ಬಾಡಿಗೆಗೆ ಸಿಗ್ತಾರೆ ಹೆಂಡತಿಯರು: ಶುರುವಾಗಿದೆ ಹೊಸ ಟ್ರೆಂಡ್, Rent ಫಿಕ್ಸ್ ಮಾಡೋಕಿದೆ ಮಾನದಂಡ

Published : Sep 03, 2025, 08:30 AM IST

Rental Wife: ಹೆಣ್ಣಿನ ವಯಸ್ಸು, ಸೌಂದರ್ಯ, ವಿದ್ಯಾಭ್ಯಾಸ ಮತ್ತು ಸಂಬಂಧದ ಅವಧಿಯನ್ನು ಆಧರಿಸಿ ಬಾಡಿಗೆ ನಿರ್ಧರಿಸಲಾಗುತ್ತದೆ. ಬಾಡಿಗೆ ಹೆಂಡತಿಯ ಬೆಲೆ ಕೇಳಿದ್ರೆ ನಿಮಗೆ ಖಂಡಿತ ಶಾಕ್ ಆಗುತ್ತದೆ.

PREV
15
ಬಾಡಿಗೆ ಹೆಂಡತಿಯ ಸರ್ವಿಸ್ ಆರಂಭ

‘ಬಾಡಿಗೆ ಹೆಂಡತಿ’ ಸೇವೆಯಲ್ಲಿ, ಯಾವುದೇ ಗಂಡಸು ಹಣ ಕೊಟ್ಟು ನಿರ್ದಿಷ್ಟ ದಿನಗಳವರೆಗೆ ಹೆಣ್ಣನ್ನು ಹೆಂಡತಿಯನ್ನಾಗಿ ಮಾಡಿಕೊಳ್ಳಬಹುದು. ಆ ಹೆಣ್ಣು ತನ್ನ ತಾತ್ಕಾಲಿಕ ಗಂಡನಿಗೆ ಅಡುಗೆ ಮಾಡಿ,  ಆತನೊಂದಿಗೆ ಹಂಡತಿಯಂತೆ ತಿರುಗಾಡಿ, ಕುಟುಂಬದ ವಾತಾವರಣ ಸೃಷ್ಟಿಸುತ್ತಾಳೆ. ಇದೆಲ್ಲವೂ ಒಪ್ಪಂದದಡಿಯಲ್ಲಿ ನಡೆಯುತ್ತದೆ. ಇದು ಕಾನೂನುಬದ್ಧ ಮದುವೆಯಲ್ಲ. ಇಬ್ಬರಿಗೂ ಇಷ್ಟವಾದರೆ ಮದುವೆಯಾಗಬಹುದು. ಸದ್ಯ ಈ ಟ್ರೆಂಟ್ ಶುರುವಾಗಿದೆ.

25
ವಿದೇಶಿ ಪ್ರವಾಸಿಗರೇ ಇವರ ಗ್ರಾಹಕರು

“ತಾಯ್ ಡೇಬೂ ದಿ ರೈಸ್ ಆಫ್ ವೈಫ್ ರೆಂಟಲ್ ಇನ್ ಮಾಡರ್ನ್ ಸೊಸೈಟಿ” ಪುಸ್ತಕ ಈ ವಿಚಿತ್ರ ಬಾಡಿಗೆ ಹೆಂಡತಿಯರ ಬಗ್ಗೆ ಬಯಲು ಮಾಡಿದೆ. ಲೇಖಕ ಲಾವರ್ಟ್ ಇಮ್ಯಾನುವೆಲ್ ಹೇಳುವಂತೆ, “ಬಡ ಕುಟುಂಬದ ಹೆಣ್ಣುಮಕ್ಕಳು ಈ ಕೆಲಸ ಮಾಡುತ್ತಾರೆ. ಹೆಚ್ಚಿನವರು ಹೋಟೆಲ್, ಬಾರ್‌ಗಳಲ್ಲಿ ಕೆಲಸ ಮಾಡುತ್ತಾರೆ. ಅಲ್ಲಿ ವಿದೇಶಿ ಪ್ರವಾಸಿಗರನ್ನು ಭೇಟಿಯಾಗುತ್ತಾರೆ.

35
ಬಾಡಿಗೆ ಹೇಗೆ ನಿರ್ಧಾರವಾಗುತ್ತೆ?

ವಯಸ್ಸು, ಸೌಂದರ್ಯ, ವಿದ್ಯಾಭ್ಯಾಸ ಮತ್ತು ಸಂಬಂಧದ ಅವಧಿಯನ್ನು ಆಧರಿಸಿ ಬಾಡಿಗೆ ನಿರ್ಧರಿಸಲಾಗುತ್ತದೆ. ಬಾಡಿಗೆ ಹೆಂಡತಿಯ ಬೆಲೆ $1600 ರಿಂದ $1,16,000 ವರೆಗೆ (₹1.4 ಲಕ್ಷ - ₹1 ಕೋಟಿ+) ಇರುತ್ತದೆ. ಇದು ಥೈಲ್ಯಾಂಡ್‌ನಲ್ಲಿ ದೊಡ್ಡ ಉದ್ಯಮವಾಗಿದೆ” ಎನ್ನುತ್ತಾರೆ. ಈ ಭಾಗಕ್ಕೆ ಒಂಟಿಯಾಗಿ ತೆರಳಿದ ಪ್ರವಾಸಿಗರನ್ನು ಸಂಪರ್ಕಿಸಿ, ಈ ಸೇವೆಯ ಆಫರ್ ನೀಡಲಾಗುತ್ತದೆ.

ಇದನ್ನೂ ಓದಿ: ಹೆಚ್ಚಾಗ್ತಿದೆ ಕ್ವಾಂಟಮ್ ಡೇಟಿಂಗ್; ಯುವಕರೇ ಹೆಚ್ಚು ಆಕರ್ಷಿತರಾಗ್ತಿರೋದು ಯಾಕೆ?

45
ವಿಚಿತ್ರ ಟ್ರೆಂಡ್

ಈ ವಿಚಿತ್ರ ಟ್ರೆಂಡ್ ಹಲವು ಹೆಣ್ಣುಮಕ್ಕಳಿಗೆ ಆರ್ಥಿಕವಾಗಿ ಸಬಲರಾಗಲು ಸಹಾಯ ಮಾಡಿದೆ. ಆದರೆ ಸಮಾಜ, ನೈತಿಕತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಥೈಲ್ಯಾಂಡ್ ಸರ್ಕಾರ ಈ ಬೆಳವಣಿಗೆಯ ಬಗ್ಗೆ ಕಳವಳ ವ್ಯಕ್ತಪಡಿಸಿದೆ. 

55
ಹೆಣ್ಣುಮಕ್ಕಳ ಸುರಕ್ಷತೆ

ಹೆಣ್ಣುಮಕ್ಕಳ ಸುರಕ್ಷತೆಗೆ ಕಠಿಣ ಕಾನೂನು ತರುವ ಬಗ್ಗೆ ಚರ್ಚೆ ನಡೆಯುತ್ತಿದೆ. ಥೈಲ್ಯಾಂಡ್‌ನಲ್ಲಿ ವೇಗದ ಜೀವನಶೈಲಿ, ಒಂಟಿತನದಿಂದ ಬಾಡಿಗೆ ಹೆಂಡತಿಯರ ಸಂಸ್ಕೃತಿ ಹೆಚ್ಚುತ್ತಿದೆ. ಕುಟುಂಬದಿಂದ ದೂರವಾಗಿ ಅಥವಾ ಇನ್ಯಾವುದೇ ಕಾರಣಗಳಿಂದ ಒಂಟಿಯಾಗಿರುವ ಪುರುಷರು ಈ ಸೇವೆಯನ್ನು ಸ್ವಾಗತಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಪುರುಷರ ಬೆವರ ವಾಸನೆಯಿಂದ ಮಹಿಳೆಯರಿಗೆ ಏನೇನೋ ಸುಖ ಸಿಗತ್ತಂತೆ! ಅಧ್ಯಯನ ಏನ್ ಹೇಳಿದೆ ನೋಡಿ

Read more Photos on
click me!

Recommended Stories