ಕಿಚ್ಚ ಸುದೀಪ್ ಅಭಿನಯದ 'ಮಾರ್ಕ್' ಚಿತ್ರದ ಟ್ರೈಲರ್ ದಾಖಲೆ ಬರೆದಿದೆ. ಈ ಚಿತ್ರದ ಯಶಸ್ಸಿನ ನಡುವೆ, ಸುದೀಪ್ ತಮ್ಮ ಬದುಕಿನ ಅತ್ಯಂತ ಮಹತ್ವದ ದಿನ ಬಹಿರಂಗಪಡಿಸಿದ್ದಾರೆ, ಏಕೆಂದರೆ ಆ ದಿನದಿಂದಲೇ ತಮ್ಮ ಜೀವನದ ಪಯಣ ಆರಂಭವಾಯಿತು ಎಂದು ಅವರು ಹೇಳಿದ್ದಾರೆ.
ಸದ್ಯ ಕಿಚ್ಚ ಸುದೀಪ್ ಅಭಿನಯದ ಮಾರ್ಕ್ ಚಿತ್ರ ಸದ್ದು ಮಾಡುತ್ತಿದೆ. ಈಚೆಗಷ್ಟೇ ಇದರ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವು ಇದೇ 25ರಿಂದ ವಿವಿಧ ಥಿಯೇಟರ್ಗಳಲ್ಲಿ ಬಿಡುಗಡೆಯಾಗಲಿದೆ.
27
ಮಾರ್ಕಂಡೆಯ ಅವತಾರದಲ್ಲಿ
ಸತ್ಯಜ್ಯೋತಿ ಫಿಲ್ಮ್ಸ್ ಹಾಗೂ ಕಿಚ್ಚ ಕ್ರಿಯೇಷನ್ಸ್ ಜಂಟಿಯಾಗಿ 'ಮಾರ್ಕ್' ಸಿನಿಮಾ ನಿರ್ಮಾಣ ಮಾಡಿದ್ದಾರೆ. ಕೆಆರ್‌ಜಿ ಸ್ಟುಡಿಯೋಸ್ ಸಂಸ್ಥೆ ಚಿತ್ರ ವಿತರಣೆಗೆ ಮಾಡುತ್ತಿದೆ. ಖಡಕ್ ಪೊಲೀಸ್ ಆಫೀಸರ್ ಅಜಯ್ ಮಾರ್ಕಂಡೆಯ ಅವತಾರದಲ್ಲಿ ಸುದೀಪ್ ಕಾಣಿಸಿಕೊಂಡಿದ್ದಾರೆ.ಅಜನೀಶ್ ಲೋಕನಾಥ್ ಅವರು ‘ಮಾರ್ಕ್’ ಸಿನಿಮಾಗೆ ಸಂಗೀತ ನೀಡಿದ್ದಾರೆ.
37
ದಾಖಲೆ ಬರೆದ ಟ್ರೈಲರ್
ಇದಾಗಲೇ ಈ ಚಿತ್ರ ಭಾರಿ ಸದ್ದು ಮಾಡುತ್ತಿದೆ. ಒಂದೇ ದಿನದಲ್ಲಿ ದಾಖಲೆಯನ್ನು ಬರೆದಿದೆ ಮಾರ್ಕ್ ಟ್ರೈಲರ್ (Kichcha Sudeeps' Mark Trailer). ಮಾರ್ಕ್' ಟ್ರೈಲರ್ ಬಿಡುಗಡೆಯಾದ ಮೊದಲ 7 ಗಂಟೆಗಳಲ್ಲಿ ಸುಮಾರು 1 ಕೋಟಿ 30 ಲಕ್ಷ views ಆಗಿತ್ತು. ಬಳಿಕ ಮೊದಲ 24 ಗಂಟೆಗಳಲ್ಲಿ 1 ಕೋಟಿ 40 ಲಕ್ಷ ವೀಕ್ಷಣೆ ಗಳಿಸಿದೆ. ಈ ಮೂಲಕ ದಾಖಲೆ ಮಾಡಿದೆ.
ಇದೀಗ ಸುದೀಪ್ ಅವರು ತಮ್ಮ ಬದುಕಿನ ಹಲವು ವಿಷಯಗಳನ್ನು ಮಾಧ್ಯಮಗಳ ಮುಂದೆ ತೆರೆದಿಟ್ಟಿದ್ದಾರೆ. ಅದರಲ್ಲಿ ಒಂದು ತಮ್ಮ ಜೀವನದ ಅತಿ ಮುಖ್ಯವಾಗಿರುವ ಆ ಒಂದು ದಿನದ ಬಗ್ಗೆ ಅವರು ಮಾತನಾಡಿದ್ದಾರೆ.
57
ಒಬ್ಬೊಬ್ಬರು ಒಂದೊಂದು ದಿನ
ಸಾಮಾನ್ಯವಾಗಿ ಜನರು ಅದರಲ್ಲಿಯೂ ಸೆಲೆಬ್ರಿಟಿಗಳು ಮರೆಯಲಾಗದ ದಿನ ಅಥವಾ ಮುಖ್ಯವಾದ ದಿನದ ಬಗ್ಗೆ ಹೇಳಿ ಎಂದಾಗ ತಾವು ಸಕ್ಸಸ್ ಕಂಡ ದಿನದ ಬಗ್ಗೆ ಹೇಳುತ್ತಾರೆ ಇಲ್ಲವೇ ಮದುವೆಯಾದ ದಿನದ ಬಗ್ಗೆ ಹೇಳುತ್ತಾರೆ. ಇನ್ನು ಸಿನಿಮಾ ತಾರೆಯರಾದರೆ ತಮಗೆ ಸಿನಿಮಾದಲ್ಲಿ ಎಂಟ್ರಿ ಸಿಕ್ಕ ದಿನ ಇಲ್ಲವೇ ಮೊದಲ ಸಿನಿಮಾ ಹಿಟ್ ಆದ ದಿನದ ಬಗ್ಗೆ ಮಾತನಾಡಬಹುದು.
67
ಕುತೂಹಲದ ದಿನ
ಆದರೆ ಕಿಚ್ಚ ಸುದೀಪ್ ಅವರು ಇದ್ಯಾವುದೂ ಅಲ್ಲದೇ ಕುತೂಹಲದ ದಿನದ ಬಗ್ಗೆ ಮಾತನಾಡಿದ್ದಾರೆ. ಆ ದಿನವೇ ಸೆಪ್ಟೆಂಬರ್ 2. ಇದಕ್ಕೆ ಕಾರಣವೂ ಇದೆ. ಅದೇನೆಂದರೆ ಸುದೀಪ್ ಫ್ಯಾನ್ಸ್ಗೆ ತಿಳಿದಿರುವಂತೆ ಸೆಪ್ಟೆಂಬರ್ 2 ಸುದೀಪ್ ಅವರ ಜನುಮದಿನ.
77
ಏನಾಗಿತ್ತೋ ಗೊತ್ತಿಲ್ಲ
ತಮ್ಮ ಬದುಕಿನ ಅತ್ಯಂತ ಮಹತ್ವದ ದಿನ ಜನ್ಮದಿನ. ಆ ದಿನದ ಹಿಂದೆ ಏನಾಗಿತ್ತೋ ನನಗೆ ಗೊತ್ತಿಲ್ಲ, ಆ ದಿನದಿಂದಲೇ ಈ ಜರ್ನಿ ಶುರುವಾಗಿದ್ದು, ಇಲ್ಲಿಯವರೆಗೆ ಬೆಳೆದು ಬಂದಿದ್ದು. ಆದ್ದರಿಂದ ಆ ದಿನ ನನ್ನ ಬಾಳಿನಲ್ಲಿ ಅತ್ಯಂತ ಮಹತ್ವದ ದಿನ ಎಂದು ಹೇಳಿದ್ದಾರೆ.