PUBG ಗೇಮ್​ನಿಂದ 6ನೇ ಮಗುವಿನತ್ತ ಪಯಣ: ಅಕ್ರಮವಾಗಿ ಭಾರತಕ್ಕೆ ಬಂದಿದ್ದಾಕೆ ಮತ್ತೊಮ್ಮೆ ಗರ್ಭಿಣಿ!

Published : Dec 07, 2025, 05:49 PM IST

ಪಾಕಿಸ್ತಾನದಿಂದ ಅಕ್ರಮವಾಗಿ ಭಾರತಕ್ಕೆ ಬಂದ ಸೀಮಾ ಹೈದರ್, ಸಚಿನ್ ಮೀನಾ ಜೊತೆ ಸಂಸಾರ ನಡೆಸುತ್ತಿದ್ದಾರೆ. ಈಗಾಗಲೇ ಐದು ಮಕ್ಕಳ ತಾಯಿಯಾಗಿರುವ ಸೀಮಾ, ಇದೀಗ 6ನೇ ಮಗುವಿನ ನಿರೀಕ್ಷೆಯಲ್ಲಿದ್ದು, ಮತ್ತೆ ಸುದ್ದಿಯಾಗಿದ್ದಾರೆ.

PREV
17
ಪಾಕ್​ನಿಂದ ಅಕ್ರಮ ಪ್ರವೇಶ

ಕೆಲ ವರ್ಷಗಳ ಹಿಂದೆ ಭಾರಿ ಸದ್ದು ಮಾಡಿದ್ದಾಕೆ ಪಾಕಿಸ್ತಾನದ ಸೀಮಾ ಹೈದರ್​. 2023ರಲ್ಲಿ ಸೀಮಾ ಹೈದರ್‌ ತನ್ನ ನಾಲ್ಕು ಮಕ್ಕಳ ಜೊತೆ ಪಾಕಿಸ್ತಾನ ಬಿಟ್ಟು ಭಾರತಕ್ಕೆ ಆಗಮಿಸಿದ್ದಳು.

27
ನಾಲ್ಕು ಮಕ್ಕಳ ಅಮ್ಮ

ಆನ್‌ಲೈನ್‌ನಲ್ಲಿ ಪಬ್ಜಿ ಆಡುತ್ತಿದ್ದಾಗ ಆಕೆಗೆ ಉತ್ತರ ಪ್ರದೇಶ ಮೂಲದ ಸಚಿನ್ ಮೀನಾ ಎಂಬಾತನ ಪರಿಚಯವಾಗಿತ್ತು. ಇದಾದ ನಂತರ ಆತನನ್ನು ಭೇಟಿಯಾಗುವುದಕ್ಕಾಗಿ ಆಕೆ ತನ್ನ ನಾಲ್ವರು ಮಕ್ಕಳೊಂದಿಗೆ ನೇಪಾಳಕ್ಕೆ ಬಂದು ಅಲ್ಲಿಂದ ಅಕ್ರಮವಾಗಿ ಭಾರತ ಪ್ರವೇಶಿಸಿದ್ದಳು.

37
ಧರ್ಮ ಬದಲಿಸಿ ಮದುವೆ

ಹೀಗೆ ಭಾರತಕ್ಕೆ ಬಂದ ಸೀಮಾ ಧರ್ಮ ಬದಲಿಸಿಕೊಂದು ಸಚಿನ್‌ನನ್ನು ಮದುವೆಯಾಗಿದ್ದು, ಒಂದು ಮಗುವಾಗಿತ್ತು. ಅಲ್ಲಿಗೆ ಸದ್ಯ ಇವರು ಐವರು ಮಕ್ಕಳ ಅಪ್ಪ- ಅಮ್ಮ. ಆದರೆ ಇದೀಗ ಸೀಮಾ 7 ತಿಂಗಳ ಗರ್ಭಿಣಿಯಾಗಿದ್ದಾಳೆ. ಈ ಮೂಲಕ 6ನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಈ ದಂಪತಿ.

47
ಗಡಿಪಾರು ಮಾಡಿ

ಪಹಲ್ಗಾಮ್ ದಾಳಿಯ ನಂತರ ಭಾರತ ಪಾಕಿಸ್ತಾನದೊಂದಿಗಿನ ಸಂಬಂಧ ಕಡಿದುಕೊಂಡಿದ್ದು, ಪಾಕಿಸ್ತಾನಿ ಪ್ರಜೆಗಳನ್ನು ದೇಶ ಬಿಡುವಂತೆ ಸೂಚಿಸಿತ್ತು. ಆಗ ಸೀಮಾ ಹೈದರ್​ ಏನು ಮಾಡುತ್ತಾಳೆ ಎಂಬ ಪ್ರಶ್ನೆಯೂ ಮೂಡಿತ್ತು. ಆದರೆ ಆಕೆ ಮಾತ್ರ ನಾನು ಭಾರತದ ಸೊಸೆ, ಜಪ್ಪಯ್ಯ ಎಂದರೂ ಹೋಗಲ್ಲ ಎಂದು ಕೂತಿದ್ದು, ಈಗ ಮತ್ತೆ ಗರ್ಭಿಣಿಯಾಗಿದ್ದಾಳೆ!

57
ವಾಪಸ್​ ಕಳುಹಿಸಿ

ಒಬ್ಬರು ಸೀಮಾ ಹೈದರ್ ಅವರನ್ನು ಪಾಕಿಸ್ತಾನಕ್ಕೆ ವಾಪಸ್ ಕಳುಹಿಸಿ. ಆಕೆ ಕನಿಷ್ಠ 3 ರಾಷ್ಟ್ರೀಯ ಗಡಿಗಳನ್ನು ದಾಟಿ ಉತ್ತರ ಪ್ರದೇಶ ತಲುಪಲು ಅವಕಾಶ ನೀಡಿದ ಪ್ರತಿಯೊಂದು ಭದ್ರತಾ ಸಂಸ್ಥೆಯನ್ನು ಸಹ ತನಿಖೆ ಮಾಡಿ ಎಂದು ಬರೆದಿದ್ದರೆ, ಮತ್ತೊಬ್ಬರು, ಸರ್ಕಾರ ಎಲ್ಲಾ ಪಾಕಿಸ್ತಾನಿ ಪ್ರಜೆಗಳನ್ನು ಭಾರತದಿಂದ ಹೊರಹೋಗುವಂತೆ ಕೇಳಿದಾಗ, ಸೀಮಾ ಹೈದರ್ ಅವರಿಗೆ ಏಕೆ ಉಳಿಯಲು ಅವಕಾಶ ನೀಡಲಾಗಿದೆ? ಎಂದು ಪ್ರಶ್ನಿಸಿದ್ದರು. ಆದರೆ ಸೀಮಾ ಮಾತ್ರ ಭದ್ರವಾಗಿದ್ದಾಳೆ.

67
ಭಾರತಕ್ಕೆ ಬೆಂಬಲ

ಭಾರತದಲ್ಲಿಯೇ ಬಲವಾಗಿ ಬೇರೂರಬೇಕು ಎನ್ನುವ ಕಾರಣಕ್ಕೆ ಆಗಾಗ್ಗೆ ಸೀಮಾ ಸೋಷಿಯಲ್​ ಮೀಡಿಯಾದಲ್ಲಿ ಕಾಣಿಸಿಕೊಂಡು, ಭಾರತದ ಪರವಾಗಿ ಬೆಂಬಲ ಸೂಚಿಸುತ್ತಲೇ ಇರುತ್ತಾಳೆ.

77
ಪಹಲ್ಗಾಮ್​ ದಾಳಿ

ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಇನ್ ಸ್ಟಾಗ್ರಾಂನಲ್ಲಿ ವಿಡಿಯೋ ಶೇರ್ ಮಾಡಿದ್ದ ಈಕೆ, ಹಿಂದೂಸ್ತಾನ್ ಜಿಂದಾಬಾದ್, ಜೈ ಹಿಂದ್ ಜೈ ಭಾರತ್ ಎಂದಿದ್ದರು. ಭಾರತ ಚಿರಾಯುವಾಗಲಿ, ಜೈ ಹಿಂದ್, ಜೈ ಭಾರತ್. ಇದರೊಂದಿಗೆ, ಸೀಮಾ ಹೈದರ್ ಮತ್ತೊಂದು ಪೋಸ್ಟ್‌ನಲ್ಲಿ ಬರೆದಿದ್ದಳು.

Read more Photos on
click me!

Recommended Stories