Rocking Star Yash Birthday: 40ನೇ ವಯಸ್ಸಿಗೆ ಕಾಲಿಟ್ಟ 'ರಾಕಿ ಭಾಯ್‌' ಸೂಪರ್‌ ಹಿಟ್‌ 10 ಸಿನಿಮಾಗಳಿವು!

Published : Jan 08, 2026, 09:47 AM IST

Rocking Star Yash ಟಾಕ್ಸಿಕ್‌ ಸಿನಿಮಾ ಕೆಲಸದಲ್ಲಿ ಬ್ಯುಸಿ ಇರುವ ಅವರು ಇಂದು ಇಡೀ ಭಾರತೀಯ ಚಿತ್ರರಂಗದ ದೊಡ್ಡ ಶಕ್ತಿಯಾಗಿದ್ದಾರೆ. ಬಸ್‌ ಡ್ರೈವರ್‌ ಮಗ ಇಂದು ನ್ಯಾಶನಲ್‌ ಸ್ಟಾರ್.‌ ಕಿರುತೆರೆಯಿಂದ ಬೆಳ್ಳಿತೆರೆಗೆ ಬಂದು, ಈಗ 'ಪ್ಯಾನ್ ಇಂಡಿಯಾ' ಸ್ಟಾರ್ ಆಗಿದ್ದಾರೆ. ಯಶ್ ಸೂಪರ್ ಹಿಟ್ ಸಿನಿಮಾಗಳಿವು. 

PREV
110
ಕೆಜಿಎಫ್: ಚಾಪ್ಟರ್ 2 (KGF: Chapter 2 - 2022)

ಕೆಜಿಎಫ್‌ ಸಿನಿಮಾವು ಯಶ್ ಅವರ ವೃತ್ತಿಜೀವನದ ಅತಿ ದೊಡ್ಡ ಸಿನಿಮಾ. ಕನ್ನಡ ಚಿತ್ರರಂಗಕ್ಕೆ ಭಾಗ್ಯದ ಬಾಗಿಲು ತೆಗೆದ ಸಿನಿಮಾವಾಗಿದೆ. ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಅತಿ ಹೆಚ್ಚು ಹಣ ಗಳಿಕೆ ಮಾಡಿದ ಸಿನಿಮಾಗಳಲ್ಲಿ ಒಂದಾಗಿದೆ. ಪ್ರಶಾಂತ್ ನೀಲ್ ನಿರ್ದೇಶನದ ಈ ಸಿನಿಮಾದಲ್ಲಿ 'ರಾಕಿ ಭಾಯ್' ಆಗಿ ಯಶ್ ನಟಿಸಿದ್ದರು.

210
ಕೆ.ಜಿ.ಎಫ್: ಚಾಪ್ಟರ್ 1 (KGF: Chapter 1 - 2018)

ಕನ್ನಡ ಚಿತ್ರರಂಗದ ಖ್ಯಾತಿಯನ್ನು ರಾಜ್ಯದ ಗಡಿ ಮೀರಿ ಬೆಳೆಸಿರುವ ಸಿನಿಮಾವಾಗಿದೆ. ಈ ಸಿನಿಮಾ ಮೂಲಕ ಯಶ್, ಮೊದಲ ಬಾರಿಗೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬೆಳೆದರು. ಆಕ್ಷನ್ ಹಾಗೂ ತಾಯಿ ಸೆಂಟಿಮೆಂಟ್ ಈ ಸಿನಿಮಾದ ಹೈಲೈಟ್ ಆಗಿತ್ತು. ಹಾಡುಗಳು ಹಿಟ್‌ ಆಗಿದ್ದವು.

310
ಮೊಗ್ಗಿನ ಮನಸು (Moggina Manasu - 2008)

ಯಶ್ ಮೊದಲ ಸಿನಿಮಾ ಇದಲ್ಲದಿದ್ದರೂ, ಹೀರೋ ಆಗಿ ಅವರಿಗೆ ದೊಡ್ಡ ಬ್ರೇಕ್ ನೀಡಿದ ಸಿನಿಮಾವಿದು. ಈ ಸಿನಿಮಾದ ನಟನೆಗಾಗಿ ಅತ್ಯುತ್ತಮ ಪೋಷಕ ನಟ ವಿಭಾಗದಲ್ಲಿ ಫಿಲ್ಮ್ ಫೇರ್ ಪ್ರಶಸ್ತಿಯನ್ನು ಪಡೆದಿದ್ದರು. ಇಲ್ಲಿಂದಲೇ ಬೆಳ್ಳಿ ತೆರೆ ಮೇಲೆ, ರಿಯಲ್‌ ಆಗಿಯೂ ರಾಧಿಕಾ ಪಂಡಿತ್, ಯಶ್ ಅವರ ಜೋಡಿ ಶುರುವಾಗಿತ್ತು.

410
ಡ್ರಾಮಾ (Drama - 2012)

ಯೋಗರಾಜ್ ಭಟ್ ನಿರ್ದೇಶನದ ಡ್ರಾಮಾ ಸಿನಿಮಾದಲ್ಲಿ ಯಶ್ ಕಾಮಿಡಿ ಟೈಮಿಂಗ್ ಅದ್ಭುತವಾಗಿತ್ತು. ವಿಭಿನ್ನ ಶೈಲಿಯ ನಿರೂಪಣೆ, ಮಧುರವಾದ ಹಾಡುಗಳು, ಯಶ್-ಸತೀಶ್‌ ನೀನಾಸಂ, ರಾಧಿಕಾ ಪಂಡಿತ್‌, ನಿಧಿ ಸುಬ್ಬಯ್ಯ ಕಾಂಬಿನೇಶನ್‌ ಮೆಚ್ಚುಗೆ ಪಡೆದಿತ್ತು.

510
ಸಂತು ಸ್ಟ್ರೈಟ್ ಫಾರ್ವರ್ಡ್ (Santhu Straight Forward - 2016)

ಯಶ್, ರಾಧಿಕಾ ಪಂಡಿತ್ ಜೋಡಿಯ ‘ಸಂತು ಸ್ಟ್ರೈಟ್ ಫಾರ್ವರ್ಡ್’ ಸಿನಿಮಾ ಯಶಸ್ಸು ಕಂಡಿದೆ. ಪಕ್ಕಾ ಮಾಸ್, ಎಂಟರ್‌ಟೇನಿಂಗ್ ಆಗಿರುವ ಸಿನಿಮಾವಿದು.

610
ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ (Mr. and Mrs. Ramachari - 2014)

ನಟ ಯಶ್ ಮತ್ತು ರಾಧಿಕಾ ಪಂಡಿತ್ ಅಭಿನಯದ ‘ಮಿಸ್ಟರ್‌ & ಮಿಸ್‌ಸ್‌ ರಾಮಾಚಾರಿ’ ಸಿನಿಮಾ ಸೂಪರ್‌ ಹಿಟ್‌ ಆಗಿತ್ತು. ಯುವಜನತೆಗೆ ಬಹಳ ಇಷ್ಟವಾಗಿದ್ದ ಈ ಸಿನಿಮಾ ನಂತರದಲ್ಲಿ ಈ ಜೋಡಿ ಮದುವೆ ಆಯ್ತು. ಡಾ. ವಿಷ್ಣುವರ್ಧನ್ ಅವರ ಅಭಿಮಾನಿಯಾಗಿ ಯಶ್ ನಟಿಸಿದ್ದರು. ರಾಮಾಚಾರಿ, ಮಾರ್ಗರೇಟ್‌ ಎಂದು ಈ ಪಾತ್ರಗಳು ಖ್ಯಾತಿ ಗಳಿಸಿದವು.

710
ಗಜಕೇಸರಿ (Gajakesari - 2014)

ಗಜಕೇಸರಿ ಸಿನಿಮಾದಲ್ಲಿ ಯಶ್ ಅವರು ಆನೆ ಜೊತೆಗೆ ಕಾಣಿಸಿಕೊಂಡಿದ್ದರು. ಐತಿಹಾಸಿಕ ಮತ್ತು ಪ್ರಸ್ತುತ ಕಾಲಘಟ್ಟದ ಕಥೆ ಜೊತೆಗೆ ಆನೆ ಜೊತೆಗಿನ ಹಳೆಯ ಸಂಬಂಧವನ್ನು ಕೂಡ ಈ ಸಿನಿಮಾದಲ್ಲಿ ತೋರಿಸಲಾಗಿದೆ. ನಟಿ ಅಮೂಲ್ಯ ಈ ಸಿನಿಮಾದ ಹೀರೋಯಿನ್. ‌

810
ರಾಜಾ ಹುಲಿ (Raja Huli - 2013)

ಮಂಡ್ಯ ಭಾಷೆ, ಹಳ್ಳಿ ಸೊಗಡಿನ ರಾಜಾ ಹುಲಿ ಸಿನಿಮಾ ಡೈಲಾಗ್‌ಗಳು ಇಂದು ಕೂಡ ಫೇಮಸ್‌ ಆಗಿವೆ. ಸ್ನೇಹಿತರ ನಡುವಿನ ಬಾಂಧವ್ಯದ ಜೊತೆಯಲ್ಲಿ ಲವ್‌ ಸ್ಟೋರಿ, ಜಾತಿ-ಪ್ರತಿಷ್ಠೆ ಬಗ್ಗೆ ಈ ಸಿನಿಮಾವಿದೆ. ಮೇಘನಾ ರಾಜ್‌ ಈ ಸಿನಿಮಾ ಹೀರೋಯಿನ್‌ ಆಗಿದ್ದರು.

910
ಕಿರಾತಕ (Kirataka - 2011)

ಮಂಡ್ಯ ಭಾಷೆಯ ಸೊಗಡನ್ನು ಸುಂದರವಾಗಿ ಪ್ರಸ್ತುತಪಡಿಸಿದ ಯಶ್ ಅವರ ಕಿರಾತಕ ಸಿನಿಮಾ ಕೂಡ ಒಂದು. ಈ ಚಿತ್ರದಲ್ಲಿ ಯಶ್ ನೈಜ ನಟನೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

1010
ಗೂಗ್ಲಿ (Googly - 2013)

ಪವನ್ ಒಡೆಯರ್ ನಿರ್ದೇಶನದ ‘ಗೂಗ್ಲಿ’ ಸಿನಿಮಾವು ಯಶ್ ಅವರಿಗೆ ದೊಡ್ಡ ಮಟ್ಟದ ಲವರ್ ಬಾಯ್ ಇಮೇಜ್ ತಂದುಕೊಟ್ಟಿತು. ಸ್ಟೈಲಿಶ್ ಲುಕ್, ಯಶ್ ಮ್ಯಾನರಿಸಂ, ಶರತ್-ಸ್ವಾತಿ ಕಾಂಬಿನೇಶನ್ ಪ್ರೇಕ್ಷಕರನ್ನು ಸೆಳೆದಿತ್ತು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories