ಪ್ರೀತಿಗೆ ನಿಜವಾದ ಅರ್ಥ ಅನಂತ್ ಅಂಬಾನಿ- ರಾಧಿಕಾ ಲವ್ ಸ್ಟೋರಿ

First Published | Mar 6, 2024, 3:21 PM IST

ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚಂಟ್ ಪ್ರಿ ವೆಡ್ಡಿಂಗ್ ಈವೆಂಟ್ ಅದ್ಭುತವಾಗಿ ನಡೆದಿತ್ತು. ಆದರೆ ಈಗ ಕಾರ್ಯಕ್ರಮದ ಬಗ್ಗೆ ಬಿಟ್ಟು ಇಬ್ಬರ ಪ್ರೀತಿ, ಉಳಿದ ಜನರಿಗೆ ಹೇಗೆ ಪ್ರೇರಣೆ ನೀಡುತ್ತೆ ಅನ್ನೋದನ್ನು ತಿಳಿಯೋಣ. 
 

ಕಳೆದ ಹಲವು ದಿನಗಳಿಂದ ದೇಶಾದ್ಯಂತ ಅಷ್ಟೇ ಅಲ್ಲ, ವಿಶ್ವಾದ್ಯಂತ ಸುದ್ದಿಯಾಗುತ್ತಿರ್ವರುವ ವಿಷಯ ಅಂದರೆ ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚಂಟ್ (Anant Ambani and Radhika Merchant) ಪ್ರಿ ವೆಡ್ಡಿಂಗ್ ಕಾರ್ಯಕ್ರಮಗಳ ವಿಷ್ಯ. ಇವರಿಬ್ಬರ ಜೀವನ ಹೇಗೆ ಇತರರಿಗೆ ಸ್ಪೂರ್ತಿಯಾಗುತ್ತೆ ನೋಡೋಣ. 
 

ಸ್ನೇಹದಿಂದ ಆರಂಭವಾಗಿ, ಪ್ರೇಮಿಗಳಾದರು
ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚಂಟ್ ಆರಂಭದಲ್ಲಿ ಸ್ನೇಹಿತರಾಗಿದ್ದರು, ಬಳಿಕ ಸ್ನೇಹ ಪ್ರೇಮಕ್ಕೆ ತಿರುಗಿತ್ತು. ಇವರ ಸ್ನೇಹ ಮತ್ತು ಪ್ರೀತಿ ಬೆಸ್ಟ್ ಫ್ರೆಂಡ್ಸ್, (best friends) ಬೆಸ್ಟ್ ಲವ್ ಆಗೋದಕ್ಕೆ ಸಾಧ್ಯ ಅನ್ನೋದನ್ನು ತೋರಿಸಿದೆ. 
 

Tap to resize

ಎಲ್ಲಾ ಸಂದರ್ಭದಲ್ಲೂ ಜೊತೆಯಾಗಿರೋದು
ಅನಂತ್ ಅಂಬಾನಿ ಹಲವಾರು ಆರೋಗ್ಯ ಸಮಸ್ಯೆಗಳನ್ನು ಎದುರಿಸಿದ್ದರು, ಈ ಎಲ್ಲಾ ಸಂದರ್ಭದಲ್ಲಿ ರಾಧಿಕಾ ಜೊತೆಯಾಗಿದ್ದರು. ಇದು ಕಷ್ಟದಲ್ಲೂ, ಸುಖದಲ್ಲೂ ಜೊತೆಯಾಗಿರುವ ಪ್ರೀತಿಯನ್ನು ಬಿಂಬಿಸುತ್ತದೆ. 
 

ಕೆಲವು ವಿಷ್ಯಗಳನ್ನು ಪ್ರೈವೆಟ್ ಆಗಿಯೇ ಇಟ್ಟಿದ್ದರು
ಅನಂತ್ ಮತ್ತು ರಾಧಿಕಾ ನಿಶ್ಚಿತಾರ್ಥದ ವಿಷಯ ಬರುವವರೆಗೂ ಅವರಿಬ್ಬರು ಲವ್ ಮಾಡುತ್ತಿದ್ದರು ಎನ್ನುವ ವಿಷಯವೇ ಗೊತ್ತಿರಲಿಲ್ಲ. ಕೆಲವೊಂದು ಪರ್ಸನಲ್ ವಿಷಯಗಳನ್ನು (personal life) ಪರ್ಸನಲ್ ಆಗಿ ಇಟ್ಟುಕೊಂಡರೇನೆ ಉತ್ತಮ ಅನ್ನೋದು ಇವರಿಂದ ಅರ್ಥಮಾಡಿಕೊಳ್ಳಬೇಕು. 

ಉತ್ತಮ ಮೌಲ್ಯದಿಂದ ಗಟ್ಟಿಯಾದ ಬಂಧ 
ಇಬ್ಬರ ಜೀವನದ ಮೌಲ್ಯಗಳು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಪಾಲಿಸಬೇಕಾದಂತದ್ದು. ಇವರ ಮೌಲ್ಯಗಳು ಬೆಸೆದುಕೊಂಡಿದ್ರಿಂದಲೇ, ಜೀವನದಲ್ಲಿ ಅವರ ಬಂಧ ಮತ್ತಷ್ಟು ಗಟ್ಟಿಯಾಗಿದೆ. 

ಹೇಗಿದ್ದರೂ ಹಾಗೇ ಸ್ವೀಕಾರ
ಅನಂತ್ ಮತ್ತು ರಾಧಿಕಾ ಇಬ್ಬರ ಆಸೆ, ಆಕಾಂಕ್ಷೆ ಗುರಿ ಎಲ್ಲವೂ ಬೇರೆ ಬೇರೆ, ಆದರೆ ಇಬ್ಬರೂ ಒಬ್ಬರನ್ನೊಬ್ಬರು ಹೇಗಿದ್ದರೋ, ಹಾಗೇ ಸ್ವೀಕರಿಸಿದ್ದಾರೆ (acceptancy). ಸಂಪೂರ್ಣ ಬೆಂಬಲ ನೀಡಿದ್ದಾರೆ. 

ಸಂವಹನ (Communication)
ಅತ್ಯುತ್ತಮ ಬಾಂಧವ್ಯದ ಕೀಲಿ ಕೈ ಅಂದ್ರೆ ಮಾತುಕತೆ. ಅನಂತ್ ಮತ್ತು ರಾಧಿಕಾ ಇಬ್ಬರೂ ಸಹ ತೆರೆದ ಹೃದಯದಿಂದ ಮಾತನಾಡುತ್ತಾರೆ. ಇಬ್ಬರು ಮನಸ್ಸು ಬಿಚ್ಚಿ ಮಾತನಾಡೋದರಿಂದಲೇ ಇಬ್ಬರ ಬಾಂಧವ್ಯ ಇಷ್ಟೊಂದು ಸ್ಟ್ರಾಂಗ್ ಆಗಿದೆ. 

ಜೊತೆಯಾಗಿ ಸೆಲೆಬ್ರೇಟ್ ಮಾಡೋದು
ಒಬ್ಬರ ಸಣ್ಣ ಕೆಲಸದಿಂದ ಹಿಡಿದು, ದೊಡ್ಡದಾದ ಸಾಧನೆಗಳವರೆಗೆ ಅನಂತ್ ಮತ್ತು ರಾಧಿಕಾ ಎಲ್ಲವನ್ನೂ ಜೊತೆಯಾಗಿ ಸಂಭ್ರಮಿಸಿದ್ದಾರೆ. ಆ ಮೂಲಕ ಜೀವನದಲ್ಲಿ ಅದ್ಭುತ ನೆನಪುಗಳನ್ನು ಕ್ರಿಯೇಟ್ ಮಾಡಿದ್ದಾರೆ. 

ಕೆಲಸ ಮತ್ತು ಪರ್ಸನಲ್ ಜೀವನ (Personal Life)
ಇಬ್ಬರೂ ಸಹ ತಮ್ಮ ತಮ್ಮ ಕೆಲಸಗಳಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಆದರೂ ಸಹ ಪರ್ಸನಲ್ ಜೀವನಕ್ಕೆ ಮತ್ತು ಪ್ರೊಫೆಶನಲ್ ಜೀವನ ಬ್ಯಾಲೆನ್ಸ್ (Balancing Professional Life) ಮಾಡೋದು ಹೇಗೆ ಅನ್ನೋದನ್ನೂ ತಿಳಿದುಕೊಂಡಿದ್ದಾರೆ. ಒಬ್ಬರಿಗೊಬ್ಬರು ಸದಾ ಜೊತೆಯಾಗಿರ್ತಾರೆ. 
 

Latest Videos

click me!