ಹನಿಮೂನ್​ ಮೂಡ್​ನಲ್ಲಿ Amrathadhaare ಮಲ್ಲಿ: ಆದ್ರೆ ರಿಯಲ್​ ಲೈಫ್​ನಲ್ಲಿ ಬಿರುಗಾಳಿ- ಆಗಿದ್ದೇನು

Published : Apr 03, 2026, 05:08 PM IST

ಅಮೃತಧಾರೆ ಧಾರಾವಾಹಿಯ ಮಲ್ಲಿ ಪಾತ್ರಧಾರಿ ಅನ್ವಿತಾ ಸಾಗರ್ ಅವರ ತೆರೆಯ ಮೇಲಿನ ಮತ್ತು ನಿಜ ಜೀವನದ ನಡುವಿನ ವ್ಯತ್ಯಾಸವನ್ನು ಈ ಲೇಖನ ವಿವರಿಸುತ್ತದೆ. ಧಾರಾವಾಹಿಯಲ್ಲಿ ಮಧುಚಂದ್ರದ ಸಂಭ್ರಮದಲ್ಲಿದ್ದರೆ, ನಿಜ ಜೀವನದಲ್ಲಿ ಅವರು ತಮ್ಮ ಪ್ರೀತಿಯಲ್ಲಿನ ನೋವು ಮತ್ತು ಬ್ರೇಕಪ್ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ

PREV
16
ರೀಲ್​ ಮತ್ತು ರಿಯಲ್​ ಲೈಫ್​

ರೀಲ್​ ಮತ್ತು ರಿಯಲ್​ ಲೈಫ್​ ನಡುವೆ ಅದೆಷ್ಟೋ ವ್ಯತ್ಯಾಸಗಳಿರುತ್ತವೆ. ಬಣ್ಣದ ಲೋಕದಲ್ಲಿ ಎಲ್ಲವೂ ಅಂದ ಚೆಂದ ಎಂದುಕೊಂಡರೂ, ಹಲವು ಸೆಲೆಬ್ರಿಟಿಗಳ ರಿಯಲ್​ ಲೈಫ್​ನಲ್ಲಿ ಅದೆಷ್ಟೋ ನೋವು ತುಂಬಿರುತ್ತದೆ. ಅಂಥವರಲ್ಲಿ ಒಬ್ಬರು ಅಮೃತಧಾರೆ ಸೀರಿಯಲ್​ ಮಲ್ಲಿ ಉರ್ಫ್​ ಅನ್ವಿತಾ ಸಾಗರ್​ (Amruthadhaare Malli Anvita Sagar).

26
ಹನಿಮೂನ್​ ಮೂಡ್​ನಲ್ಲಿ ಮಲ್ಲಿ

ಸೀರಿಯಲ್​ನಲ್ಲಿ ಸದ್ಯ ಎಲ್ಲಾ ಅಡೆತಡೆ ಮೀರಿ ನಟಿಗೆ ಎರಡನೆಯ ಮದುವೆಯಾಗಿದೆ. ಆದರೂ ಮೊದಲ ಪತಿ ಜೈದೇವ್​ ಕುತಂತ್ರದಿಂದ ಬಾಳನ್ನು ಹಾಳು ಮಾಡಲು ಕಾಯುತ್ತಲೇ ಇದ್ದಾನೆ. ಇದರ ನಡುವೆಯೇ, ಭೂಮಿಕಾ ಮತ್ತು ಗೌತಮ್​ ಅವರನ್ನು ಹನಿಮೂನ್​ಗೆ ಕಳುಹಿಸಲು ರೆಡಿ ಮಾಡುತ್ತಿದ್ದಾರೆ.

36
ರಿಯಲ್​ ಲೈಫ್​ನಲ್ಲಿ ಬಿರುಗಾಳಿ

ಇದು ರೀಲ್​ ಅರ್ಥಾತ್​ ಸೀರಿಯಲ್​ ಸ್ಟೋರಿಯಾದರೆ, ರಿಯಲ್​ ಲೈಫ್​ನಲ್ಲಿ ನಟಿಯ ಬಾಳಲ್ಲಿ ಬಿರುಗಾಳಿಯೇ ಉಂಟಾಗಿದೆ. ಈ ಬಗ್ಗೆ ಖುದ್ದು ನಟಿ ಓಪನ್​ ಆಗಿಯೇ ಹೇಳಿಕೊಂಡಿದ್ದರು. ಅವರು ತಮ್ಮ ರಿಯಲ್​ ಲೈಫ್​ ಲವ್​, ಬ್ರೇಕಪ್​ ಬಗ್ಗೆ ಹೇಳಿಕೊಂಡಿದ್ದರು. ನಾನು ನಿಜ ಜೀವನದಲ್ಲಿಯೂ ಒಂಥರಾ ಮಲ್ಲಿಯ ರೀತಿಯವಳೇ ಎಂದಿದ್ದಾರೆ. ನಾನು ಪ್ರೀತಿಸಿದವರಿಂದ ಎಕ್ಸ್​ಪೆಕ್ಟ್​ ಮಾಡಿದ್ದು ಸಿಗದೇ ಇದ್ದಾಗ ತುಂಬಾ ಹರ್ಟ್​ ಆಗುತ್ತದೆ. ನನಗೂ ಹಾಗೆಯೇ ಆಗಿದೆ. ಯಾರೇ ನನ್ನ ಜೀವನದಲ್ಲಿ ಬಂದ ಸಮಯದಲ್ಲಿ ನನಗೇ ಮೊದಲ ಪ್ರಯಾರಿಟಿ ಕೊಡಬೇಕು. ಬೇರೆಯ ಫ್ರೆಂಡ್ಸ್​ ಬರುವುದು ಬೇಡ ಅಂತೇನೂ ನಾನು ಹೇಳಲ್ಲ. ಆದರೆ ನನಗೆ ಆದ್ಯತೆ ಕೊಡಬೇಕು. ಹಾಗೆ ಮಾಡದೇ ನನ್ನನ್ನು ನೆಗ್ಲೆಕ್ಟ್​ ಮಾಡಿದರೆ ಮನಸ್ಸಿಗೆ ನೋವಾಗುತ್ತದೆ. ಇಂಥದ್ದೇ ನನ್ನ ಲೈಫ್​ನಲ್ಲಿಯೂ ಆಗಿದೆ ಎಂದಿದ್ದಾರೆ ಅನ್ವಿತಾ ಸಾಗರ್​.

46
ಓಪನ್​ ಆಗಿ ಮಾತನಾಡಿರೋ ನಟಿ

ಲವ್​ ಮಾಡಿದ್ದೆ. ಈಗ ಎಲ್ಲಾ ಹೋಗಿದೆ. ಈಗ ಹ್ಯಾಪ್ಪಿನೋ ಹೌದೋ ಅಲ್ವೋ ಗೊತ್ತಿಲ್ಲ. ಒಟ್ಟಿನಲ್ಲಿ ಇದ್ದೀನಿ ಅಷ್ಟೇ ಎಂದು ನೋವಿನಿಂದ ನುಡಿದಿದ್ದಾರೆ ನಟಿ ಅನ್ವಿತಾ. ನಾನು ಲವ್​ ಮಾಡುವ ಹುಡುಗನಿಂದ ಏನೇನೋ ದೊಡ್ಡದ್ದೇನು ಬಯಸಲಿಲ್ಲ. ಅವನು ಹೆಚ್ಚು ದುಡಿಯಬೇಕು, ಒಳ್ಳೆಯ ಕಡೆ ಕರೆದುಕೊಂಡು ಹೋಗಬೇಕು, ಇಂಟರ್​ನ್ಯಾಷನಲ್​ ಟೂರ್​ ಮಾಡಬೇಕು ಎಂದೇನೂ ನಾನು ಬಯಸುವವಳಲ್ಲ. ತಳ್ಳುವ ಗಾಡಿಯಲ್ಲಿ ಏನು ಕೊಡಿಸಿದರೂ ಸಾಕು. ಅಂಥವಳು ನಾನು. ಆದರೆ ನನ್ನ ಜೀವನದಲ್ಲಿ ಆಗಿದ್ದೆಲ್ಲಾ ಮೋಸವೇ. ತುಂಬಾ ಅನ್ಯಾಯವಾಯಿತು ಎಂದಿದ್ದಾರೆ ನಟಿ.

56
ನಟಿಯ ಕುರಿತು

ಇನ್ನು ನಟಿ ಅನ್ವಿತಾ ಸಾಗರ್‌ ಕುರಿತು ಹೇಳುವುದಾದರೆ, ಇವರು ಕನ್ನಡ ಸಿನಿಮಾ ಮತ್ತು ಧಾರಾವಾಹಿ ಕ್ಷೇತ್ರದಲ್ಲಿ ಕಳೆದೊಂದು ದಶಕದಿಂದ ಸಕ್ರಿಯರಾಗಿದ್ದದಾರೆ. ಈ ಹಿಂದೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ ಗಟ್ಟಿಮೇಳದಲ್ಲಿ ಆದ್ಯಾ ಪಾತ್ರದಲ್ಲಿ ನಟಿಸಿದ್ದರು. ಇದಾದ ಬಳಿಕ ಉದಯ ಟಿವಿಯ ಅಣ್ಣ ತಂಗಿ ಸೀರಿಯಲ್​ನಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಅದು 1 ಸಾವಿರ ಸಂಚಿಕೆಗಳನ್ನು ಆಗಲೇ ಪೂರೈಸಿದೆ. ಇದೀಗ ಮತ್ತೆ ಅನ್ವಿತಾ ಸಾಗರ್ ಅಮೃತಧಾರೆ ಸೀರಿಯಲ್ ಮೂಲಕ ಕಮ್‌ ಬ್ಯಾಕ್ ಮಾಡಿದ್ದಾರೆ. ಮಲ್ಲಿ ಪಾತ್ರಧಾರಿಯಾಗಿದ್ದ ರಾಧಾ ಭಗವತಿ ಅವರು ಭಾರ್ಗವಿ ಎಲ್​ಎಲ್​ಬಿ ಸೀರಿಯಲ್​ಗಾಗಿ ಈ ಪಾತ್ರ ತೊರೆದ ಬಳಿಕ, ಈಗ ಆ ಪಾತ್ರದಲ್ಲಿ ಅನ್ವಿತಾ ನಟಿಸುತ್ತಿದ್ದಾರೆ.

66
10 ವರ್ಷಗಳಿಂದ ಸೀರಿಯಲ್​ ನಂಟು

ಸೀರಿಯಲ್​ನಲ್ಲಿ, ಅವಕಾಶ ಇದ್ದರೂ ಸಿನಿಮಾಕ್ಕೆ ಬರಲು ಕಾರಣವನ್ನೂ ತಿಳಿಸಿರುವ ಅವರು, ಧಾರಾವಾಹಿಗೆ ಅಂಟಿಕೊಂಡಿರುವುದು ಬೇಡ ಎಂದುಕೊಂಡೆ. ಸಿನಿಮಾಕ್ಕೆ ಬರಬೇಕು ಎನ್ನುವ ಹಂಬಲ ಇತ್ತು. ಇದೀಗ ಬಣ್ಣದ ಲೋಕಕ್ಕೆ ಬಂದು 10 ವರ್ಷನೇ ಆಗಿದೆ. ಸೀರಿಯಲ್​ನಲ್ಲಿಯೂ ಸಾಕಷ್ಟು ಡಿಮಾಂಡ್​ ಇದ್ದರೂ, ಸಿನಿಮಾ ನನ್ನ ಮೊದಲ ಪ್ರೀತಿ. ಐತಿಹಾಸಿಕ, ಪೌರಾಣಿಕ ಪಾತ್ರ ಮಾಡುವ ಆಸೆ ಕೂಡ ಇದೆ ಎಂದಿದ್ದಾರೆ ಅನ್ವಿತಾ. ಅಂದಹಾಗೆ ಈ ಚಿತ್ರಕ್ಕಾಗಿ ಅವರು ಪಾರ್ವತಿ ಎನ್ನುವ ಹೆಸರು ಇಟ್ಟುಕೊಂಡಿದ್ದಾರೆ. ತಮ್ಮ ಅಜ್ಜ ಈ ಹೆಸರು ಇಟ್ಟಿರುವುದಾಗಿ ಅನ್ವಿತಾ ಹೇಳಿದ್ದಾರೆ. ಆದ್ದರಿಂದ ಚಿತ್ರದಲ್ಲಿ ಪಾರ್ವತಿ ಎಂದೇ ಹೆಸರು ಇದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories