Kannada Debut Directors: ಕನ್ನಡ ಚಿತ್ರರಂಗದಲ್ಲಿ ಹಲವಾರು ನಿರ್ದೇಶಕರು, ಅದರಲ್ಲೂ ಹೊಸ ನಿರ್ದೇಶಕರು ಮೊದಲ ಸಿನಿಮಾ ಮೂಲಕವೇ ಗೆದ್ದಿದ್ದಾರೆ. ಇವರ ಡೆಬ್ಯೂ ಸಿನಿಮಾಗಳೇ ಗಲ್ಲಾ ಪೆಟ್ಟಿಗೆಯನ್ನು ಸದ್ದು ಮಾಡಿ, ವೀಕ್ಷಕರು ಇಷ್ಟಪಟ್ಟು ಸಿನಿಮಾ ನೋಡುವಂತೆ ಮಾಡಿವೆ.
ಸ್ಯಾಂಡಲ್ ವುಡ್ ನಲ್ಲಿ ಇದೀಗ ಹೊಸ ಹೊಸ ನಿರ್ದೇಶಕರೇ ಸದ್ದು ಮಾಡುತ್ತಿದ್ದಾರೆ. ಇವರಲ್ಲಿ ಹೆಚ್ಚಿನ ನಿರ್ದೇಶಕರು ತಮ್ಮ ಮೊದಲ ಸಿನಿಮಾ ಮೂಲಕವೇ ಯಶಸ್ಸು ಪಡೆದಿದ್ದಾರೆ. ಆ ನಿರ್ದೇಶಕರು ಯಾರು? ಆ ಸಿನಿಮಾಗಳು ಯಾವುವು ನೋಡೋಣ.
210
ನೋಡಿದವರು ಏನಂತಾರೆ
2025ರಲ್ಲಿ ಬಿಡುಗಡೆಯಾದ ನವೀನ್ ಶಂಕರ್ ನಟಿಸಿರುವ ನೋಡಿದವರು ಏನಂತಾರೆ ಸಿನಿಮಾವನ್ನು ಕುಲದೀಪ್ ಕಾರ್ಯಪ್ಪ ನಿರ್ದೇಶನ ಮಾಡಿದ್ದಾರೆ. ಚಿತ್ರ ಕಮರ್ಷಿಯಲ್ ಸಕ್ಸಸ್ ಕಾಣದಿದ್ದರೂ ಜನ ಸಿನಿಮಾವನ್ನು ಇಷ್ಟಪಟ್ಟಿದ್ದರು. ಆ ಮಟ್ಟಿಗೆ ಯಶಸ್ಸು ಕಂಡಿತ್ತು, ಕಥೆ ಕೂಡ ಅದ್ಭುತವಾಗಿ ಮೂಡಿ ಬಂದಿತ್ತು.
310
ಎಡಗೈಯೇ ಅಪಘಾತಕ್ಕೆ ಕಾರಣ
ದಿಗಂತ್ ನಟಿಸಿರುವ ಎಡಗೈಯೇ ಅಪಘಾತಕ್ಕೆ ಕಾರಣ ಸಿನಿಮಾ 2025ರಲ್ಲಿ ಬಿಡುಗಡೆಯಾದ ಈ ಕ್ರೈಂ ಥ್ರಿಲ್ಲರ್ ಸಿನಿಮಾವನ್ನು ಸಮರ್ಥ್ ಬಿ ಕಡ್ಕೋಲ್ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾವನ್ನು ಕೂಡ ಜನ ಇಷ್ಟಪಟ್ಟಿದ್ದರು.
ಪೂರ್ಣ ಚಂದ್ರೆ ತೇಜಸ್ವಿಯವರ ಕಥೆಯನ್ನು ಆಧರಿಸಿ ತಯಾರಿಸಲಾದ ಡೇರ್ ಡೆವಿಲ್ ಮುಸ್ತಫಾ ಸಿನಿಮಾವನ್ನು 2023 ಶಶಾಂಕ್ ಸೋಗಲ್ ನಿರ್ದೇಶನ ಮಾಡಿದ್ದರು. ಪುಟ್ಟ ಕಥೆಯ ಈ ಸಿನಿಮಾ ಜನರಿಗೆ ಭರ್ಜರಿ ಮನರಂಜನೆಯನ್ನು ನೀಡಿತ್ತು.
510
ಏಳುಮಲೆ
ಏಳುಮಲೆ ಸಿನಿಮಾ 2025ರಲ್ಲಿ ಬಿಡುಗಡೆಯಾದ ಪುನೀತ್ ರಂಗಸ್ವಾಮಿ ಅವರ ಸಿನಿಮಾ. ಮೊದಲ ನಿರ್ದೇಶನದಲ್ಲೇ ಇವರು ಗೆದ್ದಿದ್ದರು. ಈ ಚಿತ್ರದಲ್ಲಿ ರಾಣಾ ಹಗೂ ಪ್ರಿಯಾಂಕ ಆಚಾರ್ ನಟಿಸಿದ್ದರು.ಈ ಚಿತ್ರ ಭರ್ಜರಿ ಯಶಸ್ಸು ಕಂಡಿತ್ತು.
610
ಬ್ಲಿಂಕ್
ದೀಕ್ಷಿತ್ ಶೆಟ್ಟಿ ನಾಯಕನಾಗಿ ನಟಿಸಿರುವ ಬ್ಲಿಂಕ್ ಸಿನಿಮಾ ಸಯನ್ಸ್ ಫಿಕ್ಷನ್ ಥ್ರಿಲ್ಲರ್ ಸಿನಿಮಾವಾಗಿದೆ. 2024 ಬಿಡೂಗಡೆಯಾದ ಈ ಸಿನಿಮಾವನ್ನು ಬೆಂಗಳೂರು ಶ್ರೀನಿಧಿ ನಿರ್ದೇಶನ ಮಾಡಿದ್ದರು. ಕಣ್ಣೂ ರೆಪ್ಪೆಯನ್ನೆ ಮುಚ್ಚದ ವ್ಯಕ್ತಿಯು ಟೈಮ್ ಟ್ರಾವೆಲ್ ಮಾಡಿದಾಗ ಏನೆಲ್ಲಾ ಆಗುತ್ತೆ ಅನ್ನೋದು ಕಥೆ.
710
ಸು ಫ್ರಮ್ ಸೋ
2025ರಲ್ಲಿ ಬಿಡುಗಡೆಯಾಗಿ ದೊಡ್ಡಮಟ್ಟದ ಯಶಸ್ಸು ಕಂಡ ಸು ಫ್ರಮ್ ಸೋ ಸಿನಿಮಾವನ್ನು ಜೆಪಿ ತುಮಿನಾಡು ನಿರ್ದೇಶನ ಮಾಡಿ, ನಟಿಸಿದ್ದಾರೆ. ಒಂದು ಮೂಢನಂಬಿಕೆ ಹಾಗೂ ಭಯದಿಂದ ಏನೆಲ್ಲಾ ಆಗುತ್ತೆ ಅನ್ನೋದನ್ನು ತುಂಬಾನೆ ಕಾಮಿಡಿಯಾಗಿ ಮೂಡಿ ಬಂದಿದೆ.
810
ಶಾಖಾಹಾರಿ
ರಂಗಾಯಣ ರಘು ಹಾಗೂ ಗೋಪಾಲಕೃಷ್ಣ ದೇಶಪಾಂಡೆ ನಟಿಸಿರುವ ಶಾಖಾಹಾರಿ ಸಿನಿಮಾ 2024 ರಲ್ಲಿ ರಿಲೀಸ್ ಆಗಿದ್ದು, ಸಂದೀಪ್ ಸುಂಕದ್ ಈ ಚಿತ್ರ ನಿರ್ದೇಶನ ಮಾಡಿದ್ದಾರೆ. ಇದೊಂದು ಮರ್ಡರ್ ಮಿಸ್ಟ್ರಿ ಕಥೆಯಾಗಿದ್ದು, ಜನ ಸಿನಿಮಾವನ್ನು ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದರು.
910
ಆಚಾರ್ ಆಂಡ ಕೋ
1970ರ ಸಂದರ್ಭದ ಕಥೆಗಳನ್ನು ತಿಳಿಸುವ ಆಚಾರ್ ಆಂಡ ಕೋ ಸಿನಿಮಾ 2023ರಲ್ಲಿ ಬಿಡುಗಡೆಯಾಯಿತು. ಸಿಂಧೂ ಶ್ರೀನಿವಾಸ ಮೂರ್ತಿ ಈ ಸಿನಿಮಾ ನಿರ್ದೇಶನ ಮಾಡಿ, ನಟಿಸಿದ್ದರು. ಮೊದಲ ನಿರ್ದೇಶನದಲ್ಲಿ ಇವರು ಗೆದ್ದಿದ್ದರು.
1010
ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ
ಸಖತ್ ಕಾಮಿಡಿ ಇರುವಂತಹ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ 2023ರಲ್ಲಿ ರಿಲೀಸ್ ಆಗಿದ್ದು, ಈ ಸಿನಿಮಾವನ್ನು ನಿಖಿಲ್ ಕೃಷ್ಣಮೂರ್ತಿ ನಿರ್ದೇಶನ ಮಾಡಿ ಗೆದ್ದಿದ್ದರು. ಸಿನಿಮಾ ನೋಡಿ ವೀಕ್ಷಕರು ಹೊಟ್ಟೆ ಹುಣ್ಣಾಗುವಂತೆ ನಕಿದ್ದರು.