ಪರಿಶುದ್ಧ ಮನಸ್ಸಿನ ಹೆಣ್ಣೇಕೆ ಬಾಳಲ್ಲಿ ಸ್ನೇಹಿತರಾಗಿ ಬರಬೇಕು? ತಜ್ಞರು ನೀಡಿದ ಸಮರ್ಥನೆ ಇದು!

First Published | Jan 21, 2024, 12:47 PM IST

ನೀವು ಹುಡುಗರೇ ಆಗಿರಲಿ, ಹುಡುಗಿಯರೇ ಆಗಿರಲಿ ನಿಮಗೆ ಗರ್ಲ್ ಫ್ರೆಂಡ್ಸ್ ಇರಲೇಬೇಕು. ಗರ್ಲ್ ಫ್ರೆಂಡ್ಸ್ ಅಂದ್ರೆ ಪ್ರೀತಿ, ಪ್ರೇಮ ಎಂಬ ಅರ್ಥದಲ್ಲಿ ಅಲ್ವೇ ಅಲ್ಲ ಇದು ಬರೀ ಪರಿಶುದ್ಧ ಸ್ನೇಹವನ್ನು ಹೊಂದಿರುವ ಗರ್ಲ್ ಫ್ರೆಂಡ್ಸ್ ಯಾಕೆ ನಮ್ಮ ಜೀವನದಲ್ಲಿ ಇರಬೇಕು ಗೊತ್ತಾ? 
 

ನೀವು ಈ ನುಡಿಗಟ್ಟನ್ನು ಅನೇಕ ಬಾರಿ ಕೇಳಿರಬಹುದು ಮತ್ತು ಓದಿರಬಹುದು, ಅದೇನೆಂದರೆ 'ಪುರುಷರು ಮಂಗಳ ಗ್ರಹದಿಂದ ಮತ್ತು ಮಹಿಳೆಯರು ಶುಕ್ರನಿಂದ', ಬಂದಿದ್ದಾರೆ ಎಂದು. ಅಂದರೆ ಮಹಿಳೆಯರು ಸ್ವಾಭಾವಿಕವಾಗಿ ಪುರುಷರಿಗಿಂತ ಭಿನ್ನವಾಗಿರ್ತಾರೆ, ವಿಭಿನ್ನವಾಗಿ ಯೋಚಿಸುತ್ತಾರೆ ವಿಭಿನ್ನವಾಗಿ ವರ್ತಿಸುತ್ತಾರೆ. ಸಮಸ್ಯೆಗಳನ್ನು ಪರಿಹರಿಸುವ ಮಹಿಳೆಯರ ವಿಧಾನವು ವಿಭಿನ್ನವಾಗಿದೆ ಮತ್ತು ಅಷ್ಟೇ ಯಾಕೆ ಮಹಿಳೆಯರು ಯಾವುದೇ ವಿಷಯಗಳನ್ನು ಮನಸಿಗಿಂತ ಹೆಚ್ಚಾಗಿ ಹೃದಯದಲ್ಲಿ ಇಡುತ್ತಾರೆ. 
 

ಈವಾಗ ಯಾಕೆ ಹೆಣ್ಣು ಮಕ್ಕಳ ಬಗ್ಗೆ ಹೇಳ್ತಿರೋದು ಅಂದ್ರೆ, ನಮ್ಮ ಜೀವನದಲ್ಲಿ ಗೆಳತಿಯರು ಅಥವಾ ಗರ್ಲ್ ಫ್ರೆಂಡ್ (girl friends) ಯಾಕೆ ಬೇಕೇ ಬೇಕು ಅನ್ನೋದನ್ನು ನಿಮಗೆ ಹೇಳೊದಕ್ಕೆ. ಹೌದು ಗರ್ಲ್ ಫ್ರೆಂಡ್ಸ್ ಹೊಂದಿರುವುದು ಎಂದರೆ ನಿಮ್ಮ ಎಲ್ಲಾ ಸಮಸ್ಯೆಗಳಲ್ಲಿ ಮುಂದೆ ನಿಲ್ಲುವ ಸೂಪರ್ ಹೀರೋಗಳನ್ನು ನೀವು ಹೊಂದಿದ್ದೀರಿ ಎಂದರ್ಥ. ನೀವು ಹುಡುಗರೇ ಆಗಿರಲಿ ಅಥವಾ ಹುಡುಗಿಯರೇ ಆಗಿರಲಿ  ಗರ್ಲ್ ಫ್ರೆಂಡ್ಸ್ ನಿಮ್ಮನ್ನು ಇತರರಿಗಿಂತ ಚೆನ್ನಾಗಿ ಅರ್ಥ ಮಾಡಿಕೊಂಡಿರುತ್ತಾರೆ. 
 

Tap to resize

ನಮ್ಮ ಜೀವನದಲ್ಲಿ ಪ್ರತಿಯೊಬ್ಬ ಸ್ನೇಹಿತ ಎಷ್ಟು ಮುಖ್ಯವೋ, ಪ್ರತಿಯೊಬ್ಬರ ಜೀವನದಲ್ಲಿ ಗೆಳತಿಯರು ಅಥವಾ ಗರ್ಲ್ ಫ್ರೆಂಡ್ಸ್ ಬಹಳ ಮುಖ್ಯ.  ಗರ್ಲ್ ಫ್ರೆಂಡ್ಸ್ ಹೊಂದಿರೋದರಿಂದ ಏನೆಲ್ಲಾ ಪ್ರಯೋಜನಗಳಿವೆ ಅನ್ನೋದನ್ನು ತಿಳಿಯೋ ಆಸಕ್ತಿ ನಿಮಗಿದ್ರೆ, ಇದನ್ನ ನೀವು ಓದ್ಲೇ ಬೇಕು. 
 

ಒತ್ತಡ ಕಡಿಮೆ ಆಗುತ್ತೆ
ನಿಮಗೆ ತಿಳಿದಿಲ್ಲದಿರಬಹುದು ಆದರೆ ತಜ್ಞರು ಹುಡುಗಿಯರ ಸ್ನೇಹದ ಬಗ್ಗೆ ಸಾಕಷ್ಟು ಮಾಹಿತಿ ನೀಡಿದ್ದಾರೆ. ಬೆಕ್ಮನ್ ಇನ್ಸ್ಟಿಟ್ಯೂಟ್ ಫಾರ್ ಅಡ್ವಾನ್ಸ್ಡ್ ಸೈನ್ಸ್ ಅಂಡ್ ಟೆಕ್ನಾಲಜಿ ವಯಸಾದ ಮಹಿಳೆಯರು ಮತ್ತು ಪರಿಚಿತ ಮಹಿಳೆಯರ ಪರಸ್ಪರ ಕ್ರಿಯೆಗಳ ಮೇಲೆ ಪರಿಣಾಮ ಬೀರುತ್ತದೆಯೇ ಎಂದು ನೋಡಲು ಅಧ್ಯಯನ ನಡೆಸಿತು. ವಯಸ್ಸಾದ ಮಹಿಳೆಯರು ತಮ್ಮ ಕಿರಿಯ ಸಹವರ್ತಿಗಳಿಗಿಂತ ಅಪರಿಚಿತರೊಂದಿಗೆ ಉತ್ತಮವಾಗಿ ಸಂವಹನ ನಡೆಸುತ್ತಾರೆ ಅನ್ನೋದು ತಿಳಿದು ಬಂದಿದೆ. 

ವಿಷ್ಯ ಇದಲ್ಲ, ವಿಷಯ ಏನಪ್ಪಾ ಅಂದ್ರೆ  ಗರ್ಲ್ ಫ್ರೆಂಡ್ಸ್ ಜೊತೆ ಮಾತುಕತೆ ನಡೆಸೋದರಿಂದ  ಜೀವನದುದ್ದಕ್ಕೂ ಒತ್ತಡದ ಹಾರ್ಮೋನ್ (stress hormones) ಮಟ್ಟ ಕಡಿಮೆ ಮಾಡುತ್ತದೆ ಅನ್ನೋದು ತಿಳಿದು ಬಂದಿದೆ. ಜಗತ್ತು ನೀಡುವ ದುಃಖ, ನೋವು ಮತ್ತು ಒತ್ತಡವನ್ನು ಕಡಿಮೆ ಮಾಡಲು ಪ್ರತಿಯೊಬ್ಬರಿಗೂ  ಗರ್ಲ್ ಫ್ರೆಂಡ್ಸ್ ಬೇಕೇ ಬೇಕು. ಸ್ನೇಹಿತರು ಕೆಲವೊಮ್ಮೆ ಕೋಪ ತರಿಸಬಹುದು. ಆದರೆ ಅವರು ಮನಸ್ಸಿಗೆ ಸಂತಸವನ್ನೂ ಸಹ ನೀಡುತ್ತಾರೆ. 
 

ಗೆಳತಿಯರು ಟಾಕ್ ಥೆರಪಿಸ್ಟ್ (Talk Therapist)
ನಮಗೆ ಯಾವುದೇ ರೀತಿಯ ಸಮಸ್ಯೆ ಬಂದಾಗಲೆಲ್ಲಾ, ನಾವು ಮೊದಲಿಗೆ ಫೋನ್ ಮಾಡೋದು ಗೆಳತಿಗೇನೆ ಅಲ್ವಾ? ಸಮಸ್ಯೆ ಸಂದರ್ಭದಲ್ಲಿ ಗೆಳತಿಗೆ ಕರೆ ಮಾಡಿದ್ರೆ, ಅವರು ಯಾವಾಗಲೂ ಮಾತನಾಡಲು, ಸಮಸ್ಯೆ ಬಗೆ ಹರಿಸಲು ಸಿದ್ಧರಾಗಿಯೇ ಇರುತ್ತಾರೆ. ಗರ್ಲ್ ಫ್ರೆಂಡ್ಸ್ ಒಂಥರಾ ಟಾಕ್ ಥೆರಪಿಸ್ಟ್ (talk therapist) ಗಳಂತೆ ವರ್ತಿಸುತ್ತಾರೆ. ಯಾರು ನಮ್ಮನ್ನ ಯಾವ ರೀತಿ ಜಡ್ಜ್ ಮಾಡ್ತಾರೆ ಅನ್ನೋದರ ಬಗ್ಗೆ ಯೋಚಿಸದೇ ನಾವು ಫ್ರೆಂಡ್ಸ್ ಬಳಿ ಎಲ್ಲಾ ವಿಷ್ಯವನ್ನು ಹಂಚಿಕೊಳ್ಳಬಹುದು. ಕುಟುಂಬದಿಂದ ಬರುವ ಮದುವೆಯ ಒತ್ತಡವಾಗಲಿ ಅಥವಾ ಹುಡುಗರ ವಿಷ್ಯ ಕೂಡ ಸ್ನೇಹಿತೆ ಜೊತೆ ಮಾತನಾಡಿದರೂ ಸಹ ಆಕೆ ಕೇಳುತ್ತಲೇ ಇರುತ್ತಾಳೆ. 

ನಿಮ್ಮ ದೊಡ್ಡ ಚಿಯರ್ ಲೀಡರ್ ಗಳು ನಿಮ್ಮ ಗೆಳತಿಯರು
ಹೆಣ್ಣಿಗೆ ಹೆಣ್ಣೇ ಶತ್ರು ಎಂದು ಹೇಳುತ್ತಿದ್ದ ಸಮಯಗಳು ಕಳೆದುಹೋಗಿವೆ. ಇಂದು ಹುಡುಗಿಯರು ಮತ್ತೊಬ್ಬ ಹುಡುಗಿಯ ಕೈ ಹಿಡಿದು ಮೇಲಕ್ಕೆತ್ತುತ್ತಾರೆ.  ಅವರು ನಮ್ಮ ಜೀವನದ ಅತಿದೊಡ್ಡ ಚಿಯರ್ ಲೀಡರ್ ಗಳು.  ನಿಮ್ಮನ್ನು ಪ್ರೋತ್ಸಾಹಿಸಲು ಸದಾ ಸಿದ್ಧರಾಗಿರುತ್ತಾರೆ ಮತ್ತು ನೀವು ಅಸಮಾಧಾನಗೊಂಡಾಗ, ಮೈಲುಗಳ ದೂರದಿಂದಲೂ ಅವರು ನೀಡುವ ಸಾಂತ್ವಾನ ಮನಸ್ಸನ್ನು ಉಲ್ಲಾಸವಾಗಿಡಲು ಸಹಾಯ ಮಾಡುತ್ತೆ. 

ಗೆಳತಿಯರು ನಿಮ್ಮ ನೋವನ್ನು ಕಡಿಮೆ ಮಾಡುತ್ತಾರೆ
ಇದು ನನ್ನ ನಂಬಿಕೆ ಮಾತ್ರವಲ್ಲ, ಸಂಶೋಧನೆಯೂ ಹಾಗೆ ಹೇಳುತ್ತದೆ. 2016 ರಲ್ಲಿ, ಆಕ್ಸ್ಫರ್ಡ್ ವಿಶ್ವವಿದ್ಯಾಲಯವು ಹೆಚ್ಚು ಸ್ನೇಹಿತರನ್ನು ಹೊಂದಿರುವ ಜನರು ನೋವನ್ನು ಸಹಿಸಿಕೊಳ್ಳುವ ಹೆಚ್ಚಿನ ಸಾಮರ್ಥ್ಯ ಹೊಂದಿದ್ದಾರೆ ಎಂದು ಕಂಡುಹಿಡಿದಿದೆ. ಸಂಶೋಧನೆಯ ಪ್ರಕಾರ, ಸ್ನೇಹಿತರೊಂದಿಗೆ ಸಮಯ ಕಳೆಯುವಾಗ ಬಿಡುಗಡೆಯಾಗುವ ನೋವು ನಿವಾರಕ ಎಂಡಾರ್ಫಿನ್ಗಳು (endorphin) ನಿಮ್ಮ ದೇಹದ ಪ್ರತಿಸ್ಪರ್ಧಿಗಳ ವಿರುದ್ಧ ಹೋರಾಡುತ್ತವೆ. ಗೆಳತಿಯರೊಂದಿಗೆ ಹರಟೆ ಹೊಡೆಯುತ್ತಾ, ಕಾಫಿ ಕುಡಿದರೆ, ಹೆಚ್ಚಿನ ಆರೋಗ್ಯ ಸಮಸ್ಯೆ ನಿವಾರಣೆಯಾಗುತ್ತದೆ. 

ಗೆಳತಿಯರು ಭಾವನಾತ್ಮಕ ಬೆಂಬಲ ನೀಡುತ್ತಾರೆ (Emotional support)
ಕೆಲವೊಮ್ಮೆ ನಮ್ಮನ್ನು ಪುಶ್ ಮಾಡಲು (emotional support) ಯಾರಾದರೂ ಬೇಕು.  ಗರ್ಲ್ ಫ್ರೆಂಡ್ಸ್ ನಮ್ಮ ಜೊತೆ ಇದ್ದಾರೆ ಎಂದಾದರೆ, ಬ್ರೇಕಪ್ ಕಾರಣದಿಂದಾಗಿ ಯಾರಾದರೂ ಡಿಪ್ರೆಶನ್ (Depression) ಗೆ ಹೋಗಬೇಕಾದ ಅಗತ್ಯವಿಲ್ಲ. ಕೆಲವರು ಅನೇಕ ಸಮಸ್ಯೆಗಳೊಂದಿಗೆ ಹೋರಾಡುತ್ತಿದ್ದಾರೆ.  ಒಬ್ಬ ಉತ್ತಮ ಸ್ನೇಹಿತೆಯಾವಳು, ಗೆಳತಿಗೆ ಎಲ್ಲಾ ರೀತಿಯ ಭಾವನಾತ್ಮಕ ಬೆಂಬಲ ನೀಡುತ್ತಾಳೆ. 

Latest Videos

click me!