ಗಣೇಶನಿಗೆ ಪೂಜೆ ಸಲ್ಲಿಸಿದ ವಿಡಿಯೋ ಶೇರ್​ ಮಾಡಿ ಕಮೆಂಟ್​ ಸೆಕ್ಷನ್​ ಆಫ್​ ಮಾಡಿದ ನಟಿ ಸೋನಾಕ್ಷಿ ಸಿನ್ಹಾ

Published : Sep 19, 2026, 06:30 PM IST

ನಟಿ ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಇಕ್ಬಾಲ್ ತಮ್ಮ ಮದುವೆಯ ನಂತರದ ವಿವಾದಗಳ ನಡುವೆಯೂ ಗಣೇಶ ಚತುರ್ಥಿಯನ್ನು ಆಚರಿಸಿದ್ದಾರೆ. ಅರ್ಪಿತಾ ಖಾನ್ ಮನೆಯಲ್ಲಿ ಗಣೇಶನಿಗೆ ಆರತಿ ಮಾಡಿದ ವಿಡಿಯೋವನ್ನು ಹಂಚಿಕೊಂಡಿರುವ ದಂಪತಿ, ಕುತೂಹಲಕಾರಿಯಾಗಿ ಕಾಮೆಂಟ್ ಸೆಕ್ಷನ್ ಆಫ್ ಮಾಡಿದ್ದಾರೆ.

PREV
17
ಸೋನಾಕ್ಷಿ- ಜಹೀರ್​

ಮೈಮನ ಎಲ್ಲವನ್ನೂ ರಾಮಮಯವಾಗಿಸಿಕೊಂಡಿರುವ, ರಾಮನ ಭಕ್ತ ನಟ ಶತ್ರುಘ್ನ ಸಿನ್ಹಾ ಅವರ ಪುತ್ರಿ ಸೋನಾಕ್ಷಿ ಸಿನ್ಹಾ, ಜಹೀರ್ ಇಕ್ಬಾಲ್ ಅವರನ್ನು ಮದುವೆಯಾಗಿ ಸೋನಾಕ್ಷಿ ಜಹೀರ್ ಇಕ್ಬಾಲ್ ಆಗಿರುವುದು ಹಳೆಯ ಸುದ್ದಿ. ದಂಪತಿ ಈಗ ವಿದೇಶಗಳನ್ನು ಸುತ್ತುತ್ತಾ ಲೈಫ್​ ಎಂಜಾಯ್​ ಮಾಡುತ್ತಿದ್ದಾರೆ.

27
ಮದುವೆಯಾದಾಗಿನಿಂದ ಸುದ್ದಿ

ಅಷ್ಟಕ್ಕೂ ನಟಿ ಮದುವೆಯಾದಾಗಿನಿಂದಲೂ ಸದ್ದು ಮಾಡುತ್ತಲೇ ಇದ್ದಾರೆ. ಹಿಂದೂ-ಮುಸ್ಲಿಂ ಮದುವೆಯಾದ್ದರಿಂದ ಜೊತೆಗೆ ಅಪ್ಪನಿಗೆ ತಿಳಿಸದೇ ನಟಿ ಮದುವೆಯಾಗಿದ್ದರಿಂದಲೂ ಇವರ ಬಗ್ಗೆ ಇನ್ನೂ ಸುದ್ದಿಯಾಗುತ್ತಲೇ ಇದೆ. ಹೋದಲ್ಲಿ, ಬಂದಲ್ಲಿ ಇವರ ಮೇಲೆ ಕ್ಯಾಮೆರಾ ಕಣ್ಣು ನೆಟ್ಟಿರುತ್ತದೆ.

37
ಆರೇಳು ವರ್ಷ ಡೇಟಿಂಗ್​

ಅಷ್ಟಕ್ಕೂ ಇವರೇನೂ ದಿಢೀರ್‌ ಮದುವೆಯಾಗಿದ್ದಲ್ಲ. ಆರೇಳು ವರ್ಷ ಒಟ್ಟಿಗೇ ಇದ್ದು, ಡೇಟಿಂಗ್‌ ಮಾಡಿದ ಬಳಿಕ ಮದುವೆಯಾಗಿದ್ದಾರೆ. ಇವರು ಡೇಟಿಂಗ್‌ ಮಾಡುತ್ತಿದ್ದ ವಿಷಯ ಅಷ್ಟೊಂದು ಬೆಳಕಿಗೆ ಬಂದಿರದ ಹಿನ್ನೆಲೆಯಲ್ಲಿ ಮದುವೆಯಾದ ಮೇಲೆ ದಿಢೀರನೆ ಸಾಕಷ್ಟು ಚರ್ಚೆಗಳಿಗೆ ಗ್ರಾಸವಾಗಿದೆ. ಈ ಮದುವೆ ಲವ್‌ ಜಿಹಾದ್‌ ಎನ್ನುವ ಮಟ್ಟಕ್ಕೂ ಚರ್ಚೆಯಾಗಿ ಬಿಟ್ಟಿತು. ಸಾಲದು ಎನ್ನುವುದಕ್ಕೆ ಸೋನಾಕ್ಷಿ ತಮ್ಮ ತಂದೆಗೇ ತಿಳಿಸದೇ ಈ ಮದುವೆಯಾಗಿರುವುದು ಮತ್ತಷ್ಟು ವಿವಾದಕ್ಕೆ ಈಡಾಗಿತ್ತು. ಈಗ ಎಲ್ಲವೂ ಒಂದು ಹಂತಕ್ಕೆ ಬಂದಿದ್ದರೂ, ಸೋನಾಕ್ಷಿ ಮದುವೆಯ ವಿಷಯವನ್ನು ಕೆದಕುವುದು ನೆಟ್ಟಿಗರಿಗೆ ಇನ್ನಿಲ್ಲದ ಖುಷಿ ಎನ್ನಿಸುತ್ತಿದೆ.

47
ಕಮೆಂಟ್​ ಸೆಕ್ಷನ್​ ಆಫ್​

ಇದೀಗ ಗಣೇಶನ ಹಬ್ಬವನ್ನು ಸೋನಾಕ್ಷಿ ಮನೆಯಲ್ಲಿ ಅದ್ಧೂರಿಯಿಂದ ಆಚರಿಸಿದ್ದಾರೆ. ಸೋನಾಕ್ಷಿ ಸಿನ್ಹಾ ಮತ್ತು ಅವರ ಪತಿ ಜಹೀರ್ ಇಕ್ಬಾಲ್ ಅವರು ಅರ್ಪಿತಾ ಖಾನ್ ಶರ್ಮಾ ಅವರ ನಿವಾಸದಲ್ಲಿ ಗಣಪತಿ ಆಚರಣೆಯ ವಿಡಿಯೋ ಶೇರ್​ ಮಾಡಿಕೊಂಡಿದ್ದಾರೆ. ಸೋನಾಕ್ಷಿ ಮತ್ತು ಜಹೀರ್ ಈ ವಿಡಿಯೋ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡರು. ಆದರೆ ಕುತೂಹಲ ಎನ್ನುವಂತೆ ಕಮೆಂಟ್​ ಸೆಕ್ಷನ್​ ಆಫ್​ ಮಾಡಿದ್ದಾರೆ!

57
ಹಲವರು ಭಾಗಿ

ಈ ವಿಡಿಯೋ, ಅರ್ಪಿತಾ ಖಾನ್ ಶರ್ಮಾ ಅವರ ಮನೆಯಲ್ಲಿ ಸುಂದರವಾಗಿ ಅಲಂಕರಿಸಲ್ಪಟ್ಟ ಗಣೇಶ ವಿಗ್ರಹದ ಒಂದು ನೋಟವನ್ನು ತೋರಿಸುವುದರೊಂದಿಗೆ ಪ್ರಾರಂಭವಾಗುತ್ತದೆ. ನಂತರ ಸೋನಾಕ್ಷಿ ಮತ್ತು ಜಹೀರ್ ಜಂಟಿಯಾಗಿ ಆರತಿ ಮಾಡುವುದನ್ನು ತೋರಿಸುತ್ತದೆ, ಖಾನ್ ಕುಟುಂಬದ ಹಲವಾರು ಸದಸ್ಯರನ್ನು ಹಿನ್ನೆಲೆಯಲ್ಲಿ ಕಾಣಬಹುದು.

67
ಮತಾಂತರದ ಬಗ್ಗೆ ಮಾವ

ಅಷ್ಟಕ್ಕೂ ಸೋನಾಕ್ಷಿ ವಿವಾಹವಾದ ಮೇಲೆ ಮತಾಂತರ ಆಗುತ್ತಿದ್ದಾರೆ ಎನ್ನುವ ಬಗ್ಗೆ ಸಾಕಷ್ಟು ಟೀಕೆಗಳು ಕೇಳಿಬಂದಿದ್ದ ಹಿನ್ನೆಲೆಯಲ್ಲಿ, ಇದಾಗಲೇ ಜಹೀರ್‌ ತಂದೆ ಇಕ್ಬಾಲ್ ರತನ್ಸಿ, ಇದಕ್ಕೆ ಸ್ಪಷ್ಟನೆ ಕೊಟ್ಟಿದ್ದಾರೆ. ಇದು ಹಿಂದೂ ಅಥವಾ ಮುಸ್ಲಿಂ ಆಚರಣೆಗಳನ್ನು ಹೊಂದಿರುವುದಿಲ್ಲ. ಇದು ನಾಗರಿಕ ವಿವಾಹವಾಗಲಿದೆ ಎಂದಿದ್ದರು. ಮದುವೆಯ ನಂತರ ಇಸ್ಲಾಂಗೆ ಮತಾಂತರಗೊಳ್ಳುತ್ತಾಳೆ ಎಂಬ ವರದಿಯಲ್ಲಿ ಸತ್ಯವಿಲ್ಲ. ಇದು ಸತ್ಯಕ್ಕೆ ದೂರವಾದ ವಿಷಯ ಎಂದಿದ್ದರು.

77
ಎಲ್ಲರೂ ಒಂದೇ

ಅವಳು ಮತಾಂತರಗೊಳ್ಳುತ್ತಿಲ್ಲ. ಇದು ನಿಶ್ಚಿತ. ಅವರಿಬ್ಬರದ್ದೂ ಹೃದಯಗಳು ಒಂದಾಗಿವೆ. ಇದರ ನಡುವೆ ಧರ್ಮವು ಯಾವುದೇ ಪಾತ್ರವನ್ನು ವಹಿಸುವುದಿಲ್ಲ. ಸೋನಾಕ್ಷಿ ಮತಾಂತರವಾಗುವುದಿಲ್ಲ. ನಾನು ಮಾನವೀಯತೆಯನ್ನು ನಂಬುತ್ತೇನೆ. ದೇವರನ್ನು ಹಿಂದೂಗಳು ಭಗವಾನ್ ಮತ್ತು ಮುಸ್ಲಿಮರು ಅಲ್ಲಾ ಎಂದು ಕರೆಯುತ್ತಾರೆ. ಆದರೆ ದಿನದ ಕೊನೆಯಲ್ಲಿ, ನಾವೆಲ್ಲರೂ ಮನುಷ್ಯರು. ನನ್ನ ಆಶೀರ್ವಾದ ಜಹೀರ್ ಮತ್ತು ಸೋನಾಕ್ಷಿ ಅವರ ಮೇಲಿದೆ. ಸುಮ್ಮನೇ ಸುಳ್ಳು ಸುದ್ದಿ ಹರಡಿಸಬೇಡಿ ಎಂದು ಅವರು ಹೇಳಿದ್ದರು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories