ಪದೇ ಪದೇ ಸಂಬಂಧಗಳು ಮುರಿದು ಬೀಳಲು ನಿಮ್ಮ ಕೆಟ್ಟ ಸಮಯ ಕಾರಣವಲ್ಲ, ಬದಲಿಗೆ ನಿಮ್ಮ ಬಾಲ್ಯದ ಅನುಭವಗಳು ಮತ್ತು ಮನಸ್ಥಿತಿಯೇ ಕಾರಣವೆಂದು ಮನೋವಿಜ್ಞಾನ ಹೇಳುತ್ತದೆ. ಬಾಲ್ಯದಲ್ಲಿ ಪ್ರೀತಿ, ಗೌರವ ಕಾಣದವರು, ತಮಗರಿವಿಲ್ಲದಂತೆಯೇ ದೊಡ್ಡವರಾದ ಮೇಲೆ ಅಂಥದ್ದೇ ಅಶಾಂತ ಸಂಬಂಧಗಳ ಕಡೆಗೆ ಆಕರ್ಷಿತರಾಗುತ್ತಾರೆ.
ಎಷ್ಟೋ ಜನರ ಲೈಫಲ್ಲಿ ಹೊಸ ಪ್ರೀತಿ ಶುರುವಾದಾಗ ಎಲ್ಲವೂ ಅದ್ಭುತವಾಗಿ ಕಾಣುತ್ತದೆ. ಆದರೆ ದಿನ ಕಳೆದಂತೆ ಹಳೆ ಕಥೆನೇ ಮತ್ತೆ ಶುರುವಾಗುತ್ತೆ. ಸಂಗಾತಿಯ ನಡವಳಿಕೆಯಲ್ಲಿ ಬದಲಾವಣೆ, ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳದಿರುವುದು, ಕೊನೆಗೆ ಮನಸ್ತಾಪದಿಂದ ಸಂಬಂಧವೇ ಮುರಿದು ಬೀಳುತ್ತೆ.
ನಿಮ್ಮ ಜೀವನದಲ್ಲೂ ಹೀಗೆ ಪದೇ ಪದೇ ಆಗ್ತಿದ್ರೆ, ಅದು ನಿಮ್ಮ ಕೆಟ್ಟ ಟೈಮ್ ಅಲ್ಲ. ಬದಲಿಗೆ ನಿಮ್ಮ ಮನಸ್ಥಿತಿ ಮತ್ತು ಬಾಲ್ಯದ ಅನುಭವಗಳೇ ಇದಕ್ಕೆ ಕಾರಣ ಅಂತಾರೆ ಸೈಕಾಲಜಿ ತಜ್ಞರು.
25
ತಪ್ಪು ವ್ಯಕ್ತಿಯನ್ನು ಆಯ್ಕೆ ಮಾಡಲು ಕಾರಣಗಳು
ಸೈಕಾಲಜಿ ಪ್ರಕಾರ, ನಾವು ಚಿಕ್ಕವರಿದ್ದಾಗ ಮನೆಯಲ್ಲಿ ನೋಡಿದ ವಾತಾವರಣವೇ ನಮ್ಮ ಮುಂದಿನ ಸಂಬಂಧಗಳಿಗೆ ಒಂದು ಬ್ಲೂಪ್ರಿಂಟ್ ಇದ್ದ ಹಾಗೆ. ತಂದೆ-ತಾಯಿ ನಡುವೆ ಪ್ರೀತಿ, ಗೌರವ ನೋಡಿ ಬೆಳೆದ ಮಕ್ಕಳು, ದೊಡ್ಡವರಾದ ಮೇಲೆ ತಮ್ಮ ಸಂಗಾತಿಯಲ್ಲೂ ಅದನ್ನೇ ಹುಡುಕುತ್ತಾರೆ. ಆದರೆ ಬಾಲ್ಯದಲ್ಲಿ ಜಗಳ, ಪ್ರೀತಿ ಇಲ್ಲದ ವಾತಾವರಣದಲ್ಲಿ ಬೆಳೆದವರು, ತಮಗೇ ಗೊತ್ತಿಲ್ಲದಂತೆ ಅಂಥದ್ದೇ ಕಷ್ಟದ ಸಂಬಂಧಗಳ ಕಡೆಗೆ ಆಕರ್ಷಿತರಾಗುತ್ತಾರೆ.
35
ಜಗಳ, ಕಿರುಚಾಟ, ಪ್ರೀತಿಯ ಕೊರತೆ
ತಜ್ಞರ ಪ್ರಕಾರ, ನಮ್ಮ ಮನಸ್ಸು ಯಾವಾಗಲೂ ತನಗೆ ಪರಿಚಿತವಾದ ಭಾವನೆಗಳನ್ನೇ ಹುಡುಕುತ್ತೆ. ಒಂದು ವೇಳೆ ನೀವು ಚಿಕ್ಕವರಿದ್ದಾಗ ಮನೆಯಲ್ಲಿ ಜಗಳ, ಕಿರುಚಾಟ, ಪ್ರೀತಿಯ ಕೊರತೆ ನೋಡಿ ಬೆಳೆದಿದ್ದರೆ, ನಿಮ್ಮ ಮೆದುಳಿಗೆ ಆ ಅಶಾಂತ ವಾತಾವರಣವೇ 'ನಾರ್ಮಲ್' ಅನಿಸಿಬಿಡುತ್ತೆ. ಹಾಗಾಗಿ, ದೊಡ್ಡವರಾದ ಮೇಲೆ ಯಾರಾದ್ರೂ ನಿಮ್ಮನ್ನು ಪ್ರೀತಿ, ಗೌರವದಿಂದ ನೋಡಿಕೊಂಡರೆ ಅದು ಬೋರಿಂಗ್ ಅನಿಸಬಹುದು. ನಿಮಗೆ ಗೊತ್ತಿಲ್ಲದ ಹಾಗೆ, ನಿಮ್ಮ ಮನಸ್ಸು ಹಳೆ ಗಾಯವನ್ನು ನೆನಪಿಸುವ ಕೋಪಿಷ್ಠ, ಭಾವನೆಗಳಿಲ್ಲದ ವ್ಯಕ್ತಿಗಳ ಕಡೆಗೆ ನಿಮ್ಮನ್ನು ಸೆಳೆಯುತ್ತೆ.
ನಿಜ ಹೇಳಬೇಕೆಂದರೆ, ಹಲವು ಬಾರಿ ನಮಗೆ ನಮ್ಮ ಮೇಲೆಯೇ ನಂಬಿಕೆ ಇರೋದಿಲ್ಲ. 'ನನಗೆ ನಿಜವಾದ ಪ್ರೀತಿ, ಗೌರವ ಸಿಗಲು ಅರ್ಹತೆ ಇದೆಯಾ? ಅನ್ನೋ ತಪ್ಪು ಕಲ್ಪನೆ ನಮ್ಮನ್ನು ಕಾಡುತ್ತಿರುತ್ತೆ. ಇದರಿಂದಾಗಿ, ನಮ್ಮನ್ನು ಸರಿಯಾಗಿ ನೋಡಿಕೊಳ್ಳದವರನ್ನೂ ನಾವು ಸಹಿಸಿಕೊಳ್ಳಬೇಕಾಗುತ್ತೆ. ಇದೊಂದು ವಿಷವರ್ತುಲದ ಹಾಗೆ. ಆತ್ಮವಿಶ್ವಾಸ ಕಡಿಮೆ ಆದಷ್ಟು, ಕೆಟ್ಟ ಸಂಬಂಧಕ್ಕೆ ಬೀಳುವ ಸಾಧ್ಯತೆ ಹೆಚ್ಚಾಗಿರುತ್ತೆ.
ಈ ವಿಷವರ್ತುಲದಿಂದ ಹೊರಬರಬೇಕೆಂದರೆ, ಮೊದಲು ನಿಮ್ಮ ಹಳೆಯ ಸಂಬಂಧಗಳನ್ನು ವಿಶ್ಲೇಷಣೆ ಮಾಡಿಕೊಳ್ಳಬೇಕು. ನೀವು ಎಂಥವರನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೀರಿ, ಯಾವ ತಪ್ಪುಗಳು ಮತ್ತೆ ಮತ್ತೆ ಆಗ್ತಿವೆ ಅನ್ನೋದನ್ನು ಗುರುತಿಸಬೇಕು. ಅಗತ್ಯವಿದ್ದರೆ, ಸ್ನೇಹಿತರು ಅಥವಾ ಸೈಕಾಲಜಿಸ್ಟ್‌ಗಳ ಸಹಾಯ ತೆಗೆದುಕೊಳ್ಳಿ. ಎಲ್ಲಕ್ಕಿಂತ ಮುಖ್ಯವಾಗಿ, ಮೊದಲು ನಿಮ್ಮನ್ನು ನೀವು ಪ್ರೀತಿಸುವುದು, ಗೌರವಿಸುವುದನ್ನು ಕಲಿತಾಗ ಮಾತ್ರವೇ, ಸರಿಯಾದ ಸಂಗಾತಿಯನ್ನು ಆಯ್ಕೆ ಮಾಡುವ ಅವಕಾಶ ಸಿಗುತ್ತೆ ಅಂತ ಸೈಕಾಲಜಿ ತಜ್ಞರು ಸಲಹೆ ನೀಡುತ್ತಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.