ನಾನೇನಾದ್ರೂ ತ್ರಿಶಾ ಜಾಗದಲ್ಲಿ ಇದ್ದಿದ್ದರೆ... ವಿಜಯ್​ ಜೊತೆಗಿನ ಗಾಸಿಪ್​ ಕುರಿತು ಹಿರಿಯ ನಟಿ ಅಂಬಿಕಾ ಹೇಳಿದ್ದೇನು

Published : Sep 16, 2026, 02:10 PM IST

ನಟ ವಿಜಯ್ ಮತ್ತು ತ್ರಿಶಾ ಕೃಷ್ಣನ್ ಅವರು ಇತ್ತೀಚೆಗೆ ಹಲವು ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದು, ಇವರ ನಡುವಿನ ಆಪ್ತತೆಯ ಬಗ್ಗೆ ಮತ್ತೆ ಚರ್ಚೆ ಶುರುವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಹಿರಿಯ ನಟಿ ಅಂಬಿಕಾ, ಉನ್ನತ ಸ್ಥಾನದಲ್ಲಿರುವವರ ಸ್ನೇಹಕ್ಕೆ ಬೇರೆ ಅರ್ಥ ಕಲ್ಪಿಸಬಾರದು ಎಂದಿದ್ದಾರೆ.

PREV
16
ವಿಜಯ್​-ತ್ರಿಶಾ ಜೋಡಿ

ಏನಿಲ್ಲಾ, ಏನಿಲ್ಲಾ.. ನಮ್ಮ ನಡುವೆ ಏನಿಲ್ಲಾ ಎನ್ನುತ್ತಿದ್ದರೂ ತಮಿಳುನಾಡಿನ ಮುಖ್ಯಮಂತ್ರಿ ಜೋಸೆಫ್​ ವಿಜಯ್​ ಮತ್ತು ನಟಿ ತ್ರಿಶಾ ಕೃಷ್ಣನ್​ ಆಗಾಗ್ಗೆ ಬಹಳ ಸದ್ದು ಮಾಡುತ್ತಲೇ ಇದ್ದಾರೆ. ಕೆಲ ದಿನಗಳಿಂದ ಇವರಿಬ್ಬರ ನಡುವಿನ ಸುದ್ದಿಗಳು ಬೂದಿ ಮುಚ್ಚಿದ ಕೆಂಡದಂತೆ ಇದ್ದು, ಈಗ ಮತ್ತೊಮ್ಮೆ ಭುಗಿಲೆದಿದ್ದಿದೆ.

26
ಹಲವು ಬಾರಿ ಕಾಣಿಸಿಕೊಂಡ ಜೋಡಿ

ಎಜಿಎಸ್ ಸಿನಿಮಾಸ್ ಸಂಸ್ಥೆಯ ಮಾಲೀಕ ಕಲ್ಪತಿ ಎಸ್. ಸುರೇಶ್ ಅವರ ಮಗನ ವಿವಾಹ ಆರತಕ್ಷತೆಯಲ್ಲಿ ಈ ಜೋಡಿ ಒಂದೇ ರೀತಿಯ ಉಡುಪಿನಲ್ಲಿ ಕಾಣಿಸಿಕೊಂಡಿದ್ದರು. ಇದು ಸಾಕಷ್ಟು ಊಹಾಪೋಹಕ್ಕೆ ಕಾರಣವಾಗಿದ್ದ ನಡುವೆಯೇ, ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮವೊಂದರಲ್ಲಿ ಇಬ್ಬರೂ ಒಟ್ಟಿಗೇ ಕುಳಿತ ವಿಡಿಯೋ ಜಾಲತಾಣದಲ್ಲಿ ಹರಿದಾಡಿತು. ಇದಾದ ನಂತರ, ಯುಕೆಯ ಸಿಲ್ವರ್‌ಸ್ಟೋನ್‌ನಲ್ಲಿ ನಡೆದ ಅಜಿತ್ ಕುಮಾರ್ ಅವರ 'ಲೆ ಮಾನ್ಸ್ ಕಪ್' (Le Mans Cup) ರೇಸ್‌ನಲ್ಲಿ ಇವರಿಬ್ಬರೂ ಒಟ್ಟಿಗೆ ಕಾಣಿಸಿಕೊಂಡರು; ಅಲ್ಲಿ ವಿಜಯ್ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ರೇಸ್ ವೀಕ್ಷಿಸುತ್ತಿರುವ ವಿಜಯ್ ಮತ್ತು ತ್ರಿಶಾ ಅವರ ವಿಡಿಯೋಗಳು ಹೊರಬಂದಿದ್ದು, ಮತ್ತೊಮ್ಮೆ ಚರ್ಚೆಗೆ ಕಾರಣವಾಗಿದೆ.

36
ನಟಿ ಅಂಬಿಕಾ ಮಾತು

ಇದರ ನಡುವೆಯೇ ಸ್ಯಾಂಡಲ್​ವುಡ್​ನ ಹಿರಿಯ ನಟಿ, ಅಂಬಿಕಾ ಅವರು ವಿಜಯ್ ಮತ್ತು ತ್ರಿಶಾ ಅವರ ಸ್ನೇಹದ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. 'ರೆಡ್‌ಪಿಕ್ಸ್' ಚಾನೆಲ್​ಗೆ ನಟಿ ನೀಡಿರುವ ಸಂದರ್ಶನದಲ್ಲಿ ಈ ವಿಷಯವನ್ನು ತಿಳಿಸಿದ್ದಾರೆ. ಒಬ್ಬ ವ್ಯಕ್ತಿ ಉನ್ನತ ಸ್ಥಾನವನ್ನು ತಲುಪಿದ ಮಾತ್ರಕ್ಕೆ ಅವರ ಸ್ನೇಹಕ್ಕೆ ತಕ್ಷಣವೇ ಬೇರೊಂದು ಅರ್ಥವನ್ನು ಕಲ್ಪಿಸಬಾರದು. ಆದರೆ, ಪ್ರಮುಖ ಹುದ್ದೆಯಲ್ಲಿರುವ ಆಪ್ತ ಸ್ನೇಹಿತರ ಬಗ್ಗೆ ನಕಾರಾತ್ಮಕ ಟೀಕೆಗಳಿಗೆ ಎಡೆಮಾಡಿಕೊಡುವಂತಹ ಸನ್ನಿವೇಶಗಳನ್ನು ನಾನು ತಪ್ಪಿಸುತ್ತಿದ್ದೆ. ಎಂದಿದ್ದಾರೆ.

46
ತಮ್ಮದೇ ಉದಾಹರಣೆ ನೀಡಿದ ನಟಿ

ತಮ್ಮದೇ ಉದಾಹರಣೆಯನ್ನು ನೀಡಿದ ಅಂಬಿಕಾ, ನನಗೆ ಮತ್ತೊಬ್ಬ ವ್ಯಕ್ತಿಯೊಂದಿಗೆ ಸ್ನೇಹವಿದೆ ಎಂದುಕೊಳ್ಳಿ. ಆತ ಅಧಿಕಾರದ ಸ್ಥಾನದಲ್ಲಿದ್ದಾನೆ. ನಾನು ಅವನೊಂದಿಗೆ ಎಲ್ಲಿಗಾದರೂ ಹೋದರೆ ಅವನಿಗೆ ಅದರಿಂದ ನೆಗೆಟಿವ್ ಕಾಮೆಂಟ್ ಗಳು ಬರುತ್ತವೆ ಎಂದು ನನಗೆ ಅನಿಸಿದರೆ, ಆ ಸ್ನೇಹವನ್ನು ನಾನು ನಿಜವಾಗಿಯೂ ಗೌರವಿಸುತ್ತಿದ್ದರೂ, ಅವನೊಂದಿಗೆ ಅಲ್ಲಿಗೆ ಹೋಗುವುದಿಲ್ಲ ಎಂದು ಅಂಬಿಕಾ ಹೇಳಿದ್ದಾರೆ. ಇದು ನನ್ನ ಅಭಿಪ್ರಾಯ. ನಾವು ಸ್ನೇಹಕ್ಕೆ ಬೆಲೆ ನೀಡಬೇಕು, ಆದರೆ ಅದೇ ಸಮಯದಲ್ಲಿ ಎಚ್ಚರಿಕೆಯಿಂದಲೂ ಇರಬೇಕು' ಎಂದಿದ್ದಾರೆ ನಟಿ.

56
ಯಾವುದೇ ನಿರ್ಧಾರಕ್ಕೆ ಬರಲಿಲ್ಲ

ಹಾಗೆಯೇ ತ್ರಿಶಾ ಮತ್ತು ವಿಜಯ್ ವೈಯಕ್ತಿಕ ಸಂಬಂಧದ ಬಗ್ಗೆ ಯಾವುದೇ ನಿರ್ಧಾರಕ್ಕೆ ಬರಲು ಅಂಬಿಕಾ ನಿರಾಕರಿಸಿದ್ದಾರೆ. ಸ್ನೇಹವನ್ನು ಗೌರವಿಸುವಾಗ ನಾವು ಜಾಗರೂಕರಾಗಿರಬೇಕು. ನೆಗೆಟಿವ್ ಟೀಕೆಗಳು ಬರುತ್ತಿದ್ದರೆ ಅದನ್ನು ತಪ್ಪಿಸುವುದು ಉತ್ತಮ ಎನ್ನುವುದು ನಟಿ ಅಂಬಿಕಾ ಮಾತು.

66
ಸ್ನೇಹವನ್ನು ಮುರಿದುಕೊಳ್ಳಲು ಸಾಧ್ಯವಿಲ್ಲ

ಒಬ್ಬ ವ್ಯಕ್ತಿ ಉನ್ನತ ಸ್ಥಾನಕ್ಕೇರಿದರೆಂದ ಮಾತ್ರಕ್ಕೆ ಜನರು ಸ್ನೇಹವನ್ನು ಮುರಿದುಕೊಳ್ಳಲು ಸಾಧ್ಯವಿಲ್ಲ. ಇಬ್ಬರು ವ್ಯಕ್ತಿಗಳು ಸ್ನೇಹಿತರಾಗಿದ್ದಾಗ, ಅವರಲ್ಲಿ ಒಬ್ಬರು ಜೀವನದಲ್ಲಿ ಉನ್ನತ ಸ್ಥಾನವನ್ನು ತಲುಪಿದರೆ, ಆ ಸ್ನೇಹವನ್ನು ನಾವು ತಿರಸ್ಕರಿಸಲಾಗುವುದಿಲ್ಲ. ಅದಕ್ಕೆ ಬೇರೆಯದೇ ಅರ್ಥ ಕಲ್ಪಿಸಬಾರದು. ಅಂತಹ ಸಂದರ್ಭದಲ್ಲಿ ನಾವೇನು ​​ಮಾಡುತ್ತಿದ್ದೆವು ಎಂಬುದನ್ನು ಹೇಳಬಹುದೇ ಹೊರತು, ಇನ್ನೊಬ್ಬರು ಏನು ಮಾಡಬೇಕು ಅಥವಾ ಮಾಡಬಾರದು ಎಂದು ನಾವು ಹೇಳಲಾಗುವುದಿಲ್ಲ' ಎಂದರು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories