ಮದ್ವೆಗೆ ರೆಡಿಯಾಗಿದ್ದೀರಾ? ಐಡಿಯಲ್ ಪಾರ್ಟ್ನೆರ್ನಲ್ಲಿ ಏನೆಲ್ಲಾ ಗುಣಗಳಿರಬೇಕು?

First Published | Sep 27, 2022, 7:40 PM IST

ನಮ್ಮಲ್ಲಿ ಪ್ರತಿಯೊಬ್ಬರೂ ಆದರ್ಶ ಸಂಗಾತಿಯನ್ನು ಹುಡುಕುತ್ತೇವೆ. ಆದರೆ ನಾವು ಡೇಟಿಂಗ್ ಮಾಡುತ್ತಿರುವ ವ್ಯಕ್ತಿಯು ಐಡಿಯಲ್ ಪಾರ್ಟ್ನರ್ ಹೊಂದಿರಬೇಕಾದ ಎಲ್ಲಾ ಗುಣಗಳನ್ನು ಹೊಂದಿರಬೇಕು ಅನ್ನೋ ಅಗತ್ಯವಿಲ್ಲ. ಯಾರನ್ನಾದರೂ ಪ್ರೀತಿಸಲು ಅನೇಕ ಕಾರಣಗಳಿರಬಹುದು, ಆದರೆ ನೀವು ಮದುವೆಯಾಗಲು ಬಯಸಿರುವ ಸಂಗಾತಿಯಲ್ಲಿ ಇಂತಹ ಗುಣಗಳು ಇರಬೇಕು ಎಂದು ನೀವು ಅಂದ್ಕೊಳ್ಳೋದು ಖಂಡಿತಾ. ಹಾಗಿದ್ರೆ ಎಂತಹ ಗುಣ ಇರಬೇಕು ಅನ್ನೋದನ್ನು ನೋಡೋಣ.

ನೀವು ಜೀವನದಲ್ಲಿ ಐಡಿಯಲ್ ಪಾರ್ಟ್ನರ್(Ideal partner) ಕಂಡುಕೊಂಡರೆ, ನಿಮ್ಮ ಜೀವನವು ತುಂಬಾನೆ ಸುಂದರವಾಗಿರುತ್ತೆ. ನಾವು ಯಾರನ್ನಾದರೂ ಮೊದಲ ಬಾರಿಗೆ ಭೇಟಿಯಾದಾಗ, ಅವರ ಬಹಳಷ್ಟು ಗುಣಗಳ ಬಗ್ಗೆ ನಮಗೆ ತಿಳಿಯೋದಿಲ್ಲ, ನಾವು ಯಾರೊಂದಿಗೆ ಡೇಟಿಂಗ್ ಮಾಡುತ್ತೇವೊ, ಅವರನ್ನು ತಿಳಿದುಕೊಳ್ಳಲು ಶುರುಮಾಡುತ್ತೇವೆ,ಅವರ ಕೆಲವು ಗುಣಲಕ್ಷಣಗಳನ್ನು ನಾವು ತಿಳಿದುಕೊಳ್ಳುತ್ತೇವೆ. ನೀವು ನಿಮ್ಮ ಐಡಿಯಲ್ ಪಾರ್ಟ್ನರ್ ಹುಡುಕಾಟದಲ್ಲಿದ್ದರೆ, ನಿಮ್ಮ ಸಂಗಾತಿಯು ಹೊಂದಿರಬೇಕಾದ ಅಂತಹ 7 ವೈಶಿಷ್ಟ್ಯಗಳ ಬಗ್ಗೆ ಇಲ್ಲಿದೆ ನೋಡಿ.

ಮೆಚ್ಯುರಿಟಿ (Maturity)
ನಿಮ್ಮ ಐಡಿಯಲ್ ಪಾರ್ಟ್ನರ್ ಗೆ ಮೆಚ್ಯುರಿಟಿ ಜೀವನದಲ್ಲಿ ಬಹಳ ಮುಖ್ಯ. "ಮೆಚ್ಯುರಿಟಿ" ಎಂದರೆ ನಿಮ್ಮ ಸಂಗಾತಿ ಯಾವಾಗಲೂ ಸಮಯಕ್ಕೆ ಸರಿಯಾಗಿ ಡೇಟಿಂಗ್ ಗೆ ಬರುತ್ತಾರೆ ಅಥವಾ ಬಿಲ್ಲಿಂಗ್ ಸಮಯದಲ್ಲಿ ಹಣ ಕೊಡುತ್ತಾರೆ ಎಂದು ಅರ್ಥ ಅಲ್ಲ. ಈ ಗುಣಗಳು ಒಳ್ಳೆಯದು, ಆದರೆ ನಿಜವಾಗಿಯೂ ಮೆಚ್ಯುರಿಟಿ ಎಂದರೆ ನಿಮ್ಮ ಜೀವನದಲ್ಲಿ ನಡೆದ ಕಹಿ ಘಟನೆಗಳನ್ನು ದೂರ ಮಾಡಿ, ನಿಮ್ಮ ಒಳ್ಳೆಯತನವನ್ನು ಗುರುತಿಸೋದು. ಪ್ರತಿಯೊಂದು ಸನ್ನಿವೇಶವನ್ನು ದೃಢವಾಗಿ ಎದುರಿಸುವುದರಲ್ಲಿ ನಂಬಿಕೆ ಇಡುತ್ತಾರೆ. ಅವರು ಈ ಗುಣವನ್ನು ತಮ್ಮಲ್ಲಿ ಬೆಳೆಸಿಕೊಂಡಂತೆ, ಅವರು ಪ್ರಬುದ್ಧರು ಎಂದು ಅರ್ಥ.

Tap to resize

ಮುಕ್ತ ಮನಸ್ಸು(Openness)
ನಿಮ್ಮ ಸಂಗಾತಿಯ ಮುಕ್ತ ಮನಸ್ಸು ನಿಮ್ಮ ಸಂಬಂಧಕ್ಕೆ ಬಹಳ ಮುಖ್ಯ. ನೆನಪಿಡಿ, ಯಾವ ಮನುಷ್ಯನೂ ಪರ್ಫೆಕ್ಟ್ ಆಗಿರೋದಿಲ್ಲ, ಆದ್ದರಿಂದ ನಿಮ್ಮ ಜೀವನದಲ್ಲಿ ಪ್ರತಿಯೊಂದು ಸನ್ನಿವೇಶವನ್ನು ಸ್ವೀಕರಿಸುವ ಮತ್ತು ಅದಕ್ಕೆ ತಕ್ಕಂತೆ ಬದುಕುವ ವ್ಯಕ್ತಿ ಸಿಕ್ಕರೆ ಅದಕ್ಕಿಂತ ದೊಡ್ಡದು ಇನ್ನೇನಿದೆ. 
ಒಬ್ಬ ವ್ಯಕ್ತಿಯು ಮುಕ್ತ ಮನಸ್ಸಿನವನಾಗಿದ್ದಾಗ, ಅವನು ತನ್ನ ಭಾವನೆ, ಆಲೋಚನೆ, ಕನಸು ಮತ್ತು ಬಯಕೆಗಳನ್ನು ವ್ಯಕ್ತಪಡಿಸುತ್ತಾನೆ. ಇದರಿಂದ ಸಂಬಂಧ ಗಟ್ಟಿಯಾಗುತ್ತೆ.

ಪ್ರಾಮಾಣಿಕತೆ 
ನಿಮ್ಮ ಸಂಗಾತಿಯು ಸಂಬಂಧದಲ್ಲಿ ಪ್ರಾಮಾಣಿಕತೆಯ ಮಹತ್ವವನ್ನು ಅರಿತುಕೊಂಡರೆ, ನೀವು ಸರಿಯಾದ ವ್ಯಕ್ತಿಯನ್ನು ಆಯ್ಕೆ ಮಾಡಿದ್ದೀರಿ ಎಂದರ್ಥ. ಪ್ರಾಮಾಣಿಕತೆಯು ಜನರಲ್ಲಿ ವಿಶ್ವಾಸವನ್ನು ತುಂಬುತ್ತೆ, ಆದರೆ ಅಪ್ರಾಮಾಣಿಕತೆಯು ಯಾವುದೇ ರಿಲೇಷನ್ಶಿಪ್(Relationship) ಅನ್ನು ಹಾಳು ಮಾಡುತ್ತೆ. ಇಬ್ಬರು ವ್ಯಕ್ತಿಗಳ ನಡುವಿನ ಸಂಬಂಧವನ್ನು ಮೋಸ, ಅಪ್ರಾಮಾಣಿಕತೆ ಕೊನೆಗೊಳಿಸಬಹುದು. ಸಂಗಾತಿ ಪ್ರಾಮಾಣಿಕರಾಗಿದ್ರೆ ಅದರಿಂದ ಸಂಬಂಧ ಮತ್ತಷ್ಟು ಗಟ್ಟಿಯಾಗುತ್ತೆ.

ಗೌರವ(Respect) ಮತ್ತು ಸ್ವಾತಂತ್ರ್ಯ 
ಐಡಿಯಲ್ ಪಾರ್ಟ್ನರ್ ನಿಮ್ಮ ಕನಸುಗಳನ್ನು ತನ್ನದಕ್ಕಿಂತ ಹೆಚ್ಚಾಗಿ ಗೌರವಿಸುವರು ಮತ್ತು ಅವುಗಳನ್ನು ಪೂರೈಸಲು ತುಂಬಾನೆ ಪ್ರಯತ್ನ ಮಾಡ್ತಾರೆ. ಅವರು ನಿಮ್ಮ ಆಸೆ ಮತ್ತು ಭಾವನೆಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ. ಐಡಿಯಲ್ ಕಪಲ್ ಪರಸ್ಪರರನ್ನು ಗೌರವದಿಂದ ನಡೆಸಿಕೊಳ್ಳುತ್ತಾರೆ. ಇದರಿಂದ ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ಪರಸ್ಪರ ಹತ್ತಿರವಾಗೋದು ಗ್ಯಾರಂಟಿ.

ವಾತ್ಸಲ್ಯ(Affection)
ಐಡಿಯಲ್ ಪಾರ್ಟ್ನರ್ ದೈಹಿಕವಾಗಿ, ಭಾವನಾತ್ಮಕವಾಗಿ ಮತ್ತು ಮಾನಸಿಕವಾಗಿ ನಿಮ್ಮೊಂದಿಗೆ ವಾತ್ಸಲ್ಯದಿಂದ ಬೆರೆತರೆ, ಇದು ಅವರ ವಿಶೇಷ ಲಕ್ಷಣ. ಇದರರ್ಥ ಅವರು ನಿಮ್ಮನ್ನು ಅರ್ಥಮಾಡಿಕೊಳ್ಳುತ್ತಾರೆ ಮತ್ತು ನಿಮ್ಮನ್ನು ಗೌರವಿಸುತ್ತಾರೆ. ತನ್ನ ಭಾವನೆಗಳನ್ನು ಎಲ್ಲರ ಮುಂದೆ ವ್ಯಕ್ತಪಡಿಸಲು ಅವರು ಹಿಂಜರಿಯೋದಿಲ್ಲ. ಒಬ್ಬರಿಗೊಬ್ಬರು ವಾತ್ಸಲ್ಯವನ್ನು ನೀಡುವ ಮತ್ತು ಸ್ವೀಕರಿಸುವ ಆಲೋಚನೆಗಳಲ್ಲಿ ಮುಕ್ತರಾಗಿರೋದು ನಿಮ್ಮ ಜೀವನವನ್ನು ಸುಂದರಗೊಳಿಸುತ್ತೆ. 

ಹಾಸ್ಯ ಪ್ರಜ್ಞೆ (Sense of Humor)
ನಿಮ್ಮ ಐಡಿಯಲ್ ಪಾರ್ಟ್ನರ್ನಲ್ಲಿ ಹಾಸ್ಯ ಪ್ರಜ್ಞೆಯೂ ಅದ್ಭುತವಾಗಿರಬೇಕು. ಸಂಬಂಧದಲ್ಲಿ ಹಾಸ್ಯಪ್ರಜ್ಞೆಯು ನಿಮ್ಮ ಇಡೀ ಜೀವನವನ್ನು ಹ್ಯಾಪಿಯಾಗಿರಿಸುತ್ತೆ. ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ನಗುತ್ತಾ ಎದರಿಸುವ ಉತ್ಸಾಹವು ಸೂಕ್ಷ್ಮ ವಿಷಯಗಳೊಂದಿಗೆ ವ್ಯವಹರಿಸುವಾಗ ನಿಮಗೆ ಸಹಾಯ ಮಾಡುತ್ತೆ. ಉತ್ತಮ ಹಾಸ್ಯ ಪ್ರಜ್ಞೆ ಖಂಡಿತವಾಗಿಯೂ ಸಂಬಂಧದಲ್ಲಿ ಒತ್ತಡದ ಕ್ಷಣಗಳನ್ನು ಕಡಿಮೆ ಮಾಡುತ್ತೆ. ನಿಮ್ಮ ಸಂಗಾತಿಯ ನಗು ಜೀವನವನ್ನು ಹೆಚ್ಚು ಸುಲಭಗೊಳಿಸುತ್ತೆ.ಇಬ್ಬರು ಸಂತೋಷದ ಜೀವನ ನಡೆಸಲು ಸಾಧ್ಯವಾಗುತ್ತೆ.

Latest Videos

click me!