ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಟಾಕ್ಸಿಕ್' ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಹಾಲಿವುಡ್ ಶೈಲಿಯ ಲುಕ್‌ನಲ್ಲಿ ಯಶ್ ಮಿಂಚಿದ್ದಾರೆ. ಟೀಸರ್ ನೋಡಿದ ಯುವಕರು ಗೂಗಲ್‌ನಲ್ಲಿ ಹುಡುಕಾಟ ನಡೆಸುತ್ತಿದ್ದಾರೆ.
ರಾಕಿಂಗ್ ಸ್ಟಾರ್, ಮಾನಸ್ಟರ್ ಯಶ್ ಕಂಬ್ಯಾಕ್‌ಗೆ ಇಡೀ ದೇಶದ ಸಿನಿ ಅಂಗಳ ಬೆಚ್ಚಿದೆ. ಸಿನಿಮಾದ ಟೀಸರ್ ನೋಡಿದ ಜನರು ಯಶ್ ಲುಕ್‌ಗೆ ಫಿದಾ ಆಗಿದ್ದು, ಒಂದೊಂದು ದೃಶ್ಯಗಳು ನೋಡುಗರಲ್ಲಿ ರೋಮಾಂಚನವನ್ನುಂಟು ಮಾಡುತ್ತಿವೆ. ಟಾಕ್ಸಿಕ್ ಟೀಸರ್ ನೋಡುತ್ತಿದ್ದಂತೆ ಗಂಡೈಕ್ಳು ಗೂಗಲ್‌ನಲ್ಲಿ ಹುಡುಕಾಟ ಶುರು ಮಾಡಿದ್ದಾರೆ.
25
ಹಾಲಿವುಡ್ ರೇಂಜ್‌ನಲ್ಲಿ ಯಶ್ ಎಂಟ್ರಿ
ಒಂದು ಸಿನಿಮಾ ಹಿಟ್ ಆದ್ರೆ ಚಿತ್ರದ ಪ್ರತಿಯೊಂದು ಪಾತ್ರ, ಸನ್ನಿವೇಶ, ಉಡುಪು ಸೇರಿದಂತೆ ಎಲ್ಲಾ ವಿಷಯಗಳು ವೀಕ್ಷಕರ ಗಮನಕ್ಕೆ ಬರುತ್ತವೆ. ಅಂತಹ ಹಿಟ್ ಸಿನಿಮಾಗಳ ಸಾಲಿಗೆ ಸೇರ್ಪಡೆಯಾಗಲು ಟಾಕ್ಸಿಕ್ ಸಿದ್ಧತೆ ಮಾಡಿಕೊಳ್ಳುತ್ತಿದೆ. ಕೆಜಿಎಫ್ ಬಳಿಕ ಮತ್ತೊಮ್ಮೆ ಮಾನಸ್ಟರ್ ಆಗಿ ಯಶ್ ತೆರೆಯ ಮೇಲೆ ಬರುತ್ತಿದ್ದಾರೆ. ಅದು ಸಹ ಪಕ್ಕಾ ಹಾಲಿವುಡ್ ರೇಂಜ್‌ನಲ್ಲಿ ಯಶ್ ಎಂಟ್ರಿ ಆಗುತ್ತಿದೆ.
35
ಗೂಗಲ್‌ನಲ್ಲಿ ಹುಡುಕಾಟ
ವಿಶೇಷವಾಗಿ ಪುರುಷರು ಟಾಕ್ಸಿಕ್ ನೋಡುತ್ತಿದ್ದಂತೆ ಕೆಲವೊಂದು ವಿಷಯಗಳನ್ನು ಗೂಗಲ್ ಸರ್ಚ್ ಮಾಡುತ್ತಿದ್ದಾರೆ. ಟಾಕ್ಸಿಕ್ ಚಿತ್ರದಲ್ಲಿನ ಯಶ್ ಪರಿಚಯದ ದೃಶ್ಯವನ್ನು ಅತ್ಯಂತ ಚಾಕಚಕ್ಯತೆಯಿಂದ ತೆರೆ ಮೇಲೆ ತೆಗೆದುಕೊಂಡು ಬರಲಾಗಿದೆ. ಈ ಚಾಕಚಕ್ಯತೆಯಲ್ಲಿ ಯಶ್ ಧರಿಸಿರುವ ಉಂಗುರು, ಬ್ರೆಸ್‌ಲೈಟ್, ಕಿವಿಯೊಲೆ, ಚೈನ್, ಕನ್ನಡಕ ಮತ್ತು ಟ್ಯಾಟೂಗಳು ಯುವಕರನ್ನು ಸೆಳೆಯಲು ಆರಂಭಿಸಿವೆ.
ಯಶ್ ಮುಂಗೈ ಮೇಲೆ ಗರಡು ಮತ್ತು ಇನ್‌ಫಿನಿಟಿಯ ಟ್ಯಾಟೂ ಗಮನಿಸಬಹುದು. ಹಾಗೆಯೇ ಬೆರಳುಗಳ ಮೇಲೆಯೂ ಉಂಗುರು ರೀತಿಯಲ್ಲಿನ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಇನ್ನು ವಿಲನ್ ಧರಿಸಿದ್ದ ಉಂಗುರವನ್ನು ಹುಡುಕಾಟ ಮಾಡಲಾಗುತ್ತಿದೆ.
ಇದೆಲ್ಲದರ ಜೊತೆ ಟೀಸರ್‌ನಲ್ಲಿ ಗಂಡೈಕ್ಳ ಹೃದಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿರುವ ಚೆಲುವೆ ಯಾರು ಎಂಬುದನ್ನು ಸರ್ಚ್ ಮಾಡಲಾಗುತ್ತಿದೆ. ಟಾಕ್ಸಿಕ್ ಟೀಸರ್ ನಂಬರ್ ಒನ್ ಟ್ರೆಂಡಿಂಗ್ ಸ್ಥಾನ ಪಡೆದುಕೊಂಡಿದೆ. ಗೀತು ಮೋಹನದಾಸ್ ನಿರ್ದೇಶನದಲ್ಲಿ ಟಾಕ್ಸಿಕ್ ಮೂಡಿ ಬಂದಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.