ಈ ಮಂತ್ರ ಪಠಿಸೋದ್ರಿಂದ ಶೀಘ್ರದಲ್ಲಿ ನೀವು ಪ್ರೀತಿಸಿದವರ ಜೊತೆನೇ ಮದ್ವೆ ಆಗುತ್ತಂತೆ

Published : Feb 06, 2025, 06:42 PM ISTUpdated : Feb 07, 2025, 10:03 AM IST

ಜ್ಯೋತಿಷ್ಯದಲ್ಲಿ, ಶೀಘ್ರ ಮದುವೆಯಾಗಲು ಬಹಳಷ್ಟು ಪರಿಹಾರಗಳನ್ನು ನೀಡಲಾಗಿದೆ. ಆದರೆ ಇವತ್ತು ನಿಮಗೊಂದು ವಿಶೇಷ ಮಂತ್ರವನ್ನು ಹೇಳುತ್ತೇವೆ, ಈ ಮಂತ್ರವನ್ನು ಹೇಳಿದ್ರೆ ಶೀಘ್ರದಲ್ಲೇ ಅವರು ಪ್ರೀತಿಸಿದವರನ್ನೇ ಮದುವೆಯಾಗುತ್ತಾರಂತೆ.  

PREV
18
ಈ ಮಂತ್ರ ಪಠಿಸೋದ್ರಿಂದ ಶೀಘ್ರದಲ್ಲಿ ನೀವು ಪ್ರೀತಿಸಿದವರ ಜೊತೆನೇ ಮದ್ವೆ ಆಗುತ್ತಂತೆ

ಪ್ರೇಮ ವಿವಾಹಗಳು (Love marriage) ಮತ್ತು ಅರೇಂಜ್ ಮ್ಯಾರೇಜ್ ಆಗಲಿ, ನಿಮಗೆ ಆದಷ್ಟು ಬೇಗನೆ ಮದುವೆಯಾಗಬೇಕು ಎಂದು ಅನಿಸಿದ್ರೆ, ಖಂಡಿತವಾಗಿಯೂ ಈ ಮಂತ್ರವನ್ನು ಪಠಿಸಿ. ಇದರಿಂದ ಶೀಘ್ರದಲ್ಲೇ ನಿಮ್ಮ ಮದುವೆಯಾಗುತ್ತೆ. 
 

28

ಭಗವಾನ್ ಶಿವ (Lord Shiva) ಮತ್ತು ತಾಯಿ ಪಾರ್ವತಿಯ ವಿವಾಹವು ಪ್ರೇಮ ವಿವಾಹಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ. ಬ್ರಹ್ಮಾಂಡದಲ್ಲೇ ಮೊದಲ ಪ್ರೀತಿಯ ವಿಷ್ಯ ಬಂದಾಗ ಬರುವ ಮೊದಲ ಹೆಸರು ಶಿವ- ಪಾರ್ವತಿ. ಅವರಿಬ್ಬರ ಪ್ರೀತಿಗೆ ಸರಿಸಾಟಿ ಬೇರೆ ಯಾವುದೂ ಇರಲಾರದು.
 

38

ನೀವು ಸಹ ಪ್ರೇಮ ವಿವಾಹವಾಗಬೇಕು ಎಂದು ಅಂದುಕೊಂಡಿದ್ದರೆ ಹಾಗೂ ಅದು ಸಾಧ್ಯವಾಗದೇ ಇದ್ದರೆ, ಅಥವಾ ಪ್ರೇಮ ವಿವಾಹದಲ್ಲಿ ಅಡೆತಡೆಗಳನ್ನು ಎದುರಿಸುತ್ತಿದ್ದರೆ, ಈ ಮಂತ್ರವನ್ನು ನಿಯಮಿತವಾಗಿ ಪಠಿಸುವುದರಿಂದ ಅಪೇಕ್ಷಿತ ಫಲಿತಾಂಶಗಳನ್ನು ಪಡೆಯಬಹುದು.

48

ಆ ಮಂತ್ರ ಯಾವುದು ಅನ್ನೋದನ್ನು ಹೇಳ್ತೀನಿ ಕೇಳಿ. "ಓಂ ನಮಃ ಶಿವಾಯ” (Om Namah Shivay). ಹೌದು ಶಿವನನ್ನು ಪೂಜಿಸುವ ಓಂ ನಮಃ ಶಿವಾಯ ಮಂತ್ರವನ್ನು ಭಕ್ತಿಯಿಂದ ಜಪಿಸಿದರೆ ನಿಮ್ಮ ಪ್ರೀತಿಗೂ ಜಯ ಸಿಗುತ್ತೆ. 
 

58

ಈ ಮಂತ್ರವನ್ನು ಜಪ ಮಾಡುವಾಗ, ಶಿವ ಮತ್ತು ತಾಯಿ ಪಾರ್ವತಿಯನ್ನು ಧ್ಯಾನಿಸಿ. ಶಿವಲಿಂಗದ (Shivaling) ಮೇಲೆ ನೀರು ಅಥವಾ ಹಸಿ ಹಾಲನ್ನು ಅರ್ಪಿಸಿ. ಇದು ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಆದಷ್ಟು ಬೇಗನೆ ಫಲಿತಾಂಶಗಳನ್ನು ನೀಡುತ್ತದೆ.
 

68

ಸೋಮವಾರ, ಶಿವ ದೇವಾಲಯಕ್ಕೆ ಹೋಗಿ ಶಿವಲಿಂಗದ ಮೇಲೆ ಬಿಲ್ವಪತ್ರೆ ಎಲೆಗಳು ಮತ್ತು ನೀರನ್ನು ಅರ್ಪಿಸಿ ಮತ್ತು "ಓಂ ನಮಃ ಶಿವಾಯ" ಎಂದು ಪಠಿಸಿ. ಇದನ್ನು ನೀವು ಶ್ರದ್ಧೆಯಿಂದ ಮಾಡಿದರೆ ಶೀಘ್ರದಲ್ಲೇ ನೀವು ಪ್ರೀತಿಸಿದವರ ಜೊತೆ ನಿಮ್ಮ ಮದುವೆ ನಡೆಯುತ್ತೆ.
 

78

ಅಷ್ಟೇ ಅಲ್ಲ ಓಂ ವಜ್ರಕರನ್ ಶಿವೆ ರುಧಾ ರುಧಾ ಭಾವೆ ಮಾಮೈ ಅಮೃತ್ ಕುರು ಕುರು ಸ್ವಾಹಾ. ಈ ಮಂತ್ರವನ್ನು 21 ದಿನಗಳವರೆಗೆ ಪ್ರತಿದಿನ 108 ಬಾರಿ ಪಠಿಸಿ, ಇದು ಪ್ರೇಮ ವಿವಾಹದಲ್ಲಿನ ಅಡೆತಡೆಗಳನ್ನು ತೆಗೆದುಹಾಕುತ್ತದೆ.
 

88

ಪ್ರೇಮ ವಿವಾಹಕ್ಕೆ ಇರುವ ಅಡೆತಡೆಗಳನ್ನು ನಿವಾರಿಸಲು ಇತರ ಕ್ರಮಗಳು ಯಾವುವೆಂದರೆ ಗಣೇಶನನ್ನು ಪೂಜಿಸುವುದು, ಏಕೆಂದರೆ ಗಣೇಶ ದೇವರು ಮದುವೆಯಲ್ಲಿನ ಅಡೆತಡೆಗಳನ್ನು ನಿವಾರಣೆ ಮಾಡುತ್ತಾರೆ. ಪ್ರೇಮ ಸಂಬಂಧಗಳನ್ನು ಬಲಪಡಿಸಲು ಶುಕ್ರವಾರದಂದು ಮಾತಾ ಲಕ್ಷ್ಮಿಯನ್ನು (Goddess Lakshmi) ಪೂಜಿಸಿ.
 

Read more Photos on
click me!

Recommended Stories