ಕ್ರಿಕೆಟ್ ತಾರೆ ಸ್ಮೃತಿ ಮಂಧಾನ ಅವರ ಪ್ರೇಮ ವೈಫಲ್ಯ ಮತ್ತು ನಟಿ ರಶ್ಮಿಕಾ ಮಂದಣ್ಣ ಅವರ ಹಳೆಯ ಸಂಬಂಧದ ಕುರಿತಾದ ಭಾವುಕ ನುಡಿಗಳನ್ನು ಈ ಲೇಖನ ವಿವರಿಸುತ್ತದೆ. ಇಬ್ಬರ ಹೆಸರಿನಲ್ಲಿರುವ ಸಾಮ್ಯತೆ ಹಾಗೂ ಅವರ ವೈಯಕ್ತಿಕ ಜೀವನದಲ್ಲಿನ ಏರಿಳಿತಗಳ ನಡುವಿನ ವಿಚಿತ್ರ ಹೋಲಿಕೆಯನ್ನು ಇದು ಚರ್ಚಿಸುತ್ತದೆ.
ಭಾರತೀಯ ಮಹಿಳಾ ಕ್ರಿಕೆಟ್ ತಾರೆ ಸ್ಮೃತಿ ಮಂಧನಾ ಮತ್ತು ಪಲಾಶ್ ಮುಚ್ಚಲ್ ಅವರ ವಿವಾಹ ಮುಂದೂಡಲ್ಪಟ್ಟಿತು. ಕೊನೆಗೆ, ಪಲಾಶ್ ಮುಚ್ಚಲ್ ಅವರ ವೈಯಕ್ತಿಕ ಜೀವನದ ಬಗ್ಗೆ ಹಲವು ವದಂತಿಗಳು ಹರಿದಾಡಿತು. ಮುಖ್ಯವಾಗಿ, ಪಲಾಶ್ ಮುಚ್ಚಲ್ ಒಬ್ಬ ಯುವತಿಯೊಂದಿಗೆ ಸಂಬಂಧ ಹೊಂದಿದ್ದಾರೆ ಮತ್ತು ಅವರು ಮಂಧನಾಗೆ ಮೋಸ ಮಾಡಿದ್ದಾರೆ ಎಂದು ಹೇಳಲಾದ ಕೆಲವು ಖಾಸಗಿ ಚಾಟಿಂಗ್ ಸ್ಕ್ರೀನ್‌ಶಾಟ್‌ಗಳು ನೆಟ್‌ನಲ್ಲಿ ವೈರಲ್ ಆದವು. ಈ ಚಾಟ್‌ಗಳ ಆಧಾರದ ಮೇಲೆ ಪಲಾಶ್ ಸ್ಮೃತಿಗೆ (Smriti Mandhana)ಮೋಸ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿತ್ತು.
28
ಬೀಗ ಜಡಿದಿದ್ದರು!
ಇದರ ನಡುವೆಯೇ, ನಮ್ಮ ಜೋಡಿ ಚೆನ್ನಾಗಿದೆ ಎಂದು ಮಾತನಾಡುವವರ ಬಾಯಿಗೆ ಬೀಗ ಜಡಿದಂತೆ ಕಾಣಿಸಿಕೊಂಡಿತು ಜೋಡಿ. ತಮ್ಮ ಇನ್ಸ್ಟಾಗ್ರಾಮ್ಗೆ ದೃಷ್ಟಿಬೊಟ್ಟು ಇಡುವ ಮೂಲಕ, ತಮ್ಮ ಸಂಬಂಧಕ್ಕೆ ಯಾರ ಕೆಟ್ಟ ದೃಷ್ಟಿಯೂ ಬೀಳದಿರಲಪ್ಪ ಎನ್ನುವ ರೀತಿಯಲ್ಲಿ ಪೋಸ್ಟ್ ಹಂಚಿಕೊಂಡರು. ಆದ್ದರಿಂದ ಇವರ ಬಗ್ಗೆ ಮಾತನಾಡಿದವರೆಲ್ಲಾ ಈಗ ಸುಸ್ತಾದರು!
38
ಹಣೆಬರಹವೇ ಇಷ್ಟು
ಕೊನೆಗೆ ವಿಚಿತ್ರ ಎನ್ನುವಂತೆ, ಈ ಸಂಬಂಧ ಮುರಿದು ಬಿದ್ದ ಬಗ್ಗೆ ಸಾರ್ವಜನಿಕಗೊಳಿಸಿದರು ಸ್ಮೃತಿ ಮಂಧಾನ. ಈ ಸೆಲೆಬ್ರಿಟಿಗಳ ಹಣೆಬರಹವೇ ಇಷ್ಟು. ನಾಳೆ ಮತ್ತೆ ಒಂದಾಗಿರುವುದಾಗಿ ಪೋಸ್ಟ್ ಹಾಕಿದ್ರೂ ಹಾಕಿದ್ರೇ ಎಂದು ಸೋಷಿಯಲ್ ಮೀಡಿಯಾದಲ್ಲಿ ಭಾರಿ ಟೀಕೆಗಳೂ ಕೇಳಿ ಬರುತ್ತಿವೆ.
48
ಬ್ಯಾಟಿಂಗ್ ಅಭ್ಯಾಸ
ಅದೇನೇ ಇದ್ದರೂ, ಸದ್ಯ ಸ್ಮೃತಿ ಅವರು ನೆಟ್ಸ್‌ನಲ್ಲಿ ಬ್ಯಾಟಿಂಗ್ ಅಭ್ಯಾಸ ಮಾಡುತ್ತಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
58
ರಶ್ಮಿಕಾ ಸ್ಟೋರಿ
ಇದು ಸ್ಮೃತಿ ಸ್ಟೋರಿಯಾದರೆ, ಅತ್ತ ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ (Rashmika Mandanna) ಈಗ ಎಂಗೇಜ್ ಆಗಿರುವುದು ನಿಜವೋ ಹೌದೋ ಅಲ್ಲವೋ ಎನ್ನುವ ವಿಚಿತ್ರ ಪೋಸ್ಟ್ಗಳನ್ನು ಹಾಕಿ ಫ್ಯಾನ್ಸ್ ತಲೆಗೆ ಹುಳು ಬಿಡುತ್ತಲೇ ಇದ್ದಾರೆ.
68
ರಕ್ಷಿತ್ ಶೆಟ್ಟಿ ಜೊತೆ ಎಂಗೇಜ್
ಆದರೆ, ಇದಕ್ಕೂ ಮುನ್ನ ಅವರು ಸ್ಯಾಂಡಲ್ವುಡ್ ನಟ ರಕ್ಷಿತ್ ಶೆಟ್ಟಿ (Rakshit Shetty) ಎಂಗೇಜ್ಮೆಂಟ್ ಆಗಿದ್ದರು. ಆದರೆ, ಅದು ಮುರಿದು ಬಿದ್ದಿತ್ತು. ಆದರೂ ಅದರ ಬಗ್ಗೆ ಆಗಾಗ ಚರ್ಚೆ ಆಗ್ತಿರುತ್ತೆ. ಕನ್ನಡಿಗರು, ರಶ್ಮಿಕಾ, ರಕ್ಷಿತ್ ಶೆಟ್ಟಿಗೆ ಮೋಸ ಮಾಡಿದ್ದಾರೆ ಎನ್ನುವ ಆರೋಪ ಮಾಡ್ತಾ ಬಂದಿದ್ದಾರೆ. ಅದರ ಬಗ್ಗೆ ರಕ್ಷಿತ್ ಶೆಟ್ಟಿಯಾಗ್ಲಿ, ರಶ್ಮಿಕಾ ಮಂದಣ್ಣ ಆಗ್ಲಿ ಇವರೆಗೆ ಮಾತನಾಡಿಲ್ಲ. ಆದ್ರೀಗ ರಶ್ಮಿಕಾ, ದಿ ಗರ್ಲ್ ಫ್ರೆಂಡ್ ಸಕ್ಸಸ್ ಮೀಟ್ ನಲ್ಲಿ ತಮ್ಮ ಹಳೆ ದಿನಗಳನ್ನು ಮೆಲುಕು ಹಾಕಿದ್ದಾರೆ. ರಶ್ಮಿಕಾ ಮಂದಣ್ಣ ಮಾತನ್ನು ರಕ್ಷಿತ್ ಶೆಟ್ಟಿ ಜೊತೆ ಲಿಂಕ್ ಮಾಡಲಾಗಿದೆ.
78
ರಶ್ಮಿಕಾ ಭಾವುಕ
ದಿ ಗರ್ಲ್ ಫ್ರೆಂಡ್ ಸಿನಿಮಾ ಸಕ್ಸಸ್ ಪಾರ್ಟಿಯಲ್ಲಿ ರಶ್ಮಿಕಾ ಮಂದಣ್ಣ ಭಾವುಕರಾಗಿದ್ರು. ಇದೇ ವೇಳೆ ತಮ್ಮ ಹಳೆ ದಿನಗಳನ್ನು ಸಿನಿಮಾಕ್ಕೆ ಲಿಂಕ್ ಮಾಡಿದ್ದರು. script ನೋಡ್ದಾಗ ಈ ಕಥೆ ಎಲ್ಲೋ ಕೇಳಿದ್ದೇನೆ ಅಂತ ಭಾಸವಾಗಿತ್ತು. ನನ್ನ ಇಡೀ ಜೀವನದಲ್ಲಿ ನಡೆದ ಘಟನೆಯನ್ನೇ ಈ ಸಿನಿಮಾ ಹೊಂದಿದೆ. ಎಲ್ಲದೂ ನಂದೇ ತಪ್ಪು ಅಂತ ನಾನು ಆಗ ಅಂದ್ಕೊಂಡಿದ್ದೆ. ಆಗ ನನಗೆ ಯಾರೂ ಸಲಹೆ ನೀಡೋರು ಇರಲಿಲ್ಲ ಎಂದಿದ್ದರು.
88
ಮಂದಣ್ಣ ಮತ್ತು ಮಂಧಾನ
ಇದೀಗ ಸ್ಮೃತಿ ಮಂಧಾನ ಮತ್ತು ರಶ್ಮಿಕಾ ಮಂದಣ್ಣ ಅವರ ಹೆಸರಿನ ಜೊತೆ ಥಳಕು ಹಾಕಲಾಗುತ್ತದೆ. ಮಂದಣ್ಣ ಮತ್ತು ಮಂಧಾನ ನಡುವೆ ಏನಪ್ಪಾ ಇದೆ ಹೋಲಿಕೆ, ಏನಪ್ಪಾ ಇದೆ ಗ್ರಹಚಾರ ಎನ್ನುತ್ತಿದ್ದಾರೆ.