17
ದೇವಸ್ಥಾನದಲ್ಲಿ ಮದುವೆ
ಹೆಚ್ಚಿನ ಜನರು ಹಳೆ ಕಾಲದ ಆಚಾರ ವಿಚಾರ, ಸಂಸ್ಕೃತಿಯ ಜೊತೆ ಮತ್ತೆ ಕನೆಕ್ಟ್ ಆಗಲು ಜನ ಇಷ್ಟ ಪಡುತ್ತಿದ್ದಾರೆ. ಹಾಗಾಗಿ ದೇವಸ್ಥಾನದಲ್ಲಿ ಮದುವೆಯಗಲು ಜನ ಮುಂದೆ ಬರುತ್ತಿದ್ದಾರೆ.
Subscribe to get breaking news alertsSubscribe 27
ಆಧ್ಯಾತ್ಮಿಕ ಮಹತ್ವ ಹೊಂದಿದೆ
ವಿವಾಹಿತ ಜೋಡಿಗಳಿಗೆ ದೇವಸ್ಥಾನದ ಪವಿತ್ರವಾದ ಶಾಂತಿಯನ್ನು ಇಷ್ಟಪಡುತ್ತಾರೆ, ಜೊತೆಗೆ ದೇವರ ಆಶೀರ್ವಾದ ಪಡೆದು ಮದುವೆಯಾಗೋದು ತುಂಬಾನೆ ಉತ್ತಮ ಅನ್ನೋದು ಅವರ ನಂಬಿಕೆ.
37
ಸರಳ ವಿವಾಹ
ದೇವಸ್ಥಾನದಲ್ಲಿ ಮದುವೆಯಾದರೆ ಸರಳವಾಗಿರುತ್ತದೆ, ಹೆಚ್ಚಿನ ಜನರು ಇಲ್ಲ, ಅತ್ಯಂತ ನಿಕಟ ಸಂಬಂಧಿಕರು, ಭಾವನಾತ್ಮಕವಾಗಿ ಎಲ್ಲರ ಜೊತೆ ಕನೆಕ್ಟ್ ಆಗೋದಕ್ಕೆ ಸಾಧ್ಯವಾಗುತ್ತೆ.
47
ಸಾಂಸ್ಕೃತಿಕ ಮತ್ತು ಕುಟುಂಬದ ಜೊತೆಗಿನ ಕನೆಕ್ಷನ್
ದೇವಸ್ಥಾನಗಳಲ್ಲಿ ಮದುವೆಯಾಗುವುದರಿಂದ ಜೋಡಿಗಳಿಗೆ ತಮ್ಮ ಮೂಲ ಸಂಪ್ರದಾಯವನ್ನು ಆಚರಿಸಲು ಸಾಧ್ಯವಾಗುತ್ತದೆ. ಈ ಆಚರಣೆಗಳನ್ನು ಕುಟುಂಬವು ಕೂಡ ಇಷ್ಟಪಡುತ್ತದೆ.
57
ಬಜೆಟ್ ಫ್ರೆಂಡ್ಲಿ
ದೇವಸ್ಥಾನದಲ್ಲಿ ಮದುವೆಯಾದರೆ ಅದು ಬಜೆಟ್ ಫ್ರೆಂಡ್ಲಿಯಾಗಿರುತ್ತೆ. ಸಾಲದ ಚಿಂತೆ ಇರೋದಿಲ್ಲ. ಆದರೆ ನಮಗೆ ಬೇಕಾದ ರೀತಿಯಲ್ಲಿ ಉತ್ತಮವಾಗಿ ಪ್ರೀತಿಪಾತ್ರರ ನಡುವೆ ಮದುವೆಯಾಗಬಹುದು.
67
ಆತ್ಮೀಯ ಬಳಗ
ಎಲ್ಲದರಲ್ಲೂ ತಪ್ಪನ್ನೇ ಹುಡುಕುವ ಜನರು ಇರೋದೇ ಇಲ್ಲ, ತಮ್ಮ ಸ್ನೇಹಿತರು, ಆತ್ಮೀಯ ಕುಟುಂಬ, ನಮ್ಮ ಒಳಿತನ್ನಷ್ಟೇ ಬಯಸುವ ಬಳಗ ಮದುವೆಯಲ್ಲಿರುತ್ತೆ.
77
ಪ್ಲ್ಯಾನಿಂಗ್ ಸುಲಭ
ಟೆಂಪಲ್ ವೆಡ್ಡಿಂಗ್ ಪ್ಲ್ಯಾನ್ ಮಾಡೋದು ಸುಲಭ. ಹೆಚ್ಚು ಡೆಕೊರೇಶನ್, ಹೆಚ್ಚು ಜನರನ್ನು ಕರೆಯುವ ಅಗತ್ಯ ಇಲ್ಲ. ಊಟದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವ ಅವಶ್ಯಕತೆ ಬರೋದಿಲ್ಲ.