ಹೆಚ್ಚು ಬೆವರುವ ಪುರುಷರಿಗೆ ಸಕತ್ ಖುಷಿ ನೀಡುವ ಅಧ್ಯಯನ ವರದಿಯೊಂದು ಇದೀಗ ಬಹಿರಂಗಗೊಂಡಿದೆ. ಗಂಡಿನ ಬೆವರಿನಲ್ಲಿ ಹೆಣ್ಣಿಗೆ ಏನೇನೋ ಸುಖ ಕೊಡುವ ಅಂಶ ಇದೆಯಂತೆ. ಅಧ್ಯಯನದ ವರದಿ ಏನು ಹೇಳಿದೆ ನೋಡಿ!
ಬೆವರು ಎಂಬ ಶಬ್ದ ಕೇಳಿದರೇನೇ ಬಹುತೇಕ ಮಂದಿ ಮೂಗು ಮುಚ್ಚಿಕೊಳ್ತಾರೆ. ಬೆವರು ಎಂದರೇನೇ ದುರ್ಗಂಧ ಎನ್ನುವ ಮಾತಿದೆ. ಯಾರಾದರೂ ತುಂಬಾ ಬೆವರುವ ವ್ಯಕ್ತಿ ಪಕ್ಕದಲ್ಲಿ ನಿಂತರೆ ದೂರ ನಿಲ್ಲುವವರೇ ಹೆಚ್ಚು. ಆದರೆ ಇದೀಗ ಮಾಡಿರುವ ಅಧ್ಯಯನ ವರದಿ ಶಾಕ್ ನೀಡಿದೆ. ಅದರಲ್ಲಿ ಬಹಳ ಬೆವರುವ ಪುರುಷರಿಗೆ ಸಕತ್ ಖುಷಿ ಕೊಡುವ ಸುದ್ದಿ ಇದೆ.
26
ಮನಸ್ಥಿತಿಯ ಮೇಲೆ ಸಕಾರಾತ್ಮಕ ಪರಿಣಾಮ
ಅದೇನೆಂದರೆ, ಪುರುಷರ ಬೆವರಿನಲ್ಲಿರುವ ರಾಸಾಯನಿಕ ಸಂಯುಕ್ತವು ಮಹಿಳೆಯರ ಮನಸ್ಥಿತಿಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ, ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ವಿಶ್ರಾಂತಿಯನ್ನು ಹೆಚ್ಚಿಸುತ್ತದೆ ಎಂದು ಅಧ್ಯಯನ ಹೇಳಿದೆ. ಜೊತೆಗೆ ಋತುಚಕ್ರವನ್ನು ನಿಯಂತ್ರಿಸುವ ಹಾರ್ಮೋನ್ ಮಟ್ಟಗಳ ಮೇಲೂ ಪರಿಣಾಮ ಬೀರುತ್ತದೆ ಎಂದಿದೆ.
36
ಜರ್ನಲ್ ಆಫ್ ನ್ಯೂರೋಸೈನ್ಸ್‌ನಲ್ಲಿ ಪ್ರಕಟವಾದ ಅಧ್ಯಯನ
ಪುರುಷರ ಬೆವರಿನಲ್ಲಿ ಈ ಕೀಮೋಸಿಗ್ನಲ್‌ಗೆ ಒಡ್ಡಿಕೊಳ್ಳುವುದರಿಂದ ಮಹಿಳೆಯರಲ್ಲಿ ಕಾರ್ಟಿಸೋಲ್ ಮಟ್ಟ ಹೆಚ್ಚಾಗುತ್ತದೆ. ಆದ್ದರಿಂದ ಹೆಣ್ಣನ್ನು ಆಕರ್ಷಿಸುವಲ್ಲಿ ಪಾತ್ರವನ್ನು ವಹಿಸುತ್ತದೆ. ಲೈಂ*ಗಿಕ ಪ್ರಕ್ರಿಯೆಯೆಗೂ ಉತ್ತೇಜಿಸುತ್ತದೆ ಎಂದಿದೆ ವರದಿ. ಜರ್ನಲ್ ಆಫ್ ನ್ಯೂರೋಸೈನ್ಸ್‌ನಲ್ಲಿ ಪ್ರಕಟವಾದ ಅಧ್ಯಯನದಲ್ಲಿ ಈ ವಿಷಯ ಬಹಿರಂಗಗೊಂಡಿದೆ.
ಈ ಸಂಶೋಧನೆಯ ಪ್ರಕಾರ, ಇತರ ಜೀವಿಗಳಂತೆ, ಮಾನವ ಬೆವರು ಕೂಡ ವಿಶೇಷ ವಾಸನೆಯನ್ನು ಹೊಂದಿರುತ್ತದೆ, ಇದು ಗಂಡು/ ಹೆಣ್ಣಿನ ದೇಹದ ಮೇಲೆ ಪರಿಣಾಮ ಬೀರುತ್ತದೆ. ಮಹಿಳೆಯರಲ್ಲಿ ಕಾರ್ಟಿಸೋಲ್ ಮಟ್ಟ ಹೆಚ್ಚುತ್ತದೆ. ಕಾರ್ಟಿಸೋಲ್ ಒತ್ತಡದ ಹಾರ್ಮೋನ್ ಆಗಿದೆ, ಆದರೆ ಕುತೂಹಲಕಾರಿಯಾಗಿ, ಮಹಿಳೆಯರಲ್ಲಿ ಅದರ ಹೆಚ್ಚಳವು ಅವರ ಮನಸ್ಥಿತಿ ಮತ್ತು ಲೈಂಗಿಕ ಪ್ರಚೋದನೆಯ ಮೇಲೆ ಪರಿಣಾಮ ಬೀರುತ್ತದೆ ಎಂದಿದೆ ಅಧ್ಯಯನ.
56
ವಿಶೇಷ ರಾಸಾಯನಿಕ ಬಿಡುಗಡೆ
ಅಧ್ಯಯನದ ಸಮಯದಲ್ಲಿ, ಸಂಶೋಧಕರು ಮಹಿಳೆಯರಿಗೆ ಪುರುಷರ ಬೆವರಿನಿಂದ ಹೊರತೆಗೆಯಲಾದ ಈ ವಿಶೇಷ ರಾಸಾಯನಿಕ ವಸ್ತುವನ್ನು ವಾಸನೆಗೆ ನೀಡಿದರು. ಇದರ ನಂತರ ಮಹಿಳೆಯರ ರಕ್ತದಲ್ಲಿನ ಕಾರ್ಟಿಸೋಲ್ ಮಟ್ಟವನ್ನು ಅಳೆಯಲಾಯಿತು. ಇದರ ಪರಿಣಾಮವಾಗಿ, ಈ ವಾಸನೆಯನ್ನು ಅನುಭವಿಸುವ ಮಹಿಳೆಯರು ಅದನ್ನು ವಾಸನೆ ಮಾಡದ ಮಹಿಳೆಯರಿಗಿಂತ ಗಮನಾರ್ಹವಾಗಿ ಹೆಚ್ಚಿನ ಕಾರ್ಟಿಸೋಲ್ ಮಟ್ಟವನ್ನು ಹೊಂದಿದ್ದಾರೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.
66
ಮಹಿಳೆಯರನ್ನೇ ಕೇಳಬೇಕು!
ಈ ಸಂಶೋಧನೆಗೆ ಹೆಚ್ಚು ಆಳವಾದ ಅಧ್ಯಯನದ ಅಗತ್ಯವಿದೆ ಎಂದಿದ್ದಾರೆ ಸಂಶೋಧಕರು. ಅಧ್ಯಯನ ಏನೇ ಇರಲಿ. ಗಂಡನ ಹತ್ತಿರ ಹೋದಾಗ ಬೆವರಿನ ವಾಸನೆ ಬರುತ್ತಿದ್ದರೆ ಹೆಣ್ಣಿಗೆ ಹೀಗೆಲ್ಲಾ ಆಗೋದು ನಿಜನಾ ಎನ್ನುವುದು ಮಾತ್ರ ಮಹಿಳೆಯರೇ ಹೇಳಬೇಕಿದೆ!