ಅನಂತ್‌-ರಾಧಿಕಾ ಗ್ರ್ಯಾಂಡ್ ವೆಡ್ಡಿಂಗ್‌ನಿಂದ ಕರಗಿತಾ ಅಂಬಾನಿಯ ಅರ್ಧ ಆಸ್ತಿ, ಅದ್ದೂರಿ ಮದ್ವೆಗೆ ಖರ್ಚಾಗಿದ್ದೆಷ್ಟು?

Published : Mar 06, 2024, 12:05 PM IST

ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಪ್ರಿ-ವೆಡ್ಡಿಂಗ್ ಸಮಾರಂಭಗಳು ಅತ್ಯಂತ ಅದ್ಧೂರಿಯಾಗಿ ನಡೆದಿದೆ. ವಿಶ್ವವೇ ಅಂಬಾನಿ ಮಗನ ವಿವಾಹ ಪೂರ್ವ ಸಮಾರಂಭವನ್ನು ನೋಡಿ ಬೆರಗುಗೊಂಡಿದೆ. ಈ ಗ್ರ್ಯಾಂಡ್ ಸೆಲಬ್ರೇಷನ್‌ನಿಂದ ಅಂಬಾನಿಯ ಅರ್ಧ ಆಸ್ತಿ ಕರಗಿರಬಹುದು ಎಂದೇ ಎಲ್ಲರೂ ಅಂದುಕೊಂಡಿದ್ದರು. ಆದ್ರೆ ಖರ್ಚಾಗಿದ್ದು ಅಷ್ಟಲ್ಲ.

PREV
110
ಅನಂತ್‌-ರಾಧಿಕಾ ಗ್ರ್ಯಾಂಡ್ ವೆಡ್ಡಿಂಗ್‌ನಿಂದ ಕರಗಿತಾ ಅಂಬಾನಿಯ ಅರ್ಧ ಆಸ್ತಿ, ಅದ್ದೂರಿ ಮದ್ವೆಗೆ ಖರ್ಚಾಗಿದ್ದೆಷ್ಟು?

ಬಿಲಿಯನೇರ್ ಮುಕೇಶ್ ಅಂಬಾನಿ ಹಾಗೂ ನೀತಾ ಅಂಬಾನಿಯ ಪುತ್ರ ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಪ್ರಿ-ವೆಡ್ಡಿಂಗ್ ಸಮಾರಂಭಗಳು ಅತ್ಯಂತ ಅದ್ಧೂರಿಯಾಗಿ ನಡೆದಿದೆ. ವಿಶ್ವವೇ ಅಂಬಾನಿ ಮಗನ ವಿವಾಹ ಪೂರ್ವ ಸಮಾರಂಭವನ್ನು ನೋಡಿ ಬೆರಗುಗೊಂಡಿದೆ. 

210

ಸ್ವರ್ಗವೇ ಧರೆಗಿಳಿದಂತಿದ್ದ ಡೆಕೊರೇಷನ್‌, ಔತಣಕೂಟ, ಅಂತಾರಾಷ್ಟ್ರೀಯ ಸೆಲೆಬ್ರಿಟಿಗಳು, ರಾಜಕಾರಣಿಗಳು, ಉದ್ಯಮಿಗಳ ಉಪಸ್ಥಿತಿ, ಲಕ್ಸುರಿಯಸ್ ಜೆಟ್‌ ಕಾರುಗಳು ಮದುವೆಯನ್ನು ಇನ್ನಷ್ಟು ಗ್ರ್ಯಾಂಡ್ ಆಗಿಸಿದೆ. ಅಂಬಾನಿ ಕುಟುಂಬ ಸದಸ್ಯರು ಧರಿಸಿದ್ದ ಕೋಟಿ ಕೋಟಿ ಬೆಲೆಗೆ ಡ್ರೆಸ್, ಆಭರಣಗಳನ್ನು ನೋಡಿ ಎಲ್ಲರೂ ನಿಬ್ಬೆರಗಾಗಿದ್ದಾರೆ.

310

ಗುಜರಾತ್‌ನ ಜಾಮ್‌ನಗರದಲ್ಲಿ ನಡೆದ ಅನಂತ್‌-ರಾಧಿಕಾ ಅಂಬಾನಿ ಪೂರ್ವ ವಿವಾಹ,  ಭಾರತದ ಅತ್ಯಂತ ಅದ್ದೂರಿ ಮದುವೆಗಳಲ್ಲಿ ಒಂದಾಗಿದೆ. ಈ ಸಂಪೂರ್ಣ ಸಮಾರಂಭಕ್ಕೆ ಬರೋಬ್ಬರಿ 1000 ಕೋಟಿ ರೂಪಾಯಿ ವೆಚ್ಚವಾಗಿದೆ ಎಂದು ತಿಳಿದುಬಂದಿದೆ.

410

ಆದರೆ ಈ ಮೊತ್ತವು ಬಿಲಿಯನೇರ್ ಮುಕೇಶ್ ಅಂಬಾನಿ ಅವರ ಆಸ್ತಿಯ ಒಟ್ಟು ಮೌಲ್ಯದ 0.1% ಕೂಡಾ ಅಲ್ಲ ಎಂದು ಸಹ ತಿಳಿದು ಬಂದಿದೆ. 

510

ಮಾರ್ಚ್ 1ರಂದು ಪ್ರಾರಂಭವಾಗಿ ಮಾರ್ಚ್ 3ರ ವರೆಗೆ ಗುಜರಾತ್‌ನ ಜಾಮ್ನಾನಗರದಲ್ಲಿ ಹಲವು ಥೀಮ್‌ಗಳೊಂದಿಗೆ ಅನಂತ್‌-ರಾಧಿಕಾ ವಿವಾಹ ಪೂರ್ವ ಸಮಾರಂಭಗಳು ನಡೆದವು. ಇವೆಂಟ್‌ನಲ್ಲಿ ಅತಿಥಿಗಳಿಗೆ ಅಂದಾಜು 2500 ವೆರೈಟಿ ಊಟಗಳನ್ನು ನೀಡಲಾಯಿತು. ಇದಕ್ಕೆ ಕೋಟಿ ಕೋಟಿ ವೆಚ್ಚವಾಗಿತ್ತು.

610

ಅಂತಾರಾಷ್ಟ್ರೀಯ ಪಾಪ್ ಸಿಂಗರ್‌ ರಿಹಾನ್ನಾ ತಮ್ಮ ಶೋಗಾಗಿ 66 ರಿಂದ 74 ಕೋಟಿ ಪಡೆದಿದ್ದಾರೆ ಎಂದು ವರದಿಗಳು ಸೂಚಿಸುತ್ತವೆ. ರಿಹಾನ್ನಾ ಅವರಲ್ಲದೆ, ವಿಶ್ವಪ್ರಸಿದ್ಧ ಭ್ರಮೆವಾದಿ ಡೇವಿಡ್ ಬ್ಲೇನ್ ಕೂಡ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ.

710

ದೀಪಿಕಾ ಪಡುಕೋಣೆ, ರಣವೀರ್ ಸಿಂಗ್, ಆಲಿಯಾ ಭಟ್, ರಣಬೀರ್ ಕಪೂರ್, ನೀತು ಕಪೂರ್, ಸಲ್ಮಾನ್ ಖಾನ್, ಶಾರೂಕ್‌ ಖಾನ್‌, ಅಮೀರ್‌ ಖಾನ್, ರಾಮ್‌ಚರಣ್‌, ರಜನೀಕಾಂತ್‌ ಮದುವೆ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. ಮಾತ್ರವಲ್ಲ ಸಚಿನ್, ಧೋನಿ ಮತ್ತು ಇತರ ದೊಡ್ಡ ತಾರೆಯರು ಸಹ ಅನಂತ್-ರಾಧಿಕಾ ಪ್ರಿ ವೆಡ್ಡಿಂಗ್ ಇವೆಂಟ್‌ನಲ್ಲಿ ಉಪಸ್ಥಿತರಿದ್ದರು.

810

ಅಂಬಾನಿ ಮನೆಯ ಮದುವೆ ಇಷ್ಟೆಲ್ಲಾ ಗ್ರ್ಯಾಂಡ್ ಆಗಿ ನಡೆದಿರುವ ಕಾರಣ ಮುಕೇಶ್ ಅಂಬಾನಿ ಆಸ್ತಿಯ ಅರ್ಧ ಭಾಗ ಖಾಲಿಯಾಗಿರಬಹುದು ಎಂದೇ ಎಲ್ಲರೂ ಅಂದುಕೊಂಡಿದ್ದರು. ಆದರೆ ಖರ್ಚಾಗಿದ್ದು ಮಾತ್ರ ಸಂಪತ್ತಿನ ಕೇವಲ ಒಂದು ಭಾಗ ಅಷ್ಟೆ.

910

ಮುಕೇಶ್ ಧೀರೂಭಾಯಿ ಅಂಬಾನಿ ಭಾರತೀಯ ಬಿಲಿಯನೇರ್ ಉದ್ಯಮಿಯಾಗಿದ್ದು, ಮಾರುಕಟ್ಟೆ ಬಂಡವಾಳೀಕರಣದ ಮೂಲಕ ಭಾರತದ ಅತ್ಯಂತ ಮೌಲ್ಯಯುತ ಕಂಪನಿಯಾದ ರಿಲಯನ್ಸ್ ಇಂಡಸ್ಟ್ರೀಸ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ.

1010

ಫೆಬ್ರವರಿ 2024 ರ ಹೊತ್ತಿಗೆ, ಫೋರ್ಬ್ಸ್ ಅವರ ನಿವ್ವಳ ಮೌಲ್ಯವು 112.1 ಶತಕೋಟಿ ಎಂದು ಅಂದಾಜಿಸಿದೆ, ಇದರಿಂದಾಗಿ ಅವರು ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಮತ್ತು ಜಾಗತಿಕವಾಗಿ 11 ನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ.

Read more Photos on
click me!

Recommended Stories