ಶುಭಮನ್ ಗಿಲ್‌ ತಂಗಿ ಜೊತೆ ಕಾಣಿಸಿಕೊಂಡ ಸಚಿನ್ ಪುತ್ರಿ: ಸಂಬಂಧ ಫಿಕ್ಸ್ ಎಂದ ನೆಟ್ಟಿಗರು!

First Published | Jan 21, 2024, 6:13 PM IST

ಕ್ರಿಕೆಟ್ ಲೆಜೆಂಡ್ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ಯುವ ಕ್ರಿಕೆಟರ್‌ ಶುಭಮನ್ ಗಿಲ್ ಜೊತೆ ಡೇಟಿಂಗ್‌ನಲ್ಲಿದ್ದಾರೆ ಎಂಬ ಗಾಸಿಪ್‌ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಹರಿದಾಡುತ್ತಿರುವುದು ಗೊತ್ತೇ ಇದೆ. ಈ ರೂಮರ್ಸ್‌ಗಳ ನಡುವೆ ಈಗ ಸಾರಾ ತೆಂಡೂಲ್ಕರ್‌ ಹಾಗೂ ಶುಭಮನ್ ಗಿಲ್ ಸೋದರಿ ಸಹ್ನೀಲ್‌ ಜೊತೆಯಾಗಿ ಓಡಾಡಿದ ವೀಡಿಯೋವೊಂದು ವೈರಲ್ ಆಗಿದೆ.

ಕ್ರಿಕೆಟ್ ಲೆಜೆಂಡ್ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ಯುವ ಕ್ರಿಕೆಟರ್‌ ಶುಭಮನ್ ಗಿಲ್ ಜೊತೆ ಡೇಟಿಂಗ್‌ನಲ್ಲಿದ್ದಾರೆ ಎಂಬ ಗಾಸಿಪ್‌ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಹರಿದಾಡುತ್ತಿರುವುದು ಗೊತ್ತೇ ಇದೆ. 

ಈ ರೂಮರ್ಸ್‌ಗಳ ನಡುವೆ ಈಗ ಸಾರಾ ತೆಂಡೂಲ್ಕರ್‌ ಹಾಗೂ ಶುಭಮನ್ ಗಿಲ್ ಸೋದರಿ ಸಹ್ನೀಲ್‌ಜೊತೆಯಾಗಿ ಓಡಾಡಿದ ವೀಡಿಯೋವೊಂದು ವೈರಲ್ ಆಗಿದೆ. 

Tap to resize

 ವೀಡಿಯೋ ನೋಡಿದ ಜನ ಇವರ ಸಾರಾ ಹಾಗೂ ಶುಭಮನ್ ಗಿಲ್ ಪ್ರೇಮ ಸಂಬಂಧ ಖಚಿತವಾಗಿದೆ. ಇದೇ ಕಾರಣಕ್ಕೆ ಶುಭಮನ್ ಗಿಲ್ ಸೋದರಿ ಜೊತೆ ಸಾರಾ ಓಡಾಡುತ್ತಿದ್ದಾಳೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ಯುವ ಕ್ರಿಕೆಟರ್‌ ಶುಭಮನ್ ಗಿಲ್‌ ಬಗ್ಗೆ ಹೆಚ್ಚು ಹೇಳಬೇಕಾದ ಅಗತ್ಯವಿಲ್ಲ,  ತಮ್ಮ ಬ್ಯಾಟಿಂಗ್ ಶೈಲಿಯಿಂದ ಕ್ರಿಕೆಟ್ ಪ್ರೇಮಿಗಳ ಹೃದಯ ಕದ್ದಿರುವ ಶುಭಮನ್ ಗಿಲ್ ಪ್ರಸ್ತುತ ಐಪಿಎಲ್‌ನಲ್ಲಿ ಗುಜರಾತ್ ಟೈಟಾನ್ ತಂಡದ ನಾಯಕನಾಗಿದ್ದು, ಕ್ರಿಕೆಟ್ ಲೆಜೆಂಡ್ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ಜೊತೆ ಡೇಟಿಂಗ್‌ನಲ್ಲಿದ್ದಾರೆ ಎಂಬ ಸುದ್ದಿಗಳು ಆಗಾಗ ಹರಿದಾಡುತ್ತಿವೆ.

 ಇದಕ್ಕೆ ಪುಷ್ಠಿ ನೀಡುವಂತೆ ಹಲವು ಸಮಾರಂಭಗಳಲ್ಲಿ ಈ ಜೋಡಿ ಪರಸ್ಪರ ಒಬ್ಬರನ್ನೊಬ್ಬರು ನೋಡುತ್ತಿರುವ ವೀಡಿಯೋಗಳು ವೈರಲ್ ಆಗಿದ್ದವು. ಹೀಗಿರುವಾಗ ಸಾರಾ ತೆಂಡೂಲ್ಕರ್, ಶುಭಮನ್ ಗಿಲ್ ಸೋದರಿ ಶಹ್ನೀಲ್‌ ಜೊತೆ ಓಡಾಡುತ್ತಿರುವ ವೀಡಿಯೋವೊಂದು ವೈರಲ್ ಆಗಿದೆ. 

ಇಂದಿನ ಡಿಜಿಟಲ್ ಯುಗದಲ್ಲಿ, ಪಪಾರಾಜಿಗಳ ಕ್ಯಾಮರಾ ಕಣ್ಣಿನಿಂದ ಏನನ್ನೂ ಅಡಗಿಸಲು ಸಾಧ್ಯವಿಲ್ಲ ಎಂಬುದು ಗೊತ್ತಿರುವ ವಿಚಾರ ಹೀಗಿರುವಾಗ ಸೆಲೆಬ್ರಿಟಿ ಜೋಡಿ ಎನಿಸಿರುವ ಇವರು ಕಣ್ತಪ್ಪಿಸಿಕೊಂಡು ಓಡಾಡಲು ಹೇಗೆ ಸಾಧ್ಯ.  ಹೀಗಿರುವಾಗ ನಿನ್ನೆ ಸಾರಾ ತೆಂಡೂಲ್ಕರ್ ಹಾಗೂ ಸಹ್ನೀಲ್ ಅವರು ಜೊತೆಯಾಗಿ ನೈಟ್‌ಔಟ್ ಹೋಗಿದ್ದಾರೆ. 

ಇದು ಪಪಾರಾಜಿ ಕ್ಯಾಮರಾದಲ್ಲಿ ಸೆರೆ ಆಗಿದೆ. ವೀಡಿಯೋ ನೋಡಿದ ಅನೇಕರು ಹೋ ಇವರ ಸಂಬಂಧ ಖಚಿತವಾಗಿದೆ. ಅದಕ್ಕೆ ಸಾರಾ ನಾದಿನಿ ಜೊತೆ ತಿರುಗಾಡುತ್ತಿದ್ದಾಳೆ ಎಂದು ಕಾಮೆಂಟ್ ಮಾಡಿದ್ದಾರೆ. 

ಮತ್ತೆ ಕೆಲವರು ಶುಭಮನ್ ಗಿಲ್‌ಗೆ ಕಂಗ್ರಾಟ್ಸ್ ಹೇಳಿದ್ದಾರೆ. ಶುಭಮನ್ ಸೋದರಿಯ ಮೌಲ್ಯ ಕೂಡ ಹೆಚ್ಚಾಗ್ತಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.  ಅಲ್ಲದೇ ಪ್ರೇಮಿಯ ಸೋದರಿಯ ಪಟಾಯಿಸಿದ್ರೆ ಅರ್ಧ ಕೆಲ್ಸ ಅದಂಗೆ ಅಂತ ಕಾಮೆಂಟ್ ಮಾಡಿದ್ದಾರೆ.

ಇನ್ನು ವೈರಲ್ ಆದ ವೀಡಿಯೋದಲ್ಲಿ ಕಾರಿನ ಹಿಂದಿನ ಸೀಟಿನಲ್ಲಿ ಸಾರಾ ತೆಂಡೂಲ್ಕರ್ ಹಾಗೂ ಶುಭಂ ಸೋದರಿ ಶಹ್ನೀಲ್‌ ಗಿಲ್ ಕುಳಿತಿರುವುದನ್ನು ಕಾಣಬಹುದು. ಮಾಧ್ಯಮಗಳ ಕ್ಯಾಮರಾ ನೋಡಿ ಸಾರಾ ಮುಖಕ್ಕೆ ಕೈ ಅಡ್ಡ ಇಡುತ್ತಾ ನಾಚುತ್ತಾ ನಗುವುದನ್ನು ಕಾಣಬಹುದಾಗಿದೆ. 

ಈ ಹಿಂದೆ ಬಾಲಿವುಡ್ ನಟ ಸೈಫ್ ಅಲಿ ಖಾನ್ ಪುತ್ರಿ ಸಾರಾ ಅಲಿ ಖಾನ್ ಕಾಫಿ ವಿತ್‌ ಕರಣ್ ಶೋಗೆ ಬಂದಿದ್ದ ವೇಳೆ ಆಕೆಗೆ ಶುಭಮನ್ ಬಗ್ಗೆ ಕೇಳಲಾಗಿತ್ತು. ಆದರೆ ಇದಕ್ಕೆ ಪ್ರತಿಕ್ರಿಯಿಸಿದ ಸಾರಾ ಅಲಿ ಖಾನ್ ಇಡೀ ಜಗತ್ತು ತಪ್ಪಾದ ಸಾರಾಳ ಹಿಂದೆ ಬಿದ್ದಿದೆ. ಆ ಸಾರಾ ನಾನಲ್ಲ, ಶುಭಮನ್ ಜೊತೆ ಡೇಟಿಂಗ್‌ನಲ್ಲಿರುವ ಸಾರಾ ಬೇರೆ ಎಂದು ಹೇಳುವ ಮೂಲಕ ಇಬ್ಬರ ಡೇಟಿಂಗ್ ಬಗ್ಗೆ ಖಚಿತಪಡಿಸಿದ್ದರು.

ಇನ್ನು ಈ ಸಾರಾ ತೆಂಡೂಲ್ಕರ್ ಹಾಗೂ ಶುಭಮನ್ ಗಿಲ್ ಈ ಹಿಂದೆ ಜಿಯೋ ವರ್ಲ್ಡ್‌ ಪ್ಲಾಜಾದ ಉದ್ಘಾಟನೆ ವೇಳೆ ಜೊತೆಯಾಗಿ ಕಾಣಿಸಿಕೊಂಡಿದ್ದರು. 

Latest Videos

click me!