ಇದೆಂಥಾ ಸಂಪ್ರದಾಯ … Virginity testಲ್ಲಿ ಫೇಲ್ ಆದ್ರೆ ವಧುವಿಗೆ ಅಗ್ನಿ ಪರೀಕ್ಷೆ!

First Published | Sep 3, 2022, 5:16 PM IST

ನಮ್ಮ ದೇಶ ಸಂಸ್ಕೃತಿ, ವಿಜ್ಞಾನ ಜೊತೆಗೆ ಜನರು ಎಷ್ಟೇ ಮುಂದುವರೆದರೂ ಇಂದಿಗೂ, ಮಹಿಳೆಯರು ಅನೇಕ ಕೆಟ್ಟ ಆಚರಣೆಗಳಿಂದ ನರಳುವಂತಹ ಸ್ಥಿತಿ ಇಂದಿಗೂ ನಡೆಯುತ್ತಿದೆ. ನಮ್ಮ ಸಮಾಜದಲ್ಲಿಯೇ ಹಲವೆಡೆ ಹುಡುಗಿಯರಿಗಾಗಿಯೇ ಹಲವಾರು ಕಟ್ಟುಪಾಡುಗಳಿವೆ. ರಾಜಸ್ಥಾನದಲ್ಲಿ ಇಂತಹ ಒಂದು ಸಂಪ್ರದಾಯಕ್ಕೆ ಹುಡುಗಿಯರು ಬಲಿಯಾಗುತ್ತಿದ್ದಾರೆ. ಇಲ್ಲಿ ಮದುವೆ ಮುನ್ನ ಹುಡುಗಿಯರು ಕನ್ಯತ್ವ ಪರೀಕ್ಷೆಗೆ (Virginity Test) ಒಳಗಾಗಬೇಕಾಗುತ್ತದೆ. ಅವಳು ಪರೀಕ್ಷೆಯಲ್ಲಿ ಫೇಲ್ ಆದರೆ, ಅವಳನ್ನು ಚಾರಿತ್ರ್ಯಹೀನಳೆಂದು ಶಿಕ್ಷಿಸಲಾಗುತ್ತದೆ.
 

ಮದುವೆ ಪ್ರತಿಯೊಬ್ಬರ ಜೀವನದ ಒಂದು ಭಾಗ. ಮದುವೆ ಬಗ್ಗೆ ಹುಡುಗಿಯರಿಗೆ ತುಂಬಾ ಉತ್ಸಾಹ ಇರುತ್ತೆ ನಿಜ. ಆದರೆ ಉತ್ಸಾಹಕ್ಕಿಂತ ಅವರ ಮನಸ್ಸಿನಲ್ಲಿ ಹೆಚ್ಚು ಭಯವಿರುತ್ತದೆ. ಕೆಲವೆಡೆ ಮಹಿಳೆಯರು ತಮ್ಮ ವರ್ಜಿನಿಟಿ (virginity) ಬಗ್ಗೆ ಹೆಚ್ಚು ಯೋಚಿಸುತ್ತಾರೆ. ಮೊದಲ ರಾತ್ರಿ, ಪತಿ ಈ ಬಗ್ಗೆ ಸಂಶಯಪಟ್ಟರೆ ಅಥವಾ ತನ್ನ ಕ್ಯಾರೆಕ್ಟರ್ ಬಗ್ಗೆ ಏನಾದರೂ ಕೆಟ್ಟದಾಗಿ ಹೇಳಿದರೆ ಎಂದು ಹೆದರುತ್ತಾರೆ. 

ಆದ್ರೆ ನಿಮಗೊಂದು ವಿಷ್ಯ ಗೊತ್ತಾ? ವರ್ಜಿನ್ ಆಗಿಲ್ಲದಿರೋದಕ್ಕೆ ಸೆಕ್ಸ್ ಒಂದೇ ಕಾರಣ ಅಲ್ಲ. ಹುಡುಗಿ ಜಂಪಿಂಗ್, ಸೈಕ್ಲಿಂಗ್, ಟ್ಯಾಂಪೂನ್ ಗಳನ್ನು ಬಳಸುತ್ತಿದ್ದರೆ, ಅಥವಾ ಇತರ ಅನೇಕ ಕಾರಣಗಳಿಂದಾಗಿ ಹುಡುಗಿಯರು ತಮ್ಮ ಕನ್ಯತ್ವ ಕಳೆದುಕೊಳ್ಳುತ್ತಾರೆ. ಆದರೆ ಕೆಲವು ಜನರು ಇನ್ನೂ ಕನ್ಯತ್ವದ ಬಗ್ಗೆ ಸಂಶಯಿಸುತ್ತಾ, ಅದರ ಪರೀಕ್ಷೆ ಮಾಡುತ್ತಾ, ಮಹಿಳೆಯರನ್ನು ಶಿಕ್ಷಿಸುತ್ತಾರೆ. ಅಂತಹ ಜನರು ರಾಜಸ್ಥಾನದ ಭಿಲ್ವಾರಾದಲ್ಲಿ ವಾಸಿಸುತ್ತಿದ್ದಾರೆ.
 

Tap to resize

ಇಲ್ಲಿ ವಧು ಕನ್ಯತ್ವ ಪರೀಕ್ಷೆ ನೀಡಬೇಕಾಗುತ್ತೆ

ರಾಜಸ್ಥಾನದ ಸಾನ್ಸಿ ಸಮಾಜದಲ್ಲಿ, ವಧುಗಳು ಕನ್ಯತ್ವ ಪರೀಕ್ಷೆಗೆ (virginity test) ಒಳಗಾಗಬೇಕಾಗುತ್ತದೆ. ಅವರು ಪರೀಕ್ಷೆಯಲ್ಲಿ ಅನುತ್ತೀರ್ಣರಾದರೆ, ಅವರ ಮೇಲೆ ಹಲ್ಲೆ ನಡೆಸಲಾಗುತ್ತದೆ ಮತ್ತು ದಂಡ ವಿಧಿಸಲಾಗುತ್ತದೆ. ಪರಿಶುದ್ಧತೆಯನ್ನು ಸಾಬೀತುಪಡಿಸಲು ಅವರು ಎರಡು ಅಗ್ನಿಪರೀಕ್ಷೆ ಎದುರಿಸಬೇಕಾಗುತ್ತೆ. ಕನ್ಯತ್ವ ಪರೀಕ್ಷೆಯನ್ನು ಕುಕ್ರಿ ಪ್ರಥ (kukri pratha) ಎಂದು ಕರೆಯಲಾಗುತ್ತದೆ. ವಧುವಾಗಿ ಬರುವ ಪ್ರತಿಯೊಬ್ಬ ಹುಡುಗಿಯೂ ಇದನ್ನು ಎದುರಿಸಬೇಕಾಗುತ್ತೆ.

ಹುಡುಗಿ ಬಿಳಿ ಶೀಟ್ ಮೇಲೆ ತನ್ನ ಪಾವಿತ್ರ್ಯತೆ ಸಾಬೀತುಪಡಿಸಬೇಕು

ಮದುವೆಯ ನಂತರ ಹುಡುಗಿ ಕೋಣೆ ಪ್ರವೇಶಿಸಿದಾಗ, ಅತ್ತೆ, ಅತ್ತಿಗೆ ಅವಳ ಬಳಿ ಪಿನ್ ಅಥವಾ ಕೆಂಪು ಬಣ್ಣವಿದೆಯೇ ಎಂದು ವಧುವನ್ನು ಪರೀಕ್ಷಿಸುತ್ತಾರೆ. ಇದರ ನಂತರ, ಕೋಣೆಯಲ್ಲಿ ಬಿಳಿ ಹಾಳೆಯನ್ನು (white sheet) ಹಾಕಲಾಗುತ್ತದೆ. ಬಳಿಕ ಇಬ್ಬರು ಸೆಕ್ಸ್ ಮಾಡಿದ ನಂತರ, ಹಾಳೆಯ ಮೇಲಿನ ರಕ್ತದ ಗುರುತನ್ನು ಸಮಾಜದ ಜನರಿಗೆ ತೋರಿಸಲಾಗುತ್ತದೆ. ಇದು ಹುಡುಗಿಯ ಪಾವಿತ್ರ್ಯತೆಯನ್ನು ಸಾಬೀತುಪಡಿಸುತ್ತದೆ. 

ಒಂದು ವೇಳೆ ಸೆಕ್ಸ್ ಮಾಡಿದ ಬಳಿಕ ಹಾಳೆಯ ಮೇಲೆ ರಕ್ತದ ಗುರುತುಗಳು ಕಂಡುಬರದಿದ್ದರೆ, ಪತಿಯು ತನ್ನ ಹೆಂಡತಿ ಚಾರಿತ್ರ್ಯಹೀನಳು ಎಂದು ಕೂಗುತ್ತಾನೆ. ಅತ್ತೆ-ಮಾವ ಹುಡುಗಿಯನ್ನು ಬೆತ್ತಲೆಯಾಗಿ ಕೂರಿಸಿ, ಸರಿಯಾಗಿ ಹೊಡೆದು ಅವಳ ಗೆಳೆಯನ ಹೆಸರನ್ನು ಕೇಳುತ್ತಾರೆ. ಮರುದಿನ, ಪಂಚಾಯತ್ ನಡೆಯುತ್ತದೆ.

ಪಾವಿತ್ರ್ಯತೆಯನ್ನು ಸಾಬೀತುಪಡಿಸದಿದ್ದರೆ, ಅಗ್ನಿಪರೀಕ್ಷೆ ನೀಡಬೇಕಾಗುತ್ತದೆ

ಬಳಿಕ ಹುಡುಗಿಯ ಕುಟುಂಬ ಸದಸ್ಯರನ್ನು ಕರೆಸಲಾಗುತ್ತದೆ ಮತ್ತು ಪಂಚ್ ಅವರ ಮೇಲೆ ಲಕ್ಷಾಂತರ ರೂಪಾಯಿಗಳ ದಂಡ ವಿಧಿಸುತ್ತಾನೆ. ದಂಡವನ್ನು ತಪ್ಪಿಸಲು ಹುಡುಗಿ ತನ್ನ ಪಾವಿತ್ರ್ಯತೆಯನ್ನು ಸಾಬೀತುಪಡಿಸಬೇಕು. ಅದಕ್ಕಾಗಿ ಅವರಿಗೆ ಎರಡು ಅವಕಾಶಗಳನ್ನು ನೀಡಲಾಗುತ್ತದೆ. 

ಮೊದಲ ಅಗ್ನಿಪರೀಕ್ಷೆಯಲ್ಲಿ, ಹುಡುಗಿಯನ್ನು ಕೊಳ ಅಥವಾ ನದಿಯಲ್ಲಿ ನಿಲ್ಲುವಂತೆ ಮಾಡಲಾಗುತ್ತದೆ. ಹಳ್ಳಿಯ ಒಬ್ಬ ವ್ಯಕ್ತಿಯು 100 ಹೆಜ್ಜೆ ನಡೆಯುತ್ತಾನೆ. ಅಲ್ಲಿಯವರೆಗೆ, ಹುಡುಗಿ ಉಸಿರು ಬಿಗಿಹಿಡಿದು ನಿಲ್ಲಬೇಕು. ಅವಳು ಅದನ್ನು ಮಾಡಲು ಸಾಧ್ಯವಾಗದಿದ್ದರೆ, ಅವಳು ಪವಿತ್ರವಲ್ಲ ಎಂದು ಘೋಷಿಸಲಾಗುತ್ತೆ. ಇದಕ್ಕಾಗಿ ಪೋಷಕರು ದಂಡ ಪಾವತಿಸಬೇಕು.

ಎರಡನೆಯ ಅಗ್ನಿಪರೀಕ್ಷೆಯಲ್ಲಿ ಪರಿಶುದ್ಧತೆಯನ್ನು ಸಾಬೀತುಪಡಿಸಲು, ವಧುವು ತನ್ನ ಕೈಯಲ್ಲಿ ಅರಳಿ ಎಲೆಯನ್ನು ಇಟ್ಟುಕೊಳ್ಳಬೇಕು ಮತ್ತು ಅದರ ಮೇಲೆ ಬಿಸಿ ತವಾವನ್ನು ಇರಿಸಬೇಕು. ಕೈ ಸುಟ್ಟರೆ, ಹುಡುಗಿ ಚಾರಿತ್ರ್ಯಹೀನಳಾಗಿದ್ದಾಳೆ ಎಂದರ್ಥ. ಇದಕ್ಕಾಗಿ ಆಕೆಯ ಮನೆಯವರು ನಿಗದಿತ ದಂಡವನ್ನು ಪಾವತಿಸಬೇಕಾಗುತ್ತದೆ. ಹುಡುಗಿ ಎರಡೂ ಪರೀಕ್ಷೆಗಳಲ್ಲಿ ಉತ್ತೀರ್ಣಳಾದರೂ, ಪೋಷಕರು ಅರ್ಧದಷ್ಟು ದಂಡ ಪಾವತಿಸಬೇಕಾಗುತ್ತದೆ ಎಂದು ಸಹ ಹೇಳಲಾಗುತ್ತದೆ.

Latest Videos

click me!