ದಿಢೀರ್​ ಲೈವ್​ಗೆ ಬಂದ Upendra, ಫ್ಯಾನ್ಸ್​ಗೆ ಕೊಟ್ಟರೊಂದು ಗುಡ್​​ನ್ಯೂಸ್​: ಇಂಥ ಛಾನ್ಸ್ ಮತ್ತೆ ಸಿಗಲ್ಲ ನೋಡಿ

Published : Dec 15, 2025, 04:06 PM IST

ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರ ಚೊಚ್ಚಲ ನಿರ್ದೇಶನದ '45' ಚಿತ್ರದ ಟ್ರೈಲರ್ ಬಿಡುಗಡೆಗೆ ಸಜ್ಜಾಗಿದೆ. ನಟ ಉಪೇಂದ್ರ ಅವರು  ಶಿವರಾಜ್​ಕುಮಾರ್ ಮತ್ತು ರಾಜ್ ಬಿ. ಶೆಟ್ಟಿ ಅವರೊಡನೆ ತಾವೂ ಭಾಗವಹಿಸುವ ಟ್ರೈಲರ್ ಬಿಡುಗಡೆ ಸಮಾರಂಭಕ್ಕೆ ಅಭಿಮಾನಿಗಳನ್ನು ಆಹ್ವಾನಿಸಿದ್ದಾರೆ.

PREV
17
45 ಚಿತ್ರ

ಉಪೇಂದ್ರ, ಶಿವರಾಜ್​ಕುಮಾರ್, ರಾಜ್​ ಬಿ.ಶೆಟ್ಟಿ​ ಅಭಿಮಾನಿಗಳಿಗೆ ಇದೀಗ ಭರ್ಜರಿ ಗುಡ್​​ನ್ಯೂಸ್​ ಸಿಕ್ಕಿದೆ. ಇದಾಗಲೇ ಸಿನಿ ಪ್ರಿಯರಿಗೆ ತಿಳಿದಿರುವಂತೆ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಚೊಚ್ಚಲ ನಿರ್ದೇಶನದ ಹಾಗೂ ಎಂ. ರಮೇಶ್ ರೆಡ್ಡಿ ಅವರು ತಮ್ಮ ʼಸೂರಜ್ ಪ್ರೊಡಕ್ಷನ್ʼ ಬ್ಯಾನರ್‌ನಲ್ಲಿ ನಿರ್ಮಿಸುತ್ತಿರುವ ಪ್ಯಾನ್ ಇಂಡಿಯಾ ಚಿತ್ರ 45 ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ.

27
ಉಪೇಂದ್ರ ನೇರಪ್ರಸಾರ

45 ಎನ್ನುವ ಹೆಸರೇ ಕುತೂಹಲ ಮೂಡಿಸುವಂತಿದೆ. ಇದೇನಿದು 45 ಎನ್ನುವುದನ್ನು ನೋಡಲು ಫ್ಯಾನ್ಸ್​ ಕಾತರದಿಂದ ಕಾಯುತ್ತಿದ್ದಾರೆ. ಇದರ ನಡುವೆಯೇ, ಉಪೇಂದ್ರ ಅವರು ಇನ್​ಸ್ಟಾಗ್ರಾಮ್​ ಲೈವ್​ಗೆ ಬಂದು ಅಭಿಮಾನಿಗಳಿಗೆ ಭರ್ಜರಿ ಗುಡ್​​ನ್ಯೂಸ್​ ಕೊಟ್ಟಿದ್ದಾರೆ.

37
ಫ್ಯಾನ್ಸ್​ಗೆ ಗುಡ್​ನ್ಯೂಸ್​

ಬೆಂಗಳೂರಿನ ವಿದ್ಯಾಪೀಠ ಸರ್ಕಲ್​ನಲ್ಲಿ ಇರುವ ಡೊಂಕಣ ಗ್ರೌಂಡ್ಸ್​ನಲ್ಲಿ ಇಂದು ಅಂದರೆ ಡಿ.15 ಸಂಜೆ 6.30ಕ್ಕೆ 45 “ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭ ಇರಲಿದೆ ಎಂದಿರುವ ಉಪೇಂದ್ರ ಅವರು, ಈ ಈವೆಂಟ್​ನಲ್ಲಿ ಭಾಗಿಯಾಗಲು ಅಭಿಮಾನಿಗಳನ್ನು ಆಹ್ವಾನಿಸಿದ್ದಾರೆ.

47
ಎಲ್ಲಾ ಅಲ್ಲಿ ಇರ್ತೀವಿ

ನಾನು, ಶಿವರಾಜ್​ ಕುಮಾರ್​, ರಾಜ್​ ಬಿ.ಶೆಟ್ಟಿ, ಅರ್ಜುನ್ಯ ಜನ್ಯ ಅಲ್ಲಿ ಇರುತ್ತೀವಿ. ಎಲ್ಲರೂ ಬನ್ನಿ, ನಿಮ್ಮೆಲ್ಲರ ಜೊತೆ ಸೇರಿ ಈ ಚಿತ್ರದ ಟ್ರೈಲರ್​ ಅನ್ನು ಲಾಂಚ್​ ಮಾಡೋಣ ಎಂದು ಉಪೇಂದ್ರ ಹೇಳಿದ್ದಾರೆ. ಈ ಮೂಲಕ ಅನೇಕ ಸೆಲೆಬ್ರಿಟಿಗಳನ್ನು ಕಣ್ಣಾರೆ ನೋಡುವ ಅವಕಾಶ ಅಭಿಮಾನಿಗಳಿಗೆ ಸಿಗಲಿದೆ.

57
ರಿಷಬ್​ ಶೆಟ್ಟಿ ಶ್ಲಾಘನೆ

ಇದಾಗಲೇ ಈ ಚಿತ್ರದ ಪ್ರಮೋಷನ್‌ ವಿಡಿಯೋದಲ್ಲಿ ನಟ-ನಿರ್ದೇಶಕ ರಿಷಬ್​ ಶೆಟ್ಟಿ (Rishab Shetty), ಟ್ರೈಲರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

67
ಅದ್ಭುತವಾಗಿ ಮೂಡಿಬಂದಿವೆ

ಉಪೇಂದ್ರ ಸರ್ ಹಾಗೂ ಶಿವಣ್ಣ ಈ ಇಬ್ಬರ ಪಾತ್ರಗಳೂ ಕೂಡ ತುಂಬಾ ಅದ್ಭುತವಾಗಿ ಮೂಡಿಬಂದಿವೆ. ಅವರಿಬ್ಬರನ್ನೂ ಒಂದೇ ಕಡೆ ನೋಡುವುದೇ ತುಂಬಾ ಖುಷಿ ಕೊಡುತ್ತದೆ. ಸಿನಿಮಾ ತುಂಬಾ ಅದ್ಭುತವಾಗಿ ಮೂಡಿಬಂದಿದೆ ಅಂತ ಅಂದ್ಕೋತೀನಿ ಎಂದು ರಿಷಬ್​ ಶೆಟ್ಟಿ ಹೇಳಿದ್ದಾರೆ.

77
ಟ್ರೈಲರ್​ ಎಲ್ಲಾ ಹೇಳತ್ತೆ

ಇದು ಯಾವ ಥರದ ಕಥೆಯನ್ನು ಹೇಳ್ತಿದೆ ಅಂತ ಟ್ರೈಲರ್ ಹೇಳ್ತಿದೆ. ತುಂಬಾ ಮಾಸ್‌ ಆಗಿ, ಯುಂಬಾ ಥಾಟ್‌ಪ್ರೊವೋಕಿಂಗ್ ಆಗಿ ಮೂಡಿಬಂದಿದೆ ಅನ್ನೋ ಫೀಲ್ ಆಯ್ತು ನಂಗೆ ಎಂದು ಅವರು ಶ್ಲಾಘಿಸಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories