ಅವಳು ನಿಮಗೆ ಕ್ಲೀನ್ ಬೋಲ್ಡ್ ಆಗಿದ್ದು ಹೌದಾ? ಗೊತ್ತು ಮಾಡಿಕೊಳ್ಳೋದು ಹೇಗೆ?

First Published Sep 1, 2022, 6:27 PM IST

ಇತ್ತೀಚಿನ ದಿನಗಳಲ್ಲಿ ಹುಡುಗರು ಮತ್ತು ಹುಡುಗಿಯರು ಪರಸ್ಪರ ಆಕರ್ಷಣೆ, ಅಟ್ಯಾಚ್‌ಮೆಂಟ್ (Attachment) ಹೊಂದಿರುತ್ತಾರೆ. ಇದು ಮುಂದುವರೆದಂತೆ ಅದಕ್ಕೆ ಪ್ರೀತಿ (Love) ಎಂದು ಹೆಸರಿಡುತ್ತಾರೆ. ಆದರೆ ಪ್ರೀತಿಸುವ ಹುಡುಗಿ ನಿಜವಾಗಿಯೂ ನಿಮ್ಮನ್ನು ಮದುವೆಯಾಗಲು ಸಿದ್ಧರಿದ್ದಾರೆಯೇ? ಅದನ್ನು ತಿಳಿದುಕೊಳ್ಳೋದು ಹೇಗೆ? ಕೆಲವೊಂದು ಸಂಬಂಧಗಳು (Relationship) ಪ್ರೀತಿಗೆ ಮಾತ್ರ ಸೀಮಿತವಾಗಿರುತ್ತವೆ. ಮದುವೆ ವಿಷಯಕ್ಕೆ ಬಂದಾಗ ಹಲವರು ಹಿಂದೇಟು ಹಾಕುತ್ತಾರೆ. ಹಾಗಿದ್ರೆ ಅವರು ಮದುವೆಯಾಗಲು ರೆಡಿಯಾಗಿದ್ದಾರೆಯೆ ಎಂದು ತಿಳಿಯೋದು ಹೇಗೆ ನೋಡಿ. 
 

ಹುಡುಗ ಹುಡುಗಿ ನಡುವೆ ಹುಟ್ಟಿದ ಸ್ನೇಹ (Friendship), ಆಕರ್ಷಣೆ (Attraction) ಕಾಲ ಕಳೆಂದರೆ ಪ್ರೀತಿಯಾಗಿ ಬದಲಾಗಲು ಪ್ರಾರಂಭಿಸುತ್ತದೆ, ನಂತರ ಅವರು ತಮ್ಮ ಸಂಗಾತಿಯೊಂದಿಗೆ ಗಂಟು ಹಾಕುವ ಬಗ್ಗೆ ಯೋಚಿಸುತ್ತಾರೆ. ಕೆಲವು ಕಪಲ್ಸ್ ವರ್ಷಗಳ ಡೇಟಿಂಗ್ ನಂತರ ಪರಸ್ಪರ ವಿವಾಹವಾದದ್ದು ಇದೆ, ಇನ್ನೂ ಕೆಲವರು ಅನೇಕ ವರ್ಷಗಳ ಡೇಟಿಂಗ್ (dating) ನಂತರ ಬೇರ್ಪಟ್ಟದ್ದು ಇದೆ. ಯಾಕೆಂದರೆ ಅವರಿಗೆ ಸಂಗಾತಿಯೂ ಮದುವೆಗೆ (Marriage) ಯೋಗ್ಯತೆ ಉಳ್ಳವರು ಎಂದೆನಿಸಿರೋದಿಲ್ಲ

ಹಾಗಿದ್ರೆ ನಿಮ್ಮ ಸಂಗಾತಿ ನಿಜವಾಗಿಯೂ ನಿಮ್ಮನ್ನು ಮದುವೆಯಾಗಲು ರೆಡಿಯಾಗಿದ್ದಾಳ ಎಂದು ತಿಳಿದುಕೊಳ್ಳೋದು ಹೇಗೆ? ಮದುವೆಗಾಗಿ ಅವಳಿಗೆ ಪ್ರಪೋಸ್ ಮಾಡುವ ಮೊದಲು, ಅವಳು ಸಹ ನಿಮ್ಮನ್ನು ಮದುವೆಯಾಗಲು ಬಯಸುತ್ತಾಳೆಯೇ ಎಂದು ತಿಳಿಯಿರಿ. ಹುಡುಗಿಯ ಈ ನಡೆ ಅವಳು ಮದುವೆಯಾಗಲು ರೆಡಿಯಾಗಿದ್ದಾಳೆಯೇ ಎಂದು ತಿಳಿಸುತ್ತೆ. 

ಹುಡುಗಿ ಈ ರೀತಿಯಾಗಿ ಪ್ರೀತಿಸುತ್ತಾಳೆ

ಇಬ್ಬರು ವ್ಯಕ್ತಿಗಳು ಪರಸ್ಪರ ಪ್ರೀತಿಯಲ್ಲಿ ಬಿದ್ದಾಗ ಮತ್ತು ಪರಸ್ಪರ ಭವಿಷ್ಯದ ಬಗ್ಗೆ ಪ್ಲ್ಯಾನ್ ಮಾಡಲು ಪ್ರಾರಂಭಿಸಿದಾಗ ಸಂಬಂಧವು ವಿವಾಹದ ಹಂತವನ್ನು ತಲುಪುತ್ತದೆ. ಹುಡುಗಿ ನಿಮ್ಮನ್ನು ಮದುವೆಯಾಗಲು ಬಯಸುತ್ತಾಳೆಯೋ ಇಲ್ಲವೋ, ಅದು ನಿಮ್ಮ ಬಗ್ಗೆ ಅವಳ ಭಾವನೆಗಳಿಂದ ತಿಳಿಯಬಹುದು. ಅವಳು ನಿಮ್ಮನ್ನು ಪ್ರೀತಿಸುತ್ತಿದ್ದರೆ, ಅವಳು ಮದುವೆಯಾಗುವ ಕನಸು ಕಾಣುತ್ತಾಳೆ. ಆದ್ದರಿಂದ ಮದುವೆಗೆ ಪ್ರಪೋಸ್ ಮಾಡುವ ಮೊದಲು, ಹುಡುಗಿಯ ಹೃದಯವನ್ನು ತಿಳಿದುಕೊಳ್ಳಿ.

ಪರ್ಸನಲ್ ವಿಷ್ಯಗಳನ್ನು ಮಾತನಾಡಿದ್ರೆ

ಹುಡುಗಿ ನಿಮ್ಮೊಂದಿಗೆ ತನ್ನ ಭವಿಷ್ಯದ ಬಗ್ಗೆ ಯೋಚಿಸಲು ಪ್ರಾರಂಭಿಸಿದಾಗ, ಅವಳು ನಿಮ್ಮ ಮುಂದೆ ಓಪನ್ ಆಗಿ ಮಾತನಾಡಲು ಪ್ರಾರಂಭಿಸುತ್ತಾಳೆ. ಗರ್ಲ್ ಫ್ರೆಂಡ್ (Girl Friend) ತನ್ನ ಸಂಗಾತಿಗೆ ಅನೇಕ ವಿಷಯಗಳನ್ನು ಹೇಳುವುದಿಲ್ಲ, ಆದರೆ ಅವಳು ಹೆಂಡತಿಯಾಗುವ ಕನಸು ಕಂಡಾಗ, ಅವಳು ತನ್ನ ಕುಟುಂಬದ ಬಗ್ಗೆ ಒಳ್ಳೆಯದು ಮತ್ತು ಕೆಟ್ಟದ್ದನ್ನು ತನ್ನ ಸಂಗಾತಿಗೆ ಹೇಳುತ್ತಾಳೆ. ಅಲ್ಲದೇ ತನ್ನ ವೈಯಕ್ತಿಕ ಜೀವನ (Life), ಸಂಬಳ (Payroll), ಕಚೇರಿಯಲ್ಲಿ ಮೇಲಧಿಕಾರಿಗಳು ಮತ್ತು ಸಹೋದ್ಯೋಗಿಗಳೊಂದಿಗಿನ ಚರ್ಚೆ ಬಗ್ಗೆ ನಿಮ್ಮೊಂದಿಗೆ ಹಂಚಿಕೊಳ್ಳಲು ಪ್ರಾರಂಭಿಸುತ್ತಾಳೆ.

ನಿಮ್ಮ ಕರಿಯರ್ ಬಗ್ಗೆ ಆಸಕ್ತಿ

ಹುಡುಗಿ ನಿಮ್ಮನ್ನು ಮದುವೆಯಾಗಲು ಬಯಸಿದರೆ, ಅವಳು ನಿಮ್ಮ ವೃತ್ತಿ ಜೀವನ (Career), ಉದ್ಯೋಗ ಮತ್ತು ಸಂಬಳದ ಬಗ್ಗೆ ಆಸಕ್ತಿ ವಹಿಸಲು ಪ್ರಾರಂಭಿಸುತ್ತಾಳೆ. ನೀವು ಕರಿಯರ್ ನಲ್ಲಿ ಬೆಳೆಯುವುದನ್ನು ನೋಡಲು ಅವಳು ಬಯಸುತ್ತಾಳೆ, ಅದಕ್ಕಾಗಿ ಅವಳು ನಿಮಗೆ ಸರಿಯಾದ ಸಲಹೆ ನೀಡುತ್ತಾಳೆ. ದುಂದುವೆಚ್ಚ ಮಾಡದಂತೆ ತಡೆಯುತ್ತಾಳೆ. ನೀವು ಅವರ ಜೀವನ ಸಂಗಾತಿಯಾಗಬಹುದು ಎಂದು ಹುಡುಗಿ ನೆನಪಿನಲ್ಲಿಟ್ಟುಕೊಳ್ಳುತ್ತಾಳೆ, ಆದ್ದರಿಂದ ಅವಳು ನಿಮ್ಮ ವೃತ್ತಿಜೀವನ ಮತ್ತು ಹಣದ ಬಗ್ಗೆ ಹೆಂಡತಿಯಂತೆ ಕಾಳಸಿ ವಹಿಸಲು ಪ್ರಾರಂಭಿಸುತ್ತಾಳೆ.

ಕುಟುಂಬ ಭೇಟಿಯಾಗುವ ಬಯಕೆ

ನಿಮ್ಮ ಗೆಳತಿ ಇನ್ನೂ ನಿಮ್ಮ ಕುಟುಂಬವನ್ನು ಭೇಟಿಯಾಗದಿದ್ದರೆ, ಅವಳು ನಿಮ್ಮ ಪೋಷಕರು ಮತ್ತು ನಿಮ್ಮ ಒಡ ಹುಟ್ಟಿದವರನ್ನು ಒಂದಲ್ಲ ಒಂದು ನೆಪದಲ್ಲಿ ಭೇಟಿಯಾಗಲು ಬಯಸುತ್ತಾಳೆ. ನಿಮ್ಮ ಕುಟುಂಬವು ಅವಳನ್ನು ಇಷ್ಟಪಡುವಂತೆ ಮಾಡಲು, ಉತ್ತಮ ಸಂಬಂಧವನ್ನು ಹೊಂದಲು ಟ್ರೈ ಮಾಡುತ್ತಾಳೆ. ನಿಮ್ಮ ಕುಟುಂಬದ ಭಾಗವಾಗುವ (Part of Family) ಆಸೆಯಿಂದ ಅವಳು ಇದನ್ನು ಮಾಡುತ್ತಾಳೆ.

ಎಲ್ಲಾ ಸಮಯದಲ್ಲೂ ಬೆಂಬಲ ನೀಡುತ್ತಾರೆ

ವೃತ್ತಿಜೀವನದಲ್ಲಿ ಅಥವಾ ಕುಟುಂಬದಲ್ಲಿ ಯಾವುದೇ ರೀತಿಯ ಸಮಸ್ಯೆ ಇದ್ದರೆ, ಹುಡುಗಿ ಯಾವಾಗಲೂ ನಿಮ್ಮೊಂದಿಗೆ ನಿಂತರೆ, ಎಲ್ಲಾ ಕೆಲಸದಲ್ಲೂ ನಿಮಗೆ ಬೆಂಬಲ ನೀಡಿದರೆ ಆಕೆ ನಿಮ್ಮನ್ನು ಮದುವೆಯಾಗಲು ಬಯಸುತ್ತಾಳೆ ಎಂದು ಅರ್ಥ. ಅಷ್ಟೇ ಅಲ್ಲದೆ ನಿಮ್ಮ ಕುಟುಂಬದ ಬಗ್ಗೆ ಚಿಂತಿಸುತ್ತಾರೆ, ಕುಟುಂಬದ ಕಾರ್ಯದ ಬಗ್ಗೆ ಯೋಚಿಸುತ್ತಾರೆ. 

ಪರಿಚಯ ಮಾಡಿಸೋದು

ಒಂದು ವೇಳೆ ನಿಮ್ಮ ಸಂಗಾತಿ ಇತರರ ಮುಂದೆ ಹಿಂಜರಿಕೆಯಿಲ್ಲದೆ ನಿಮ್ಮನ್ನು ಬಹಿರಂಗವಾಗಿ ಪರಿಚಯಿಸಿದರೆ, ಅವರು ಎಲ್ಲರೆದುರು ನಿಮ್ಮ ಕೈ ಹಿಡಿದು ನಡೆಯಲು ಹೆದರೋದಿಲ್ಲ. ಅಂದ್ರೆ ಇವರು ನಿಮ್ಮನ್ನು ಮದುವೆಯಾಗಲು ಸಿದ್ಧರಿದ್ದಾರೆ ಎಂದು ಅರ್ಥ.

click me!