ಈ ಕಾರಣಗಳಿಂದಾಗಿ ಗಂಡನಿಂದ ದೂರವಾಗ್ತಾಳೆ ಹೆಂಡ್ತಿ

First Published | Apr 16, 2022, 7:09 PM IST

ಮದುವೆ (Marriage) ಅನ್ನೋದು ಸುಮಧುರವಾದ ಬಂಧನ, ಆದರೆ ಆ ಬಂಧನ ಹಿಂಸೆ ಎಂದು ಅನಿಸಿದಾಗ ವಿಚ್ಚೆದನಕ್ಕೆ ಮುಂದಾಗುತ್ತಾರೆ. ವಿಚ್ಚೇದನ (Divorce) ಪಡೆಯಲು ನಿರ್ಧರಿಸುವುದು ಯಾವುದೇ ಮಹಿಳೆಗೆ ಸುಲಭವಲ್ಲ, ಏಕೆಂದರೆ ಮಹಿಳೆ ತನ್ನಿಂದ ಸಾಧ್ಯವಾದಷ್ಟು ಸಮಯ ನೀಡುತ್ತಾಳೆ, ಆದರೆ ಅವಳು ರಾಜಿ ಮಾಡಿಕೊಳ್ಳಲಾಗದ ಕೆಲವು ವಿಷಯಗಳಿವೆ. 

ಮಹಿಳೆ ತುಂಬಾನೆ ಕಷ್ಟವನ್ನು ನುಂಗಿಕೊಂಡು ಬದುಕುತ್ತಾಳೆ. ಆದರೆ ಆಕೆಗೆ ಇನ್ನು ತಾಳುವುದು ಅಸಾಧ್ಯ ಎಂದು ಅನಿಸಿದಾಗ ವಿಚ್ಚೇದನಕ್ಕೆ(Divorce) ಮುಂದಾಗುತ್ತಾಳೆ. ಸಮಾಜ, ಕುಟುಂಬ ಅಥವಾ ಸಂಬಂಧಿಕರು ಏನೇ ಹೇಳಿದರೂ, ಅವಳು ತನ್ನ ಗಂಡನಿಗೆ ವಿಚ್ಛೇದನ ನೀಡಲು ನಿರ್ಧರಿಸುತ್ತಾಳೆ. ಮಹಿಳೆ ಅಂತಹ ಕಠಿಣ ನಿರ್ಧಾರ ತೆಗೆದುಕೊಳ್ಳಲು ಪ್ರಮುಖ ಕಾರಣಗಳು ಯಾವುವು ನೋಡೋಣ... 

ಮೋಸವನ್ನು ಸಹಿಸುವುದಿಲ್ಲ
ಒಬ್ಬ ಮಹಿಳೆ(Woman) ಎಲ್ಲವನ್ನೂ ಸಹಿಸಿಕೊಳ್ಳಬಲ್ಲಳು, ಆದರೆ ತನ್ನ ಪತಿ ಬೇರೆಲ್ಲೋ ಸಂಬಂಧ ಹೊಂದಿದ್ದಾನೆ ಎಂದು ಅವಳು ಸಹಿಸಲಾರಳು. ಏಕೆಂದರೆ ಗಂಡ-ಹೆಂಡತಿಯ ಸಂಬಂಧದಲ್ಲಿ ಮೋಸವನ್ನು ಸಹಿಸಲು ಅವಳಿಗೆ ಸಾಧ್ಯವಾಗುವುದಿಲ್ಲ. ಈ ಸಂದರ್ಭವನ್ನು ಆಕೆ ನಿಭಾಯಿಸಲು ಪ್ರಯತ್ನಿಸುತ್ತಾಳೆ, ಆದರೆ ಅದು ಅಸಾಧ್ಯ ಎಂದಾಗ ವಿಚ್ಚೇಧನ ನೀಡುತ್ತಾಳೆ. 

Tap to resize

ಆತ್ಮಗೌರವವೂ(Self respect) ಮುಖ್ಯ
ಇದಲ್ಲದೆ, ಮಹಿಳೆಯ ಆತ್ಮಗೌರವದ ವಿಷಯಕ್ಕೆ ಬಂದಾಗ, ಅವಳು ಇಲ್ಲಿ ರಾಜಿ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ.  ಪತಿ ತನ್ನ ಆತ್ಮಗೌರವವನ್ನು ಧಕ್ಕೆ ಮಾಡಿದಾಗ, ಅವಳು ಒಳಗಿನಿಂದ ಕುಸಿದು ಹೋಗುತ್ತಾಳೆ ಮತ್ತು ವಿಚ್ಛೇದನವನ್ನು ಪಡೆಯುವ ನಿರ್ಧಾರವನ್ನು ತೆಗೆದುಕೊಳ್ಳಲು ನಿರ್ಧರಿಸುತ್ತಾಳೆ. 

 ಹೆಂಡತಿಯ ಕನಸುಗಳ(Dreams) ಬಗ್ಗೆ ಯೋಚಿಸದೆಯಿರುವುದು  
ವಿಚ್ಚೇದನ ಪಡೆಯಲು ಮೂರನೇ ಕಾರಣವೆಂದರೆ ಮಹಿಳೆಯ ಕನಸುಗಳಿಗೆ ಬೀಗ ಹಾಕುವುದು. ಕನಸುಗಳು ಕೇವಲ ಗಂಡಿಗೆ ಮಾತ್ರವಲ್ಲ, ಹೆಣ್ಣಿಗೂ ಅಷ್ಟೇ ಮುಖ್ಯವಾಗಿದೆ. ಒಂದು ವೇಳೆ ಆಕೆಯ ಕನಸಿನ ಬಗ್ಗೆ ಯೋಚನೆ ಮಾಡದೇ ಇದ್ದಾಗ, ಅಥವಾ ಅದನ್ನು ನೆರವೇರಿಸದೇ ಇದ್ದಾಗ ಆಕೆ ಕುಸಿಯುತ್ತಾಳೆ. 

ಮದುವೆಯ ನಂತರ, ಗಂಡ ತನ್ನ ಹೆಂಡತಿಯ ವೃತ್ತಿಜೀವನದ(Career) ಬಗ್ಗೆ ಯೋಚಿಸದಿದ್ದಾಗ ಮತ್ತು ಅವಳನ್ನು ಅಡುಗೆಮನೆಯ ಕೆಲಸದಲ್ಲಿ ತೊಡಗಿಸಿದಾಗ, ಅವಳ ಮನಸ್ಸು ಎಲ್ಲಿಯೂ ಇರುವಂತೆ ತೋರುವುದಿಲ್ಲ, ಏಕೆಂದರೆ ಮದುವೆಯ ನಂತರ, ಅವಳು ತನ್ನ ಪತಿಯಿಂದ ಹೆಚ್ಚಿನದನ್ನು ನಿರೀಕ್ಷಿಸುತ್ತಾಳೆ. ಈ ವಿಷ್ಯ ವಿಚ್ಚೇದನಕ್ಕೆ ಕಾರಣವಾಗುತ್ತದೆ. 

ಮಾನಸಿಕ ಒತ್ತಡ (Mental stress)
ಮದುವೆಯ ನಂತರ, ಮಹಿಳೆಯ ಜವಾಬ್ದಾರಿಗಳು ಹೆಚ್ಚಾಗುತ್ತವೆ ಎಂದು ಎಲ್ಲರಿಗೂ ತಿಳಿದಿದೆ. ಆದಾಗ್ಯೂ, ಜವಾಬ್ದಾರಿಗಳ ಹೊರೆಯ ಸಾರವನ್ನು ಮಹಿಳೆಯ ಮೇಲೆ ಹಾಕಿದಾಗ, ಅವಳು ವಿಚಲಿತಳಾಗಿರಲು ಪ್ರಾರಂಭಿಸುತ್ತಾಳೆ. ಅದರಿಂದ ಹೊರಗೆ ಬರಲು ಸಾಧ್ಯವಾಗದೇ ಆಕೆ ಒದ್ದಾಡುತ್ತಾಳೆ. 

ಈ ಸಮಯದಲ್ಲಿ, ಅವಳು ಮಾನಸಿಕವಾಗಿ ವಿಚಲಿತಳಾಗುತ್ತಾಳೆ. ಈ ಪರಿಸ್ಥಿತಿಯಲ್ಲಿ ಅವಳ ಪತಿ ಅವಳನ್ನು ಅರ್ಥಮಾಡಿಕೊಳ್ಳದಿದ್ದರೆ, ಮಾನಸಿಕ ಒತ್ತಡದಿಂದ ಹೊರಬರಲು ಸಹಾಯ ಮಾಡದೇ ಇದ್ದರೆ, ಅವಳು ಕ್ರಮೇಣ ಶಾಂತವಾಗಲು ಪ್ರಾರಂಭಿಸುತ್ತಾಳೆ ಮತ್ತು ಅಂತಹ ಪರಿಸ್ಥಿತಿಯಲ್ಲಿ ವಿಚ್ಛೇದನದ ಬಗ್ಗೆ ನಿರ್ಧರಿಸುವುದು ಅವಳಿಗೆ ಸುಲಭವಾಗುತ್ತದೆ. 

Latest Videos

click me!