ಇರಲಿ, ಕಾಲೇಜ್ ಹುಡುಗಿ ಪಾತ್ರ ಇರಲಿ ಎಲ್ಲ ಪಾತ್ರಗಳಿಗೂ ರಚಿತಾ ಜೀವ ತುಂಬ್ತಾರೆ.

28
ರಚಿತಾ ಸುದೀಪ್ ಸಂಬಂಧ

ರನ್ನ ಸಿನಿಮಾದಲ್ಲಿ ಕಿಚ್ಚ ಸುದೀಪ್ ಜೊತೆ ರಚಿತಾ ನಟಿಸಿದ್ದಾರೆ. ಕೊಲೆ ಆರೋಪದ ಮೇಲೆ ದರ್ಶನ್ ಜೈಲು ಸೇರಿದ್ದು, ಅದಕ್ಕೂ ಮುನ್ನವೇ ಸುದೀಪ್ ಹಾಗೂ ದರ್ಶನ್ ಮಧ್ಯೆ ಸ್ನೇಹ ಬ್ರೇಕ್ ಆಗಿತ್ತು. ಇದು ರಚಿತಾ ಹಾಗೂ ಸುದೀಪ್ ಮಧ್ಯೆ ಬಿರುಕು ಮೂಡಿಸಿದ್ಯಾ? ಇಬ್ಬರು ಮಾತನಾಡಲ್ವಾ ಎನ್ನುವ ಪ್ರಶ್ನೆ ಹುಟ್ಟಿಕೊಳ್ಳಲು ಕಾರಣವಾಗಿತ್ತು.

38
ಅನುಮಾನಕ್ಕೆ ಇದು ಕಾರಣ

ಈ ಮಧ್ಯೆ ಹಿಂದಿನ ವರ್ಷ 2025ರಲ್ಲಿ ಶಿವರಾಜ್ ಕುಮಾರ್ , ಗೀತಾ ಶಿವರಾಜ್ ಕುಮಾರ್, ಸುದೀಪ್ ಹಾಗೂ ರಚಿತಾ ರಾಮ್ ಬಂಡೆ ಮಹಾಕಾಳಮ್ಮ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಈ ವೇಳೆ ಅವರ ಕ್ಲಿಪ್ ಒಂದು ವೈರಲ್ ಆಗಿತ್ತು. ಸುದೀಪ್ ಮುಂದೆ ರಚಿತಾ ರಾಮ್ ಇದ್ರೂ, ಅವರನ್ನು ಮಾತನಾಡಿಸಲಿಲ್ಲ, ಒಂದು ಹೆಜ್ಜೆ ಮುಂದೆ ಹೋಗಿ ನಿಂತ್ರು ಎನ್ನುವ ಸುದ್ದಿ ವೈರಲ್ ಆಗಿತ್ತು. ಅದು ಸುದೀಪ್ ಹಾಗೂ ರಚಿತಾ ಮಧ್ಯೆ ಏನೋ ಸರಿ ಇಲ್ಲ ಎನ್ನುವ ಅನುಮಾನ ಮೂಡಿಸಿತ್ತು.

48
ಸುದೀಪ್ ಬಗ್ಗೆ ರಚಿತಾ ರಾಮ್ ಹೇಳಿದ್ದೇನು?

ಮಾಧ್ಯಮದ ಪ್ರಶ್ನೆಯೊಂದಕ್ಕೆ ರಚಿತಾ ರಾಮ್ ಉತ್ತರ ನೀಡಿದ್ದಾರೆ. ಸುದೀಪ್ ಹಾಗೂ ನನ್ನ ಮಧ್ಯೆ ಯಾವುದೇ ಬಿರುಕಿಲ್ಲ ಎಂಬುದನ್ನು ಅವರು ಸ್ಪಷ್ಟಪಡಿಸಿದ್ದಾರೆ. ಬಂಡೆ ಮಹಾಕಾಳಮ್ಮ ದೇವಸ್ಥಾನಕ್ಕೆ ಭೇಟಿ ನೀಡಿದ್ದಾಗ, ಸುದೀಪ್ ಸರ್ ಜೊತೆ ನಾನು ಮಾತನಾಡಿದ್ದೆ. ಹಾಯ್ ಅಂತ ಹೇಳಿ ಹಗ್ ಮಾಡಿದ್ದೇವೆ. ಎಲ್ಲಿ ಕಾಣಿಸ್ತಿಲ್ಲ ಅಂತ ಸುದೀಪ್ ಸರ್ ಕೇಳಿದ್ರು. ನಾವು ಮಾತನಾಡ್ತೇವೆ ಎಂದಿದ್ದಾರೆ.  

58
ಬಿಗ್‌ ಬಾಸ್‌ ನೋಡ್ತಾರೆ ರಚಿತಾ ರಾಮ್‌

ಸುದೀಪ್‌ ಸರ್‌  ಸ್ಟೈಲ್ ನನಗೆ ಇಷ್ಟ. ಅದನ್ನು ನಾನು ಅವರಿಗೆ ಹೇಳಿದ್ದೇನೆ. ನಮ್ಮ ಮಧ್ಯೆ ಮನಸ್ತಾಪ ಇಲ್ಲ. ನಾನು ಬಿಗ್ ಬಾಸ್ ಶೋ ನೋಡ್ತೇನೆ. ನಾನು ಅವರ ಜೊತೆ ಸಿನಿಮಾ ಮಾಡಿದ್ದೇನೆ. ಆದರೆ ನಾವಿಬ್ಬರು ಮಾತನಾಡಿದ ವಿಡಿಯೋವನ್ನು ಎಲ್ಲೂ ಪೋಸ್ಟ್‌ ಮಾಡಿಲ್ಲ. ನಮ್ಮ ಟೀಂಗೂ ನಾನು ಇದ್ರ ಬಗ್ಗೆ ಕೇಳಿದ್ದೆ ಅಂತ ರಚಿತಾ ರಾಮ್ ಹೇಳಿದ್ದಾರೆ.

68
ಸುದೀಪ್ – ದರ್ಶನ್ ಬಗ್ಗೆ ರಚಿತಾ ಹೇಳೋದೇನು?

ಕಿಚ್ಚ ಸುದೀಪ್ ಹಾಗೂ ದರ್ಶನ್ ಮೊದಲಿನಂತೆ ಆಪ್ತವಾಗಿಲ್ಲ. ಸ್ಟಾರ್ ವಾರ್ ಗಿಂತ ಇಲ್ಲಿ ಫ್ಯಾನ್ಸ್ ವಾರ್ ಜೋರಾಗಿದೆ. ರಚಿತಾ ರಾಮ್, ಇಬ್ಬರ ಜೊತೆ ನಟಿಸಿದ್ದಾರೆ. ಸುದೀಪ್ ಹಾಗೂ ದರ್ಶನ್ ಜೊತೆ ಒಳ್ಳೆ ಸಂಬಂಧವಿದೆ. ಆದ್ರೆ ಅವರಿಬ್ಬರನ್ನು ಒಂದು ಮಾಡುವ ಕೆಲ್ಸ ನಾನು ಮಾಡೋದಿಲ್ಲ ಅಂತ ರಚಿತಾ ರಾಮ್ ಹೇಳಿದ್ದಾರೆ. ಇಬ್ಬರ ಜಗಳದಲ್ಲಿ ಮೂರನೇಯವನು ಹೋದ್ರೆ ಲಾಭವೂ ಇದೆ, ನಷ್ಟವೂ ಇದೆ. ಎಲ್ಲವನ್ನೂ ಸಮಯಕ್ಕೆ ಬಿಡೋಣ. ಮುಂದೆ ಎಲ್ಲ ಸಮಸ್ಯೆ ಸರಿ ಆಗ್ಬಹುದು. ಆದ್ರೆ ಅದೇ ವಿಷ್ಯವನ್ನು ಪದೇ ಪದೇ ಕೆಣಕುವ ಅಗತ್ಯವಿಲ್ಲ ಅಂತ ರಚಿತಾ ರಾಮ್ ಹೇಳಿದ್ದಾರೆ.

78
ದರ್ಶನ್ ಜೊತೆ ಕಾಣಿಸಿಕೊಂಡ್ರೆ ತಪ್ಪೇನು?

ದರ್ಶನ್ ಜೊತೆ ಮೊದಲ ಸಿನಿಮಾ ಮಾಡಿರುವ ರಚಿತಾ ರಾಮ್ ಗೆ ದರ್ಶನ್ ಮೇಲೆ ಅಪಾರ ಅಭಿಮಾನ ಇದೆ. ಹಾಗಂತ ಸುದೀಪ್ ಸೇರಿದಂತೆ ಬೇರೆ ನಟರ ಜೊತೆ ಮಾತನಾಡಬಾರದು ಅಂತ ಎಲ್ಲೂ ದರ್ಶನ್ ಒತ್ತಡ ಹೇರಿಲ್ಲ. ಇದು ನನ್ನ ಲೈಫ್ ಅಂತ ರಚಿತಾ ರಾಮ್‌ ಹೇಳಿದ್ದಾರೆ. 

88
ಕಂಡೀಷನ್‌ ಹಾಕಿಲ್ಲ ದರ್ಶನ್‌

ದರ್ಶನ್ ಸರ್‌ , ಯಾವುದೇ ಕಂಡೀಷನ್ ಹಾಕಿಲ್ಲ. ಆದ್ರೂ ನಾನು ದರ್ಶನ್ ಟೀಂನಲ್ಲಿ ಕಾಣಿಸಿಕೊಳ್ತೇನೆ. ಇದಕ್ಕೆ ಕಾರಣ ಅವರು ನನ್ನನ್ನು ಲಾಂಚ್ ಮಾಡಿದ್ದು, ಅವರ ಮೇಲೆ ವಿಶೇಷ ಅಭಿಮಾನ ಇದೆ. ಯಾರೇ ನನ್ನನ್ನು ಲಾಂಚ್‌ ಮಾಡಿದ್ರೂ ನಾನು ಅವರ ಮೇಲೆ ಇಷ್ಟೇ ಅಭಿಮಾನ ತೋರಿಸುತ್ತಿದ್ದೆ ಅಂತ ರಚಿತಾ ರಾಮ್ ಹೇಳಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories