ನೀವು ಆಯ್ಕೆ ಮಾಡಿರೋರು ಸರಿಯಾದ ಜೋಡಿಯೋ ಇಲ್ಲವೋ ತಿಳಿಯೋದು ಹೇಗೆ?

First Published Sep 28, 2022, 5:13 PM IST

ನೀವು ರಿಲೇಷನ್ಷಿಪ್ನಲ್ಲಿದ್ದಾಗ, ನಿಮ್ಮ ಸಂಗಾತಿಯಿಂದ  ಕೆಲವು ನಿರೀಕ್ಷೆಗಳನ್ನು ಹೊಂದಿರುವುದು ಸ್ವಾಭಾವಿಕ. ಸಂಬಂಧದ ಆರಂಭಿಕ ಹಂತಗಳಲ್ಲಿ ಎಲ್ಲವೂ ಸರಿಯಾಗಿಯೇ ಇರುತ್ತೆ, ಆದರೆ ಸ್ವಲ್ಪ ಸಮಯದ ನಂತರ, ನಿಮ್ಮೊಂದಿಗೆ ಸಂಬಂಧ ಹೊಂದಿರುವ ವ್ಯಕ್ತಿಯು ನಿಮ್ಮ ಜೀವನದಲ್ಲಿ ನೀವು ಬಯಸುವ ಸಂಗಾತಿಯಂತೆಯೇ ಇದ್ದಾನೆಯೇ ಎಂದು ನಿಮಗೆ ನೀವೆ ಪ್ರಶ್ನಿಸುತ್ತೀರಿ. ಹಾಗಾಗಿ, ಅನೇಕ ಬಾರಿ ಗೊಂದಲಕ್ಕೊಳಗಾಗುವುದು ಸಹ ಸಾಮಾನ್ಯ.ಯಾಕಂದ್ರೆ, ಕೆಲವೊಮ್ಮೆ ನೀವು ನಿಮ್ಮ ಸಂಗಾತಿಯಲ್ಲಿ ನೀವು ಇಷ್ಟ ಪಡೋ ಗುಣಗಳೇ ಕಂಡು ಬಂದರೆ, ಮತ್ತೆ ಕೆಲವೊಮ್ಮೆ ಜಗಳ ಆಗೋವಂತಹ ವಿಷಯಗಳೇ ಕಂಡು ಬರುತ್ತೆ.

ನಿಮ್ಮ ಸಂಗಾತಿಯು ನಿಮಗೆ ಸರಿಯಾದ ಆಯ್ಕರಯೇ ಎಂದು ನಿಮಗೆ ತಿಳಿಯಬೇಕಾ? ಈ ಕೆಲವು ಅಂಶಗಳಿಂದ ನಿಮ್ಮ ಸಂಬಂಧವನ್ನು ಮತ್ತು ನಿಮ್ಮ ಸಂಗಾತಿಯನ್ನು(Partner) ಅರ್ಥಮಾಡಿಕೊಳ್ಳಬಹುದು - ಆ ಮೂಲಕ ಅವರು ನಿಮಗೆ ಸರಿಯಾದ ಜೋಡಿಯೇ ಎಂದು ಅರ್ಥ ಮಾಡಿಕೊಳ್ಳಬಹುದು. 
 

ಸಮ್ಮತಿಯ ಸಂಬಂಧ
ಯಾವುದೇ ಯಶಸ್ವಿ ಸಂಬಂಧದ ಗುಟ್ಟು ರಾಜಿಯಾಗೋದು. ನೀವು ಪರಸ್ಪರರ ಅಭ್ಯಾಸಗಳು ಮತ್ತು ಪ್ರಿಯೋರಿಟಿಸ್ ಗಳಲ್ಲಿ(Priorites) ರಾಜಿ ಮಾಡಿಕೊಂಡರೆ, ನಿಮ್ಮ ಸಂಬಂಧವು ಯಾವಾಗಲೂ ಉತ್ತಮವಾಗಿರುತ್ತೆ. ಆದರೆ, ನಿಮ್ಮ ಸಂಗಾತಿಯು ಯಾವುದೇ ಸಂದರ್ಭದಲ್ಲಿ ನಿಮ್ಮೊಂದಿಗೆ ರಾಜಿ ಮಾಡಿಕೊಳ್ಳಲು ಸಿದ್ಧರಿಲ್ಲದಿದ್ದರೆ, ಅಥವಾ ಅವರು ಒಪ್ಪಿಗೆ ನೀಡದಿದ್ದರೆ, ಆಗ ನೀವು ತಪ್ಪು ವ್ಯಕ್ತಿಯೊಂದಿಗೆ ಇದ್ದೀರಿ ಎಂದು ಅರ್ಥಮಾಡಿಕೊಳ್ಳಿ.
 

ನಿಮ್ಮ ಬಗ್ಗೆ ನಿಮಗೆ ಒಳ್ಳೆಯ ಭಾವನೆ(Feelings) ಮೂಡಿಸುವುದು
ನಿಮ್ಮ ಸಂಗಾತಿಯು ನಿಮ್ಮನ್ನು ನೀವು ಹೇಗಿದ್ದೀರೋ ಹಾಗೆಯೇ ಸ್ವೀಕರಿಸಿದರೆ, ನಿಮ್ಮ ಬಗ್ಗೆ ನಿಮಗೆ ಒಳ್ಳೆಯ ಭಾವನೆ ಮೂಡಿಸಿದರೆ ಆಗ ನೀವು ಸರಿಯಾದ ವ್ಯಕ್ತಿಯೊಂದಿಗೆ ಇದ್ದೀರಿ ಎಂದು ಅರ್ಥಮಾಡಿಕೊಳ್ಳಿ. ಅವರು ನಿಮಗೆ ಧೈರ್ಯ ತುಂಬುತ್ತಾರೆ, ಹೊಗಳುತ್ತಾರೆ ಮತ್ತು ನೀವು ಎಷ್ಟು ಅದ್ಭುತವಾಗಿದ್ದೀರಿ ಎಂದು ಹೇಳುತ್ತಾರೆ. ಇದ್ಯಾವುದನ್ನೂ ಮಾಡದೆ ನಿಮ್ಮನ್ನು ಮತ್ತು ನಿಮ್ಮ ಆಲೋಚನೆಗಳನ್ನು ಯಾವಾಗಲೂ ಪ್ರಶ್ನಿಸುವ ಸಂಗಾತಿಯಿಂದ ದೂರವಿರೋದೆ ಒಳ್ಳೆದು.

ನಿಮ್ಮ ಮಾತನ್ನ ಕೇಳುವವರು
ಒಬ್ಬ ಒಳ್ಳೆಯ ಸಂಗಾತಿ ನೀವು ಹೇಳುವ ಪ್ರತಿಯೊಂದನ್ನೂ ಗಮನವಿಟ್ಟು ಕೇಳಿಸಿಕೊಳ್ತಾರೆ, ಅದು ನಿಮಗೆ ಎಷ್ಟೇ ಸಿಲ್ಲಿ(Silly) ಇದ್ದರೂ ಸಹ. ಪರಸ್ಪರರ ಮಾತುಗಳನ್ನು ಆಲಿಸುವ ಸಾಮರ್ಥ್ಯವು ನಿಮ್ಮ ಸಂಬಂಧದಲ್ಲಿ ಮಾಧುರ್ಯವನ್ನು ಕಾಪಾಡುತ್ತೆ . ಆದರೆ, ನಿಮ್ಮ ಸಂಗಾತಿಯು ನೀವು ಹೇಳುವ ಪ್ರತಿಯೊಂದನ್ನೂ ಪ್ರಶ್ನಿಸಿದರೆ ಮತ್ತು ನೀವು ಅವರಿಗೆ ಅರ್ಹರಲ್ಲ ಎಂದು ತೋರಿಸಲು ಪ್ರಯತ್ನಿಸಿದರೆ, ಅಂತಹ ಸಂಬಂಧದಿಂದ ದೂರವಿರಿ.

ವ್ಯಾಲ್ಯೂಸ್(Values) ಒಂದೇ ರೀತಿಯಾಗಿರಬೇಕು
ದೀರ್ಘ ಕಾಲದ ಸಂಬಂಧ ನಿಮ್ಮದಾಗಿದ್ರೆ ಇಬ್ಬರಿಗೂ ಎಲ್ಲಾ ವಿಷ್ಯ ಇಷ್ಟ ಆಗಬೇಕೆಂದೇನೂ ಇಲ್ಲ. ಆದರೆ ವ್ಯಾಲ್ಯೂಸ್ ಗಳಲ್ಲಿ ಸಮಾನತೆ ಹೊಂದಿರುವುದು ಮುಖ್ಯ. ನೀವು ಯಾರೊಂದಿಗಾದರೂ ಲಾಂಗ್ ಟರ್ಮ್ ರಿಲೇಷನ್ಶಿಪ್ ಬಯಸಿದರೆ, ನಿಮ್ಮ ಜೀವನದ ಗುರಿ ಮತ್ತು ಮೌಲ್ಯಗಳ ವಿಷಯದಲ್ಲಿ ನೀವಿಬ್ಬರೂ ಒಂದೇ ದಿಕ್ಕಿನಲ್ಲಿ ಹೋಗುತ್ತಿದ್ದೀರಿ ಎಂದು ನೀವು ಖಚಿತಪಡಿಸಿಕೊಳ್ಳಬೇಕು. ಯಾಕಂದ್ರೆ, ನೀವು ನಡೆವ ದಾರಿಗೆ ಇಬ್ಬರ ಸಮ್ಮತಿಯೂ ಮುಖ್ಯವಾಗಿದೆ.

ಭಿನ್ನಾಭಿಪ್ರಾಯದ ನಂತರವೂ ಗೌರವ
ಪ್ರತಿಯೊಂದಕ್ಕೂ ನೀವು ನಿಮ್ಮ ಸಂಗಾತಿ ಹೇಳಿದ್ದನ್ನೆಲ್ಲಾ ಒಪ್ಪಬೇಕಾಗಿಲ್ಲ. ಆದರೆ, ಭಿನ್ನಾಭಿಪ್ರಾಯದ ಸಂದರ್ಭದಲ್ಲಿ ನೀವು ಯಾವ ರೀತಿ ವರ್ತಿಸುತ್ತೀರಿ ಅನ್ನೋದು ಸಂಬಂಧದ ಬಗ್ಗೆ ಹೇಳುತ್ತೆ. ಭಿನ್ನಾಭಿಪ್ರಾಯಗಳ ಸಮಯದಲ್ಲಿಯೂ ನೀವು ಪರಸ್ಪರ ಆರೋಗ್ಯಕರ ಚರ್ಚೆ(Argue) ನಡೆಸಲು ಸಾಧ್ಯವಾದರೆ, ನೀವಿಬ್ಬರೂ ಒಬ್ಬರಿಗೊಬ್ಬರು ಮೇಡ್ ಫಾರ್ ಈಚ್ ಅದರ್ ಆಗ್ತೀರಿ.

ನಿಮ್ಮ ಮನಸ್ಸಿನಲ್ಲಿ ಏನಾಗುತ್ತಿದೆ ಎಂದು ಹೇಳಲು ಹಿಂಜರಿಯಬೇಡಿ
ನೀವು ಯಾವುದೇ ಹಿಂಜರಿಕೆಯಿಲ್ಲದೆ ನಿಮ್ಮ ಮನಸ್ಸನ್ನು ನಿಮ್ಮ ಸಂಗಾತಿಯೊಂದಿಗೆ ಹಂಚಿಕೊಂಡರೆ, ಅದು ನೀವು ಸರಿಯಾದ ವ್ಯಕ್ತಿಯೊಂದಿಗೆ ಇದ್ದೀರಿ ಎಂಬುದರ ಸಂಕೇತವಾಗಿದೆ. ಆದರೆ ನೀವು ಒಂದು ಸಾಮಾನ್ಯ ವಿಷಯವನ್ನು ಹಂಚಿಕೊಳ್ಳಲು ಹಿಂಜರಿಯುತ್ತಿದ್ದರೆ, ಆಗ ನಿಮ್ಮಿಬ್ಬರ ನಡುವಿನ ವ್ಯತ್ಯಾಸಗಳು(Difference) ವ್ಯಕ್ತವಾಗುತ್ತವೆ ಮತ್ತು ನೀವಿಬ್ಬರೂ ಒಬ್ಬರಿಗೊಬ್ಬರು ಸರಿಯಾಗಿಲ್ಲ ಎಂದರ್ಥ.

ಅವರ ಸಂಪೂರ್ಣ ಗಮನ ನಿಮ್ಮ ಮೇಲೆ
ನೀವು ನಿಮ್ಮ ಸಂಗಾತಿಯೊಂದಿಗೆ ಮಾತನಾಡುತ್ತಿದ್ದಾಗ  ಅವರು ಮೊಬೈಲ್(Mobile) ನೋಡುತ್ತಿದ್ದರೆ, ಅದರಲ್ಲಿ ಗೇಮ್ಸ್ ಆಡುತ್ತಿದ್ದರೆ, ಇದಕ್ಕಿಂತ ಕೆಟ್ಟದ್ದು ಬೇರೊಂದಿಲ್ಲ. ಸರಿಯಾದ ಸಂಗಾತಿ ಅದನ್ನು ಮಾಡೋದಿಲ್ಲ .ಅವರು ನೀವು ಮಾತನಾಡುವಾಗ ಬೇರೆನೂ ಮಾಡದೆ ನಿಮ್ಮ ಮಾತು ಕೇಳುತ್ತಿರುತ್ತಾರೆ., ಇದು ಸಂಬಂಧದಲ್ಲಿ ತುಂಬಾನೆ ಇಂಪಾರ್ಟಂಟ್ .
 

ನಿಮ್ಮ ಸ್ನೇಹಿತರು ಮತ್ತು ಕುಟುಂಬದವರು ಸಹ ಅವರನ್ನು ಪ್ರೀತಿಸುತ್ತಾರೆ.(Love)
ನಿಮ್ಮ ಪ್ರೀತಿಪಾತ್ರರು ನೀವು ಡೇಟಿಂಗ್ ಮಾಡುತ್ತಿರುವ ವ್ಯಕ್ತಿಯೊಂದಿಗೆ ಸುಲಭವಾಗಿ ಮಾತನಾಡಿದರೆ, ಇದು ಸಾಮಾನ್ಯವಾಗಿ ಉತ್ತಮ ಸಂಕೇತವಾಗಿದೆ. ಯಾಕಂದ್ರೆ, ನಿಮ್ಮನ್ನು ಹೊರತುಪಡಿಸಿ, ಅವರು ನಿಮ್ಮ ಆಪ್ತರನ್ನು ಹೇಗೆ ನಡೆಸಿಕೊಳ್ಳುತ್ತಾರೆ, ಅವರ ಜೀವನದಲ್ಲಿ ನಿಮ್ಮ ಪ್ರೀತಿಪಾತ್ರರ ಸ್ಥಾನವೇನು, ಅದು ಅವರು ನಿಮ್ಮ ಮತ್ತು ನಿಮ್ಮ ಕುಟುಂಬದ ಬಗ್ಗೆ ಏನು ಯೋಚಿಸುತ್ತಾರೆ ಎಂಬುದನ್ನು ಹೇಳುತ್ತೆ. ನಿಮ್ಮ ಪ್ರೀತಿಪಾತ್ರರ ದೃಷ್ಟಿಯಲ್ಲಿ, ಆತನ ನಡವಳಿಕೆ ಸರಿ ಇಲ್ಲದೇ ಇದ್ರೆ, ಆಗ ನೀವು ನಿಮ್ಮ ನಿರ್ಧಾರವನ್ನು ಚೆಕ್ ಮಾಡಬೇಕಾಗಬಹುದು.

ನಿಮಗೆ ಸಂಬಂಧಿಸಿದ ಸಣ್ಣ ವಿಷಯಗಳನ್ನು ನೋಡಿಕೊಳ್ಳೋದು 
ನಿಮ್ಮ ಸಂಗಾತಿ ನಿಮಗಾಗಿ ಏನು ಮಾಡಿದರೂ ಅದು ಅದ್ಬುತವಾಗಿರುತ್ತೆ ಎಂದು ಹೇಳಬೇಕಾಗಿಲ್ಲ. ನಿಮಗೆ ಸಂಬಂಧಿಸಿದ ಸಣ್ಣ ವಿಷಯಗಳ ಬಗ್ಗೆ ಅವರು ಎಷ್ಟು ಕಾಳಜಿ ವಹಿಸುತ್ತಾರೆ  ಎಂಬುದು ನೀವು ಸರಿಯಾದ ವ್ಯಕ್ತಿಯೊಂದಿಗೆ ಇದ್ದೀರೋ ಇಲ್ಲವೋ ಎಂಬುದರ ದೊಡ್ಡ ಸಂಕೇತ.
 

click me!