ಮದುವೆ ಸಂಭ್ರಮದಲ್ಲಿ Karna Serial ಭವ್ಯಾ ಗೌಡ: ಮೆಹಂದಿ ಶಾಸ್ತ್ರದಲ್ಲಿ ಮಿಂಚಿದ ನಟಿ- ಪತಿ ಯಾರು

Published : Sep 18, 2026, 12:30 PM IST

'ಕರ್ಣ' ಸೀರಿಯಲ್ ನಟಿ ಭವ್ಯಾ ಗೌಡ ಅವರ ಮನೆಯಲ್ಲಿ ಮದುವೆಯ ಸಂಭ್ರಮ ಮನೆಮಾಡಿದೆ. ಬಿಗ್ ಬಾಸ್ ಕಾಸ್ಟಿಂಗ್ ಡೈರೆಕ್ಟರ್ ಹೇಮಂತ್ ಕುಮಾರ್ ಜೊತೆ ಅಕ್ಕ ದಿವ್ಯಾ ಗೌಡ ಅವರ ಮೆಹಂದಿ ಶಾಸ್ತ್ರ ಅದ್ಧೂರಿಯಾಗಿ ನೆರವೇರುತ್ತಿದೆ. ಕಿರುತೆರೆಯ ಹಲವು ಗಣ್ಯರು ಭಾಗವಹಿಸಿ ನವಜೋಡಿಗೆ ಶುಭಕೋರಿದ್ದಾರೆ.

PREV
16
ಸೀರಿಯಲ್​ನಲ್ಲಿ ಹನಿಮೂನ್​

ಸದ್ಯ ಕರ್ಣ ಸೀರಿಯಲ್​ನಲ್ಲಿ ನಿಧಿ ಪಾತ್ರ ಮಾಡ್ತಿರೋ ನಟಿ ಭವ್ಯಾ ಗೌಡ, ಸೀರಿಯಲ್​ನಲ್ಲಿ ಗಂಡ ಕರ್ಣನ ಜೊತೆ ಹನಿಮೂನ್​ಗೆ ಹೋಗಿದ್ದಾಳೆ. ಅಲ್ಲಿ ನಯನತಾರಾ ಕುತಂತ್ರದಿಂದ ಜೋಡಿ ಸಂಕಷ್ಟಕ್ಕೆ ಸಿಲುಕಿದೆ.

26
ಭವ್ಯಾ ಗೌಡ ಮನೆಯಲ್ಲಿ ಮದುವೆ ಸಂಭ್ರಮ

ಆದರೆ, ಅಸಲಿಗೆ ಇತ್ತ ನಟಿ ಭವ್ಯಾ ಗೌಡ, ತಮ್ಮ ಅಕ್ಕ ದಿವ್ಯಾ ಗೌಡ ಅವರ ಮದುವೆಯ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. ದಿವ್ಯಾ ಗೌಡ ಅವರು, ಸದ್ಯದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದು, ಮದುವೆ ಪೂರ್ವ ಶಾಸ್ತ್ರಗಳು ಅತ್ಯಂತ ಅದ್ಧೂರಿಯಾಗಿ ನೆರವೇರುತ್ತಿವೆ.

36
ಮೆಹಂದಿ ಶಾಸ್ತ್ರದ ಸಂಭ್ರಮ

ಹಳದಿ ಶಾಸ್ತ್ರದ ಬೆನ್ನಲ್ಲೇ, ಇದೀಗ ದಿವ್ಯಾ ಗೌಡ ಅವರ ಮೆಹಂದಿ ಶಾಸ್ತ್ರವೂ ವೈಭವದಿಂದ ಜರುಗಿದೆ. ಮದುವೆ ಪೂರ್ವ ಶಾಸ್ತ್ರಗಳು ಗ್ರ್ಯಾಂಡ್‌ ಆಗಿ ನೆರವೇರುತ್ತಿದೆ. ಇದೀಗ ಮೆಹಂದಿ ಶಾಸ್ತ್ರವೂ ಅದ್ದೂರಿಯಾಗಿ ಜರುಗುತ್ತಿವೆ.

46
ಪತಿ ಯಾರು?

ʻಬಿಗ್ ಬಾಸ್ʼ ಕಾಸ್ಟಿಂಗ್ ಡೈರೆಕ್ಟರ್ ಆಗಿರುವ ವರ ಹೇಮಂತ್ ಕುಮಾರ್ ಅವರ ಜೊತೆ ದಿವ್ಯಾ ಗೌಡ ಮದುವೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಭವ್ಯಾ ಗೌಡ ಅವರು ಕೂಡ ಕೈಗೆ ಮೆಹಂದಿ ಹಚ್ಚಿ ಸಂಭ್ರಮಿಸುತ್ತಿದ್ದು, ಇದರ ಫೋಟೋ, ವಿಡಿಯೋಗಳು ವೈರಲ್​ ಆಗುತ್ತಿವೆ.

56
ಹಲವರ ಹಾರೈಕೆ

ಈ ಅದ್ಧೂರಿ ಮೆಹಂದಿ ಕಾರ್ಯಕ್ರಮಕ್ಕೆ ನಟಿ ಹಾಗೂ ʻಬಿಗ್‌ ಬಾಸ್‌ʼ ಮಾಜಿ ಸ್ಪರ್ಧಿ ಯಮುನಾ ಶ್ರೀನಿಧಿ ಸೇರಿದಂತೆ ಕಿರುತೆರೆಯ ಹಲವು ಗಣ್ಯರು, ಆಪ್ತರು ಹಾಗೂ ಸ್ನೇಹಿತರು ಆಗಮಿಸಿ ನವಜೋಡಿಗೆ ಶುಭ ಹಾರೈಸಿದ್ದಾರೆ.

66
ಬಿಗ್​ಬಾಸ್​ಗೆ ಎಂಟ್ರಿ

ಇನ್ನು ಭವ್ಯಾ ಗೌಡ ಅವರು ಬಿಗ್​ಬಾಸ್​ನಲ್ಲಿಯೂ ಈ ಹಿಂದೆ ಮಿಂಚಿದ್ದದರು. ದಿವ್ಯಾ ಗೌಡ ಅವರು, ಬಿಗ್​ಬಾಸ್​ಗೆ ಹೋಗಿದ್ದ ಸಂದರ್ಭದಲ್ಲಿ, ಫ್ಯಾಮಿಲಿ ರೌಂಡ್​ನಲ್ಲಿ ಭವ್ಯಾ ಎಂಟ್ರಿ ಕೊಟ್ಟಾಗ, ಆಗ ಹನುಮಂತು ಜೊತೆ ದಿವ್ಯಾ ಗೌಡ ಮಾತುಕತೆ ವೈರಲ್‌ ಆಗಿತ್ತು. ಭವ್ಯಾಗಿಂತ ದಿವ್ಯಾನೇ ಸೂಪರ್​ ಎಂದು ಹಲವರು ತಮಾಷೆ ಮಾಡಿದ್ದುಂಟು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories