Future Of Marriage: ಒಂದು ಕಡೆ ಮದುವೆ ಆಗೋಕೆ ಹೆಣ್ಣು ಸಿಗ್ತಿಲ್ಲ. ಮತ್ತೊಂದು ಕಡೆ ಮದುವೆಯಾದವ್ರಲ್ಲಿ ಒಂದಲ್ಲ ಒಂದು ಸಮಸ್ಯೆಗಳು. ಗಂಡ, ಹೆಂಡತಿಯನ್ನು ಕೊಲೆ ಮಾಡಿಸೋದು, ಹೆಂಡತಿ ಗಂಡನನ್ನು ಕೊಲೆ ಮಾಡಿಸೋದು ಈಗ ಸಾಮಾನ್ಯ ಆಗಿದೆ. ಆದರೆ ಭಾರತದಲ್ಲಿ 2047ರ ವೇಳೆಗೆ ಮದುವೆ ವ್ಯವಸ್ಥೆ ಇರೋದಿಲ್ವಂತೆ.
ರಾಜ್ ಶಮಾನಿ ಅವರು ಲೇಖಕ ಸಂದೀಪ್ ದಾಸ್ ಜೊತೆ ಸಂದರ್ಶನ ಮಾಡಿದ್ದು, ಆ ವೇಳೆ ಮದುವೆ ವ್ಯವಸ್ಥೆ ಇರೋದಿಲ್ಲ ಎಂದು ಹೇಳಿದ್ದಾರೆ. ಸಂದೀಪ್ ದಾಸ್ ಅವರು Founder & Managing Director of Building Leaders for Tomorrow ಫೌಂಡರ್ ಕೂಡ ಹೌದು.
ಹೆಣ್ಣು ಮಗು ಹುಟ್ಟಿದಕೂಡಲೇ ಮದುವೆ ಯೋಚನೆ ಬರುತ್ತದೆ. ಇನ್ನೊಂದು ಕಡೆ ಗಂಡು ಮಕ್ಕಳಿಗೆ ಶಿಕ್ಷಣ ಸಿಕ್ಕಿ, ಕೆಲಸ ಸಿಕ್ಕಿದಂತೆಯೇ ಮದುವೆ ಬಗ್ಗೆ ಯೋಚನೆ ಮಾಡಲಾಗುತ್ತದೆ. ಆದರೆ ಮುಂಬರುವ ವರ್ಷಗಳಲ್ಲಿ ಮದುವೆ ವಿಷಯ ಬರೋದಿಲ್ಲ. ಇಂದು ಭಾರತದಲ್ಲಿ 95% ವಯಸ್ಕರು ಮದುವೆಯಾಗಿದ್ದರೆ, ಆ ಸಂಖ್ಯೆ ಮುಂದೆ ಕೇವಲ 10 ರಿಂದ 15% ಕ್ಕೆ ಕುಸಿಯುತ್ತದೆ ಎನ್ನಲಾಗಿದೆ. ಅಮೆರಿಕ ಮತ್ತು ಚೀನಾದಂತೆ ಇಲ್ಲೂ ಆಗುವುದು ಎನ್ನಲಾಗಿದೆ.
26
ಅಮೆರಿಕ, ಚೀನಾದಲ್ಲಿ ಪರಿಸ್ಥಿತಿ ಹೇಗಿದೆ?
ಅಮೆರಿಕದ ಪರಿಸ್ಥಿತಿ
2019 ರಲ್ಲಿ 'ಮೋರ್ಗನ್ ಸ್ಟಾನ್ಲಿ' ಮಾಡಿದ ಸಂಶೋಧನೆಯ ಪ್ರಕಾರ, 2030ರ ವೇಳೆಗೆ ಅಮೆರಿಕದ 45% ಮಹಿಳೆಯರು ಮದುವೆ ಆಗದೆ ಹಾಗೆ ಇರುತ್ತಾರೆ. ಹುಡುಗಿಯರು ಮದುವೆಯಾಗಿಲ್ಲ ಅಂದ್ರೆ, ಸಹಜವಾಗಿ ಹುಡುಗರೂ ಮದುವೆಯಾಗುವುದಿಲ್ಲ.
ಚೀನಾದ ಪರಿಸ್ಥಿತಿ
ಚೀನಾದಲ್ಲಿ ಮದುವೆ ಮಾರುಕಟ್ಟೆ ಡೌನ್ ಆಗಿದೆ. ಇತ್ತೀಚಿನ ವರದಿಯಂತೆ, ಚೀನಾದಲ್ಲಿ ಮದುವೆಗಳ ಸಂಖ್ಯೆ 1980ರ ನಂತರ ಕಡಿಮೆ ಆಗುತ್ತದೆ. ಚೀನಾದಲ್ಲಿ ವಾರ್ಷಿಕವಾಗಿ 28 ಲಕ್ಷ ಡಿವೋರ್ಸ್ ಆಗುತ್ತಿದೆ. ಡಿವೋರ್ಸ್ ಆಗಬಾರದು ಎಂದು 12 ರಿಂದ 18 ತಿಂಗಳ 'ಕೂಲಿಂಗ್ ಆಫ್ ಪೀರಿಯಡ್' ಕೊಡುವುದು. ಮದುವೆ ಆಗುವಾಗ ಎಷ್ಟು ಹಣ ತಂದಿದ್ದರೋ ಅಷ್ಟೇ ಹಣ ಕೊಡಬೇಕು. ಅದನ್ನು ಬಿಟ್ಟು ಬೇರೆ ಜೀವನಾಂಶ ಇಲ್ಲಿ ಇಲ್ಲ.
36
ಮದುವೆಗಳು ಮುರಿಯಲು ಪ್ರಮುಖ 5 ಕಾರಣಗಳು
ಸ್ವಾತಂತ್ರ್ಯ (Independence)
ಪಿತೃಪ್ರಧಾನ ವ್ಯವಸ್ಥೆ (Patriarchy)
ಕೃತಕ ಬುದ್ಧಿಮತ್ತೆ (AI)
ಸೋಷಿಯಲ್ ಮೀಡಿಯಾ (Social Media)
ಭ್ರಮೆ (Delusion)
ಭಾರತದಲ್ಲಿ 30 ವರ್ಷ ದಾಟಿದರೂ ಕೂಡ, ಯಶಸ್ವಿ, ಸುಂದರ ಮಹಿಳೆಯರು ಮದುವೆಯಾಗದೆ ಒಂಟಿಯಾಗಿ ಉಳಿಯುತ್ತಿದ್ದಾರೆ. ಸ್ವಂತ 'ಆಯ್ಕೆ'ಯಿಂದ ಈ ನಿರ್ಧಾರಗಳನ್ನು ತಗೊಳ್ಳುತ್ತಿದ್ದಾರೆ.
ಯೂಗೋವ್ ಸರ್ವೆ 2023 ಪ್ರಕಾರ 40% ನಗರವಾಸಿ ಭಾರತೀಯರು "ನಮ್ಮ ಜೀವನದಲ್ಲಿ ಮದುವೆ ಮುಖ್ಯವೇ ಅಲ್ಲ" ಎಂದು ಹೇಳಿದ್ದಾರೆ.
ಇಂಡಿಯಾ ಲೆಂಡ್ಸ್ ಸರ್ವೆ: 67% ಯುವಕ-ಯುವತಿಯರು ಹಣಕಾಸಿನ ಸ್ಥಿರತೆ ನಮ್ಮ ಮೊದಲ ಆಯ್ಕೆ ಎಂದು ಹೇಳಿದ್ದಾರೆ, ಮದುವೆ ಆಮೇಲೆ ನೋಡಿಕೊಳ್ಳಬಹುದು ಎನ್ನುತ್ತಾರೆ.
ರೆಂಟ್ ಎ ಬಾಯ್‌ಫ್ರೆಂಡ್ (Rent a Boyfriend): ಫಂಕ್ಷನ್‌ಗಳಿಗೆ ಹೋದಾಗ "ಯಾವಾಗ ಮದುವೆ?" ಎಂದು ಕೇಳುವವರ ಕಿರಿಕಿರಿ ತಪ್ಪಿಸಲು ಜಪಾನ್‌ನಲ್ಲಿ ಬಾಯ್‌ಫ್ರೆಂಡ್ ಅನ್ನು ಬಾಡಿಗೆಗೆ ಪಡೆಯುವ ಬಿಸಿನೆಸ್ ಇದೆ. ಈಗ ಮುಂಬೈ, ಬೆಂಗಳೂರಿನಲ್ಲೂ ಇಂತಹ ಸ್ಟಾರ್ಟ್‌ಅಪ್‌ಗಳು ಶುರುವಾಗಿವೆ!
56
ಯಶಸ್ವಿ ಮಹಿಳೆಯರನ್ನು ಸಮಾಜ ಒಪ್ಪಿಕೊಳ್ಳುತ್ತಿಲ್ಲವೇ?
ಭಾರತೀಯ ಸಮಾಜದಲ್ಲಿ ಒಳ್ಳೆಯ ಸಂಬಳ ಇರುವ ಮಹಿಳೆಯರನ್ನು ಸುಲಭವಾಗಿ ಯಾರೂ ಇಷ್ಟಪಡುವುದಿಲ್ಲ.
ಪುರುಷರು ಸೌಂದರ್ಯ, ಶಾಂತಿ ಬಯಸಿದರೆ, ಮಹಿಳೆಯರು ಸಂಪನ್ಮೂಲ ಮತ್ತು ಭದ್ರತೆ ಬಯಸುತ್ತಾರೆ. ಹೆಚ್ಚು ಗಳಿಸುವ ಮಹಿಳೆ ತನಗಿಂತ ಹೆಚ್ಚು ಸಂಬಳ ಇರುವ ಪುರುಷನನ್ನೇ ಹುಡುಕುತ್ತಾಳೆ. ಆದರೆ 60-70 ಲಕ್ಷ ರೂ. ಗಳಿಸುವ ಪುರುಷನಿಗೆ ಅವಳ ಹಣ ಮುಖ್ಯವಾಗಿರುವುದಿಲ್ಲ, ಅವನಿಗೆ ಸೌಂದರ್ಯ, ಹೊಂದಾಣಿಕೆಯ ಗುಣ ಮುಖ್ಯವಾಗಿರುತ್ತದೆ. ಇದರಿಂದಾಗಿ ಸ್ವತಂತ್ರ ಮಹಿಳೆಯರು ತನಗಿಂತ ಕೆಳಗಿನವರನ್ನೂ ಮದುವೆಯಾಗದೆ, ಮೇಲಿನವರಿಗೂ ಒಪ್ಪಿಗೆಯಾಗದೆ ಸಿಂಗಲ್ ಆಗಿ ಉಳಿಯುತ್ತಿದ್ದಾರೆ.
66
ಕಂಗನಾ ರಣಾವತ್ ಅಂದು ಇದೇ ಮಾತು ಹೇಳಿದ್ರು
ನಟಿ ಕಂಗನಾ ರಣಾವತ್ ಕೂಡ ಒಂದು ಪಾಡ್‌ಕಾಸ್ಟ್ ನಲ್ಲಿ "ಯಾವ ಸಂಬಂಧದಲ್ಲಿ ಹೆಣ್ಣು ಹೆಚ್ಚು ಶಕ್ತಿಶಾಲಿ ಮತ್ತು ಶ್ರೀಮಂತಳಾಗಿರುತ್ತಾಳೋ, ಆ ಸಂಬಂಧ ಹೆಚ್ಚು ದಿನ ಉಳಿಯುವುದಿಲ್ಲ" ಎಂದು ಹೇಳಿದ್ದಾರೆ.
ತಿಂಗಳಿಗೆ 20,000 ಗಳಿಸುವ ಹುಡುಗಿಗೂ ಕೂಡ 1 ಕೋಟಿ ರೂ. ಪ್ಯಾಕೇಜ್ ಇರುವ, 6 ಅಡಿ ಎತ್ತರವಿರುವ ಹುಡುಗನೇ ಬೇಕು ಎಂಬ ಡಿಮ್ಯಾಂಡ್ ಇದೆ. ಇಂದಿನ ತಲೆಮಾರು ಡೇಟಿಂಗ್ ಅಥವಾ ಮದುವೆಗೆ ಮುನ್ನವೇ "ಇದು ವರ್ಕೌಟ್ ಆಗಲ್ಲ, ಅವನು ನನಗೆ ಮೋಸ ಮಾಡ್ತಾನೆ, ಅವಳು ನನ್ನನ್ನು ನಿಯಂತ್ರಿಸ್ತಾಳೆ" ಎಂದು ನೆಗೆಟಿವ್ ಆಗಿ ಯೋಚಿಸಲು ಶುರು ಮಾಡುತ್ತಾರೆ. ಸಂಬಂಧವನ್ನು ಉಳಿಸಿಕೊಳ್ಳಲು ಪ್ರಯತ್ನಿಸುವ ಬದಲು, ಅದರಲ್ಲಿ ತಪ್ಪುಗಳನ್ನು ಹುಡುಕಲು ಆರಂಭಿಸುತ್ತಾರೆ. ಈ ಎಲ್ಲಾ ಕಾರಣಗಳಿಂದಾಗಿ ಮದುವೆ ವ್ಯವಸ್ಥೆ ಭಾರತದಲ್ಲೂ ತೀವ್ರ ಬಿಕ್ಕಟ್ಟನ್ನು ಎದುರಿಸುತ್ತಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.