'ಒಬ್ಬಂಟಿ ಜೀವನ ಕಷ್ಟ..' ವೈಯಕ್ತಿಕ ಜೀವನದ ಬಗ್ಗೆ ಮೊದಲ ಬಾರಿ ಮನಬಿಚ್ಚಿ ಮಾತನಾಡಿದ ಸಾನಿಯಾ ಮಿರ್ಜಾ!

Published : Jan 08, 2026, 06:07 PM IST

ಶೋಯೆಬ್‌ ಮಲೀಕ್‌ ಜೊತೆಗಿನ ವಿಚ್ಛೇದನದ ನಂತರ ಸಾನಿಯಾ ಮಿರ್ಜಾ ತಮ್ಮ ವೈಯಕ್ತಿಕ ಜೀವನದ ಆಘಾತಕಾರಿ ಘಟನೆಗಳ ಬಗ್ಗೆ ಮಾತನಾಡಿದ್ದಾರೆ. ದುಬೈನಲ್ಲಿ ಮಗನೊಂದಿಗೆ ವಾಸಿಸುತ್ತಿರುವ ಅವರು, ಟೆನಿಸ್ ನಿವೃತ್ತಿಯ ನಂತರ ತಮ್ಮ ಫಿಟ್‌ನೆಸ್‌ ಮತ್ತು ಆಹಾರ ಪದ್ಧತಿಯ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ.

PREV
111

ಸಾನಿಯಾ ಮಿರ್ಜಾ ಕಳೆದ ಕೆಲವು ದಿನಗಳಿಂದ ತಮ್ಮ ವೈಯಕ್ತಿಕ ಜೀವನದ ಕಾರಣದಿಂದಾಗಿ ಸುದ್ದಿಯಲ್ಲಿದ್ದಾರೆ. ಟೆನಿಸ್‌ನಲ್ಲಿ ದೀರ್ಘಕಾಲ ಸುದ್ದಿಯಲ್ಲಿದ್ದ ಸಾನಿಯಾ ಮಿರ್ಜಾ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಶೋಯೆಬ್‌ ಮಲೀಕ್‌ ಅವರೊಂದಿಗಿನ ವಿಚ್ಛೇದನದ ಬಳಿಕ ಮಗನೊಂದಿಗೆ ದುಬೈನಲ್ಲಿ ನೆಲೆಸಿದ್ದಾರೆ.

211

ಭಾರತೀಯ ಟೆನಿಸ್ ತಾರೆ ಸಾನಿಯಾ ಮಿರ್ಜಾ ಸದಾ ಸುದ್ದಿಯಲ್ಲಿರುವ ಹೆಸರು. ಬಹಳ ವರ್ಷಗಳಿಂದ ಟೆನಿಸ್‌ ವೃತ್ತಿಜೀವನ ಹೊಂದಿದ್ದ ಸಾನಿಯಾ ಮಿರ್ಜಾ ತಮ್ಮ ಹೆಸರಿನಲ್ಲಿ ಕೆಲವು ಅಪರೂಪದ ದಾಖಲೆಗಳನ್ನು ಹೊಂದಿದ್ದಾರೆ.

311

ವೃತ್ತಿಜೀವನದ ಉತ್ತುಂಗದಲ್ಲಿದ್ದಾಗಲೇ ಪಾಕಿಸ್ತಾನದ ಕ್ರಿಕೆಟಿಗ ಶೋಯೆಬ್‌ ಮಲೀಕ್‌ರನ್ನು ಪ್ರೀತಿಸಿ ಮದುವೆಯಾಗಿದ್ದರು. ಭಾರತದ ಟೆನಿಸ್‌ ತಾರೆ, ಪಾಕಿಸ್ತಾನದ ಹುಡುಗನನ್ನು ಮದುವೆಯಾಗುತ್ತಾಳೆ ಅನ್ನೋ ವಿಚಾರವೇ ದೊಡ್ಡ ವಿವಾದವಾಗಿ ಮಾರ್ಪಟ್ಟಿತ್ತು.

411

ಸಾನಿಯಾ ಇನ್ನುಮುಂದೆ ಪಾಕಿಸ್ತಾನದ ಪರವಾಗಿ ಟೆನಿಸ್‌ ಆಡುತ್ತಾರೆಯೇ? ಎಂದು ಹಲವರು ಪ್ರಶ್ನೆ ಮಾಡಿದ್ದರು. ಆದರೆ, ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಆಕೆ ಹೈದರಬಾದ್‌ನ ತಮ್ಮ ನಿವಾಸದಲ್ಲೇ ಶೋಯೆಬ್‌ ಮಲೀಕ್‌ ಅವರ ಕೈಹಿಡಿದರು.

511

ವಿವಾಹದ ಬಳಿಕ ಭಾರತ ಹಾಗೂ ಪಾಕಿಸ್ತಾನ ಎಲ್ಲೂ ಇರಲು ಇಷ್ಟಪಡದ ಸಾನಿಯಾ ಮಿರ್ಜಾ, ದುಬೈನಲ್ಲಿಯೇ ಇರಲು ನಿರ್ಧಾರ ಮಾಡಿದ್ದರು. ಇವರಿಬ್ಬರಿಗೆ ಒಬ್ಬ ಮಗ ಕೂಡ ಇದ್ದಾನೆ. ಕೆಲ ವರ್ಷಗಳ ಹಿಂದೆ ಸಾನಿಯಾ ಮಿರ್ಜಾ ಹಾಗೂ ಮಲೀಕ್‌ ಅವರ ವಿಚ್ಛೇದನ ಕೂಡ ಆಗಿದೆ.

611

ಶೋಯೆಬ್‌ ಮಲೀಕ್‌ ಹಾಗೂ ಸಾನಿಯಾ ಮಿರ್ಜಾ ಬೇರೆ ಬೇರೆ ಆಗಿದ್ದಾರೆ ಎನ್ನುವ ಊಹಾಪೋಹಗಳ ನಡುವೆಯೇ, ಸೋಶಿಯಲ್‌ ಮೀಡಿಯಾದಲ್ಲಿ ಶೋಯೆಬ್‌ ಮಲೀಕ್‌ ತಮ್ಮ ಮೂರನೇ ಮದುವೆಯ ಫೋಟೋ ಹಂಚಿಕೊಂಡು ಶಾಕ್‌ ನೀಡಿದರು. ಇದರ ಬೆನ್ನಲ್ಲಿಯೇ ಸಾನಿಯಾ ಮಿರ್ಜಾ ವಿಚ್ಛೇದನವಾಗಿರೋದನ್ನು ಅಧಿಕೃತವಾಗಿ ತಿಳಿಸಿದರು.

711

ಶೋಯೆಬ್‌ ಮಲೀಕ್‌, ಸನಾ ಜಾವೇದ್‌ರನ್ನು ಮದುವೆಯಾದರು. ಕೆಲ ದಿನಗಳ ಹಿಂದೆ ವಿಚ್ಛೇದನದ ವಿಚಾರವಾಗು ಮುಕ್ತವಾಗಿ ಮಾತನಾಡಿದ ಸಾನಿಯಾ ಮಿರ್ಜಾ, ಈ ಘಟನೆಯ ನಂತರ ನಾನು ಆಘಾತಕ್ಕೆ ಒಳಗಾಗಿದ್ದೆ. ಭಯದಿಂದ ನಡುಗುತ್ತಿದ್ದೆ ಎಂದು ಫರಾ ಖಾನ್‌ ಅವರ ಬ್ಲಾಗ್‌ಗೆ ತಿಳಿಸಿದ್ದಾರೆ. ಇದು ಮಾತ್ರವಲ್ಲದೆ ತನ್ನ ಜೀವನದಲ್ಲಿ ಬಂದ ಬಿರುಗಾಳಿಯನ್ನು ಅವರು ಹೇಗೆ ನಿಭಾಯಿಸಿದರು ಎಂಬುದನ್ನೂ ಸಹ ಅವರು ತಿಳಿಸಿದ್ದಾರೆ.

811

ಕೆಲವು ದಿನಗಳ ಹಿಂದೆ ಸಾನಿಯಾ ಮಿರ್ಜಾ ಇತ್ತೀಚೆಗೆ ತಾವು ಹೆಚ್ಚಾಗಿ ಊಟ ಕೂಡ ಮಾಡುತ್ತಿಲ್ಲ ಎಂದು ತಿಳಿಸಿದರು. ನನಗೆ ಒಬ್ಬಂಟಿಯಾಗಿ ಊಟ ಮಾಡಲು ಇಷ್ಟವಿಲ್ಲ. ಒಬ್ಬಂಟಿಯಾಗಿ ಕುಳಿತು ಏನು ತಿನ್ನಬೇಕು ಅನ್ನೋದೇ ಅರ್ಥವಾಗೋದಿಲ್ಲ ಎಂದಿದ್ದರು.

911

ತಮ್ಮ ಆಹಾರದ ಬಗ್ಗೆ ಮೊದಲ ಬಾರಿಗೆ ಮಾತನಾಡಿದ ಅವರು, ನನಗೆ ಸರಳವಾದ ಆಹಾರ ಇಷ್ಟ. ಟೆನಿಸ್‌ ತೊರೆದ ಬಳಿಕ ಫಿಟ್‌ನೆಸ್‌ ಕಾಪಾಡಿಕೊಳ್ಳುವುದೇ ತಮ್ಮ ಮೊದಲ ಗುರಿ ಎಂದಿದ್ದಾರೆ.

1011

ನನ್ನ ಊಟದಲ್ಲಿ ತರಕಾರಿ, ಕೋಳಿ, ಮೀನು ಅಥವಾ ಮಟನ್ ಕರಿ ಇರುತ್ತದೆ. ಇದರ ಜೊತೆಗೆ ಒಂದು ತರಕಾರಿ ಖಾದ್ಯ ಕಡ್ಡಾಯವಾಗಿ ಇರುತ್ತದೆ. ನಮ್ಮ ಮನೆಯಲ್ಲಿ ಎಲ್ಲರಿಗೂ ಸಲಾಡ್ ತುಂಬಾ ಇಷ್ಟ. ನನ್ನ ಊಟದಲ್ಲಿ ಸಲಾಡ್ ಅತ್ಯಗತ್ಯ ಎಂದಿದ್ದಾರೆ.

1111

ಊಟದಲ್ಲಿ ಅನ್ನ ಕೂಡ ಇರುತ್ತದೆ. ಆದರೆ, ಫಿಟ್ನೆಸ್ ಸಮಯದಲ್ಲಿ ಅನ್ನ ತಿನ್ನಲು ನನಗೆ ಭಯವಾಗುತ್ತದೆ. ಸಾನಿಯಾ ಮಿರ್ಜಾ ತಮ್ಮ ಊಟದಲ್ಲಿ ಚಿಕನ್ ಅಥವಾ ಮಟನ್ ಕರಿ, ಸಲಾಡ್ ಮತ್ತು ಅನ್ನ ಇರುತ್ತದೆ ಎಂದಿದ್ದಾರೆ. ಟೆನಿಸ್ ತ್ಯಜಿಸಿದ ನಂತರವೂ, ಸಾನಿಯಾ ಮಿರ್ಜಾ ಯಾವಾಗಲೂ ತಮ್ಮ ಫಿಟ್ನೆಸ್ ಬಗ್ಗೆ ಗಮನ ಹರಿಸಿದ್ದಾರೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories