ಆಕೆ ಮನೆ ಮುರುಕಿ ಅಲ್ಲ, ನಾನು ವಿಚ್ಛೇದಿತ : ಲೇಖಾ ವಾಷಿಂಗ್ಟನ್ ಜೊತೆ ಸಂಬಂಧ ಖಚಿತಪಡಿಸಿದ ಇಮ್ರಾನ್ ಖಾನ್

First Published | Mar 7, 2024, 4:23 PM IST

ಬಾಲಿವುಡ್ ನಟ ಇಮ್ರಾನ್ ಖಾನ್ ಅಳಿಯ, ಜಾನೇ ತು ಯಾ ಜಾನೇ ನಾ ಸಿನಿಮಾದ ಮೂಲಕ ಪ್ರಸಿದ್ಧಿ ಗಳಿಸಿದ ನಟ ಇಮ್ರಾನ್ ಖಾನ್ ತಮ್ಮ ವೈಯಕ್ತಿಕ ಬದುಕಿನ ಏಳುಬೀಳುಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.  

ಸಿನಿಮಾದಲ್ಲಿ ಹುಡುಗಿಯರೆಲ್ಲರೂ ಮೆಚ್ಚುವ ನಟನಾದರೂ ಇಮ್ರಾನ್ ಖಾನ್ ವೈಯಕ್ತಿಕ ಬದುಕು ಅಷ್ಟೊಂದು ಚೆನ್ನಾಗಿಲ್ಲ, ಪತ್ನಿ ಅವಂತಿಕಾ ಮಲಿಕ್‌ನಿಂದ ದೂರಾದ ಬಳಿ ಇಮ್ರಾನ್ ಖಾನ್ ವೈಯಕ್ತಿಕ ಜೀವನದಲ್ಲಿ ಬಹಳ ಕಷ್ಟದ ದಿನಗಳನ್ನು ಎದುರಿಸಿದ್ದರು. ಆದರೆ ಕಾಲ ಎಲ್ಲವನ್ನೂ ಮರೆಸುತ್ತದೆ ಎಂಬಂತೆ ಅವರ ಬದುಕಿನಲ್ಲಿ ಹೊಸ ಹೆಣ್ಣಿನ ಆಗಮನವಾಗಿದೆ. ಈ ವಿಚಾರವನ್ನು ಅವರೇ ಮನಬಿಚ್ಚಿ ಮಾತನಾಡಿದ್ದಾರೆ.

ಕೆಲ ತಿಂಗಳ ಹಿಂದೆ ಅವಂತಿಕಾ ಮಲಿಕ್ ಹಾಗೂ ಇಮ್ರಾನ್ ಖಾನ್ ಪರಸ್ಪರ ದೂರಾಗಿದ್ದಾರೆ ಎಂಬ ಗಾಸಿಪ್‌ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು. ಇದರ ಜೊತೆಗೆ ನಟಿ ಲೇಖಾ ವಾಷಿಂಗ್ಟನ್ ಜೊತೆ ನಟನ ಸಂಬಂಧದ ವಿಚಾರವೂ ಸಾಕಷ್ಟು ಸುದ್ದಿಯಾಗಿತ್ತು. ಅವಂತಿಕಾ ಜೊತೆಗಿನ ಸಂಬಂಧ ಹಳಸಲು ಲೇಖಾ ವಾಷಿಂಗ್ಟನ್ ಕಾರಣ ಎಂಬ ಆರೋಪಗಳು ಕೇಳಿ ಬಂದಿದ್ದವು. ಆದರೆ ಈ ಎಲ್ಲಾ ವಿಚಾರಗಳಿಗೆ ಈಗ ಇಮ್ರಾನ್ ಖಾನ್ ತೆರೆ ಎಳೆದಿದ್ದಾರೆ. 

Tap to resize

ವೋಗ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಇಮ್ರಾನ್ ಖಾನ್, ನನ್ನ ಹಾಗೂ ಅವಂತಿಕಾ ಮಲಿಕ್ ನಡುವೆ 2019ರಲ್ಲೇ ವಿಚ್ಛೇದನವಾಗಿದೆ. ಕೆಲ ಸಮಯದಿಂದ ಲೇಖಾ ವಾಷಿಂಗ್ಟನ್ ಜೊತೆ ತಾನು ಸಂಬಂಧದಲ್ಲಿರುವುದಾಗಿ ಇಮ್ರಾನ್ ಖಾನ್ ಹೇಳಿದ್ದಾರೆ.

ನಾನು ಇಲ್ಲದಿರುವುದಾಗ ನನ್ನ ಬಗ್ಗೆ ಆರೋಪ ಮಾಡುವುದು ಸುಲಭ ಆದರೆ ನಾನು ಲೇಖಾ ಜತೆ ಪ್ರೇಮ ಸಂಬಂಧದಲ್ಲಿದ್ದದ್ದು ನಿಜ ನನಗೆ 2019ರಲ್ಲೇ ವಿಚ್ಛೇದನವಾಗಿದೆ ಎಂದಿದ್ದಾರೆ.

ಲೇಖಾಳನ್ನು ಅನೇಕರು ಮನೆ ಮುರುಕಿ ಎಂದು ಕರೆಯುತ್ತಾರೆ. ಇದು ನನ್ನ ಹೊಟ್ಟೆ ಉರಿಸುತ್ತಿದೆ. ಲೇಖಾ ಹಾಗೂ ನಾನು ಲಾಕ್‌ಡೌನ್ ಸಮಯದಲ್ಲಿ ಪರಸ್ಪರ ಹತ್ತಿರವಾದೆವು. ನಾನು ಹಾಗೂ ಅವಂತಿಕಾ ಪರಸ್ಪರ ದೂರಾಗಿ  ಒಂದು ವರ್ಷದ ನಂತರ ಲೇಖಾ ಹಾಗೂ ನನ್ನ ನಡುವೆ ಬಾಂಧವ್ಯ ಶುರುವಾಯ್ತು. ಆಕೆ ಆಕೆಯ ಪತಿ ಅಲ್ಲ ಸಂಗಾತಿಯಿಂದ ದೂರಾಗಿದ್ದಳು ಎಂದು ಇಮ್ರಾನ್ ಖಾನ್ ಹೇಳಿದ್ದಾರೆ. 

ಅಮೀರ್ ಖಾನ್ ಪುತ್ರಿ ಇರಾ ಖಾನ್ ಮದ್ವೆಯಲ್ಲಿ ಈ ಲವ್‌ಬರ್ಡ್‌ಗಳು ಜೊತೆಯಾಗಿ ಕಾಣಿಸಿಕೊಂಡು ಸಂಚಲನ ಸೃಷ್ಟಿಸಿದ್ದರು. ಆದರೆ ಅವರಿಬ್ಬರೂ ಕೂಡ ತಮ್ಮ ಸಂಬಂಧದ ಬಗ್ಗೆ ಮಾತನಾಡಿರಲಿಲ್ಲ,  ಇಮ್ರಾನ್ ಕಪ್ಪು ಟುಕ್ಸೆಡೋ ಧರಿಸಿದ್ದರೆ ಲೇಖಾ ಸಂಪ್ರದಾಯಿಕ ಮದುವೆ ಧಿರಿಸು ಧರಿಸಿದ್ದರು. 

ಅವಂತಿಕಾ ಮಲಿಕ್ ಇಮ್ರಾನ್ ಖಾನ್ ಅವರ ಬಾಲ್ಯದ ಗೆಳತಿಯಾಗಿದ್ದರು. ತಮ್ಮ ಸಂಬಂಧಕ್ಕೆ ಈ ಜೋಡಿ 2011ರಲ್ಲಿ ಮದ್ವೆಯ ಮುದ್ರೆ ಒತ್ತಿದ್ದರು. ಮದ್ವೆಯಾಗಿ ಮೂರು ವರ್ಷದಲ್ಲೇ ಹೆಣ್ಣು ಮಗುವನ್ನು ಈ ಜೋಡಿ ಬರಮಾಡಿಕೊಂಡಿತ್ತು,. ಆದರೆ ಅದೇನಾಯ್ತೋ ಏನೋ 2019ರ ಹೊತ್ತಿಗೆಲ್ಲಾ ಇವರ ಪ್ರೀತಿ ಬತ್ತಿ ಹೋಗಿ ಸಂಬಂಧ ಹಳ್ಳ ಹಿಡಿದಿದ್ದು, ಇಬ್ಬರು ವಿಚ್ಛೇದನ ಪಡೆದಿದ್ದರು. 


2008ರಲ್ಲಿ ಜಾನೇ ತು ಜಾನೇ ನಾ ಮೂಲಕ ಬಾಲಿವುಡ್‌ಗೆ ಬಂದ ಇಮ್ರಾನ್ ಖಾನ್, ಕಿಡ್ನಾಪ್, ಮೆರೆ ಬ್ರದರ್ ಕಿ ದುಲ್ಹಾನ್, ಐ ಹೇಟ್ ಲವ್ ಸ್ಟೋರಿಸ್, ದೆಲ್ಲಿ ಬೆಲ್ಲಿ, ಗೋರಿ ತೇರೆ ಪ್ಯಾರ್ ಮೇ  ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. 
 

Latest Videos

click me!