ಸ್ಯಾಂಡಲ್​ವುಡ್​ ಸ್ಟಾರ್​ ನಟರೆಲ್ಲಾ ಒಂದೇ ಫ್ರೇಮ್​ನಲ್ಲಿ ಇದ್ರೆ ಹೇಗಿರತ್ತೆ? ಫ್ಯಾನ್ಸ್​ ಕನಸು ನನಸಾದ ಕ್ಷಣದ ಫೋಟೋಗಳು

Published : Nov 25, 2025, 06:11 PM IST

ಕೃತಕ ಬುದ್ಧಿಮತ್ತೆ (ಎಐ) ಬಳಸಿ ರಚಿಸಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಶಿವರಾಜ್​ಕುಮಾರ್, ಪುನೀತ್ ರಾಜ್​ಕುಮಾರ್, ಯಶ್, ಸುದೀಪ್, ದರ್ಶನ್, ಮತ್ತು ಉಪೇಂದ್ರರಂತಹ ಸ್ಯಾಂಡಲ್‌ವುಡ್‌ನ ಸ್ಟಾರ್ ನಟರು ಒಂದೇ ಫ್ರೇಮ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

PREV
16
ಸ್ಟಾರ್​ ನಟರಿವರು

ಸ್ಯಾಂಡಲ್​ವುಡ್​ನ ಸ್ಟಾರ್​ ನಟರು ಎಂಬ ಮಾತು ಬಂದಾಗ ಹಲವರ ಹೆಸರು ಕಣ್ಮುಂದೆ ಬರುವುದು ಉಂಟು. ಕಳೆದೊಂದು ದಶಕದ ಮಾತಿನಲ್ಲಿ ಹೇಳುವುದಾದರೆ, ಶಿವರಾಜ್​ಕುಮಾರ್​ ಪುನೀತ್​ ರಾಜ್​, ಯಶ್​, ಸುದೀಪ್​, ದರ್ಶನ್​, ಉಪೇಂದ್ರ ಇವರ ಹೆಸರು ಮುನ್ನೆಲೆಗೆ ಬರುವುದು.

26
ಒಟ್ಟಿಗೇ ಸಿಗಲಾರರು

ಇವರ ಪೈಕಿ ಕೆಲವು ಸ್ಟಾರ್​ ನಟರು ಒಟ್ಟಿಗೇ ಕೆಲಸ ಮಾಡಿರಬಹುದು. ಆದರೆ ಒಂದೇ ಫ್ರೇಮ್​ನಲ್ಲಿ ಎಲ್ಲಾ ನಟರನ್ನು ನೋಡುವುದು ಕಷ್ಟವೇ ಎನ್ನಬಹುದು. ಕೆಲವು ಮದುವೆ ಸಮಾರಂಭಗಳಲ್ಲಿ ಅಲ್ಲಿ ಅಲ್ಲಿ ಕಾಣಿಸಿಕೊಂಡರೂ ಎಲ್ಲರೂ ಒಟ್ಟಿಗೇ ಇರುವುದು ಕಷ್ಟವೇ.

36
ಕನಸು ಸಾಕಾರ

ಹೇಳಿ ಕೇಳಿ ಇದು ಎಐ ಯುಗ. ನಿಜ ಜೀವನದಲ್ಲಿ ಸಾಕಾರ ಮಾಡಲಾಗದೇ ಇರುವುದನ್ನೆಲ್ಲಾ ಈ ಕೃತಕ ಬುದ್ಧಿಮತ್ತೆ ಸಾಕಾರಗೊಳಿಸುತ್ತದೆ. ಯಾರನ್ನು ಹೇಗೆ ಬೇಕಾದರೂ ಬಿಂಬಿಸುತ್ತದೆ.

46
ಎಲ್ಲಾ ಸ್ಟಾರ್​ ನಟರೂ ಒಟ್ಟಿಗೇ

ಇದೀಗ ಮೇಲೆ ಹೇಳಿದ ಎಲ್ಲಾ ನಟರ ಅಭಿಮಾನಿಗಳ ಕನಸನ್ನು ಸಾಕಾರಗೊಳಿಸುವಂಥ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್​ ಆಗಿದೆ. ಸಿದ್ಧಾರ್ಥ್​ ಎಡಿಟ್ಸ್​ ಎನ್ನುವವರು ಶೇರ್​ ಮಾಡಿರುವ ಈ ವಿಡಿಯೋದಲ್ಲಿ ಈ ಎಲ್ಲಾ ಸ್ಟಾರ್​ ನಟರನ್ನು ಒಟ್ಟಿಗೇ ಕಾಣಬಹುದಾಗಿದೆ.

56
ಒಂದೇ ಫ್ರೇಮ್​ನಲ್ಲಿ

ಒಂದು ಫ್ರೇಮ್​ನಲ್ಲಿ ಎಲ್ಲರೂ ಪ್ಲಾಸ್ಟಿಕ್​ ಬಾಟಲಿಯಲ್ಲಿ ನೀರು ಕುಡಿಯುತ್ತಿದ್ದರೆ, ಮತ್ತೊಂದು ಫ್ರೇಮ್​ನಲ್ಲಿ ಪುನೀತ್ ರಾಜ್​ ಮೊಬೈಲ್​ ಹಿಡಿದಿದ್ದು, ಉಳಿದವರು ಸುಮ್ಮನೇ ನೋಡುತ್ತಿದ್ದಾರೆ.

66
ವಿವಿಧ ಸುಂದರ ದೃಶ್ಯಗಳು

ಇನ್ನೊಂದರಲ್ಲಿ ಟೀ ಸೇವನೆ ಮಾಡುತ್ತಿದ್ದಾರೆ, ಮತ್ತೊಂದರಲ್ಲಿ ಡಿನ್ನರ್​ ಮಾಡುತ್ತಿದ್ದಾರೆ. ಮತ್ತೆ ಕ್ಯಾಂಪ್​ ಫೈರ್​ನಲ್ಲಿ ಒಂದು ದೃಶ್ಯ, ನದಿ ತೀರದಲ್ಲಿ ಇನ್ನೊಂದು ದೃಶ್ಯ, ಒಂದರಲ್ಲಿ ಓಡಿ, ಇನ್ನೊಂದರಲ್ಲಿ ಸೈಕ್ಲಿಂಗ್​ ಹೀಗೆ ಹಲವಾರು ಬಗೆಯನ್ನು ಇದರಲ್ಲಿ ಕಾಣಬಹುದಾಗಿದೆ.

Read more Photos on
click me!

Recommended Stories