ಶಿಕ್ಷಕರು ನಮ್ಮ ಜೀವನದಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತಾರೆ. ಹೆತ್ತವರ ನಂತರ, ಶಿಕ್ಷಕರು ನಮಗೆ ಶಿಕ್ಷಣ ದೀಕ್ಷೆ ಮತ್ತು ಸಮಾಜದ ಜ್ಞಾನ ನೀಡುತ್ತಾರೆ. ಈ ಗುರುವಿಗಾಗಿ ಇರುವ ಸ್ಪೆಷಲ್ ದಿನವೇ ಶಿಕ್ಷಕರ ದಿನ. ಗುರುವಿಗೆ ಗೌರವ ಮತ್ತು ಪ್ರೀತಿಯನ್ನು ತೋರಿಸಲು ಪ್ರತಿ ವರ್ಷ ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನ (teachers day) 2022 ಅನ್ನು ಆಚರಿಸಲಾಗುತ್ತದೆ.
ಶಿಕ್ಷಕರ ದಿನದಂದು, ಶಾಲೆಗಳು, ಕಾಲೇಜುಗಳು ಮತ್ತು ಇತರ ಸ್ಥಳಗಳಲ್ಲಿ ಶಿಕ್ಷಕರಿಗಾಗಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತೆ ಮತ್ತು ವಿದ್ಯಾರ್ಥಿಗಳು ಶಿಕ್ಷಕರಿಗೆ ಗೌರವದ ಸಂಕೇತವಾಗಿ ಉಡುಗೊರೆ ನೀಡುತ್ತಾರೆ. ಶಿಕ್ಷಕರ ದಿನದಂದು ನಿಮ್ಮ ಶಿಕ್ಷಕರಿಗೆ ಸ್ಪೆಷಲ್ ಫೀಲ್ ಮೂಡಿಸಲು ನೀವು ಬಯಸಿದರೆ, ನೀವು ಅವರಿಗೆ ಈ ಸ್ಪೆಷಲ್ ಗಿಫ್ಟ್ ಗಳನ್ನು ನೀಡಬಹುದು, ಅವು ಯಾವುದು ನೋಡೋಣ.
ಕಸ್ಟಮೈಸ್ಡ್ ಮಗ್ (custamised mug)
ಶಿಕ್ಷಕರ ದಿನದಂದು ನಿಮ್ಮ ಶಿಕ್ಷಕರಿಗೆ ಗಿಫ್ಟ್ ನೀಡಲು ಕಸ್ಟಮೈಸ್ಡ್ ಮಗ್ ಬೆಸ್ಟ್ ಆಯ್ಕೆ. ಇದರಲ್ಲಿ, ನಿಮ್ಮ ಶಿಕ್ಷಕರಿಗಾಗಿ ನೀವು ಕೆಲವು ವಿಶೇಷ ಲೈನ್ಸ್ ಬರೆಯಬಹುದು, ಉದಾಹರಣೆಗೆ ಬೆಸ್ಟ್ ಟೀಚರ್ ಎವರ್ (Best Teacher Ever), ಐ ಲವ್ ಮೈ ಟೀಚರ್ ಇತ್ಯಾದಿ. ಅಥವಾ ಟೀಚರ್ ಫೋಟೋ ಹಾಕಿ ನೀಡಬಹುದು. ಅವರುಈ ಕಪ್ ನಲ್ಲಿ ಚಹಾ ಅಥವಾ ಕಾಫಿ ಕುಡಿದಾಗಲೆಲ್ಲಾ, ಖಂಡಿತವಾಗಿಯೂ ನಿಮ್ಮನ್ನು ನೆನಪಿಸುತ್ತಾರೆ.
ಪೆನ್ ಸೆಟ್ (pen set)
ಶಿಕ್ಷಕರಿಗೆ ಪೆನ್ ಬಹಳ ಮುಖ್ಯ. ಅದು ನಿಮ್ಮ ನೋಟ್ಸ್ ಕರೆಕ್ಷನ್ ಮಾಡಲು ಅಥವಾ ನಿಮಗೆ ಕಲಿಸಲು ಆಗಿರಲಿ, ಟೀಚರ್ಸ್ ಗೆ ಪೆನ್ ತುಂಬಾನೆ ಮುಖ್ಯವಾಗಿರುತ್ತೆ. ಹಾಗಾಗಿ, ನೀವು ಅವರಿಗೆ ಸುಂದರವಾದ ಪೆನ್ ಸೆಟ್ ಉಡುಗೊರೆಯಾಗಿ ನೀಡಬಹುದು ಅಥವಾ ಪೆನ್ ಸ್ಟ್ಯಾಂಡ್ ನೀಡಬಹುದು.
ಪುಸ್ತಕ (books)
ಹೆಚ್ಚಿನ ಶಿಕ್ಷಕರು ಪುಸ್ತಕಗಳನ್ನು ಓದಲು ತುಂಬಾ ಇಷ್ಟಪಡ್ತಾರೆ. ಇದು ಅವರ ಜ್ಞಾನವನ್ನು ಮತ್ತಷ್ಟು ಹೆಚ್ಚಿಸುತ್ತದೆ.ನೀವು ನಿಮ್ಮ ಶಿಕ್ಷಕರಿಗೆ ಪ್ರೇರಕ ಅಥವಾ ಸ್ಫೂರ್ತಿ ಪುಸ್ತಕವನ್ನು (Inspirational Book) ಉಡುಗೊರೆಯಾಗಿ ನೀಡಬಹುದು. ಅಥವಾ ಯಾವುದೇ ಜನಪ್ರಿಯ ಲೇಖಕರ ಪುಸ್ತಕಗಳನ್ನು ಉಡುಗೊರೆಯಾಗಿ ನೀಡಬಹುದು.
ಡೈರಿ (diary)
ಹೆಚ್ಚಿನ ಶಿಕ್ಷಕರು ಡೈರಿಗಳನ್ನು ಹೆಚ್ಚಾಗಿ ಕ್ಯಾರಿ ಮಾಡ್ತಾರೆ. ಅದರಲ್ಲಿ ಅವರು ಪ್ರಮುಖ ನೋಟ್ಸ್ ಮತ್ತು ಅನೇಕ ವಿಷಯಗಳನ್ನು ಬರೆಯುತ್ತಾರೆ. ಹಾಗಾಗಿ, ನಿಮ್ಮ ಶಿಕ್ಷಕರಿಗೆ ಉಪಯುಕ್ತವಾದದ್ದನ್ನು ನೀಡಲು ನೀವು ಬಯಸಿದರೆ, ಅವರಿಗೆ ಉತ್ತಮ ಡೈರಿಯನ್ನು ಗಿಫ್ಟ್ ಆಗಿ ನೀಡಬಹುದು.
ವಾಚ್ (watch)
ಪ್ರತಿಯೊಬ್ಬ ಶಿಕ್ಷಕರು ವಾಚ್ ಧರಿಸುತ್ತಾರೆ. ಯಾಕಂದ್ರೆ ಟೀಚರ್ಸ್ ಗೆ ಟೈಮ್ ತುಂಬಾನೆ ಮುಖ್ಯ. ನಿಮ್ಮ ಶಿಕ್ಷಕರಿಗೆ ಕೆಲವು ಉಪಯುಕ್ತ ಮತ್ತು ಸ್ವಲ್ಪ ದುಬಾರಿ ಉಡುಗೊರೆಯನ್ನು ನೀಡಲು ಬಯಸಿದರೆ, ಅವರಿಗೆ ವಾಚ್ ಉಡುಗೊರೆಯಾಗಿ ನೀಡಬಹುದು. ಪ್ರತಿ ಬಾರಿ ಅವರು ಸಮಯ ನೋಡುವಾಗ ನಿಮ್ಮ ನೆನಪಾಗಬಹುದು.
ಫೋಟೋ ಫ್ರೇಮ್ (photo frame)
ಯಾವುದೇ ಸಂದರ್ಭದಲ್ಲಿ ಫೋಟೋ ಫ್ರೇಮ್ ನೀಡುವುದು ಸಾಕಷ್ಟು ಟ್ರೆಂಡ್ ನಲ್ಲಿದೆ. ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ, ನೀವು ನಿಮ್ಮ ಶಿಕ್ಷಕರಿಗೆ ಫೋಟೋ ಫ್ರೇಮ್ ಗಿಫ್ಟ್ ಆಗಿ ನೀಡಬಹುದು. ಇದರಲ್ಲಿ, ನೀವು ನಿಮ್ಮ ಶಿಕ್ಷಕರೊಂದಿಗೆ ನಿಮ್ಮ ಫೋಟೋವನ್ನು ಸಹ ಹಾಕಬಹುದು ಮತ್ತು ಅದನ್ನು ಅವರಿಗೆ ನೀಡಬಹುದು. ಈ ಫೋಟೋ ಅವರಿಗೆ ಯಾವಾಗಲೂ ನಿಮ್ಮನ್ನು ನೆನಪಿಸುತ್ತದೆ.
ಕೈಯಿಂದ ತಯಾರಿಸಿದ ಗಿಫ್ಟ್ (handmade gifts)
ಶಿಕ್ಷಕರು ಶಾಪ್ ನಿಂದ ತಂದ ಗಿಫ್ಟ್ ಗಳಿಗಿಂದ ಮಕ್ಕಳು ತಾವೇ ಮಾಡಿದ ವಸ್ತುಗಳು ಮತ್ತು ಗಿಫ್ಟ್ ಅನ್ನು ತುಂಬಾನೆ ಇಷ್ಟಪಡ್ತಾರೆ. ಹಾಗಾಗಿ ಶಿಕ್ಷಕರ ದಿನದ ಸಂದರ್ಭದಲ್ಲಿ, ನೀವು ನಿಮ್ಮ ಶಿಕ್ಷಕರಿಗೆ ಕೈಯಿಂದ ತಯಾರಿಸಿದ ಗಿಫ್ಟ್ ನೀಡಬಹುದು. ಇದರಲ್ಲಿ, ನೀವು ಅವರಿಗಾಗಿ ಗ್ರೀಟೀಂಗ್ ಕಾರ್ಡ್ ತಯಾರಿಸಬಹುದು ಅಥವಾ ಅವರಿಗಾಗಿ ನಿಮ್ಮ ಮನದಾಳದ ಮಾತುಗಳನ್ನು ಬರೆದ ಲೆಟರ್ ನೀಡಬಹುದು. ಇದು ಅವರಿಗೆ ಖಂಡಿತವಾಗಿಯೂ ಇಷ್ಟವಾಗುತ್ತೆ.