ಪತಿಯ ಜೊತೆ ನಟಿ ಸಂಜನಾ ಬುರ್ಲಿ ಫೋಟೋಶೂಟ್​: ಕೊಟ್ಟರೊಂದು ಸ್ವೀಟ್​ ನ್ಯೂಸ್​

Published : Jun 05, 2026, 08:37 PM IST

'ಪುಟ್ಟಕ್ಕನ ಮಕ್ಕಳು' ಖ್ಯಾತಿಯ ನಟಿ ಸಂಜನಾ ಬುರ್ಲಿ ಅವರು ವೈದ್ಯರಾಗಿರುವ ಸಮರ್ಥ ಚನ್ನಗಿರಿ ಅವರನ್ನು ವರಿಸಿದ್ದು, ಇದೀಗ ದಾಂಪತ್ಯ ಜೀವನವನ್ನು ಆನಂದಿಸುತ್ತಿದ್ದಾರೆ.  ಪತಿಯೊಂದಿಗಿನ ಫೋಟೋ ಹಂಚಿಕೊಂಡಿರುವ ಅವರು, ಪ್ರೀತಿ ಮತ್ತು ಮದುವೆಯ ಕುರಿತು ತಮ್ಮ ಆಳವಾದ, ವೇದಾಂತದ ದೃಷ್ಟಿಕೋನ ಹಂಚಿಕೊಂಡಿದ್ದಾರೆ.

PREV
16
ಸಂಜನಾ ಬುರ್ಲಿ ಮದುವೆ

ನಟಿ ಸಂಜನಾ ಬುರ್ಲಿ ಅರ್ಥಾತ್​ ಪುಟ್ಟಕ್ಕನ ಮಕ್ಕಳು ಖ್ಯಾತಿಯ ಡಿಸಿ ಮೇಡಂ ಸ್ನೇಹಾ, ಹಾಗೂ ಗಂಧದ ಗುಡಿ (Gandhada Gudi) ಸೀರಿಯಲ್​ ಚಂದನಾ ಆಗಿ ಮಿಂಚಿದ್ದ ನಟಿ ಇದೀಗ ದಾಂಪತ್ಯ ಜೀವನ ಎಂಜಾಯ್‌ ಮಾಡುತ್ತಿದ್ದಾರೆ.

26
ಪ್ರೀತಿ ಎಂದರೆ

ಇದೀಗ ಪತಿಯ ಜೊತೆಗೆ ಕ್ಯೂಟ್​ ಫೋಟೋಶೂಟ್​ ಮಾಡಿಸಿಕೊಂಡಿರುವ ನಟಿ ಪತಿಯ ಕುರಿತು ಸ್ವೀಟ್​ ಮಾತುಗಳನ್ನಾಡಿದ್ದಾರೆ. ಪ್ರೀತಿ ಎಂದರೆ ಪೂರ್ಣತೆಯನ್ನು ಹುಡುಕುತ್ತಿರುವ ಇಬ್ಬರು ಅಪೂರ್ಣ ವ್ಯಕ್ತಿಗಳ ಭೇಟಿಯಲ್ಲ, ಬದಲಾಗಿ ಇಬ್ಬರು ಪ್ರಜ್ಞಾಪೂರ್ವಕ ಜೀವಿಗಳು. ತಾವು ಈಗಾಗಲೇ ಏನಾಗಿದ್ದೇವೆ ಎಂಬುದನ್ನು ಪರಸ್ಪರ ನೆನಪಿಸಿಕೊಳ್ಳುವುದು ಹೇಗೆ ಎಂಬುದರ ಕುರಿತು ಆತ್ಮಾವಲೋಕನ ಮಾಡಿಕೊಳ್ಳಲು ವೇದಾಂತವು ನಿಮಗೆ ಸಹಾಯ ಮಾಡುತ್ತದೆ ಎಂದಿದ್ದಾರೆ ನಟಿ

36
ಪ್ರೀತಿಯ ಸಿಹಿ

ಪಾತ್ರಗಳು, ಹೆಸರುಗಳು, ಮಹತ್ವಾಕಾಂಕ್ಷೆಗಳು ಮತ್ತು ಗುರುತುಗಳನ್ನು ಮೀರಿ, ಸಂಪೂರ್ಣ, ಮುಕ್ತ ಮತ್ತು ಅಸ್ಪೃಶ್ಯವಾದ ಮೌನ ಅರಿವು ಇರುತ್ತದೆ. ಪ್ರೀತಿ ಸ್ವಾಧೀನ ಮತ್ತು ನಿಯಂತ್ರಣಕ್ಕಿಂತ ಹೆಚ್ಚಾಗಿ ಆ ಅರಿವಿನ ಮಾರ್ಗವಾದಾಗ, ಸಹವಾಸವು ಸಾಧನೆಯಾಗುತ್ತದೆ ಮತ್ತು ಒಗ್ಗಟ್ಟು ಸ್ವತಃ ವಿಮೋಚನೆಯಾಗುತ್ತದೆ ಎಂದು ಮದುವೆ ಮತ್ತು ಪ್ರೀತಿಯ ಕುರಿತು ಆಳವಾದ ಸಂಬಂಧದ ಕುರಿತು ಮಾತನಾಡುವ ಮೂಲಕ ಪ್ರೀತಿಯ ಬಗ್ಗೆ ಸಿಹಿಯನ್ನು ಹಂಚಿಕೊಂಡಿದ್ದಾರೆ.

46
ಯಾರು ಸಂಜನಾ ಪತಿ?

ಇನ್ನು ಸಂಜನಾ ಅವರ ಪತಿ ಕುರಿತು ಹೇಳುವುದಾದರೆ, ಸಮರ್ಥ ಚನ್ನಗಿರಿ ಮೂಲತಃ ದಾವಣಗೆರೆಯವರಾಗಿದ್ದು, ವೃತ್ತಿಯಲ್ಲಿ ವೈದ್ಯರು. ಸಮರ್ಥ ಅವರು ಎಂಬಿಬಿಎಸ್ ಪೂರೈಸಿದ್ದು, ಇಂಟರ್ನಲ್ ಮೆಡಿಸಿನ್‌ನಲ್ಲಿ ಎಂಡಿ ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದಾರೆ. ಸಮರ್ಥ ಚನ್ನಗಿರಿ ಅವರು ಸದ್ಯ ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

56
ನಟಿಯ ಕುರಿತು

ಇನ್ನು ಸಂಜನಾ ಕುರಿತು ಹೇಳುವುದಾದರೆ, ಇವರು ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ. ಬೆಂಗಳೂರಿನ ಡಾ. ಅಂಬೇಡ್ಕರ್​ ಇನ್​ಸ್ಟಿಟ್ಯೂಟ್​ ಆಫ್ ಟೆಕ್ನಾಲಜಿಯಲ್ಲಿ ವಿಧ್ಯಾಭ್ಯಾಸ ಮುಗಿಸಿರುವ ಇವರು `ವಿಕೇಂಡ್' ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ.

66
ಸೀರಿಯಲ್​ ಬಿಟ್ಟಿದ್ದ ನಟಿ

ಮುಂದಿನ ವಿದ್ಯಾಭ್ಯಾಸಕ್ಕೆ, ಉನ್ನತ ಶಿಕ್ಷಣ ಪಡೆಯುವ ಹಿನ್ನೆಲೆಯಲ್ಲಿ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಿಂದ ದೂರ ಆಗ್ತಿರೋದಾಗಿ ನಟಿ ಹೇಳಿದ್ದರು. ಅವರು ಹೊರಕ್ಕೆ ಬರುವುದು ತಿಳಿದ ಕಾರಣ ಸ್ನೇಹಾ ಪಾತ್ರವನ್ನೇ ಸಾಯಿಸಲಾಗಿತ್ತು. ಇದು ವೀಕ್ಷಕರ ಆಕ್ರೋಶಕ್ಕೆ ಕಾರಣವಾಗಿತ್ತು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories