Amruthadhaare ಜೈದೇವ್​- ಹಳೆ ಮಲ್ಲಿ ರಿಯಲ್​ ಮದ್ವೆ ಯಾವಾಗ, ಹೇಗೆ, ಎಲ್ಲಿ? ಜೋಡಿ ಹೇಳಿದ್ದೇನು

Published : Apr 03, 2026, 01:00 PM IST

'ಅಮೃತಧಾರೆ' ಧಾರಾವಾಹಿಯಲ್ಲಿ ಜೈದೇವ್ ಪಾತ್ರಕ್ಕೆ ಸಂಕಷ್ಟ ಎದುರಾಗಿದ್ದರೆ, ನಿಜ ಜೀವನದಲ್ಲಿ ನಟ ರಾಣವ್ ಗೌಡ ಮದುವೆಗೆ ಸಿದ್ಧರಾಗಿದ್ದಾರೆ. ಅವರು ಇದೇ ಧಾರಾವಾಹಿಯ ಹಳೆಯ ಮಲ್ಲಿ, ನಟಿ ರಾಧಾ ಭಗವತಿ ಅವರನ್ನು ಇದೇ ವರ್ಷ ಸರಳವಾಗಿ ವಿವಾಹವಾಗುವುದಾಗಿ ಖಚಿತಪಡಿಸಿದ್ದಾರೆ.

PREV
16
ಜೈದೇವ್​ಗೆ ತಿರುಗು ಬಾಣ

ಅಮೃತಧಾರೆ ಸೀರಿಯಲ್​ ಜೈದೇವ್​ಗೆ ಸದ್ಯ ಸೀರಿಯಲ್​ನಲ್ಲಿ ಭಾರಿ ಪೆಟ್ಟು ಬಿದ್ದಿದೆ. ಮಲ್ಲಿಗೆ ಮೋಸ ಮಾಡುವ ಉದ್ದೇಶದಿಂದ ಸುನಿಲ್​ನನ್ನು ಛೂ ಬಿಟ್ಟಿದ್ದ. ಆದರೆ ಅದೇ ಈಗ ಮುಳುವಾಗಿದೆ. ಮಲ್ಲಿಯ ಮದುವೆ ನಡೆದಿದ್ದು, ಅದು ಜೈದೇವ್​ಗೆ ತಿರುಗು ಬಾಣವಾಗಿದೆ.

26
ಹನಿಮೂನ್​ ಹಾಳುಮಾಡಲು ಪ್ಲ್ಯಾನ್​

ಇದೀಗ ಹನಿಮೂನ್​ಗೆ ಹೊರಟಿರುವ ಸೀರಿಯಲ್​ ಮಲ್ಲಿ ಮತ್ತು ಸುನೀಲ್​ ಬಾಳಲ್ಲಿ ಬಿರುಗಾಳಿ ಎಬ್ಬಿಸಲು ರೆಡಿ ಆಗಿದ್ದಾನೆ ಕೇಡಿ ಜೆಡಿ. ಅದಕ್ಕಾಗಿ ಭಾರಿ ಸ್ಕೆಚ್​ ಹಾಕುತ್ತಿದ್ದಾನೆ. ಆದರೆ ರಿಯಲ್​ ಲೈಫ್​ನಲ್ಲಿ ಹಳೆಯ ಮಲ್ಲಿ, ಈಗ ಭಾರ್ಗವಿ ಎಲ್​ಎಲ್​ಬಿ ಜೊತೆ ಮದುವೆಗೆ ಜೈದೇವ್​ ರೆಡಿ ಆಗಿದ್ದಾನೆ.

36
ರಿಯಲ್ಲಾಗಿ ಹಳೆ ಮಲ್ಲಿ ಜೊತೆ ಮದ್ವೆ

ಅಷ್ಟಕ್ಕೂ ಜೈದೇವ್​ ಉರ್ಫ್​ ರಾಣವ್​ ಗೌಡ ಅವರು ಹಳೆಯ ಮಲ್ಲಿ, ಈಗ ಭಾರ್ಗವಿ ಎಲ್​ಎಲ್​ಬಿ ರಾಧಾ ಭಗವತಿ ಜೊತೆ ಎಂಗೇಜ್​ಮೆಂಟ್​ ಆಗಿರೋದು ಅವರ ಅಭಿಮಾನಿಗಳಿಗೆ ತಿಳಿದದ್ದೇ. ರಾಧಾ ಅವರು ತಮ್ಮ ಹೊಸ ಚಿತ್ರ ನಾನು ಕರುಣಾಕರಕ್ಕೆ (Nanu Karunakara Movie) ಸಿದ್ಧತೆ ನಡೆಸಿದ್ದರೆ, ಅದೇ ಇನ್ನೊಂದೆಡೆ ಮದುವೆಗೂ ರೆಡಿ ಆಗ್ತಿದ್ದಾರೆ.

46
ಮದುವೆ ಯಾವಾಗ? ಎಲ್ಲಿ?

ಇದಾಗಲೇ ಇವರ ಮದುವೆ ಯಾವಾಗ ಎನ್ನುವ ಬಗ್ಗೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಇಷ್ಟರಲ್ಲಿಯೇ ಮದುವೆ ಡೇಟ್​ ಅನೌನ್ಸ್​ ಮಾಡಬೇಕಿತ್ತು. ಆದರೆ ಅದಿನ್ನೂ ಘೋಷಣೆ ಆಗಿಲ್ಲದ ಕಾರಣ, ಸಿನಿಮಾ ಪ್ರಮೋಷನ್​ ವೇಳೆ ಈ ಪ್ರಶ್ನೆ ಅವರಿಗೆ ಎದುರಾಗಿದೆ.

56
ಇದೇ ವರ್ಷ ಆಗ್ತೇವೆ

ಆಗ ರಾಣವ್​ ಗೌಡ (Amruthadhaare Jaidev urf Ranav Gowda) ಅವರು, ಇದೇ ವರ್ಷ ಮದುವೆಯಾಗುತ್ತೇವೆ ಎಂದಿದ್ದಾರೆ. ಇದಾಗಲೇ ಡೇಟ್​ ಫಿಕ್ಸ್​ ಆಗಬೇಕಿತ್ತು. ಆದರೆ ಮದುವೆಗೆ ತುಂಬಾ ತಯಾರಿ ಅಗತ್ಯ ಎನ್ನುವ ಕಾರಣಕ್ಕೆ ಸ್ವಲ್ಪ ಪೋಸ್ಟ್​ಪೋನ್​ ಮಾಡಿದ್ದೇವೆ. ಆದರೆ ಖಂಡಿತವಾಗಿಯೂ ಇದೇ ವರ್ಷವೇ ಮದುವೆಯಾಗುತ್ತೇವೆ ಎಂದಿದ್ದಾರೆ.

66
ಮದುವೆ ಹೇಗಿರುತ್ತೆ?

ಸೆಲೆಬ್ರಿಟಿ ಅಂತ ಬಹಳ ದೊಡ್ಡದಾಗಿ ಮದುವೆ ಆಗುವುದಿಲ್ಲ. ಏಕೆಂದರೆ ನಾವೆಲ್ಲಾ ತುಂಬಾ ಚಿಕ್ಕ ಫ್ಯಾಮಿಲಿಯಿಂದ ಬಂದವರು. ತುಂಬಾ ಸಿಂಪಲ್​ ಆಗಿ ಮದುವೆಯಾಗುತ್ತೇವೆ. ಸ್ಥಳ ಇನ್ನೂ ಗೊತ್ತು ಮಾಡಿಲ್ಲ. ಮಾಡಿದ ಕೂಡಲೇ ತಿಳಿಸುತ್ತೇವೆ ಎಂದಿದ್ದಾರೆ. ನಮ್ಮದು ಆಡಂಬರ ಇಷ್ಟ ಪಡದೇ ಇರುವ ಜೋಡಿ. ಅದ್ದರಿಂದ ಸಿಂಪಲ್​ ಮದುವೆ ಎಂದಿದ್ದಾರೆ ರಾಧಾ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories