ಮಕ್ಕಳನ್ನು ಬೆಳೆಸೋದು ಹೇಗೆ? ಬಾಲಿವುಡ್ ನಟ, ನಟಿಯರು ಹೇಳ್ತಾರೆ ಕೇಳಿ!

Published : May 01, 2024, 06:08 PM IST

ಬಾಲಿವುಡ್ ಸೆಲೆಬ್ರಿಟಿಗಳು ತಮ್ಮ ಮಕ್ಕಳನ್ನು ಹೇಗೆ ಬೆಳೆಸುತ್ತಿರಬಹುದು ಎಂದು ನೀವು ಯೋಚನೆ ಮಾಡ್ತಿರಬಹುದು ಅಲ್ವಾ? ಇಲ್ಲಿದೆ ಕೆಲವು ಬಾಲಿವುಡ್ ಸೆಲೆಬ್ರಿಟಿಗಳ ಪೇರೆಂಟಿಂಗ್ ಟಿಪ್ಸ್.   

PREV
110
ಮಕ್ಕಳನ್ನು ಬೆಳೆಸೋದು ಹೇಗೆ? ಬಾಲಿವುಡ್ ನಟ, ನಟಿಯರು ಹೇಳ್ತಾರೆ ಕೇಳಿ!

ಬಾಲಿವುಡ್ ಸೆಲೆಬ್ರಿಟಿಗಳಿಂದ (bollywood celebreties) ನೀವೂ ಸಹ ಪೇರೆಂಟಿಗ್ ಟಿಪ್ಸ್ ತಿಳಿಯಿರಿ. ಈ ತಾರೆಯರು ಮಕ್ಕಳನ್ನು ಬೆಳೆಸುವುದರ ಬಗ್ಗೆ ವೈಯಕ್ತಿಕ ಸಲಹೆಗಳನ್ನು ಹಂಚಿಕೊಂಡಿದ್ದಾರೆ. ಅದು ಕುಟುಂಬ ಜೀವನದೊಂದಿಗೆ, ಮಕ್ಕಳ ಸರ್ವತೋಮುಕಖ ಅಭಿವೃಧ್ದಿಗೆ (Integral Progress) ಸಹಾಯ ಮಾಡುತ್ತದೆ. ಶಾರುಖ್, ಐಶ್ವರ್ಯ ರೈ, ಶಿಲ್ಪಾ ಶೆಟ್ಟಿ ಪೇರೆಂಟಿಂಗ್ ಬಗ್ಗೆ ಏನು ಹೇಳಿದ್ದಾರೆ ನೋಡೋಣ. 
 

210

ಕರೀನಾ ಕಪೂರ್ (Kareena Kapoor) ತಮ್ಮ ಮಕ್ಕಳ ಜೊತೆಗೆ ಗುಣಮಟ್ಟದ ಸಮಯವನ್ನು ಕಳೆಯೋದನ್ನು ಇಷ್ಟ ಪಡುತ್ತಾರೆ. ಇದರಿಂದ ಮಕ್ಕಳ ಜೊತೆ ಆಳವಾದ ಬಾಂಧವ್ಯ ಬೆಳೆಯೋದಕ್ಕೆ ಸಾಧ್ಯ ಎನ್ನುವ ನಂಬಿಕೆ ಕರೀನಾ ಅವ್ರದ್ದು. 
 

310

ಶಾರುಖ್ ಖಾನ್ (Sharukh Khan) ಸಕಾರಾತ್ಮಕ ಅಪ್ರೋಚ್ ಮಾಡೋದು ಹೇಗೆ ಎಂಬುದನ್ನು ಒತ್ತಿ ಹೇಳುತ್ತಾರೆ, ತಮ್ಮ ಮಕ್ಕಳಿಗೆ ತಮ್ಮ ಯಶಸ್ಸನ್ನು ಸ್ವೀಕರಿಸಲು ಮತ್ತು ಅವರ ತಪ್ಪುಗಳಿಂದ ಕಲಿಯಲು ಉತ್ತೇಜಿಸುತ್ತಾರೆ. ಇದರಿಂದ ಮಕ್ಕಳ ವ್ಯಕ್ತಿತ್ವ ಬೆಳವಣಿಗೆ ಸುಲಭವಾಗುತ್ತದೆ.
 

410

ಶಿಲ್ಪಾ ಶೆಟ್ಟಿ (Shilpa Shetty) ಆರೋಗ್ಯಕ್ಕೆ ಆದ್ಯತೆ ನೀಡುತ್ತಾರೆ, ಮೋಜಿನ ದೈಹಿಕ ಚಟುವಟಿಕೆಗಳು ಮತ್ತು ಪೌಷ್ಟಿಕ ಆಹಾರವನ್ನು ದೈನಂದಿನ ಕುಟುಂಬ ಜೀವನದ ಭಾವೆಂದು ಭಾವಿಸುತ್ತಾರೆ. ಯೋಗ ಮೊದಲಾದ ಆರೋಗ್ಯಕರ ಚಟುವಟಿಕೆಗಳನ್ನು ಮಕ್ಕಳಿಗೆ ಹೇಳಿ ಕೊಡಲು ಒತ್ತು ನೀಡುತ್ತಾರೆ.  

510

ಐಶ್ವರ್ಯಾ ರೈ ಬಚ್ಚನ್ (Aishwarya Rai Bachchan) ಮುಕ್ತ ಸಂವಹನದ (Open Communication) ಮಹತ್ವವನ್ನು ಒತ್ತಿ ಹೇಳುತ್ತಾರೆ, ತಮ್ಮ ಮಗಳ ಜೊತೆ ಮುಕ್ತವಾಗಿ ಮಾತನಾಡುತ್ತಾರೆ. ಇದರಿಂದ ಅವರ ವಯಕ್ತಿಗೆ ಏಳಿಗೆಗೆ ನೆರವಾಗುತ್ತದೆ ಎಂದು ಐಶ್ವರ್ಯ ನಂಬಿಕೆ. 

610

ಕಾಜೋಲ್ (Kajol) ತನ್ನ ಮಕ್ಕಳನ್ನು ಚಿತ್ರಕಲೆ, ಸಂಗೀತ ಅಥವಾ ನೃತ್ಯದ ಮೂಲಕ ತಮ್ಮ ಸೃಜನಶೀಲ ಗುಣಗಳನ್ನು ಅನ್ವೇಷಿಸಲು ಪ್ರೋತ್ಸಾಹಿಸುತ್ತಾರೆ, ಸಾಧನೆ ಮತ್ತು ಅಭಿವ್ಯಕ್ತಿಯ ಪ್ರಜ್ಞೆಯನ್ನು ಬೆಳೆಸುವುದರ ಕಡೆಗೆ  ಪ್ರಾಮುಖ್ಯತೆ ನೀಡುತ್ತಾರೆ.
 

710

ಅಮೀರ್ ಖಾನ್ (Aamir Khan) ತಮ್ಮ ಮಕ್ಕಳೊಂದಿಗೆ ಹೊಸ ವಿಷಯಗಳನ್ನು ಕಲಿಯಲು ಇಷ್ಟಪಡುತ್ತಾರೆ, ವಿಜ್ಞಾನ ಪ್ರಯೋಗಗಳಿಂದ ಇತಿಹಾಸದವರೆಗೆ, ಶಿಕ್ಷಣವನ್ನು ಒಂದು ಕೆಲಸಕ್ಕಿಂತ ಮೋಜಿನ, ಬಂಧದ ಚಟುವಟಿಕೆಯನ್ನಾಗಿ ಮಾಡುತ್ತಾರೆ. 
 

810

ಪ್ರಿಯಾಂಕಾ ಚೋಪ್ರಾ (Priyanka Chopra ) ತನ್ನ ಮಗು ತಮ್ಮ ಸಾಂಸ್ಕೃತಿಕ ಪರಂಪರೆಯೊಂದಿಗೆ (Culturan Heritage) ಸಂಪರ್ಕ ಹೊಂದುವಂತೆ ನೋಡಿಕೊಳ್ಳುತ್ತಿದ್ದಾರೆ, ಸಾಂಪ್ರದಾಯಿಕ ಹಬ್ಬಗಳನ್ನು ಆಚರಿಸುವುದು ಮತ್ತು ತನ್ನ ಮಾತೃ ಭಾಷೆ ಕಲಿಸುವ ಮೂಲಕ ತಮ್ಮ ಮೂಲವನ್ನು ಮರೆಯದಂತೆ ನೋಡಿಕೊಳ್ಳುತ್ತಾರೆ. 

910

ಮಾಧುರಿ ದೀಕ್ಷಿತ್ (Madhuri Dixit) ತಂತ್ರಜ್ಞಾನದ ಬಳಕೆಯ ಸುತ್ತ ಸ್ಪಷ್ಟ ಬಾರ್ಡರ್ ನಿಗದಿಪಡಿಸಿದ್ದಾರೆ, ಮಕ್ಕಳು ಟೆಕ್ನಾಲಜಿಯನ್ನು ಬಿಟ್ಟು ಹೆಚ್ಚು ಸಕ್ರಿಯ, ಇಮೇಜಿನರಿ ಆಟವನ್ನು ಆಡುವಲ್ಲಿ ಪ್ರೋತ್ಸಾಹ ನೀಡುತ್ತಾರೆ, ಇದು ಮಕ್ಕಳ ಬೆಳವಣಿಗೆಗೆ ನಿರ್ಣಾಯಕ ಎಂದು ಅವರು ನಂಬಿದ್ದಾರೆ.. 

1010

ಅನುಷ್ಕಾ ಶರ್ಮಾ (Anushka Sharma) ತಮ್ಮ ಮಕ್ಕಳಿಗೆ ಸ್ವಾವಲಂಬನೆಯ ಮಹತ್ವವನ್ನು (Significance of Self Empowerment) ಕಲಿಸುತ್ತಾರೆ, ಹೊಸ ಕಾರ್ಯಗಳನ್ನು ಸ್ವತಂತ್ರವಾಗಿ ಪ್ರಯತ್ನಿಸಲು ಪ್ರೋತ್ಸಾಹಿಸುತ್ತಾರೆ, ಆದರೆ ಅವರಿಗೆ ಬೆಂಬಲದ ಅಗತ್ಯವಿದ್ದಾಗ ಖಂಡಿತಾ ಬೆಂಬಲಿಸುತ್ತೇನೆ, ಎನ್ನುತ್ತಾರೆ. 
 

Read more Photos on
click me!

Recommended Stories