ಸಂಚಲನ ಮೂಡಿಸಿದ್ದ Love Mocktail Movie Part 3 ರಿಲೀಸ್‌ ದಿನಾಂಕ ಘೋಷಿಸಿದ ಡಾರ್ಲಿಂಗ್‌ ಕೃಷ್ಣ

Published : Jan 04, 2026, 04:14 PM IST

Love Mocktail Kannada Movie Release Date: ನಟನಾಗಿದ್ದ ಡಾರ್ಲಿಂಗ್ ಕೃಷ್ಣ ‘ಲವ್ ಮಾಕ್ಟೇಲ್ʼ ಸಿನಿಮಾ ನಿರ್ದೇಶನ ಮಾಡುವ ಮೂಲಕ ನಿರ್ದೇಶಕನಾಗಿ ಮೊದಲ ಹೆಜ್ಜೆಯಲ್ಲಿಯೇ ಗೆಲುವು ಕಂಡಿದ್ದರು. ಅದಾದ ನಂತರ ಬಂದಿದ್ದ ಸೀಕ್ವೆಲ್‌ ಕೂಡ ಬಂದಿತ್ತು. 

PREV
15
ರಿಲೀಸ್‌ ದಿನಾಂಕ ಘೋಷಣೆ

ಸೀಕ್ವೆಲ್‌ ಗೆದ್ದ ನಂತರದಲ್ಲಿ ‘ಲವ್ ಮಾಕ್ಟೇಲ್ 3’ ಸಿನಿಮಾಕ್ಕೆ ಚಾಲನೆ ನೀಡಿದ್ದರು. ಡಾರ್ಲಿಂಗ್ ಕೃಷ್ಣ, ಇತ್ತೀಚೆಗಷ್ಟೇ ಸೋಶಿಯಲ್‌ ಮೀಡಿಯಾದಲ್ಲಿ ಮೋಷನ್ ಪೋಸ್ಟರ್ ಲಾಂಚ್ ಮಾಡಿದ್ದರು. ಈ ಮೂಲಕ ಮೂರನೇ ಸೀಕ್ವೆಲ್‌ ಬರೋದಾಗಿ ಹೇಳಿದ್ದರು. ಇದೀಗ ಹೊಸ ವರ್ಷದ ಉಡುಗೊರೆ ಎಂಬಂತೆ ಈ ಸಿನಿಮಾದ ಬಿಡುಗಡೆ ದಿನಾಂಕವನ್ನು ಡಾಲಿಂಗ್ ಕೃಷ್ಣ ಅವರು ಘೋಷಣೆ ಮಾಡಿದ್ದಾರೆ.

25
ಯಾವಾಗ ರಿಲೀಸ್‌ ಆಗಲಿದೆ?

ಏಪ್ರಿಲ್ 10ರಂದು ಲವ್ ಮಾಕ್ಟೇಲ್ 3 ಸಿನಿಮಾವು ಪ್ರೇಕ್ಷಕರ ಮುಂದೆ ಬರಲು ರೆಡಿಯಾಗಿದೆ. 2020ರಲ್ಲಿ ಡಾರ್ಲಿಂಗ್ ಕೃಷ್ಣ ನಟಿಸಿ, ನಿರ್ದೇಶನ ಮಾಡಿದ್ದ ಲವ್ ಮಾಕ್ಟೇಲ್ ಸಿನಿಮಾವು ತೆರೆಗಂಡಿತ್ತು. ನವಿರು ಪ್ರೇಮದೊಂದಿಗೆ ಹೊಸೆದುಕೊಂಡಿದ್ದ ಸೂಕ್ಷ್ಮ ಕಥನದ ಮೂಲಕ ಗೆದ್ದ ನಂತರ, ಲವ್ ಮಾಕ್ಟೇಲ್ 2 ಸಿನಿಮಾವನ್ನು ಕೃಷ್ಣ ರೂಪಿಸಿದ್ದರು.

35
ಸೀಕ್ವೆಲ್‌ 3ರಲ್ಲಿ ಏನಿರಲಿದೆ?

ಈಗ ಸೀಕ್ವೆಲ್‌ 3 ಸಿನಿಮಾವು ಭಿನ್ನವಾಗಿರಲಿದೆ ಎಂಬ ವಿಚಾರವನ್ನಷ್ಟೇ ಕೃಷ್ಣ ಹಂಚಿಕೊಂಡಿದ್ದಾರೆ. ಕಥೆ, ನಿರೂಪಣೆ ಸೇರಿದಂತೆ ಎಲ್ಲದರಲ್ಲಿಯೂ ಲವ್ ಮಾಕ್ಟೇಲ್ 3 ಸಿನಿಮಾವು ಹೊಸ ಅನುಭೂತಿ ಕೊಡಲಿದೆ ಎಂದು ಕೃಷ್ಣ ಭರವಸೆ ಇಟ್ಟುಕೊಂಡಿದ್ದಾರೆ.

45
ತಾರಾಗಣದಲ್ಲಿ ಯಾರಿದ್ದಾರೆ?

ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್, ಸಂವೃತಾ, ಅಮೃತಾ ಅಯ್ಯಂಗಾರ್, ರಚೆಲ್ ಡೇವಿಡ್, ಅಭಿಲಾಶ್ ದಳಪತಿ, ಮುಂತಾದವರು ಈ ಸಿನಿಮಾದಲ್ಲಿದ್ದಾರೆ. ಇದೀಗ ಎಲ್ಲ ಕೆಲಸ ಕಾರ್ಯಗಳನ್ನೂ ಮುಗಿಸಿಕೊಂಡಿರುವ ಚಿತ್ರತಂಡ, ಬೇಸಿಗೆ ರಜೆಯನ್ನು ಗಮನದಲ್ಲಿಟ್ಟುಕೊಂಡು ಏಪ್ರಿಲ್ 10ರಂದು ರಿಲೀಸ್‌ ಆಗಲಿದೆ.

55
ಸಿನಿಮಾ ನಿರ್ಮಾಪಕರು ಯಾರು?

ಈ ಚಿತ್ರವನ್ನು ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್ ಅವರು ಕ್ರಿಸ್‌ಮಿ ಬ್ಯಾನರ್‌ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ. ನಕುಲ್ ಅಭಯಂಕರ್ ಸಂಗೀತ ನಿರ್ದೇಶನ, ಶ್ರೀ ಕ್ರೇಜಿ ಮೈಂಡ್ಸ್ ಛಾಯಾಗ್ರಹಣ, ಸಂಕಲ ಈ ಚಿತ್ರಕ್ಕಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories