Bigg Boss Winner​ ಡಿವೋರ್ಸ್​ ಅಸಲಿಯತ್ತು ಕೊನೆಗೂ ರಿವೀಲ್​: ಮಗು ಬಗ್ಗೆ ಪತ್ನಿಯ ಶಾಕಿಂಗ್​ ಸ್ಟೇಟ್​ಮೆಂಟ್​

Published : Jun 30, 2026, 04:05 PM IST

ಬಿಗ್​ಬಾಸ್​ ವಿನ್ನರ್​ ಗೌರವ್​ ಖನ್ನಾ ಮತ್ತು ನಟಿ ಆಕಾಂಕ್ಷಾ ಚಮೋಲಾ ತಮ್ಮ 10 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡುತ್ತಿದ್ದಾರೆ. ತನಗೆ ಮಕ್ಕಳು ಬೇಡ, ಕರಿಯರ್ ಮುಖ್ಯ ಎಂಬ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಆಕಾಂಕ್ಷಾ 'ಲಾಕ್ ಅಪ್' ಶೋನಲ್ಲಿ ಬಹಿರಂಗಪಡಿಸಿದ್ದಾರೆ.

PREV
16
ಬಿಗ್​ಬಾಸ್​ 19 ವಿನ್ನರ್​ ಗೌರವ್​ ಖನ್ನಾ

ಹಿಂದಿಯ ಬಿಗ್​ಬಾಸ್​ 19 ವಿನ್ನರ್​ ಗೌರವ್​ ಖನ್ನಾ ಮತ್ತು ಲಾಕ್ ಅಪ್ ಸೀಸನ್ 2 ರ ಪ್ರೀಮಿಯರ್‌ ಸ್ಪರ್ಧಿ ಆಕಾಂಕ್ಷಾ ಚಮೋಲಾ ಡಿವೋರ್ಸ್​ ಪಡೆಯುತ್ತಿರುವ ಬಗ್ಗೆ ಇದಾಗಲೇ ರಿವೀಲ್​ ಆಗಿದೆ. ಲಾಕ್ ಅಪ್ ರಿಯಾಲಿಟಿ ಷೋನಲ್ಲಿಯೇ ಆಕಾಂಕ್ಷಾ ಈ ವಿಷಯವನ್ನು ರಿವೀಲ್​ ಮಾಡಿದ್ದಾರೆ. ಯಾವುದೇ ಘನಂಧಾರಿ ಕಾರ್ಯ ಮಾಡಿದವರಂತೆ ಈ ವಿಷಯವನ್ನು ರಿಯಾಲಿಟಿ ಷೋನಲ್ಲಿ ಅವರು ರಿವೀಲ್​ ಮಾಡಿದ್ದು, ಇದರ ಬಗ್ಗೆ ಗೊತ್ತೇ ಇಲ್ಲ ಎನ್ನುವಂತೆ ತೀರ್ಪುಗಾರರು ಪೋಸ್​​ ಕೊಟ್ಟದ್ದೂ ಆಗಿದೆ. ಈ ಪೋಸ್​ ಕೊಟ್ಟಿದ್ದು ನೋಡಿ ವೀಕ್ಷಕರು, ಅವರಿಗೂ ಇದೇ ಮೊದಲು ತಿಳಿಯಿತು ಎಂದು ಅಂದುಕೊಂಡದ್ದೂ ಆಗಿದೆ.

26
10 ವರ್ಷದ ದಾಂಪತ್ಯಕ್ಕೆ ತೆರೆ

ಅದೇನೇ ಇದ್ದರೂ, ಇದೀಗ ಆಕಾಂಕ್ಷಾ ತಮ್ಮ 10 ವರ್ಷಗಳ ದಾಂಪತ್ಯ ಜೀವನಕ್ಕೆ ತೆರೆ ಎಳೆದದ್ದು ಏಕೆ ಎನ್ನುವ ಬಗ್ಗೆ ಶಾಕಿಂಗ್​ ಹೇಳಿಕೆ ನೀಡಿದ್ದಾರೆ. ತಮ್ಮ ವೈಯಕ್ತಿಕ ಜೀವನದ ಬಗ್ಗೆ ಇದೇ ಮೊದಲ ಬಾರಿಗೆ ಅಪ್​ಡೇಟ್​ ಕೊಡುತ್ತಿದ್ದೇನೆ ಎಂದಿರುವ ನಟಿ, ನಾನು ತಾಯಿಯಾಗಲು ಮದುವೆಯಾಗಿರಲಿಲ್ಲ. ಆದರೆ, ಗೌರವ್​ಗೆ ಮಕ್ಕಳು ಎಂದರೆ ಇಷ್ಟ. ನನಗೆ ಮಕ್ಕಳನ್ನು ಹೆರಲು ಇಷ್ಟವಿಲ್ಲ. ಅದಕ್ಕಾಗಿಯೇ ಈ ನಿರ್ಧಾರ ಎಂದು ಹೇಳಿದ್ದಾರೆ!

36
ಗೌರವ್ ಬಗ್ಗೆ ಆಕಾಂಕ್ಷಾ ಹೇಳಿದ್ದು

ನಾನು ಮಕ್ಕಳನ್ನು ಹೆರಲು ಹುಟ್ಟಿದವಳಲ್ಲ ಎಂದು ಗೌರವ್​ಗೆ ಮೊದಲೇ ಹೇಳಿದ್ದೆ. ಮೊದಲಿಗೆ ಆತ ಒಪ್ಪಿಕೊಂಡಿದ್ದ. ಆದರೆ ಕ್ರಮೇಣ ಆತ ಬದಲಾದ. ಮಕ್ಕಳು ಬೇಕು ಎನ್ನುವುದು ಅವನ ಇಚ್ಛೆಯಾಗಿತ್ತು. ಶೇಕಡಾ 99ರಷ್ಟು ಮಂದಿ ಮಕ್ಕಳನ್ನು ಪಡೆಯುವುದಕ್ಕಾಗಿಯೇ ಮದುವೆಯಾಗುತ್ತಾರೆ. ಆದರೆ ನಾನು ಆ ಸಾಲಿನಲ್ಲಿ ಇದ್ದವಳಲ್ಲ. ಗೌರವ್​ಗೆ ಮಗುವನ್ನು ನೀಡಲು ನನ್ನಿಂದ ಸಾಧ್ಯವಿಲ್ಲ. ಆದ್ದರಿಂದ ಬೇರೆ ಬೇರೆಯಾಗುವುದೇ ಒಳ್ಳೆಯದು ಎಂದು ತೀರ್ಮಾನಕ್ಕೆ ಬಂದ್ವಿ ಎಂದು ಆಕಾಂಕ್ಷಾ ಹೇಳಿದ್ದಾರೆ.

46
ದತ್ತು ಮಗುವೂ ಬೇಡ

ನಾನು ಮಗುವನ್ನು ಹೆರಲು ಇಷ್ಟಪಟ್ಟಿಲ್ಲ ಎಂದ ಮಾತ್ರಕ್ಕೆ ಮಗುವನ್ನು ದತ್ತು ತೆಗೆದುಕೊಳ್ಳಬೇಕು ಎಂದಲ್ಲ. ನನಗೆ ದತ್ತು ಎಲ್ಲಾ ಆಗಿಬರಲ್ಲ. ನನಗೆ ನನ್ನ ಕರಿಯಲ್​ ಮುಖ್ಯ. ಈ ಮಕ್ಕಳ ಸಹವಾಸ ಬೇಡ. ಅದಕ್ಕಾಗಿ ಸ್ವಂತದ್ದೂ ಬೇಡ, ದತ್ತು ಮಗುವೂ ಬೇಡ ಎಂದಿದ್ದಾರೆ ನಟಿ.

56
ಲವ್​ ಮ್ಯಾರೇಜ್​

ಆಕಾಂಕ್ಷಾ ಚಮೋಲಾ ಸಂತೋಷಿ ಮಾ, ಯೇ ಹೈ ಆಶಿಕಿ ಮತ್ತು ಕ್ರೈಮ್ ಪೆಟ್ರೋಲ್‌ನಂತಹ ಜನಪ್ರಿಯ ಸೀರಿಯಲ್​ಗಳಲ್ಲಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡವರು. ಅವರು ಮತ್ತು ಗೌರವ್ ಖನ್ನಾ ಸ್ವಲ್ಪ ಸಮಯದವರೆಗೆ ಡೇಟಿಂಗ್ ಮಾಡಿದ ನಂತರ 2016 ರಲ್ಲಿ ವಿವಾಹವಾದರು, ವರದಿಯ ಪ್ರಕಾರ ಆಡಿಷನ್ ಸಮಯದಲ್ಲಿ ಭೇಟಿಯಾಗಿ ಪ್ರೀತಿಯಲ್ಲಿ ಬಿದ್ದಿದ್ದರು. ಗೌರವ್ ಮತ್ತು ಆಕಾಂಕ್ಷಾ ನವೆಂಬರ್ 24, 2016 ರಂದು ಗೌರವ್ ಅವರ ತವರು ಕಾನ್ಪುರದಲ್ಲಿ ನಡೆದ ಮೂರು ದಿನಗಳ ಅದ್ದೂರಿ ವಿವಾಹ ಆಚರಣೆಯಲ್ಲಿ ವಿವಾಹವಾದರು.

66
ಸಹಾನುಭೂತಿ ಕಾರ್ಡ್

ಬಿಗ್ ಬಾಸ್ ಸಮಯದಲ್ಲಿ, ಗೌರವ್ ಮಕ್ಕಳನ್ನು ಪಡೆಯದಿರುವ ತನ್ನ ಹೆಂಡತಿಯ ನಿರ್ಧಾರವನ್ನು ಚರ್ಚಿಸುವ ಮೂಲಕ ಸಹಾನುಭೂತಿ ಕಾರ್ಡ್ ಆಡಿದ್ದಾರೆ ಎಂಬ ಆರೋಪದ ನಂತರ ಗೌರವ್ ಭಾವುಕರಾಗಿದ್ದರು. ಇದೆಲ್ಲವೂ ಕಳೆದ ವರ್ಷ ಅಂತಿಮ ವಾರದ 1 ನೇ ದಿನದಂದು ನಡೆದಿದ್ದು, ಅಂತಿಮ ಸ್ಪರ್ಧಿಗಳು ಮಾಧ್ಯಮಗಳ ಕಠಿಣ ಸಂವಾದವನ್ನು ಎದುರಿಸಿದರು. ಗೌರವ್ ಅವರನ್ನು ಪ್ರಶ್ನಿಸಿದ ವರದಿಗಾರ, ತಮ್ಮ ಪತ್ನಿಗೆ ಮಕ್ಕಳು ಬೇಡ ಎಂದು ಈ ಹಿಂದೆ ಹೇಳಿದಾಗ, ಅನೇಕ ವೀಕ್ಷಕರು ಇದು ಸಹಾನುಭೂತಿ ಗಳಿಸುವ ಒಂದು ಲೆಕ್ಕಾಚಾರದ ಪ್ರಯತ್ನ ಎಂದು ಭಾವಿಸಿದ್ದರು. ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದ ಗೌರವ್, ತಮ್ಮ ಪತ್ನಿಯ ನಿರ್ಧಾರವನ್ನು ಸಮರ್ಥಿಸಿಕೊಂಡರು ಮತ್ತು ಅವರು ವೈಯಕ್ತಿಕವಾಗಿ ಮಕ್ಕಳನ್ನು ಪ್ರೀತಿಸುತ್ತಾರೆ ಮತ್ತು ಮದುವೆಯ ನಂತರ ತಂದೆಯಾಗಲು ಬಯಸಿದ್ದರು, ಆದರೆ ತಮ್ಮ ಸ್ವಂತ ಹೃತ್ಪೂರ್ವಕ ಆಸೆಗಳನ್ನು ತ್ಯಾಗ ಮಾಡುವಷ್ಟು ತಮ್ಮ ಹೆಂಡತಿಯರನ್ನು ಪ್ರೀತಿಸುವ ಪುರುಷರು ಬಹಳ ಕಡಿಮೆ ಎಂದು ಹೇಳಿದರು. ಇದು ತಮಗೆ ಬಹಳ ಸೂಕ್ಷ್ಮ ವಿಷಯವಾಗಿದೆ ಮತ್ತು ತಮ್ಮ ಪತ್ನಿ ಏನು ನಿರ್ಧರಿಸುತ್ತಾರೋ ಅದನ್ನು ತಾವು ಯಾವಾಗಲೂ ಗೌರವಿಸುತ್ತೇವೆ ಮತ್ತು ಅದಕ್ಕೆ ನಿಲ್ಲುತ್ತೇವೆ ಎಂದು ಅವರು ಹೇಳಿದರು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories