ಸೊಸೆ ಹನಿಮೂನ್‌ಗೆ ಬಟ್ಟೆ ಪ್ಯಾಕ್ ಮಾಡ್ತಿದ್ದಾಗ ಸೂಟ್‌ಕೇಸ್‌ನಲ್ಲಿ ಆ ವಸ್ತು ನೋಡಿ ಅತ್ತೆಗೆ ಶಾಕ್!

Published : Aug 31, 2025, 12:45 PM IST

ಹೌದು, ಸೂಟ್‌ಕೇಸ್‌ನಲ್ಲಿ ವೈಯಕ್ತಿಕ ಬಳಕೆಗಾಗಿ ಇರಿಸಲಾಗಿದ್ದ ಆ ಒಂದು ವಸ್ತುವೇ ಇದೀಗ ಸೊಸೆ ಮತ್ತು ಅತ್ತೆಯ ನಡುವೆ ಮಾತ್ರವಲ್ಲದೆ, ಇಡೀ ಕುಟುಂಬದೊಳಗೆ ಧಾರ್ಮಿಕ ನಿಯಮಗಳ ಕುರಿತು ಬಿಸಿ ಬಿಸಿ ಚರ್ಚೆ ಹುಟ್ಟು ಹಾಕಿದೆ.

PREV
16

ಮದುವೆಯಾದ ನಂತರ ನವವಿವಾಹಿತರು ಹನಿಮೂನ್‌ಗೆ ತೆರಳುವುದು ಕಾಮನ್. ಉಳ್ಳವರು ಆ ಸಂತೋಷದ ಕ್ಷಣವನ್ನು ಕಳೆಯಲು ಹೊರ ರಾಜ್ಯ, ದೇಶಗಳಿಗೆ ಪ್ಲಾನ್ ಮಾಡುತ್ತಾರೆ. ಆದರೆ ಹೀಗೆ ಹನಿಮೂನ್‌ಗೆಂದು ಪ್ಲಾನ್‌ ಮಾಡಿದ ಕೆನಡಾದಲ್ಲಿ ವಾಸಿಸುವ ಮುಸ್ಲಿಂ ದಂಪತಿಗಳ ಮನೆಯಲ್ಲಿ ದೊಡ್ಡ ಕಾಂಟ್ರವರ್ಸಿಯಾಗಿದೆ. ಹೌದು, ಸೂಟ್‌ಕೇಸ್‌ನಲ್ಲಿ ವೈಯಕ್ತಿಕ ಬಳಕೆಗಾಗಿ ಇರಿಸಲಾಗಿದ್ದ ಆ ಒಂದು ವಸ್ತುವೇ ಇದೀಗ ಸೊಸೆ ಮತ್ತು ಅತ್ತೆಯ ನಡುವೆ ಮಾತ್ರವಲ್ಲದೆ, ಇಡೀ ಕುಟುಂಬದೊಳಗೆ ಧಾರ್ಮಿಕ ನಿಯಮಗಳ ಕುರಿತು ಬಿಸಿ ಬಿಸಿ ಚರ್ಚೆ ಹುಟ್ಟು ಹಾಕಿದೆ.

26

ವಿಶೇಷವಾಗಿ ಮುಸ್ಲಿಂ ಧರ್ಮದಲ್ಲಿ ಮಹಿಳೆಯರ ಉಡುಪುಗಳ ಬಗ್ಗೆ ಕಠಿಣ ನಿಯಮಗಳಿವೆ. ದೇಹವನ್ನು ಕಾಣದಂತೆ ಸಂಪೂರ್ಣವಾಗಿ ಮುಚ್ಚಬೇಕು ಮತ್ತು ಸಾರ್ವಜನಿಕವಾಗಿ ಗಿಡ್ಡ ಬಟ್ಟೆಗಳನ್ನು ಧರಿಸುವುದು ತಪ್ಪು ಎಂಬ ನಂಬಿಕೆ ಇದೆ. ಆದರೆ ಇದಕ್ಕೆ ವಿರುದ್ಧವಾಗಿ ಸೊಸೆ ನಡೆದುಕೊಂಡ ಕಾರಣ ದೊಡ್ಡ ಜಗಳವೇ ನಡೆದಿದೆ.

36

ಅಷ್ಟಕ್ಕೂ ಆಗಿದ್ದೇನು ಎಂದು ನೋಡುವುದಾದರೆ ಹೊಸದಾಗಿ ಮದುವೆಯಾದ ಮುಸ್ಲಿಂ ವಧು ತನ್ನ ಹನಿಮೂನ್‌ಗಾಗಿ ಬಟ್ಟೆ ಪ್ಯಾಕ್ ಮಾಡುತ್ತಿದ್ದಾಗ ಅತ್ತೆ ಸ್ವಲ್ಪ ಔಷಧಿ ಪ್ಯಾಕ್ ಮಾಡಬೇಕೆಂದು ಹೇಳಿ ಸೂಟ್‌ಕೇಸ್ ಓಪನ್ ಮಾಡಿ ಒಳಗಿನ ವಸ್ತುಗಳನ್ನು ಪರಿಶೀಲಿಸಲು ಪ್ರಾರಂಭಿಸಿದ್ದಾಳೆ. ಆಗ ಅವಳಿಗೆ ಬಿಕಿನಿ ಕಣ್ಣಿಗೆ ಬಿದ್ದಿದೆ. ಆ ಬಿಕಿನಿ ಬೇರೆ ಯಾರದ್ದೂ ಅಲ್ಲ, ಸೊಸೆ ತನ್ನ ಹನಿಮೂನ್‌ಗಾಗಿ ಖರೀದಿಸಿದ ಹೊಸ ಬಿಕಿನಿ.

46

ಇದನ್ನು ನೋಡಿದ ಅತ್ತೆ ಕೋಪಗೊಂಡು ಸೊಸೆಗೆ "ನೀನು ನಿಜವಾಗಿಯೂ ಇದನ್ನು ತೆಗೆದುಕೊಂಡು ಹೋಗುತ್ತಿದ್ದೀಯಾ?" ಎಂದು ಪ್ರಶ್ನಿಸಿದ್ದಾಳೆ. ಈ ಪ್ರಶ್ನೆಗೆ ವಧು ಮುಜುಗರದಿಂದ ಕೆಂಡಮಂಡಲವಾಗಿ ಕೂಗಾಡಿದ್ದಾಳೆ. ತನ್ನ ವೈಯಕ್ತಿಕ ವಸ್ತುಗಳನ್ನು ಈ ರೀತಿ ನೋಡುವುದು ತಪ್ಪು ಎಂದು ಸೊಸೆ ಆಕ್ಷೇಪಣೆ ವ್ಯಕ್ತಪಡಿಸಿದ್ದಾಳೆ. ಆದರೆ ಇದು ಧಾರ್ಮಿಕವಾಗಿ ಮತ್ತು ನೈತಿಕವಾಗಿ ಸೂಕ್ತವಲ್ಲ ಎಂದು ಅತ್ತೆ ಉತ್ತರಿಸಿದ್ದಾಳೆ. ಹನಿಮೂನ್ ಎಂದರೆ ಬೀಚ್‌ನಲ್ಲಿ ಬಹಿರಂಗವಾಗಿ ಈ ರೀತಿಯ ಬಟ್ಟೆಗಳನ್ನು ಧರಿಸುವುದು ಎಂದಲ್ಲ ಎಂದು ಅತ್ತೆ ಸ್ಪಷ್ಟಪಡಿಸಿದ್ದಾಳೆ.

56

ಸೊಸೆ ತಕ್ಷಣ ಪ್ರತಿಕ್ರಿಯಿಸಿ ನೋಡಿ "ಇದು ನಮ್ಮ ವೈಯಕ್ತಿಕ ಜೀವನ, ನಮ್ಮ ಹನಿಮೂನ್. ನಿಮಗೆ ಇದರಲ್ಲಿ ಹಸ್ತಕ್ಷೇಪ ಮಾಡುವ ಹಕ್ಕಿಲ್ಲ" ಎಂದು ಹೇಳಿದ್ದಾಳೆ. ಪತಿ ಮಧ್ಯಸ್ಥಿಕೆ ವಹಿಸಿ ಪರಿಸ್ಥಿತಿಯನ್ನು ಶಾಂತಗೊಳಿಸಲು ಪ್ರಯತ್ನಿಸಿದರೂ ಎರಡೂ ಕಡೆಯಿಂದಲೂ ಮಾತಿಗೆ ಮಾತು ನಡೆದು ವಿಷಯ ಗಂಭೀರ ಸ್ವರೂಪ ತಾಳಿದೆ.

66

ಕೊನೆಗೆ ನವ ವಧು "ತನ್ನ ಮಧುಚಂದ್ರಕ್ಕೆ ಮುಂಚೆ ನಡೆದ ಈ ಅನಿರೀಕ್ಷಿತ ಘಟನೆಯು ತನ್ನನ್ನು ಭಾವನಾತ್ಮಕವಾಗಿ ಧ್ವಂಸಗೊಳಿಸಿದೆ ಮತ್ತು ಭವಿಷ್ಯದಲ್ಲಿ ತನ್ನ ಅತ್ತೆ-ಮಾವನೊಂದಿಗೆ ಹೇಗೆ ಹೊಂದಿಕೊಳ್ಳುವುದು ಎಂಬುದರ ಕುರಿತು ಯೋಚಿಸಬೇಕಾಗುತ್ತದೆ" ಎಂದು ಸ್ನೇಹಿತರೊಂದಿಗೆ ಹಂಚಿಕೊಂಡಿದ್ದಾರೆ ಎಂದು ವರದಿಯಾಗಿದೆ.

Read more Photos on
click me!

Recommended Stories