ಇನ್​ಸ್ಟಾಗೆ ಬಂತು ದೃಷ್ಟಿಬೊಟ್ಟು: ಸ್ಮೃತಿ ಮಂಧಾನ- ಪಲಾಶ್​ ಮದ್ವೆ ಬಗ್ಗೆ ಮಾತಾಡಿದವರೆಲ್ಲಾ ಸುಸ್ತೋ ಸುಸ್ತು!

Published : Nov 29, 2025, 03:10 PM IST

ಕ್ರಿಕೆಟ್ ತಾರೆ ಸ್ಮೃತಿ ಮಂಧನಾ ಮತ್ತು ಪಲಾಶ್ ಮುಚ್ಚಲ್ ಅವರ ಮದುವೆ ಮುಂದೂಡಿಕೆಯ ನಡುವೆ, ಪಲಾಶ್‌ಗೆ ಬೇರೊಂದು ಸಂಬಂಧವಿದೆ ಎಂಬ ವದಂತಿಗಳು ಹಬ್ಬಿದ್ದವು. ಈ ಆರೋಪಗಳಿಗೆ ಉತ್ತರವಾಗಿ, ಜೋಡಿಯು ತಮ್ಮ ಇನ್‌ಸ್ಟಾಗ್ರಾಮ್ ಬಯೋದಲ್ಲಿ 'ನಜರ್' ಇಮೋಜಿ ಬಳಸುವ ಮೂಲಕ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

PREV
17
ವೈಯಕ್ತಿಕ ಜೀವನದ ವದಂತಿ

ಭಾರತೀಯ ಮಹಿಳಾ ಕ್ರಿಕೆಟ್ ತಾರೆ ಸ್ಮೃತಿ ಮಂಧನಾ ಮತ್ತು ಪಲಾಶ್ ಮುಚ್ಚಲ್ ಅವರ ವಿವಾಹ ಮುಂದೂಡಲ್ಪಟ್ಟಿರುವುದು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಹಾಟ್ ಟಾಪಿಕ್ ಆಗಿದೆ. ಸ್ಮೃತಿ ಮಂಧನಾ ಅವರ ತಂದೆಯ ಅನಾರೋಗ್ಯದ ಕಾರಣ ಮದುವೆ ನಿಂತಿದೆ ಎಂದು ಅಧಿಕೃತವಾಗಿ ಘೋಷಿಸಲಾಗಿದ್ದರೂ, ಇನ್ನೊಂದೆಡೆ ಪಲಾಶ್ ಮುಚ್ಚಲ್ ಅವರ ವೈಯಕ್ತಿಕ ಜೀವನದ ಬಗ್ಗೆ ಹಲವು ವದಂತಿಗಳು ಹರಿದಾಡುತ್ತಿವೆ.

27
ಬೇರೊಂದು ಸಂಬಂಧ

ಮುಖ್ಯವಾಗಿ, ಪಲಾಶ್ ಮುಚ್ಚಲ್ ಒಬ್ಬ ಯುವತಿಯೊಂದಿಗೆ ಸಂಬಂಧ ಹೊಂದಿದ್ದಾರೆ ಮತ್ತು ಅವರು ಮಂಧನಾಗೆ ಮೋಸ ಮಾಡಿದ್ದಾರೆ ಎಂದು ಹೇಳಲಾದ ಕೆಲವು ಖಾಸಗಿ ಚಾಟಿಂಗ್ ಸ್ಕ್ರೀನ್‌ಶಾಟ್‌ಗಳು ನೆಟ್‌ನಲ್ಲಿ ವೈರಲ್ ಆಗಿವೆ. ಈ ಚಾಟ್‌ಗಳ ಆಧಾರದ ಮೇಲೆ ಪಲಾಶ್ ಸ್ಮೃತಿಗೆ (Smriti Mandhana)ಮೋಸ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.

37
ಬಾಯಿಗೆ ಬೀಗ

ಇವೆಲ್ಲವುಗಳ ನಡುವೆಯೇ ಇದೀಗ ಹೀಗೆಲ್ಲಾ ಮಾತನಾಡುವವರ ಬಾಯಿಗೆ ಬೀಗ ಜಡಿದಿದೆ ಈ ಜೋಡಿ. ತಮ್ಮ ಇನ್​ಸ್ಟಾಗ್ರಾಮ್​ಗೆ ದೃಷ್ಟಿಬೊಟ್ಟು ಇಡುವ ಮೂಲಕ, ತಮ್ಮ ಸಂಬಂಧಕ್ಕೆ ಯಾರ ಕೆಟ್ಟ ದೃಷ್ಟಿಯೂ ಬೀಳದಿರಲಪ್ಪ ಎನ್ನುವ ರೀತಿಯಲ್ಲಿ ಪೋಸ್ಟ್​ ಹಂಚಿಕೊಂಡಿದ್ದಾರೆ. ಆದ್ದರಿಂದ ಇವರ ಬಗ್ಗೆ ಮಾತನಾಡಿದವರೆಲ್ಲಾ ಈಗ ಸುಸ್ತಾಗಿದ್ದಾರೆ!

47
ನಜರ್​ ಇಮೋಜಿ

ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯ ಬಯೋದಲ್ಲಿ ನಜರ್‌ ಇಮೋಜಿ ಬಳಸುವ ಮೂಲಕ ಎಲ್ಲರನ್ನೂ ಬೇಸ್ತು ಬೀಳಿಸಿದೆ ಜೋಡಿ. ಅಷ್ಟಕ್ಕೂ ಇದೇ 23 ರಂದು ಇವರಿಬ್ಬರ ಮದುವೆ ಆಗಬೇಕಿತ್ತು. ಆದರೆ ಸ್ಮೃತಿ ತಂದೆ ಶ್ರೀನಿವಾಸ್‌ ಅವರಿಗೆ ಹೃದಯಘಾತವಾದ ಹಿನ್ನಲೆಯಲ್ಲಿ ವಿವಾಹ ಪೋಸ್ಟ್​ಪೋನ್​ ಆಗಿದೆ. ಆದರೆ ಈ ಮಧ್ಯೆಯೇ ಪಲಾಶ್‌ ಅವರ ವೈಯಕ್ತಿಕ ಜೀವನದ ಕುರಿತು ಗಾಳಿ ಸುದ್ದಿ ಹರಿದಾಡುತ್ತಿವೆ.

57
ದುಷ್ಟರ ಕಣ್ಣು

ಇದೀಗ ಹೀಗೆಲ್ಲಾ ಮಾತನಾಡುವವರ ಕಣ್ಣು (ಒಂದರ್ಥದಲ್ಲಿ ಹೇಳುವುದಾದರೆ ದುಷ್ಟರ ಕಣ್ಣು) ಬೀಳದಿರಲಿ ಎನ್ನುವಂತೆ ಪೋಸ್ಟ್​ ಮಾಡುವ ಮೂಲಕ, ಸೆಲೆಬ್ರಿಟಿಗಳ ವಿಚಿತ್ರ ಜೀವನದ ಬಗ್ಗೆ ಮಾತನಾಡುವ ಮೊದಲು ನೂರು ಬಾರಿ ಯೋಚಿಸಿ ಎಂದು ಸೂಚಿಸಿರುವಂತಿದೆ.

67
ಮೇರಿ ಡಿಕೋಸ್ಟಾ ಪ್ರತಿಕ್ರಿಯೆ

ಇದಕ್ಕೂ ಮುನ್ನ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಮತ್ತು ಪಲಾಶ್​ ಸಂಬಂಧದ ಕುರಿತು ವೈರಲ್ ಆಗುತ್ತಿರುವ ಚಾಟಿಂಗ್ ಸ್ಕ್ರೀನ್‌ಶಾಟ್‌ಗಳ ಬಗ್ಗೆ ಮೇರಿ ಡಿಕೋಸ್ಟಾ ಪ್ರತಿಕ್ರಿಯಿಸಿದ್ದರು. ನಾನು ಪಲಾಶ್ ಮುಚ್ಚಲ್ ಅವರನ್ನು ವೈಯಕ್ತಿಕವಾಗಿ ಎಂದಿಗೂ ಭೇಟಿಯಾಗಿಲ್ಲ ಮತ್ತು ಅವರೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ ಎಂದು ಮೇರಿ ಸ್ಪಷ್ಟಪಡಿಸಿದ್ದಾರೆ. ತನಗೆ ಕ್ರಿಕೆಟ್ ಮತ್ತು ಸ್ಮೃತಿ ಮಂಧನಾ ಎಂದರೆ ತುಂಬಾ ಅಭಿಮಾನ, ಅದಕ್ಕಾಗಿಯೇ ಜನರಿಗೆ ಸತ್ಯ ತಿಳಿಯಲಿ ಎಂಬ ಉದ್ದೇಶದಿಂದ ಆ ಚಾಟ್‌ಗಳನ್ನು ಬಹಿರಂಗಪಡಿಸಿದ್ದೇನೆ ಎಂದು ಅವರು ಹೇಳಿದ್ದರು.

77
ನಾನು ಆಕೆಯಲ್ಲ

ಸೋಷಿಯಲ್ ಮೀಡಿಯಾದಲ್ಲಿ ಪ್ರಚಾರವಾಗುತ್ತಿರುವಂತೆ ತಾನು ಕೊರಿಯೋಗ್ರಾಫರ್ ಅಲ್ಲ ಎಂದು ಮೇರಿ ಸ್ಪಷ್ಟಪಡಿಸಿದ್ದಾರೆ. "ಅವನು ಮೋಸ ಮಾಡಿದ್ದಾನೆ ಎನ್ನಲಾದ ಕೊರಿಯೋಗ್ರಾಫರ್ ನಾನಲ್ಲ. ಈ ವಿಷಯ ಹೊರಬಂದ ನಂತರ ನನಗೆ ಇಷ್ಟೊಂದು ವಿರೋಧ ವ್ಯಕ್ತವಾಗುತ್ತದೆ ಎಂದು ನಾನು ಊಹಿಸಿರಲಿಲ್ಲ. ಅದಕ್ಕಾಗಿಯೇ ನನ್ನ ಸೋಶಿಯಲ್ ಮೀಡಿಯಾ ಖಾತೆಯನ್ನು ಪ್ರೈವೇಟ್‌ನಲ್ಲಿ ಇಡಬೇಕಾಯಿತು" ಎಂದು ಅವರು ನೋವು ತೋಡಿಕೊಂಡಿದ್ದರು.

Read more Photos on
click me!

Recommended Stories