ಲೂಬ್ರಿಕೆಂಟ್ ಆಯ್ಕೆ ಮಾಡಲು ಸರಿಯಾದ ಮಾರ್ಗ ಯಾವುದು?: ಸರಿಯಾದ ಮತ್ತು ಸುರಕ್ಷಿತ ಲೂಬ್ರಿಕೆಂಟ್ ಆಯ್ಕೆ ಮಾಡುವುದು ಬಹಳ ಮುಖ್ಯ. ಲ್ಯೂಬ್ರಿಕೆಂಟ್ ನಲ್ಲಿ ಪ್ಯಾರಾಬೆನ್ಗಳು, ಗ್ಲಿಸರಿನ್ ಮತ್ತು ಪೆಟ್ರೋಲಿಯಂನಂತಹ ಪದಾರ್ಥಗಳು ಇರಬಾರದು ಅನ್ನೋದು ನೆನಪಿರಲಿ. ಇದಲ್ಲದೆ, ಲೂಬ್ರಿಕೆಂಟ್ಗಳು ಲ್ಯಾಟೆಕ್ಸ್, ರಬ್ಬರ್ ಮತ್ತು ಪ್ಲಾಸ್ಟಿಕ್ ಸ್ನೇಹಿ ಆಗಿರಬೇಕು ಎಂಬುದು ನೆನಪಿನಲ್ಲಿಡಿ. ಅಲ್ಲದೆ, ನಿಮ್ಮ ಲೂಬ್ರಿಕೆಂಟ್ ನಿಂದಾಗಿ ಕಾಂಡೋಮ್ ಒಡೆಯಲು ಕಾರಣವಾಗಬಾರದು ಅದನ್ನು ನೆನಪಿಡಿ. ಅಲ್ಲದೆ, ನಿಮ್ಮ ಲೂಬ್ರಿಕೆಂಟ್ನ ಪಿಹೆಚ್ ಅನ್ನು ಪರಿಶೀಲಿಸಿ, ಏಕೆಂದರೆ ಇದು ಯೋನಿ ಪಿಹೆಚ್ ಮೇಲೆ ಪರಿಣಾಮ ಬೀರುವ ಮೂಲಕ ಸೋಂಕನ್ನು ಉಂಟುಮಾಡಬಹುದು.