ಕುಟುಂಬವೇ ಹೆಮ್ಮೆಪಡುವಂತೆ ಮಾಡಿದ Kiccha Sudeep ಮಗಳು ಸಾನ್ವಿ! ಇದಪ್ಪಾ..ಸಾಧನೆ ಅಂದ್ರೆ..!

Published : Dec 15, 2025, 05:09 PM IST

Kiccha Sudeep Daughter Sanvi Song: ಇದೇ ತಿಂಗಳ‌ 25ರಂದು ಕಿಚ್ಚ ಸುದೀಪ್ ನಟನೆಯ ಬಹು ನಿರೀಕ್ಷಿತ ಮಾರ್ಕ್ ಸಿನಿಮಾ ತೆರೆಗೆ ಬರ್ತಿದೆ. ಪ್ರಚಾರ ಕಾರ್ಯ ಕೂಡ ಭರದಿಂದ ಸಾಗಿದೆ. ಇದರ ಭಾಗವಾಗಿ ಮಾರ್ಕ್ ಸಿನಿಮಾದ ಸ್ಪೆಷಲ್ ಹಾಡು ಬಿಡುಗಡೆ ಮಾಡಲಾಗಿದೆ.

PREV
15
ಸಿನಿಮಾ ಕೆಲಸದಲ್ಲಿ ಸುದೀಪ್‌ ಬ್ಯುಸಿ

ಮಾರ್ಕ್ ಸಿನಿಮಾದ ಮಸ್ತ್ ಮಲೈಕಾ ಹಾಡು ರಿಲೀಸ್ ಆಗಿದೆ. ಈ ಹಾಡಿನಲ್ಲಿ ಕಿಚ್ಚ ಸುದೀಪ್ ಹಾಗೂ ನಿಶ್ವಿಕಾ ನಾಯ್ಡು ಮಸ್ತ್ ಆಗಿ ಕುಣಿದಿದ್ದಾರೆ. ಮಲೈಕಾ ಆಗಿ ನಿಶ್ಚಿಕಾ ನಾಯ್ಡು ಕಾಣಿಸಿಕೊಂಡಿದ್ದಾರೆ. 

25
ಕಿಚ್ಚ ಸುದೀಪ್‌ ಸಹನಿರ್ಮಾಣ

ಮಾರ್ಕ್ ಚಿತ್ರವನ್ನ ವಿಜಯ್ ಕಾರ್ತಿಕೇಯ ಡೈರೆಕ್ಷನ್ ಮಾಡಿದ್ದಾರೆ. ಮ್ಯಾಕ್ಸ್ ಚಿತ್ರ ಆದ್ಮೇಲೆ ಈ ಒಂದು ಚಿತ್ರವನ್ನ ಸುದೀಪ್ ಜೊತೆಗೆ ಮಾಡಿದ್ದಾರೆ. ಸತ್ಯ ಜ್ಯೋತಿ ಫಿಲ್ಮ್ ಹಾಗೂ ಕಿಚ್ಚ ಕ್ರಿಯೇಷನ್ ಬ್ಯಾನರ್ ನಡಿ ಸಿನಿಮಾ ತಯಾರಾಗಿದೆ.

35
ಪಾತ್ರಧಾರಿಗಳು ಯಾರು?

ಈ ಚಿತ್ರದಲ್ಲಿ ದೀಪ್ಷಿಕಾ, ನವೀನ್ ಚಂದ್ರ, ಗುರು ಸೋಮಸುಂರಂ, ರೋಶಿನಿ ಪ್ರಕಾಶ್, ಗೋಪಾಲ್‌ಕೃಷ್ಣ ದೇಶಪಾಂಡೆ, ಮಹಾಂತೇಶ್ ಹಿರೇಮಠ್, ಡ್ರ್ಯಾಗನ್ ಮಂಜು, ಆರ್ಚನಾ ಕೊಟ್ಟಿಗೆ, ಯೋಗಿ ಬಾಬು, ಶೈನ್ ಟಾಮ್ ಚಾಕೋ ಅಭಿನಯಿಸಿದ್ದಾರೆ.

45
ಸಾಹಿತ್ಯ ಬರೆದವರಾರು?

ಅನೂಪ್ ಭಂಡಾರಿ ಮಸ್ತ್ ಮಲೈಕಾ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ಸುದೀಪ್ ಮಗಳು ಸಾನ್ವಿ ಸುದೀಪ್ ಹಾಗೂ ನಕಾಶ್ ಅಜೀಜ್ ಇದನ್ನ ಹಾಡಿದ್ದಾರೆ. ಅಜನೀಶ್ ಲೋಕನಾಥ್ ಈ ಚಿತ್ರಕ್ಕೆ ಸಂಗೀತ ಕೊಟ್ಟಿದ್ದಾರೆ.

55
ಸಾನ್ವಿ ಸುದೀಪ್‌ ಗಾಯನ

ಸಾನ್ವಿ ಸುದೀಪ್‌ ಅವರು ಮೊದಲ ಬಾರಿಗೆ ಸಿನಿಮಾವೊಂದರಲ್ಲಿ ಹಾಡಿದ್ದಾರೆ. ಕಿಚ್ಚ ಸುದೀಪ್‌ ಸಿನಿಮಾಕ್ಕೆ ಮಗಳ ಸಾಥ್‌ ಸಿಕ್ಕಿದೆ. ಸಿನಿಮಾ ರಂಗದಲ್ಲಿ ಅಥವಾ ಸಂಗೀತ ಕ್ಷೇತ್ರದಲ್ಲಿ ಏನಾದರೂ ಮಾಡಬೇಕು ಎನ್ನೋದು ಸಾನ್ವಿ ಕನಸಂತೆ.

Read more Photos on
click me!

Recommended Stories