ಖುಷಿಯಾಗಿರಬೇಕಾ ಹಾಗಿದ್ರೆ ಇತರರೊಂದಿಗೆ ನಿಮ್ಮನ್ನು ಹೋಲಿಸೋದನ್ನು ನಿಲ್ಲಿಸಿ: ಈ ಕಾಗೆ ಕತೆ ಓದಿ

Published : Feb 07, 2025, 11:44 AM IST

ಜೀವನದಲ್ಲಿ ಖುಷಿಯಾಗಿರಬೇಕು ಅಂದ್ರೆ ಏನ್ ಮಾಡಬೇಕು? ಸ್ವಾಮೀಜಿಗಳು, ಮೋಟಿವೇಷನ್ ಸ್ಪೀಕರ್‌ಗಳು ಹೇಳೋದು ಇತರರ ಜೊತೆ ಹೋಲಿಕೆ ಮಾಡ್ಕೋಬಾರದು ಅಂತ. ಆದ್ರೆ ನಾವು ಮಾಡೋ ತಪ್ಪೇ ಅದು. ಇತರರ ಜೊತೆ ಹೋಲಿಸಿಕೊಂಡು ಜೀವನವನ್ನ ಭಾರ ಮಾಡ್ಕೋತೀವಿ. ಈ ಕಾಗೆ ಕಥೆ ಓದಿದ್ರೆ ನಿಮ್ಮ ಯೋಚನೆ ಖಂಡಿತ ಬದಲಾಗುತ್ತೆ.

PREV
15
ಖುಷಿಯಾಗಿರಬೇಕಾ ಹಾಗಿದ್ರೆ  ಇತರರೊಂದಿಗೆ ನಿಮ್ಮನ್ನು ಹೋಲಿಸೋದನ್ನು ನಿಲ್ಲಿಸಿ: ಈ ಕಾಗೆ ಕತೆ ಓದಿ

ಒಂದು ದಿನ ಕಾಗೆ ಮರದ ಮೇಲೆ ಕೂತು ಅಳ್ತಾ ಇತ್ತು. ಮರದ ಕೆಳಗೆ ಧ್ಯಾನ ಮಾಡ್ತಿದ್ದ ಸ್ವಾಮೀಜಿ ಕಾಗೆನ ಕೇಳಿದ್ರು, 'ಏಕೆ ಅಳ್ತಿದ್ದೀಯಾ?' ಕಾಗೆ ತನ್ನ ಬಾಧೆ ಹೇಳಿಕೊಳ್ಳೋಕೆ ಶುರು ಮಾಡ್ತು. 'ನಾನು ಕಪ್ಪು, ಯಾರಿಗೂ ಇಷ್ಟ ಆಗಲ್ಲ, ನಾನು ಬಂದ್ರೆ 'ಚಿ' ಅಂತ ಓಡಿಸ್ತಾರೆ, ಯಾರೂ ನನ್ನ ಸಾಕಲ್ಲ,. ನನ್ನ ಜೀವನ ನನಗೇ ಬೇಜಾರಾಗಿದೆ. ಯಾಕೆ ಹುಟ್ಟಿದೆ ಅಂತ ಅನ್ಸುತ್ತೆ. ಎಲ್ಲರೂ ಚೆನ್ನಾಗಿದ್ದಾರೆ, ನನ್ನ ಜೀವನ ಮಾತ್ರ ಹೀಗೆ' ಅಂತ ಸ್ವಾಮೀಜಿ ಹತ್ರ ಅಳ್ತಾ ಹೇಳ್ತು.

25

ಕಾಗೆ ಮಾತು ಕೇಳಿದ ಸ್ವಾಮೀಜಿ, 'ಯಾರು ಖುಷಿಯಾಗಿದ್ದಾರೆ ಹೇಳು' ಅಂದ್ರು. ಕಾಗೆ ಹೇಳ್ತು,  ಹಂಸವನ್ನು ನೋಡಿ, ಬೆಳ್ಳಗೆ ಎಷ್ಟು ಚಂದ ಇದೆ, ಕೆರೆಯಲ್ಲಿ ಈಜ್ತಾ ಖುಷಿಯಾಗಿದೆ.' ಸ್ವಾಮೀಜಿ ಹೇಳಿದ್ರು, "ಹೋಗಿ ಹಂಸನ ಕೇಳು ನಿಜವಾಗ್ಲೂ ಖುಷಿಯಾಗಿದ್ದೀಯಾ ಅಂತ." ಕಾಗೆ ಹಂಸದ ಹತ್ರ ಹೋಗಿ ಕೇಳ್ತು, 'ನೀವು ಬಹಳ ಚಂದ ಇದ್ದೀರಾ, ಖುಷಿಯಾಗಿದ್ದೀರ ಅಲ್ವಾ?" ಅಂತ.

35

ಹಂಸ ಹೇಳ್ತು, "ನನ್ನದೇನು ಚಂದ? ಬಿಳಿ ಸುಣ್ಣ ಬಳಿದಂಗೆ ಇದ್ದೀನಿ. ಆ ಗಿಳಿ ನೋಡಿ, ರಂಗುರಂಗಾಗಿ ಎಷ್ಟು ಚಂದ ಇದೆ." ಕಾಗೆ ಗಿಳಿ ಹತ್ರ ಹೋಗಿ ಕೇಳ್ತು, "ನೀವು ಚಂದ ಇದ್ದೀರ, ಖುಷಿಯಾಗಿದ್ದೀರ ಅಲ್ವಾ?" ಗಿಳಿ ತನ್ನ ಬೇಜಾರು ಹೇಳ್ತು. "ಚಂದ ಇರೋದೇ ನನಗೆ ಶಾಪ. ಸ್ವತಂತ್ರವಾಗಿ ಎಲ್ಲೂ ಹೋಗೋಕೆ ಆಗಲ್ಲ. ಹೋದ್ರೆ ಪಂಜರದಲ್ಲಿ ಹಾಕಿಬಿಡ್ತಾರೆ. ಜನ ನನ್ನ ನೋಡಿ ಖುಷಿ ಪಡ್ತಾರೆ. ಇದಕ್ಕಿಂತ ನರಕ ಇದೆಯಾ? ಯಾವಾಗ್ಲೂ ಭಯದಲ್ಲಿ ಬದುಕಬೇಕು. ನನ್ನದೂ ಒಂದು ಬದುಕೇ? ಖುಷಿ ಅಂದ್ರೆ ಆ ನವಿಲಿನದು ಎಂದು ಹೇಳಿತು.

45

ಕಾಗೆ ನವಿಲಿನ  ಹತ್ರ ಹೋಗಿ ಕೇಳ್ತು, "ನೀವು ಖುಷಿಯಾಗಿದ್ದೀರ ಅಲ್ವಾ?" ನವಿಲು ತನ್ನ ಕಷ್ಟ ಹೇಳ್ತು. "ನನ್ನದೇನು ಖುಷಿ? ಕಾಡಲ್ಲಿ ತಿರುಗಾಡ್ತಿದ್ದ ನನ್ನ ಇಲ್ಲಿ ಜೂನಲ್ಲಿ ಹಾಕಿದ್ದಾರೆ. ಜನ ಬಂದು ಫೋಟೋ ತೆಗೆದುಕೊಳ್ತಾರೆ. ನಾನು ಗರಿ ಬಿಚ್ಚೋದನ್ನ ನೋಡ್ಬೇಕು ಅಂತಾರೆ. ಕಾಡಲ್ಲಿ ಸ್ವತಂತ್ರವಾಗಿ ಗರಿ ಬಿಚ್ಚಿ ಕುಣಿತಿದ್ದ ನಾನು ಈ ಜೈಲಿನಲ್ಲಿ ಹೇಗೆ ಕುಣಿಯಲಿ? ನಿಜ ಹೇಳ್ಬೇಕು ಅಂದ್ರೆ ಕಾಗೆ, ನಿಮ್ಮ ಬದುಕೇ ಸೂಪರ್. ಇಷ್ಟ ಬಂದಂಗೆ ತಿರುಗಾಡ್ತೀರ. ಯಾರೂ ನಿಮ್ಮನ್ನ ಹಿಡಿಯೋಕೆ ಬರಲ್ಲ. ಖುಷಿಯಾಗಿ ಬದುಕನ್ನ ಆನಂದಿಸಿ. ನಿಮ್ಮ ಬದುಕೇ ಬಿಂದಾಸ್." ಎಂದು ಹೇಳಿತಂತೆ.

55

ಈ ಕತೆಯಿಂದ ತಿಳಿಯುವ ಮುಖ್ಯ ವಿಷಯ ಏನಂದ್ರೆ..

ಪಕ್ಕದವರ ಬದುಕು ನಮ್ಮ ಬದುಕಿಗಿಂತ ಚೆನ್ನಾಗಿದೆ ಅಂತ  ನಾವು ಅಂದುಕೊಳ್ಳೋದು ಸಹಜ. ಆದ್ರೆ ಎಲ್ಲರಿಗೂ ಅವರದ್ದೇ ಆದ ಕಷ್ಟಗಳಿರುತ್ತವೆ. ನಮ್ಮ ಬದುಕನ್ನ ನಾವು ಎಷ್ಟು ಚೆನ್ನಾಗಿ ಆನಂದಿಸ್ತೀವಿ ಅನ್ನೋದೇ ಕೊನೆಗೆ ಮುಖ್ಯ. ಪಕ್ಕದವರಿಗೆ ತೊಂದರೆ ಕೊಡದೆ ನಮ್ಮ ಬದುಕನ್ನ ನಾವು ಬದುಕೋದೇ ಜೀವನದ ನಿಜವಾದ ಅರ್ಥ.

Read more Photos on
click me!

Recommended Stories