ಕಣ್ಣಿಗೆ ಕಾಣುವ ಎಲ್ಲಾ ಪ್ರೀತಿಯೂ ನಿಜ ಆಗಿರೋದಿಲ್ಲ. ಅಂತೆಯೇ ಎಲ್ಲಾ ಬಾರಿಯೂ ಹುಡುಗರೇ ಪ್ರೀತಿಯಲ್ಲಿ ಮೋಸ ಮಾಡಲ್ಲ. ಹುಡುಗಿಯರು ಸಹ ಪ್ರೀತಿಯಲ್ಲಿ ಮೋಸ ಮಾಡುತ್ತಾರೆ. ನೀವು ಇಷ್ಟ ಪಟ್ಟು ಪ್ರೀತಿಸುತ್ತಿರುವ ಹುಡುಗಿ ನಿಜವಾಗಿಯೂ ನಿಮ್ಮನ್ನು ಪ್ರೀತಿಸುತ್ತಿದ್ದಾಳೆಯೇ ಅನ್ನೋದನ್ನು ಕಂಡು ಹಿಡಿಯೋದು ಹೇಗೇ? ಆಕೆ ಆರ್ಥಿಕವಾಗಿ, ಲೈಂಗಿಕವಾಗಿ ಅಥವಾ ಭಾವನಾತ್ಮಕವಾಗಿ ನಿಮ್ಮ ಯೂಸ್ ಮಾಡ್ತಾ ಇದ್ದಾರೆ ಅನ್ನೋದನ್ನು ಈ ವಿಷ್ಯಗಳ ಮೂಲಕ ನೀವು ತಿಳಿದುಕೊಳ್ಳಬಹುದು.
ಕಮೀಟ್ ಮೆಂಟ್ ಗೆ (commitement) ರೆಡಿ ಇಲ್ಲದೇ ಇರೋದು
ನಿಮ್ಮನ್ನು ಪ್ರೀತಿಸುವ ವ್ಯಕ್ತಿಯು ಕಮೀಟ್ ಆಗಲು ಸಿದ್ದರಿಲ್ಲದೇ ಇದ್ರೆ ನೀವು ಯೋಚನೆ ಮಾಡಲೇಬೇಕು. ನೀವು ತುಂಬಾ ಸಮಯದಿಂದ ರಿಲೇಶನ್ ಶಿಪ್ ನಲ್ಲಿದ್ದರೂ ನಿಮ್ಮ ಸಂಗಾತಿಯು ಎಂದಿಗೂ ಸಂಪೂರ್ಣವಾಗಿ ಬದ್ಧರಾಗಿರಲು ಸಾಧ್ಯವಿಲ್ಲ ಎಂದು ನೀವು ಭಾವಿಸಿದರೆ, ಸಂಬಂಧದಿಂದ ಹೊರಬನ್ನಿ. ಅದು ನಿಮಗೆ ಒಳ್ಳೆಯದು.
ಅವರೇ ಅವರ ಮೊದಲ ಆದ್ಯತೆ
ರಿಲೇಶನ್ ಶಿಪ್ ನಲ್ಲಿ, ಜನರು ಯಾವಾಗಲೂ ತಮ್ಮ ಸಂಗಾತಿಗೆ ಆದ್ಯತೆ ನೀಡುತ್ತಾರೆ. ನೀವು ಯಾವಾಗಲೂ ಅವರ ಎರಡನೇ ಆದ್ಯತೆ ಎಂದು ನೀವು ಭಾವಿಸಿದರೆ, ನೀವು ಅವರನ್ನು ಎಷ್ಟು ಇಷ್ಟ ಪಡುತ್ತೀರೋ, ಅಷ್ಟು ಅವರು ನಿಮ್ಮನ್ನು ಇಷ್ಟ ಪಡುತ್ತಿಲ್ಲ ಎಂದು ನಿಮಗೆ ಅನಿಸಿದರೆ, ತಾನೇ ಯಾವಾಗಲೂ ಸೆಂಟರ್ ಆಫ್ ಅಟ್ರಾಕ್ಷನ್ (center of attraction) ಆಗಲು ಬಯಸಿದರೆ ಈ ಸಂಬಂಧದ ಬಗ್ಗೆ ನೀವು ಯೋಚನೆ ಮಾಡಬೇಕು.
ನಿಮ್ಮಿಂದಲೇ ಹಣ ಖರ್ಚು ಮಾಡಿಸುತ್ತಿದ್ದರೆ
ನೀವು ಸೀರಿಯಸ್ ರಿಲೇಶನ್ ಶಿಪ್ ನಲ್ಲಿದ್ದು, ನೀವು ಪ್ರತಿ ಡೇಟ್ ನಲ್ಲೂ ನೀವೆ ಎಲ್ಲದಕ್ಕೂ ಹಣ ಪಾವತಿಸುತ್ತೀರಿ ಎಂದಾದರೆ, ಫುಡ್, ಶಾಪಿಂಗ್ ಎಂದು ಹೇಳಿ ಆಕೆ ನಿಮ್ಮಿಂದಲೇ ಹೆಚ್ಚು ಹಣ ಪಡೆಯುತ್ತಿದ್ದಾಳೆ ಎಂದಾದರೆ, ಆಕೆ ಪ್ರೀತಿಸಿರೋದು ನಿಮ್ಮನ್ನಲ್ಲ, ನಿಮ್ಮ ಹಣವನ್ನು ಅನ್ನೋದನ್ನು ಅರ್ಥ ಮಾಡ್ಕೊಳಿ.
ಸಂಬಂಧದಲ್ಲಿ ಅನ್ಯೋನ್ಯ ಇಲ್ಲದಿರೋದು
ಮೊದಲನೆಯದಾಗಿ, ಅನ್ಯೋನ್ಯತೆ (intimacy) ಅಥವಾ ಇಂಟಿಮೆಸಿ ಎಂದರೆ ಕೇವಲ ಸೆಕ್ಸ್ ಅಲ್ಲ ಎಂಬುದನ್ನು ನೆನಪಿನಲ್ಲಿಡಿ. ಅನ್ಯೋನ್ಯತೆಯು ಇಬ್ಬರು ಜನರ ನಡುವಿನ ನಿಕಟ ಸಂಬಂಧವಾಗಿದೆ, ಇದು ಅವರು ಭಾವನಾತ್ಮಕವಾಗಿ ಮತ್ತು ದೈಹಿಕವಾಗಿ ಸಂಪರ್ಕ ಹೊಂದಿದ್ದಾರೆ, ಪರಸ್ಪರರ ಅಗತ್ಯಗಳನ್ನು ತಿಳಿದಿದ್ದಾರೆ ಮತ್ತು ಪರಸ್ಪರರ ಉಪಸ್ಥಿತಿಯಲ್ಲಿ ಹೆಚ್ಚು ಕಂಫರ್ಟೇಬಲ್ ಆಗಿರುತ್ತಾರೆ ಎಂದು. ಆದರೆ ನಿಮ್ಮ ಸಂಬಂಧದಲ್ಲಿ ಅನ್ಯೋನ್ಯತೆಯ ಕೊರತೆ ಇದ್ದರೆ, ಅವರು ನಿಮ್ಮಿಂದ ಬೇರೇನನ್ನೋ ಬಯಸುತ್ತಿದ್ದರೆ, ಆ ಸಂಬಂಧಕ್ಕೆ ಅರ್ಥ ಇರೋದಿಲ್ಲ.
ಯಾವಾಗಲೂ ನಿಮ್ಮ ಸಹಾಯ ಕೇಳುತ್ತಾಳೆ
ಕೆಲವೊಮ್ಮೆ ನಿಮ್ಮ ಸಂಗಾತಿ ನಿಮ್ಮ ಬಳಿ ಸಹಾಯ ಕೇಳಿದ್ರೆ ಓಕೆ. ಆದ್ರೆ ಪ್ರತಿದಿನ ಅವರು ಒಂದಲ್ಲ ಒಂದು ರೀತಿಯಲ್ಲಿ ನಿಮ್ಮಿಂದ ಸಹಾಯ ಕೇಳುತ್ತಲಿದ್ದು, ಆದರೆ ನೀವು ಸಹಾಯ ಕೇಳಿದಾಗ ಅವರು ಅದನ್ನು ಮಾಡದೇ ಇದ್ದರೆ, ನಿಮ್ಮ ಸಂಗಾತಿಯು ಹಣಕ್ಕಾಗಿ ನಿಮ್ಮನ್ನು ಬಳಸಿಕೊಳ್ಳುತ್ತಿದ್ದಾರೆ ಅನ್ನೋದನ್ನು ಅರ್ಥ ಮಾಡಿ. ತಡ ಆದ್ರೆ ನಿಮಗೇನೆ ನಷ್ಟ ಆಗೋದು.
ಪ್ರತಿಬಾರಿಯೂ ನಿಮ್ಮನ್ನು ದೂಷಿಸಿದರೆ
ರೋಮ್ಯಾಂಟಿಕ್ ರಿಲೇಶನ್ ಶಿಪ್ ನಲ್ಲಿ ಕೇವಲ ದೂರುಗಳೇ (blaming you) ಇದ್ದರೆ, ನೀವು ಮಾಡಬೇಕಾಗಿರುವುದು ಆ ಸಂಬಂಧದಿಂದ ಹೊರಬರುವುದು. ನಿಮ್ಮ ಗೆಳತಿ ನಿರಂತರವಾಗಿ ನಿಮ್ಮನ್ನು ಟೀಕಿಸುತ್ತಿದ್ದರೆ, ಪ್ರತಿಯೊಂದಕ್ಕೂ ಕೊಂಕು ಹೇಳುತ್ತಿದ್ದರೆ, ನಂಬಿ, ಅವಳು ಎಂದಿಗೂ ಪ್ರಾಮಾಣಿಕಳಾಗಿರಲು ಸಾಧ್ಯವಿಲ್ಲ.ನಿಮ್ಮ ನ್ಯೂನತೆಗಳನ್ನು ಹೇಳುವ ಮೂಲಕ ನಿಮ್ಮಿಂದ ಬೇರ್ಪಡಲು ಅವಳು ಒಂದು ನೆಪ ಹುಡುಕುತ್ತಿರಬೇಕು.ಇಂತಹ ವ್ಯಕ್ತಿ ಪ್ರೀತಿಗೆ ಅರ್ಹರಾಗಿರೋದಿಲ್ಲ.
ನಿಮ್ಮನ್ನು ಎಂದಿಗೂ ತನ್ನ ಸ್ನೇಹಿತರಿಗೆ ಅಥವಾ ಕುಟುಂಬಕ್ಕೆ ಪರಿಚಯಿಸುವುದಿಲ್ಲ
ನಿಮ್ಮ ಗೆಳತಿ ನಿಜವಾಗಿಯೂ ನಿಮ್ಮನ್ನು ಇಷ್ಟಪಟ್ಟರೆ, ಅವಳ ಸ್ನೇಹಿತರು ಅಥವಾ ಕುಟುಂಬಕ್ಕೆ ನಿಮ್ಮನ್ನು ಪರಿಚಯಿಸಲು ಅವಳು ಎಂದಿಗೂ ನಾಚಿಕೆ ಪಡೋದಿಲ್ಲ. ಅವರ ಲೈಫ್ ಬಗ್ಗೆ ತಿಳಿದುಕೊಳ್ಳಲು ಆಕೆ ಅವಕಾಶವನ್ನೆ ಕೊಡ್ತಾ ಇಲ್ಲ ಎಂದಾದ್ರೆ, ಇದು ನಿಮ್ಮ ಸಂಗಾತಿ ನಿಮ್ಮನ್ನು ಯೂಸ್ ಮಾಡ್ತಿದ್ದಾರೆ ಎಂಬುದರ ಸಂಕೇತವಾಗಿದೆ.