ಸಂಗಾತಿ ಈ ರೀತಿ ಮಾಡ್ತಿದ್ರೆ, ನೀವು ಅವರನ್ನ ಲವ್ ಮಾಡ್ತಿದ್ರೂ ಬ್ರೇಕ್ ಅಪ್ ಆಗೋದೇ ಬೆಸ್ಟ್

First Published | Dec 25, 2023, 4:59 PM IST

ಪ್ರೀತಿಯು ಅನೇಕವೇಳೆ ಸಂಬಂಧಗಳ ಅಡಿಪಾಯವಾಗಿ ನಿಲ್ಲುತ್ತದೆ, ಅಡೆತಡೆಗಳನ್ನು ಜಯಿಸುವ ಮತ್ತು ಪರೀಕ್ಷೆಗಳನ್ನು ಎದುರಿಸೋ  ಮೂಲಕ ಆ ಪ್ರೀತಿಯು ಗೆಲ್ಲುತ್ತದೆ ಅನ್ನೋದು ನಿಜ. ಆದರೂ ಕೆಲವೊಮ್ಮೆ ಸಂಬಂಧಗಳಲ್ಲಿ ಎಷ್ಟೇ ಪ್ರೀತಿ ಇದ್ದರೂ ನಾವು ಅಂದುಕೊಂಡ ಪ್ರೀತಿ, ನಂಬಿಕೆ ನಮಗೆ ಸಿಗದೇ ಇದ್ದಾಗ, ಅಂತಹ ಪ್ರೀತಿಯಲ್ಲಿ ಇದ್ದು ನೊಂದುಕೊಳ್ಳುವ ಪರಿಸ್ಥಿತಿ ಬರುತ್ತದೆ. ಹೀಗಿರೋವಾಗ ನೀವು ಅಂತಹ ಸಂಬಂಧದಿಂದ ದೂರ ಇರೋದೆ ಬೆಸ್ಟ್. 

ನಾವು ತುಂಬಾ ಪ್ರೀತಿಸುವ ವ್ಯಕ್ತಿಯಿಂದಲೇ ನಮಗೆ ಕೆಲವೊಮ್ಮೆ ನೋವು ಹೆಚ್ಚಾಗುತ್ತದೆ. ಕೆಲವೊಮ್ಮೆ ನೋವು ಎಷ್ಟಿರುತ್ತೆ ಅಂದ್ರೆ, ಅದರಿಂದ ಹೊರಗೆ ಬರಲು ಸಾಧ್ಯವಾಗದೇ ಒದ್ದಾಡುತ್ತೇವೆ. ಆದರೆ ಕೆಲವೊಮ್ಮೆ ನಾವು ವ್ಯಕ್ತಿಯನ್ನು ತುಂಬಾ ಪ್ರೀತಿಸುತ್ತಿದ್ದರೂ ಸಹ ಅವರು ಈ ಗುಣಗಳನ್ನು ಹೊಂದಿದ್ದರೆ, ಅಂತಹ ಪ್ರೀತಿಯಿಂದ ಹೊರ ಬರೋದೆ ಬೆಸ್ಟ್. 

ಭಾವನೆಯೇ ಇಲ್ಲದಿದ್ದರೆ: ಇಬ್ಬರೂ ಭಾವನಾತ್ಮಕವಾಗಿ ಜೊತೆಯಾಗಿದ್ದರೆ ಮಾತ್ರ ಸಂಬಂಧ ದೀರ್ಘಕಾಲ ಉಳಿಯೋದಕ್ಕೆ ಸಾಧ್ಯವಾಗುತ್ತದೆ. ಒಂದು ವೇಳೆ ನಿಮ್ಮ ಸಂಗಾತಿಗೆ ನಿಮ್ಮ ಮೇಲೆ ಯಾವುದೇ ಫೀಲಿಂಗ್, ಭಾವನೆ (no feelings) ಇಲ್ಲದೇ ಇದ್ದರೆ ಆ ಪ್ರೀತಿ ವ್ಯರ್ಥ.  ನಿಮ್ಮ ಸಂಗಾತಿಯು ನಿಮ್ಮ ಭಾವನೆಗಳು ಮತ್ತು ಹೋರಾಟಗಳನ್ನು ನಿರಂತರವಾಗಿ ಕಡೆಗಣಿಸಿದರೆ ಅಥವಾ ತಳ್ಳಿಹಾಕಿದರೆ,  ಅಂತಹ ಸಂಬಂಧಕ್ಕಿಂತ ಬ್ರೇಕ್ ಅಪ್ ತುಂಬಾನೆ ಒಳ್ಳೆಯದು. 
 

Tap to resize

ನಿಮ್ಮನ್ನು ಅರ್ಥಮಾಡಿಕೊಳ್ಳಲು ವಿಫಲರಾದರೆ: ಇಬ್ಬರು ಮಾತನಾಡೋದು ಮಾತ್ರ ಸಂಬಂಧದ ವಿವರಣೆ ನೀಡೋದಿಲ್ಲ, ಇದರ ಜೊತೆಗೆ ತಿಳುವಳಿಕೆ ಮತ್ತು ಕನೆಕ್ಷನ್ ತುಂಬಾ ಮುಖ್ಯ. ಸಂವಹನ ನಡೆಸುವ ಪ್ರಯತ್ನಗಳು ವಿಫಲವಾದಾಗ,  ನೀವು ಮಾತನಾಡೋದನ್ನು ನಿಮ್ಮ ಸಂಗಾತಿ ಕೇಳಿಸಿಕೊಳ್ಳೋದೆ ಇಲ್ಲ, ಅವರು ನಿಮ್ಮನ್ನು ಅರ್ಥ ಮಾಡಿಕೊಳ್ಳೋದಿಲ್ಲ ಎಂದು ನಿಮಗೆ ಅನಿಸಿದರೆ, ನಿಮ್ಮ ಜೊತೆ ಮಾತನಾಡಲು ತಯಾರಿಲ್ಲ ಎಂದು ನಿಮಗೆ ಅನಿಸಿದರೆ ದಯವಿಟ್ಟು ನೀವು ಈಗಲೇ ನಿಮ್ಮ ಸಂಬಂಧದ ಬಗ್ಗೆ ಎಚ್ಚರವಾಗಿರಿ, ಈ ಸಂಬಂಧ (relationship) ಹೆಚ್ಚು ಸಮಯ ಉಳಿಯೋದಕ್ಕೆ ಸಾಧ್ಯಾನೆ ಇಲ್ಲ. ಅದರಿಂದ ನೀವಾಗಿಯೇ ಹೊರಬರೋದು ಬೆಸ್ಟ್.

ನಿಮ್ಮ ಅಗತ್ಯಗಳು ಮತ್ತು ಬಯಕೆಗಳನ್ನು ಕಡೆಗಣಿಸುವವರು: ವೈಯಕ್ತಿಕ ಬೆಳವಣಿಯ (Self developement) ಬಗ್ಗೆ ಹೇಳೊದಾದರೆ ಇಬ್ಬರ ದಿಕ್ಕು ಬೇರೆ ಬೇರೆಯಾಗಿರುತ್ತೆ. ನೀವು ಮತ್ತು ನಿಮ್ಮ ಸಂಗಾತಿ ವಿಕಸನಗೊಂಡಂತೆ, ನಿಮ್ಮ ಆಕಾಂಕ್ಷೆಗಳು ಮತ್ತು ಆಸೆಗಳು ಬೇರೆಯಾಗಬಹುದು. ನಿಮ್ಮ ಆದ್ಯತೆ, ದಾರಿ ಬೇರೆ ಬೇರೆಯಾದಾಗ, ಇಬ್ಬರ ನಡುವೆ ಹೆಚ್ಚು ಕನೆಕ್ಟಿವಿಟಿ ಇರೋದಿಲ್ಲ. ಇದರಿಂದ ಸಂಬಂಧದಲ್ಲಿ ಬಿರುಕು ಬಿಡಲು ಆರಂಭವಾಗುತ್ತದೆ. ನಿಮ್ಮ ಸಂಗಾತಿ ನಿಮ್ಮ ಅಗತ್ಯ ಮತ್ತು ಬಯಕೆಗಳನ್ನು ಕಡೆಗಣಿಸುತ್ತಿದ್ದರೆ, ಖಂಡಿತವಾಗಿಯೂ ಅಂತಹ ಸಂಬಂಧದಿಂದ ದೂರ ಇರಿ.

ಅವರೊಂದಿಗೆ ಇರುವಾಗಲೂ ಒಂಟಿತನವನ್ನು ಅನುಭವಿಸುವುದು: ದೈಹಿಕವಾಗಿ ಒಟ್ಟಿಗೆ ಇರುವುದು ಭಾವನಾತ್ಮಕ ನಿಕಟತೆಯನ್ನು ಖಾತರಿಪಡಿಸುವುದಿಲ್ಲ. ನಿಮ್ಮ ಸಂಗಾತಿಯು ನಿಮ್ಮ ಜೊತೆ ಇದ್ದಾಗಲೂ ನಿಮಗೆ ಒಂಟಿತನದ ಭಾವನೆ ಕಾಡಿದರೆ, ಅದು ಭಾವನಾತ್ಮಕ ಅನ್ಯೋನ್ಯತೆಯ ಕೊರತೆಯನ್ನು ಸೂಚಿಸುತ್ತದೆ. ಸಂಬಂಧದಲ್ಲಿ ಭಾವನಾತ್ಮಕವಾಗಿ ಒಂಟಿತನವನ್ನು (lonliness) ಅನುಭವಿಸುವುದು ಅಂದರೆ, ನಿಮ್ಮಿಬ್ಬರ ನಡುವೆ ಯಾವುದೇ ಬಾಂಧವ್ಯ ಪ್ರೀತಿ ಇಲ್ಲ ಅನ್ನೋದನ್ನು ಸೂಚಿಸುತ್ತೆ. ಇಂತಹ ಸಂಬಂಧದಿಂದ ಹೊರ ಬರೋದು ಬೆಸ್ಟ್. 
 

ನೀವು ಕಾಣದ ಮತ್ತು ಕೇಳದ ಭಾವನೆಯನ್ನು ಅನುಭವಿಸುತ್ತೀರಿ: ರಿಲೇಶನ್ ಶಿಪ್ ಅನ್ನೋದು ಪರಸ್ಪರ ಮೆಚ್ಚುಗೆ ಮತ್ತು ತಿಳುವಳಿಕೆಯಿಂದ ಬೆಳೆಯುತ್ತವೆ.  ಆದರೆ ನಿಮ್ಮ ಆಲೋಚನೆಗಳು ಮತ್ತು ಭಾವನೆಗಳನ್ನು ನಿರಂತರವಾಗಿ ನಿರ್ಲಕ್ಷಿಸಿದಾಗ, ಅದು ಆರೋಗ್ಯಕರ ಸಂಬಂಧವನ್ನು (healthy relationship) ಹಾಳು ಮಾಡುತ್ತದೆ. ಮತ್ತೆ ನಿಮಗೂ ಅವರೊಂದಿಗೆ ಯಾವ ಭಾವನೆಯನ್ನು ಹಂಚಿಕೊಳ್ಳಲು ಸಾಧ್ಯವಾಗೋದಿಲ್ಲ. ಇಂತಹ ಸಂಬಂಧಕ್ಕಿಂತ ಬೇರೆಯಾಗೋದೆ ಉತ್ತಮ. 

ಮತ್ತೆ ಮತ್ತೆ ಇಬ್ಬರ ನಡುವೆ ಮನಸ್ಥಾಪ: ಸಂಬಂಧ ಎಂದ ಮೇಲೆ ಕೋಪ, ಜಗಳ ಎಲ್ಲವೂ ಸಾಮಾನ್ಯ. ಆದರೆ ಇಬ್ಬರ ನಡುವೆ ಪದೇ ಪದೇ ಒಂದೇ ವಿಷ್ಯದ ಬಗ್ಗೆ ಮನಸ್ತಾಪ ಉಂಟಾಗುತ್ತಿದ್ದರೆ, ಅದನ್ನು ಬಗೆಹರಿಸಲು ಸಾಧ್ಯವೇ ಆಗದಿದ್ದರೆ, ಅಂತಹ ಸಂಬಂಧ ಯಾಕೆ ಬೇಕು? 

ಸಂಬಂಧದಲ್ಲಿ ಬೆಳವಣಿಗೆಯೇ ಇಲ್ಲ: ಸಂಬಂಧದಲ್ಲಿ ಯಾವುದೇ ಬೆಳವಣಿಗೆ ಇಲ್ಲದೇ ಒಂದೇ ಕಡೆ ನಿಂತಿದ್ದರೆ, ಆ ಸಂಬಂಧಕ್ಕೆ ಅರ್ಥ ಇಲ್ಲ. ಸಂಬಂಧದಲ್ಲಿ ಬೆಳವಣಿಗೆ ಇಲ್ಲ ಎಂದಾದರೆ, ಆ ಸಂಬಂಧವು ಮುಂದುವರೆಯೋದಕ್ಕೆ ಯೋಗ್ಯ ಅಲ್ಲ ಎಂದು ಅರ್ಥ. ಹಾಗಾಗಿ ಅಂತಹ ಸಂಬಂಧದಿಂದ ಹೊರ ಬರೋದು ಉತ್ತಮ. 
 

Latest Videos

click me!