ಇಂತಹ ಕ್ವಾಲಿಟಿ ನಿಮ್ಮ ಸಂಗಾತಿಯಲ್ಲಿದ್ರೆ ನಿಮ್ಮಂಥ ಅದೃಷ್ಟವಂತರು ಬೇರಾರು ಇಲ್ಲ ಬಿಡಿ!

First Published | Jan 20, 2024, 6:23 PM IST

ನಿಮ್ಮ ಸಂಬಂಧವು ಸಾಮಾನ್ಯ ಕಪಲ್ಸ್ ಗಳಿಗಿಂತ ಭಿನ್ನವಾಗಿದೆಯೇ? ಈ ಚಿಹ್ನೆಗಳು ನೀವು ಮತ್ತು ನಿಮ್ಮ ಸಂಗಾತಿ ಪವರ್ ದಂಪತಿಗಳೇ ಅಥವಾ ಅಲ್ಲವೇ ಎಂಬುದನ್ನು ತೋರಿಸುತ್ತದೆ. ಆ ಕ್ವಾಲಿಟಿಗಳು ಯಾವುವು? ಆನ್ನೋದನ್ನು ನೋಡೋಣ. ಅಂತಹ ಕ್ವಾಲಿಟಿ ನಿಮ್ಮ ಸಂಗಾತಿಯಲ್ಲೂ ಇದ್ರೆ ನೀವು ಅದೃಷ್ಟವಂತರು. 

ಪವರ್ ಕಪಲ್ಸ್ (power couples) ಅಂದ್ರೆ ಇಬ್ಬರು ಸಂಗಾತಿಗಳ ನಡುವೆ ಬಲವಾದ ಸಂಬಂಧ ಇರೋದನ್ನು ಸೂಚಿಸುತ್ತೆ. ಎಲ್ಲರೂ ಒಂದೇ ರೀತಿ ಇರೋದಿಲ್ಲ, ಕೆಲವು ಕಪಲ್ಸ್ ತೋರಿಕೆಯ ಪ್ರೀತಿ ಮಾಡ್ತಾರೆ, ಇನ್ನೂ ಕೆಲವರು ಉಸಿರುಕಟ್ಟಿಸುವಂತಹ ಪ್ರೀತಿ, ಮತ್ತೆ ಕೆಲವರದು , ಜನುಮ ಜನುಮದಲ್ಲಿ ಬೇರೆಯಾಗದಂತಹ ಪ್ರೀತಿ. ಈವಾಗ ಇಲ್ಲಿ ಕೆಲವು ಕ್ವಾಲಿಟಿಗಳನ್ನು ನೀಡಲಾಗಿದೆ. ಅವುಗಳು ನಿಮ್ಮ ಸಂಗಾತಿಯಲ್ಲೂ ಇದ್ರೆ ನೀವು ಪವರ್ ಕಪಲ್ಸ್ ಅನ್ನೋದು ಖಚಿತ. 
 

ಗಂಡ-ಹೆಂಡತಿ ಸಂಬಂಧವಾಗಿರಲಿ ಅಥವಾ ಗೆಳತಿ-ಗೆಳೆಯನಾಗಿರಲಿ, ಎರಡೂ ಸಂಬಂಧಗಳಲ್ಲಿ ಉತ್ತಮ ಭಾಂಧವ್ಯ, ಅರ್ಥ ಮಾಡಿಕೊಂಡು ನಡೆಯುವುದು ಬಹಳ ಮುಖ್ಯ. ಏಕೆಂದರೆ ಈ ಎರಡೂ ಸಂಬಂಧಗಳು ಏರಿಳಿತಗಳಿಂದ ತುಂಬಿವೆ. ನಿಮ್ಮ ಸಣ್ಣ ತಪ್ಪು ನಿಮ್ಮ ಸಂಬಂಧದಲ್ಲಿ ಹುಳಿ ಹಿಂಡಬಹುದು. ಸಂಗಾತಿಯು ನಿಮ್ಮಿಂದ ಕೇವಲ ಪ್ರಾಮಾಣಿಕತೆ, ಪ್ರೀತಿ ಮತ್ತು ಉತ್ತಮ ಸಂಬಂಧವನ್ನು ಬಯಸುತ್ತಾರೆ. 
 

Tap to resize

ಪ್ರೀತಿ ಅಂದ್ರೆ, ರೋಮ್ಯಾಂಟಿಕ್ (romantic) ಆಗಿರೋದು, ಸೋಶಿಯಲ್ ಮೀಡಿಯಾದಲ್ಲಿ ಜೊತೆಯಾಗಿ ಸಾವಿರ ಫೋಟೋ ಹಾಕಿ, ನನ್ನ ಗಂಡ ಬೆಸ್ಟ್, ನನ್ನ ಹೆಂಡತಿ ಬೆಸ್ಟ್ ಎಂದು ಹಾಕೋದಲ್ಲ. ಇಬ್ಬರೂ ಜೋಡಿಗಳು ಪ್ರತಿಯೊಂದು ಕೆಲಸದಲ್ಲಿ ಪರಸ್ಪರ ಸಹಾಯ ಮಾಡೋದು ಪ್ರೀತಿ. ಅದು ಅಡುಗೆಯಾಗಿರಲಿ ಅಥವಾ ವೃತ್ತಿಪರ ಜೀವನದಲ್ಲಿ ಆಗಿರಲಿ, ನಿಮ್ಮ ಸಂಗಾತಿಯನ್ನು ಬೆಂಬಲಿಸೋದು ತುಂಬಾನೆ ಮುಖ್ಯ. ಇಂದು ಈ ಲೇಖನದಲ್ಲಿ ನಾವು ನಿಮಗೆ ಪವರ್ ಕಪಲ್ಸ್ ನಲ್ಲಿರೋ ಕ್ವಾಲಿಟಿ ಬಗ್ಗೆ ಹೇಳ್ತಿವಿ. ನಿಮ್ಮ ಸಂಗಾತಿಯಲ್ಲೂ ಇಂತಹ ಗುಣಗಳಿದ್ರೆ ನಿಮಗೆ ಜೀವನದಲ್ಲಿ ಎಲ್ಲವೂ ಸಿಕ್ಕ ಹಾಗೆಯೇ…. 
 

ಪರಸ್ಪರ ಬೆಂಬಲಿಸುವುದು: ಸಂಗಾತಿಗಳು ಪರಸ್ಪರ ಒಬ್ಬರನ್ನೊಬ್ಬರು ಎಲ್ಲಾ ರೀತಿಯಲ್ಲಿ ಬೆಂಬಲಿಸಬೇಕು (suporting each other). ಗಂಡ-ಹೆಂಡತಿ ಸಂಬಂಧದ ಮೊದಲು, ನೀವು ಪರಸ್ಪರ ಉತ್ತಮ ಸ್ನೇಹಿತನಾಗಿರಬೇಕು. ಇದರೊಂದಿಗೆ, ಪ್ರತಿ ಸಣ್ಣ ಮತ್ತು ದೊಡ್ಡ ವಿಷಯವನ್ನು ಇಬ್ಬರು ಜೊತೆಯಾಗಿ ಹಂಚಿಕೊಳ್ಳಬಹುದು. ಸಂಗಾತಿಯ ಪ್ರತಿಯೊಂದು ಸಮಸ್ಯೆಯನ್ನು ಜೊತೆಯಾಗಿ ಕುಳಿತು ಪರಿಹರಿಸೋದು ಮುಖ್ಯ. ನಿಮ್ಮ ಸಂಗಾತಿಯೂ ಇದನ್ನು ಮಾಡ್ತಿದ್ದಾರ? 

ಸಮಯ ನೀಡುವ ಸಂಗಾತಿ: ಇಂದಿನ ಬಿಡುವಿಲ್ಲದ ಜೀವನಶೈಲಿಯಲ್ಲಿ (lifestyle) ಎಲ್ಲರೂ ಎಷ್ಟೊಂದು ಬ್ಯುಸಿಯಾಗಿದ್ದಾರೆ ಎಂದರೆ, ಪರಸ್ಪರ ಸಮಯ ಕೊಡೋದಕ್ಕೆ ಸಾಧ್ಯ ಆಗ್ತಾ ಇಲ್ಲ. ಪ್ರತಿಯೊಬ್ಬರೂ ತಮ್ಮದೇ ಆದ ಬ್ಯುಸಿ ಶೆಡ್ಯೂಲ್ ಹೊಂದಿದ್ದಾರೆ. ಆದರೆ ಅದೆಷ್ಟೇ ಕೆಲಸ ಇದ್ದರೂ ಸಹ ಸಂಗಾತಿಗಾಗಿ ಸಮಯ ತೆಗೆದುಕೊಳ್ಳಬೇಕು.  ಯಾವಾಗಲೂ ಸಂಗಾತಿಗೆ ಆದ್ಯತೆ ನೀಡಬೇಕು. ಅದೆಷ್ಟೇ ಬ್ಯುಸಿಯಾಗಿದ್ದರೂ ನಿಮಗೆ ಸಮಯ ನೀಡುವ ಸಂಗಾತಿ ನಿಮ್ಮ ಜೊತೆ ಇದ್ದರೆ ನೀವು ಅದೃಷ್ಟವಂತರು.

ಪರಸ್ಪರರ ಬಗ್ಗೆ ಪಾಸಿಟಿವ್ ಆಗಿರೋದು: ಪರಿಸ್ಥಿತಿ ಎಷ್ಟೇ ನಕಾರಾತ್ಮಕವಾಗಿದ್ದರೂ, ನೀವು ಯಾವಾಗಲೂ ಪರಸ್ಪರರ ಬಗ್ಗೆ ಸಕಾರಾತ್ಮಕವಾಗಿ ಯೋಚಿಸಬೇಕು. ನಿಮ್ಮ ಸಂಗಾತಿಯೊಂದಿಗೆ ಯಾವಾಗಲೂ ಪಾಸಿಟಿವ್ ಆಗಿದ್ರೆ, ನಿಮ್ಮ ಸಂಬಂಧವು ಉತ್ತಮಗೊಳ್ಳುತ್ತದೆ. ಹಾಗೆ ಮಾಡುವುದು ಬೆಸ್ಟ್ ಕಪಲ್ಸ್ ಗಳ (best couples) ಸಂಕೇತವಾಗಿದೆ. 

ಪರಸ್ಪರರನ್ನು ಸಂತೋಷವಾಗಿಡುವುದು: ತಮ್ಮ ಸಂಗಾತಿಯ ಸಂತೋಷದಲ್ಲಿ ತಾವು ಸಂತೋಷ ಕಾಣುವ ಅನೇಕ ಜನರಿದ್ದಾರೆ. ಅವರು ತಮ್ಮ ಸಂಗಾತಿಯನ್ನು ಸಂತೋಷವಾಗಿಡಲು ಯಾವುದೇ ಅವಕಾಶವನ್ನು ಬಿಟ್ಟುಕೊಡೋದಿಲ್ಲ. ಜನ್ಮದಿನವನ್ನು ವಿಶೇಷಗೊಳಿಸೋದು ಅಥವಾ ಪ್ರತಿ ಸಣ್ಣ ಮತ್ತು ದೊಡ್ಡ ಸಂದರ್ಭಗಳಲ್ಲಿ ಸರ್ ಪ್ರೈಸ್ ನೀಡೋದು ಇದನ್ನೆಲ್ಲಾ  ನಿಮ್ಮ ಸಂಗಾತಿ ಮಾಡ್ತಿದ್ರೆ ಇನ್ನೇನು ಬೇಕಿದೆ ಜೀವನದಲ್ಲಿ ಅಲ್ವಾ?

ಸುಳ್ಳು ಹೇಳದೇ ಇರೋದು: ಜೀವನದಲ್ಲಿ ಎಂತಹುದೇ ಪರಿಸ್ಥಿತಿ ಬಂದರೂ ಸಹ ಒಬ್ಬರಿಗೊಬ್ಬರು ಸುಳ್ಳು ಹೇಳದೇ ಇರುವ ಜೋಡಿಗಳು ಬೆಸ್ಟ್ ಜೋಡಿಗಳು. ಸುಳ್ಳು ಹೇಳದೇ ಇದ್ದರೆ, ಇಬ್ಬರ ನಡುವೆ ಭಾಂದವ್ಯ ವೃದ್ಧಿಯಾಗುತ್ತದೆ. 

Latest Videos

click me!