ಹೆಂಡ್ತಿನ ಕಂಟ್ರೋಲಲ್ಲಿ ಇಡಲು ಹೋಗಿ ಡಿವೋರ್ಸ್‌ ಆಯ್ತಾ: ಸಮಂತಾ ಪೋಸ್ಟ್‌ ಹೇಳ್ತಿರೋದೇನು?

Published : Jan 18, 2024, 01:12 PM IST

ಟಾಲಿವುಡ್ ನಟಿ ಸಮಂತಾ ರುತ್ ಪ್ರಭು ಹಾಗೂ ನಟ ನಾಗಚೈತನ್ಯ ವಿವಾಹ ವಿಚ್ಛೇದನವಾಗಿ ಎರಡೂ ವರ್ಷಗಳೇ ಕಳೆದಿವೆ.  ಆದರೂ ಈ ಬ್ಯೂಟಿಫುಲ್ ಕಪಲ್ ವಿಚ್ಛೇದನ, ಮದುವೆ ಹಾಗೂ ಅವರ ಲವ್‌ ಸ್ಟೋರಿ  ಆಗಾಗ ಮುನ್ನೆಲೆಗೆ ಬರುತ್ತಲೇ ಇರುತ್ತದೆ. 

PREV
110
ಹೆಂಡ್ತಿನ ಕಂಟ್ರೋಲಲ್ಲಿ ಇಡಲು ಹೋಗಿ ಡಿವೋರ್ಸ್‌ ಆಯ್ತಾ: ಸಮಂತಾ ಪೋಸ್ಟ್‌ ಹೇಳ್ತಿರೋದೇನು?

ಪ್ರೀತಿಸಿ ಮದುವೆಯಾಗಿದ್ದ ಈ ಜೋಡಿಯ ವಿಚ್ಛೇದನಕ್ಕೆ ಕಾರಣವಾಗಿದ್ದು ಏನು ಎಂಬುದು ಸ್ಪಷ್ಟವಾಗಿ ಈ ಜೋಡಿಯ ಹೊರತು ಬೇರಾರಿಗೂ ಗೊತ್ತಿಲ್ಲ. ಈ ಮಧ್ಯೆ ಸಮಂತಾ ರುತ್ ಪ್ರಭು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಕುತೂಹಲ ಕೆರಳಿಸುವ ಒಳಾರ್ಥವಿರುವ ಪೋಸ್ಟೊಂದನ್ನು ಹಾಕಿದ್ದು, ಇದು ಅವರ ಜೀವನದ ಬಗ್ಗೆ ನೆಟ್ಟಿಗರು ಚರ್ಚೆ ಮಾಡುವಂತೆ ಮಾಡಿದೆ. 

210

ಸಮಂತಾ ಹಾಗೂ ನಾಗಚೈತನ್ಯ ಅವರು ತೆಲುಗಿನ 'ಯೆ ಮಾಯ ಛೇಸ್ಯಾವೇ' ಸಿನಿಮಾದಲ್ಲಿ ನಟಿಸುವಾಗ ಪರಸ್ಪರ ಪ್ರೀತಿಯಲ್ಲಿ ಬಿದ್ದಿದ್ದರು, ಬಳಿಕ 2017ರಲ್ಲಿ ಮದುವೆಯಾದರು.

310

ಮದುವೆಯಾದ ಕೆಲ ಸಮಯದಲ್ಲಿ ಈ ದಂಪತಿಯ ದಾಂಪತ್ಯ ಬದುಕಿನಲ್ಲಿ ವಿರಸ ಮೂಡಿದ್ದು, ಕೇವಲ 4 ವರ್ಷದಲ್ಲಿ ಈ ಸಾಂಸಾರಿಕ ಬಂಧನದಿಂದ ದೂರಾಗಲು ಬಯಸಿದರು.  ಆದರೆ ಇವರ ವಿಚ್ಛೇದನಕ್ಕೆ ಕಾರಣವಾದ ವಿಚಾರದ ಬಗ್ಗೆ ಆಗಾಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಲೇ ಇರುತ್ತದೆ. 

410

ಪ್ರಸ್ತುತ ಸಿನಿಮಾದಿಂದ ಬ್ರೇಕ್ ತೆಗೆದುಕೊಂಡು ವಿಶ್ರಮಿಸುತ್ತಿರುವ ಸಮಂತಾ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಇದ್ದು,  ತಮ್ಮ ಅಭಿಮಾನಿಗಳ ಬಳಿ ತಮ್ಮ ಬ್ರಾಡ್‌ಕಾಸ್ಟ್ ಚಾನೆಲ್ ಮೂಲಕ ಆಗಾಗ ಮಾತುಕತೆ ನಡೆಸುತ್ತಿರುತ್ತಾರೆ. 

510
Samantha

ಇತ್ತೀಚೆಗೆ ಅವರು ತಮ್ಮ ಅಭಿಮಾನಿಯೊಬ್ಬರ ಬಳಿ ಸಾಮಾಜಿಕ ಜಾಲತಾಣ ರೆಡ್ಡಿಟ್‌ನಲ್ಲಿ ಸಂವಹನ ನಡೆಸಿದ್ದಾರೆ. ಈ ವೇಳೆ ಸಮಂತಾ ಅವರು ಅಭಿಮಾನಿಗಳಿಗೆ , 'ತಾವು ಜೀವನದಲ್ಲಿ ಕಲಿತ ದೊಡ್ಡ ಜೀವನ ಪಾಠ ಯಾವುದು ಹಾಗೂ ಅದು ಹೇಗೆ ಅವರ ವೈಯಕ್ತಿಕ ಬೆಳವಣಿಗೆಗೆ ಸಹಾಯವಾಯ್ತು ಎಂಬ ಬಗ್ಗೆ ಕೇಳಿದ್ದಲ್ಲದೇ ತಮ್ಮ ಜೀವನದ ಬಗ್ಗೆ ಬರೆದುಕೊಂಡಿದ್ದಾರೆ. 

610

ಇದೇ ವೇಳೆ ತನ್ನ ಆಯ್ಕೆಗಳ ಮೇಲೆ ತನ್ನ ಸಂಗಾತಿಯ ಪ್ರಭಾವ ಇತ್ತು ಎಂಬುದನ್ನು ಸಮಂತಾ ಹೇಳಿದ್ದು,  ನಿರಂತರ ಸಂಗಾತಿಯ ಪ್ರಭಾವದಿಂದಾಗಿ  ತನ್ನ ಇಷ್ಟ ಯಾವುದು ತನಗೆ ಇಷ್ಟವಿಲ್ಲದ್ದು ಯಾವುದು ಎಂಬ ಬಗ್ಗೆಯೂ ತನಗೆ ಗೊತ್ತಿಲ್ಲದೇ ಹೋಗಿತ್ತು ಎಂದಿದ್ದಾರೆ. 

710

ಆದರೆ ಇದೇ ಸಮಯದಲ್ಲಿ ತಾನು ಬದುಕಿನಲ್ಲಿ ತುಂಬಾ ಅಮೂಲ್ಯವಾದ ಪಾಠ ಕಲಿತೆ. ಕಷ್ಟದ ಸಮಯದಲ್ಲೇ ಬದುಕಿನಲ್ಲಿ ಒಳ್ಳೆಯ ಪಾಠ ತಿಳಿಯಿತು. ಇದು ನನ್ನ ವೈಯಕ್ತಿಕ ಬೆಳವಣಿಗೆಗೆ ಸಹಾಯವಾಯ್ತು ಎಂದು ಸಮಂತಾ ಹೇಳಿದ್ದಾರೆ. 

810

ಸಮಂತಾರ ಈ ಬರಹ ರೆಡ್ಡಿಟ್‌ನಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು  ಸಮಂತಾ ಅವರು ತಮ್ಮ ಮಾಜಿ ಪತಿ ನಾಗಚೈತನ್ಯ ಬಗ್ಗೆ ಮಾತನಾಡುತ್ತಿರಬೇಕು ಎಂದು ಊಹೆ ಮಾಡುತ್ತಿದ್ದಾರೆ.  ಈಕೆ ತನ್ನ ಮಾಜಿ ಪತಿ ಚೈ ಬಗ್ಗೆಯೇ ಇಲ್ಲಿ ಹೇಳಿಕೊಂಡಿರುವುದು. ಅವಳು ತಾನು ಯಾರು ತಾನು ಏನು ಎಂದು ತಿಳಿದುಕೊಳ್ಳಲು ಮದುವೆಯಿಂದ ಹೊರ ನಡೆದಳು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.

910

ಅಯ್ಯೋ  ನೀವು ಅವರ ಒಂದೇ ಒಂದು ಸಂದರ್ಶನವನ್ನೂ ವೀಕ್ಷಿಸಿದರು ಸಾಕು ಅವರೆಷ್ಟು ಚಲನಶೀಲ ಎಂಬುದು ತಿಳಿಯುತ್ತದೆ. ಆತ ನಿರಂತರವಾಗಿ ಆಕೆಯನ್ನು ಕೆಳಗಿಡಲು ಬಯಸಿದ್ದ. ಅವನಿಗೆ ಸಂಬಂಧದಲ್ಲಿ ಅಸುರಕ್ಷತೆಯ ಭಾವವಿತ್ತು. ಏಕೆಂದರೆ ಅವನ ಕುಟುಂಬದವರು ಕೂಡ ತಮ್ಮ ನೆಚ್ಚಿನ ನಟಿಯ ವಿಚಾರವಾಗಿ ಮಾತನಾಡುವಾಗ ಆಕೆಯ ಬಗ್ಗೆ ಮಾತನಾಡುತ್ತಿದ್ದರು ಎಂದು ಕಾಮೆಂಟ್ ಮಾಡಿದ್ದಾರೆ. 

1010

ಇನ್ನು ಮದುವೆ ಮುರಿದು ಬಿದ್ದ ಆರಂಭದಲ್ಲಿ ತಾನೆಷ್ಟು ಡಿಪ್ರೆಶನ್‌ಗೆ ಒಳಗಾಗಿದೆ ಅದು ಹೇಗೆ ತನ್ನ ಮೇಲೆ ಪರಿಣಾಮ ಬೀರಿತ್ತು ಎಂಬುದನ್ನು ಹಿಂದೊಮ್ಮೆ ಸಮಂತಾ ರುತ್ ಪ್ರಭು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ನಾಗ ಚೈತನ್ಯ ಹಾಗೂ ತನ್ನ ವಿಚ್ಛೇದನದ ನಂತರ ನನ್ನ ಆರೋಗ್ಯ ಸಂಪೂರ್ಣ ಹದಗೆಟ್ಟಿತ್ತು. ಇದರಿಂದ ನನ್ನ ಕೆಲಸದ ಮೇಲೆಯೂ ಇದು ಪರಿಣಾಮ ಬೀರಿತ್ತು. ಕಳೆದ ಎರಡು ವರ್ಷಗಳಲ್ಲಿ ತಾನು ಅನುಭವಿಸಿದ ಕಷ್ಟಗಳ ಪರಿಣಾಮವನ್ನು ಸಮಂತಾ ಆ ಸಂದರ್ಶನದಲ್ಲಿ ತೆರೆದಿಟ್ಟಿದ್ದರು. 
 

Read more Photos on
click me!

Recommended Stories