ಗಂಡ-ಹೆಂಡ್ತಿ ಮಧ್ಯೆ ಜಗಳವಾದಾಗ ಪ್ಯಾಚಪ್ ಮಾಡ್ಕೊಳ್ಳೋದು ಹೇಗೆ?

First Published | Jan 18, 2024, 4:53 PM IST

ದಾಂಪತ್ಯ ಅಂದ್ಮೇಲೆ ಕಲಹ ಇದ್ದಿದ್ದೇ. ಅದರಲ್ಲೂ ಜಗಳಾನೇ ಆಡದ ದಂಪತಿಗಳಂತೂ ಇರೋಕೆ ಸಾಧ್ಯಾನೇ ಇಲ್ಲ ಬಿಡಿ. ಪತಿ-ಪತ್ನಿ ಒಂದಲ್ಲಾ ಒಂದು ವಿಚಾರಕ್ಕೆ ಜಗಳವಾಡ್ತಾನೇ ಇರ್ತಾರೆ. ಹೀಗೆ ಜಗಳವಾದಾಗ ಪ್ಯಾಚಪ್ ಮಾಡ್ಕೊಳ್ಳೋದು ಹೇಗೆ? ಇಲ್ಲಿದೆ ಮಾಹಿತಿ.

ದಾಂಪತ್ಯ ಅಂದ್ಮೇಲೆ ಕಲಹ ಇದ್ದಿದ್ದೇ. ಅದರಲ್ಲೂ ಜಗಳಾನೇ ಆಡದ ದಂಪತಿಗಳಂತೂ ಇರೋಕೆ ಸಾಧ್ಯಾನೇ ಇಲ್ಲ ಬಿಡಿ. ಎಲ್ಲಾ ಮನೆಯಲ್ಲೂ ಪತಿ-ಪತ್ನಿ ಒಂದಲ್ಲಾ ಒಂದು ವಿಚಾರಕ್ಕೆ ಜಗಳವಾಡ್ತಾನೇ ಇರ್ತಾರೆ. ಆದ್ರೆ ಕೆಲವೊಮ್ಮೆ ಈ ವಿಚಾರ ವಿಪರೀತಕ್ಕೆ ಹೋಗಿ ಇಬ್ಬರ ಮನೆಯಲ್ಲೂ ಜಗಳಕ್ಕೆ ಕಾರಣವಾಗೋದು ಇದೆ. 

ಗಂಡ-ಹೆಂಡತಿ ನಡುವಿನ ಜಗಳ ಅತ್ತೆ ಮನೆ, ತಾಯಿ ಮನೆಗೂ ತಲುಪಿ, ಕೆಲವೊಮ್ಮೆ ಡಿವೋರ್ಸ್‌ನಲ್ಲೂ ಕೊನೆಗೊಳ್ಳುತ್ತದೆ. ಹೀಗಾಗಿ ಪತಿ-ಪತ್ನಿಯ ಮಧ್ಯೆ ಜಗಳವಾದಾಗ ಇದನ್ನು ಬಗೆಹರಿಸಿ ಕೂಡಲೇ ಪ್ಯಾಚಪ್‌ ಮಾಡಿಕೊಳ್ಳುವುದು ಮುಖ್ಯ. ಹೀಗೆ ಮಾಡದಿದ್ದಾಗ ದಾಂಪತ್ಯ ಜೀವನವೇ ಹಾಳಾಗಬಹುದು. ಹಾಗಿದ್ರೆ ದಾಂಪತ್ಯದ ಜಗಳ ಬಗೆಹರಿಸಿಕೊಳ್ಳೋದು ಹೇಗೆ?

Latest Videos


ರಾತ್ರಿಯಲ್ಲಿ ಒಟ್ಟಿಗೆ ಮಲಗುವುದನ್ನು ತಪ್ಪಿಸಬೇಡಿ
ದಂಪತಿಗಳು ಪ್ರತಿ ಬಾರಿ ಜಗಳವಾಡಿದ ನಂತರವೂ ಬೇರೆ ಬೇರೆಯಾಗಿ ಮಲಗುವ ಅಭ್ಯಾಸವನ್ನು ರೂಢಿಸಿಕೊಂಡಿರುತ್ತಾರೆ. ಇದು ಸಂಪೂರ್ಣವಾಗಿ ತಪ್ಪು. ಇದು ಇಬ್ಬರ ನಡುವಿನ ವೈಮನಸ್ಸನ್ನು ಇನ್ನಷ್ಟು ಹೆಚ್ಚು ಮಾಡುತ್ತದೆ. ಇಬ್ಬರ ನಡುವೆ ಎಷ್ಟೇ ಜಗಳವಾದರೂ ಅನ್ಯೋನ್ಯವಾಗಿರುವುದನ್ನು ತಪ್ಪಿಸಬಾರದು. ಅದರಲ್ಲೂ ರಾತ್ರಿಯಲ್ಲಿ ಯಾವತ್ತಿನಂತೆ ಅನ್ಯೋನ್ಯವಾಗಿರಬೇಕು. 

ಪರಸ್ಪರ ಮಾತನಾಡುವುದನ್ನು ನಿಲ್ಲಿಸಬೇಡಿ
ಪತಿ-ಪತ್ನಿಯರ ನಡುವೆ ಎಷ್ಟೇ ಜಗಳ ನಡೆದರೂ ಪರಸ್ಪರ ಮಾತನಾಡುವುದನ್ನು ನಿಲ್ಲಿಸಬೇಡಿ. ಇಲ್ಲದಿದ್ದರೆ ಇದರಿಂದ ಭಿನ್ನಾಭಿಪ್ರಾಯ ಮತ್ತಷ್ಟು ಹೆಚ್ಚಾಗುತ್ತದೆ. ಪ್ರಶ್ನೆಗಳು ಹೆಚ್ಚಾಗಿ ಗೊಂದಲ ಮೂಡುತ್ತದೆ. ಇಬ್ಬರ ನಡುವೆ ತಪ್ಪು ಅಭಿಪ್ರಾಯಗಳು ಸಹ ಹೆಚ್ಚಾಗಬಹುದು.

ಮನೆ ಬಿಟ್ಟು ಹೋಗುವ ಬೆದರಿಕೆ ಹಾಕಬೇಡಿ
ಜಗಳ ನಡೆದಾಗ ಸಾಮಾನ್ಯವಾಗಿ ಹೆಂಡ್ತೀರು ಸಿಟ್ಟಿಗೆದ್ದು ಥಟ್ಟಂತ ತವರು ಮನೆಗೆ ಹೋಗಿ ಬಿಡುತ್ತಾರೆ. ಹೀಗೆ ಮಾಡುವುದು ಇಬ್ಬರ ನಡುವಿನ ಸಂಬಂಧವನ್ನು ಮತ್ತಷ್ಟು ಹಾಳು ಮಾಡುತ್ತದೆ. ಪತಿ-ಪತ್ನಿಯ ನಡುವೆ ಜಗಳ ಎಷ್ಟೇ ಹೆಚ್ಚಾದರೂ ಮನೆ ಬಿಟ್ಟು ಹೋಗುತ್ತೇನೆ ಎಂದು ಬೆದರಿಕೆ ಹಾಕಲು ಹೋಗಬೇಡಿ. ಹಾಗೆ ಗಂಡ, ಹೆಂಡ್ತಿಯನ್ನು ಮನೆಯಿಂದ ಹೊರ ಹೋಗುವಂತೆ ಸಹ ಹೇಳಬಾರದು.

ತಾಯಿ ಮನೆಯಲ್ಲಿ ಜಗಳದ ಬಗ್ಗೆ ಹೇಳಬೇಡಿ
ಪತಿ-ಪತ್ನಿಯರ ನಡುವೆ ಏನೇ ಜಗಳ ನಡೆದರೂ ಅದನ್ನು ಕುಟುಂಬದವರಿಗೆ ಹೇಳಬಾರದು. ಅದು ತಾಯಿಯ ಅಥವಾ ಅತ್ತೆಯ ಮನೆಯಿರಲಿ ಗಂಡ-ಹೆಂಡತಿ ತಮ್ಮ ಸಮಸ್ಯೆಯನ್ನು ತಾವಾಗಿಯೇ ಬಗೆಹರಿಸಿಕೊಳ್ಳಬೇಕು. ಬದಲಿಗೆ ಎರಡೂ ಮನೆಯಲ್ಲಿ ಹೇಳಿದಾಗ ಸಮಸ್ಯೆ ಮತ್ತಷ್ಟು ಉಲ್ಬಣಗೊಳ್ಳುವ ಸಾಧ್ಯತೆಯೇ ಹೆಚ್ಚು.

ಒಟ್ಟಿಗೆ ಆಹಾರ ಸೇವಿಸಿ
ಪತಿ-ಪತ್ನಿಯ ನಡುವೆ ಎಷ್ಟೇ ಜಗಳವಾಗಿದ್ದರೂ ಇಬ್ಬರೂ ಜೊತೆಯಲ್ಲಿಯೇ ಊಟ ಮಾಡಬೇಕು. ಇದು ಜೊತೆಯಲ್ಲೇ ಊಟ ಮಾಡುತ್ತಾ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ನೆರವಾಗುತ್ತದೆ. ಮಾತ್ರವಲ್ಲ, ಇಬ್ಬರ ನಡುವಿನ ಅನ್ಯೋನ್ಯತೆಯನ್ನ ಹೆಚ್ಚಿಸುತ್ತದೆ

ಕ್ಷಮಿಸಿ ಎಂದು ಹೇಳಲು ಹಿಂಜರಿಕೆ ಬೇಡ
ಕ್ಷಮಿಸಿ ಬಹಳ ಚಿಕ್ಕ ಪದ. ಆದರೆ ಇದನ್ನು ಬಳಸಲು ಯಾವಾಗಲೂ ಇಗೋ ಅಡ್ಡ ಬರುತ್ತದೆ. ಆದರೆ ಪತಿ-ಪತ್ನಿಯರ ನಡುವಿನ ಜಗಳವನ್ನು ಕಡಿಮೆಗೊಳಿಸಲು ಒಬ್ಬರಿಗೊಬ್ಬರು ಕ್ಷಮಿಸಿ ಎಂದು ಹೇಳುವುದು ತುಂಬಾ ಮುಖ್ಯ. ಇದು ಅತಿ ಕಡಿಮೆ ಸಮಯದಲ್ಲಿ ಇಬ್ಬರ ನಡುವಿನ ಜಗಳವನ್ನು ಕಡಿಮೆ ಮಾಡುತ್ತದೆ.

click me!