'KGF' ಸಿನಿಮಾ ಖ್ಯಾತಿಯ ನಟ ‘ರಾಕಿಂಗ್ ಸ್ಟಾರ್’ ಯಶ್ 'ಟಾಕ್ಸಿಕ್' (Toxic) ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಯಶ್ ಪಾತ್ರ ಹೇಗಿದೆ ಎಂದು ತೋರಿಸಲಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಟೀಸರ್ ಸಂಚಲನ ಮೂಡಿಸಿದೆ. ಗೀತು ಮೋಹನ್ ದಾಸ್ ನಿರ್ದೇಶನವಿದೆ. ಯಶ್ ಬೇರೆ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಕೆಜಿಎಫ್ ಸಿನಿಮಾದಲ್ಲಿಯೇ ವಿಭಿನ್ನವಾಗಿ ಕಾಣಿಸಿಕೊಂಡಿದ್ದ ಯಶ್ ಈ ಚಿತ್ರದಲ್ಲಿ ಗಡ್ಡದ ಜೊತೆಗೆ ವಿಭಿನ್ನ ಹೇರ್‌ಸ್ಟೈಲ್, ಟ್ಯಾಟೂ ಎಂದು ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಅವರಿಗೆ ರಾಯಾ ಎಂಬ ಪಾತ್ರವಿದೆ. ಇಲ್ಲಿಯೂ ಅವರು ಆಕ್ಟನ್ ಸ್ಟಾರ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದ ಟೀಸರ್‌ನಲ್ಲಿ ಯಶ್ ಅವರು ತಲೆಗೆ ಹ್ಯಾಟ್ ಹಾಕಿ, ಬಾಯಲ್ಲಿ ವಿಭಿನ್ನವಾದ ಸಿಗಾರ್ ಹಿಡಿದು, ಕೈಯಲ್ಲಿ ಮಷಿನ್ ಗನ್ ಹಿಡಿದಿರುವ ದೃಶ್ಯವು ಮಾತ್ರ ವೀಕ್ಷಕರನ್ನು ನಿಬ್ಬೆರಗು ಮಾಡುವುದು. Raya ಅಂದರಾ ರಾಧಿಕಾ, ಯಶ್ ಎಂದು ಕೂಡ ಕೆಲವರು ಹೇಳುತ್ತಿದ್ದಾರೆ.
26
ಮೈನವಿರೇಳಿಸೋ ಆಕ್ಷನ್
ಐ ಡೋಂಟ್ ಲೈಕ್ ವಯಲೆನ್ಸ್, ವಯಲೆನ್ಸ್ ಲೈಕ್ಸ್ ಮೀ. ಈ ಡೈಲಾಗ್‌ನ್ನು ಯಶ್ ಅವರು ಸೀರಿಯಸ್ ಆಗಿ ತಗೊಂಡಿದ್ದಾರೆ ಎಂದು ವೀಕ್ಷಕರು ಕಾಮೆಂಟ್ ಮಾಡುತ್ತಿದ್ದಾರೆ. ಯಶ್ ಅವರು ಈ ಸಿನಿಮಾದಲ್ಲಿ ಭರ್ಜರಿ ಆಕ್ಷನ್ ಸೀನ್ ಮಾಡಿದ್ದಾರೆ. ಕೆಜಿಎಫ್ ಸಿನಿಮಾದಲ್ಲಿ ದೊಡ್ಡಮ್ಮ ಎನ್ನೋ ರೀತಿ ಒಂದು ಗನ್ ಮಶಿನ್ ಇತ್ತು, ಇಲ್ಲಿಯೂ ಅದೇ ಥರ ಯುದ್ಧೋಪಕರಣವನ್ನು ಬಳಸಲಾಗಿದೆ. ಹಾಲಿವುಡ್ ಸಿನಿಮಾ ಕಲಾವಿದರ ಜೊತೆ ನಟಿಸಿರುವುದು ವಿಶೇಷ.
36
ಸಂಗೀತ, ಟೈಟಲ್
ಈ ಸಿನಿಮಾದ ಹಿನ್ನೆಲೆ ಸಂಗೀತ,ದೃಶ್ಯ ವೈಭವಕ್ಕೆ ಮ್ಯಾಚ್ ಆಗಿದೆ. ಈ ಮೂಲಕ ದೃಶ್ಯವನ್ನು ಇನ್ನೊಂದು ಲೆವೆಲ್‌ಗೆ ಕರೆದುಕೊಂಡು ಹೋಗಿದೆ. ಅಂದಹಾಗೆ ಈ ಸಿನಿಮಾಕ್ಕೆ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' (Toxic: A Fairy Tale for Grown-ups) ಎಂದು ಹೆಸರು ಇಡಲಾಗಿದೆ. ಇದು ಕೂಡ ವೀಕ್ಷಕರನ್ನು ಕುತೂಹಲದಿಂದ ಇರುವಂತೆ ಮಾಡಿ, ಸಿನಿಮಾ ನೋಡುವಂತೆ ಆಹ್ವಾನ ಕೊಡುವುದು.
ಟಾಕ್ಸಿಕ್ ಸಿನಿಮಾ ಟೀಸರ್ ನೋಡಿದ ನೆಟ್ಟಿಗರು ಇದು ಕೇವಲ ಭಾರತೀಯ ಸಿನಿಮಾವಲ್ಲ, ಅಂತರಾಷ್ಟ್ರೀಯ ಮಟ್ಟದಲ್ಲಿ ಮೂಡಿ ಬಂದಿದೆ, ಅಷ್ಟು ತಾಂತ್ರಿಕವಾಗಿಯೂ ಇದೆ ಎಂದು ಹೊಗಳಿದ್ದಾರೆ. ಛಾಯಾಗ್ರಹಣ ಅಂತೂ ನೆಕ್ಸ್ಟ್ ಲೆವೆಲ್ ಎನ್ನಲಾಗಿದೆ. ಒಂದಿಷ್ಟು ವರ್ಷಗಳ ಹಿಂದೆ ಎಂದು ಅನಿಸುವಂತೆ ವಿಂಟೇಜ್ ಲುಕ್ ಕೊಡುವ ಬ್ರಿಟಿಷ್ ನೆಲದಲ್ಲಿ ಸಿನಿಮಾ ಮೂಡಿಬಂದಂತಿದೆ.
56
ಹಸಿಬಿಸಿ ದೃಶ್ಯಗಳು
ರೊಮ್ಯಾಂಟಿಕ್ ಬಾಯ್ ಆಗಿದ್ದ ನಟ ಯಶ್ ಅವರು ಈ ಸಿನಿಮಾದಲ್ಲಿ ಹಸಿಬಿಸಿ ದೃಶ್ಯದಲ್ಲಿ ಕಾಣಿಸಿಕೊಂಡಿದ್ದಾರೆ. ಈ ದೃಶ್ಯವು ಆನಿಮಲ್ ಸಿನಿಮಾದ ರಣಬೀರ್ ಕಪೂರ್ ಅವರನ್ನು ನೆನಪಿಸುವುದು. ಮೊದಲ ಬಾರಿಗೆ ಯಶ್ ಅವರು ಇಷ್ಟು ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.
66
ದೊಡ್ಡ ತಾರಾಗಣ
ನಯನತಾರಾ, ರುಕ್ಮಿಣಿ ವಸಂತ್, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ತಾರಾ ಸುತಾರಿಯಾ ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಇವರೆಲ್ಲರ ಪೋಸ್ಟರ್ ರಿಲೀಸ್ ಆಗಿದ್ದು, ಕಾಸ್ಟ್ಯೂಮ್ ಕೂಡ ಒಂದೇ ಥರ ಇರೋದು ಸಾಕಷ್ಟು ಕುತೂಹಲ ಮೂಡಿಸಿದೆ. ಒಟ್ಟಿನಲ್ಲಿ 2026 ಮಾರ್ಚ್ 19ಕ್ಕೆ ವೀಕ್ಷಕರು ಸಿನಿಮಾ ನೋಡಲು ಕಾಯುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.