ದಾಂಪತ್ಯದಲ್ಲಿ ಎಲ್ಲವೂ ಬದಲಾಗಿದೆ, ಏನೂ ಸರಿ ಮಾಡಲಾಗುತ್ತಿಲ್ಲವೆಂದರೆ ಡಿವೋರ್ಸ್ ಬೆಸ್ಟ್ ದಾರಿ

First Published | Dec 26, 2023, 4:59 PM IST

ಪ್ರತಿಯೊಂದು ಮದುವೆಯೂ ಸಿನಿಮಾಗಳಲ್ಲಿ ಕಾಣಿಸಿದಂತೆ ರೊಮ್ಯಾಂಟಿಕ್ ಆಗಿರೋದಿಲ್ಲ ಎಂದು ಯಾರೋ ಸರಿಯಾಗಿ ಹೇಳಿದ್ದಾರೆ. ಕೆಲವೊಮ್ಮೆ ಮದುವೆಗಳು ತುಂಬಾ ಭಯಾನಕ ರೂಪವನ್ನು ತಾಳುತ್ತದೆ, ಮುಂದೆ ಆ ಸಂಬಂಧ ಚೆನ್ನಾಗಿರಲು ಸಾಧ್ಯವೇ ಇರೋದಿಲ್ಲ. 
 

ಮದುವೆಯ ಆರಂಭದಲ್ಲಿ ಉತ್ತಮವಾಗಿದ್ದ ಗಂಡ ಹೆಂಡತಿಯ (Husband and Wife) ಸಂಬಂಧ, ಸಮಯ ಕಳೆದಂತೆ, ಬದಲಾಗುತ್ತಲೇ ಹೋಗುತ್ತದೆ ಎಂದು ಹೇಳಿದರೆ ತಪ್ಪಾಗಲಾರದು. ಮೊದ ಮೊದಲು ಹೇಗಿರುತ್ತೆ ಅಂದ್ರೆ, ಒಬ್ಬರನ್ನೊಬ್ಬರು ಬಿಟ್ಟು ಒಂದು ಕ್ಷಣವೂ ಬದುಕಲು ಸಾಧ್ಯವಿಲ್ಲ ಎನ್ನುವಂತಿರುತ್ತೆ, ನಂತರ ಅವರು ಜೊತೆ ಇಲ್ಲಾಂದ್ರೂ ಆರಾಮದಲ್ಲಿರೋದನ್ನು ಕಲಿಯುತ್ತಾರೆ. ಪ್ರತಿಯೊಂದು ಮದುವೆಯಲ್ಲೂ ಸವಾಲುಗಳು ಇದ್ದೇ ಇರುತ್ತೆ, ಕೆಲವು ಕಪಲ್ಸ್ ಅದನ್ನ ಜೊತೆಯಾಗಿ ಎದುರಿಸುತ್ತಾರೆ. ಇನ್ನೂ ಕೆಲವರು ಸಮಸ್ಯೆಗಳನ್ನು ಎದುರಿಸಲಾಗದೇ ದೂರ ಹೋಗುವ ಬಗ್ಗೆ ಯೋಚನೆ ಮಾಡ್ತಾರೆ. 
 

ಇಬ್ಬರ ನಡುವೆ ಮನಸ್ತಾಪ ಉಂಟಾದ ಸಮಯದಲ್ಲಿ, ಸಂಬಂಧದಲ್ಲಿ ಹುಳಿ ಎಷ್ಟು ಹೆಚ್ಚಾಗುತ್ತದೆ ಎಂದರೆ, ಅವರ ಲಕ್ಷಾಂತರ ಪ್ರಯತ್ನಗಳ ನಂತರವೂ, ವಿವಾಹವು ಮೊದಲಿನಂತೆಯೇ ಉಳಿಯುವುದಿಲ್ಲ, ಇದರ ಪರಿಣಾಮವಾಗಿ ಜನರು ತಮ್ಮ ವರ್ಷಗಳ ವೈವಾಹಿಕ ಜೀವನವನ್ನು (married life) ಒಂದು ಚಿಟಿಕೆಯಲ್ಲಿ ಕೊನೆಗೊಳಿಸುತ್ತಾರೆ. 

Tap to resize

ಗಂಡ ಮತ್ತು ಹೆಂಡತಿಯ ನಡುವಿನ ಅಂತರವು (gap between husband and wife) ಹೆಚ್ಚಾದಾಗ, ಆ ಸಂಬಂಧದ ಮೇಲೆ ಕೆಲಸ ಮಾಡುವ ಬದಲು ಅದನ್ನು ಕೊನೆಗೊಳಿಸುವುದು ಸರಿ ಎಂದು ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನ ಯೋಚಿಸುತ್ತಾರೆ. ಈ ಸಮಯದಲ್ಲಿ ಅವರು ತಮ್ಮ ಸಂಬಂಧವನ್ನು ಉಳಿಸಲು ಪ್ರಯತ್ನಿಸಬೇಕೇ ಅಥವಾ ಬೇಡವೇ ಎಂದು ನಿರ್ಧರಿಸಲು ಅವರಿಗೆ ಸಾಧ್ಯವಾಗುವುದಿಲ್ಲ. ಯಾವ ಸಂದರ್ಭದಲ್ಲಿ ದಂಪತಿಗಳು ಸಂಬಂಧವನ್ನು ಕೊನೆಗೊಳಿಸುವ ಬಗ್ಗೆ ಯೋಚಿಸುತ್ತಾರೆ ನೋಡೋಣ.
 

ಮಾತುಕತೆಯೇ ಇರೋದಿಲ್ಲ (Communication Gap)
ನೀವು ಮತ್ತು ನಿಮ್ಮ ಸಂಗಾತಿ ದಿನವಿಡೀ ಎಷ್ಟು ಸಮಯ ಪರಸ್ಪರ ಮಾತನಾಡುತ್ತೀರಿ? ಏಕೆಂದರೆ ಆರೋಗ್ಯಕರ ಸಂಬಂಧದಲ್ಲಿ ಸಂವಹನವು ಬಹಳ ಮುಖ್ಯ. ಸಂಗಾತಿಗಳು ಪರಸ್ಪರ ಮಾತನಾಡುವುದನ್ನು ನಿಲ್ಲಿಸಿದಾಗ, ಇದು ಮದುವೆಯನ್ನು ಇನ್ನು ಮುಂದೆ ಉಳಿಸಲು ಸಾಧ್ಯವಿಲ್ಲ ಎಂಬುದರ ಮೊದಲ ಸಂಕೇತವಾಗಿದೆ. ಏಕೆಂದರೆ ಈ ಸಮಯದಲ್ಲಿ ಸಂಬಂಧದಲ್ಲಿ ಹಿಂದಿನ ಆತ್ಮೀಯತೆ ಇರುವುದಿಲ್ಲ.

ದೈಹಿಕ ಸಂಪರ್ಕವಿಲ್ಲ (No physical relationship)
ಆರೋಗ್ಯಕರ ಸಂಬಂಧದಲ್ಲಿ ದೈಹಿಕ ಅನ್ಯೋನ್ಯತೆ ಬಹಳ ಮುಖ್ಯ. ನಿಮ್ಮ ಸಂಬಂಧದಲ್ಲಿ ಇದು ಇಲ್ಲದಿದ್ದರೆ, ಅದರ ಬಗ್ಗೆ ಯೋಚನೆ ಮಾಡಲೇಬೇಕು. ವಿವಾಹಿತ ದಂಪತಿಗಳು ಜಗಳವಾಡುವುದು ಸಾಮಾನ್ಯ. ಆದರೆ ಅವರು ಹೆಚ್ಚಿನ ಸಮಯ ಸೆಕ್ಸ್ ಮಾಡೋದನ್ನು ತಪ್ಪಿಸಿದರೆ, ಅದು ದೊಡ್ಡ ಸಮಸ್ಯೆಗಿಂತ ಕಡಿಮೆಯಿಲ್ಲ. ವೈವಾಹಿಕ ಸಂಬಂಧವನ್ನು ಸಂತೋಷವಾಗಿಡುವಲ್ಲಿ ದೈಹಿಕ ಅನ್ಯೋನ್ಯತೆಯು ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ.

ದಾಂಪತ್ಯ ದ್ರೋಹ (Extra Marital Affair)
ನಿಮ್ಮ ಸಂಗಾತಿಯು ನಿಮಗೆ ಪದೇ ಪದೇ ಮೋಸ ಮಾಡಿದರೂ, ನಿಮ್ಮ ಸಂಬಂಧದಲ್ಲಿ ಇನ್ನು ಮುಂದೆ ಸುಧಾರಿಸೋವಂತದ್ದು ಏನೂ ಇಲ್ಲ ಅನ್ನೋದನ್ನು ನೀವು ತಿಳಿಯಬೇಕು. ಏಕೆಂದರೆ ಇಬ್ಬರೂ ವಿವಾಹಿತ ಸಂಬಂಧದಿಂದ ಹೊರಹೋಗುವ ಮೂಲಕ ಇತರರೊಂದಿಗೆ ಭಾವನಾತ್ಮಕ ಅಥವಾ ದೈಹಿಕ ಸಂಬಂಧವನ್ನು ಹೊಂದಿದ್ದರೆ,ಅಂತಹ ಸಂಬಂಧದಲ್ಲಿ ನೀವು ಇರೋದಾದರು ಯಾಕೆ? ವಿಚ್ಚೇದನ ಕೊಡೋದು ಉತ್ತಮ. 

ಇಬ್ಬರಿಗೂ ವಿವಾಹೇತರ ಸಂಬಂಧ ಇದೆ, ಅಥವಾ ಒಬ್ಬರಿಗೆ ವಿವಾಹೇತರ ಸಂಬಂಧ ಇದ್ದು, ಅದನ್ನು ಸರಿ ಪಡಿಸಲು ಪ್ರಯತ್ನಿಸಿದರೂ ಸರಿ ಹೋಗಲು ಸಾಧ್ಯವಾಗದೇ ಇದ್ದರೆ. ಅಂತಹ ಸಂಬಂಧದಿಂದ ಹೊರ ಬಂದು ನಿಮ್ಮ ದಾರಿಯಲ್ಲಿ ನೀವು ಸಾಗೋದು ಉತ್ತಮ. ಇದರಿಂದ ಜೀವನದಲ್ಲಿ ಸ್ವಲ್ಪವಾದರೂ ನೆಮ್ಮದಿ ಇರುತ್ತೆ. 
 

Latest Videos

click me!